Saturday, September 10, 2022

Narasimha Mantra Ondiralu Saku (ನರಸಿಂಹ ಮಂತ್ರ ಒಂದಿರಲು ಸಾಕು)

 Bhaktigeete

Sri Purandara Dasara Keerthanegalu

Song link: Click Here


Raga: Kamboja

Tala: Jampetala


Narasimha mantra ondiralu saku

Durita kotiya taridu bhagyavanu koduva ||


Shishuvada prahladana badhe bidisida mantra

Asura kuladavarige shatru mantra

Vasudheyolu patakigalaghava heeruva mantra

Pashu patige priyavada divya mantra ||1||


Ditta dhruvarayanige patta gattida mantra

Shista vibhishanana poreda mantra

Katta kadeyali ajamilana salahida mantra

Mutti bjisidavarige mokshamantra ||2||


Hindu bhutava kadidu tundu maduva mantra

Kondado lokake prachanda mantra

Gandugali kadana uddanda vikrama mantra

Pundareekaksha purandara vittala mantra ||3||


ಭಕ್ತಿಗೀತೆ 


ನರಸಿಂಹ ಮಂತ್ರ ಒಂದಿರಲು ಸಾಕು 

ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ ।।ಪ ।।


ಶಿಶುವಾದ ಪ್ರಹ್ಲಾದನ ಭಾದೆ ಬಿಡಿಸಿದ ಮಂತ್ರ 

ಅಸುರಕುಲದವರಿಗೆ ಶತ್ರು ಮಂತ್ರ 

ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ 

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ।।೧।।


ದಿಟ್ಟ ಧ್ರುವರಾಯನಿಗೆ ಪಟ್ಟ ಗಟ್ಟಿದ ಮಂತ್ರ 

ಶಿಷ್ಟ ವಿಭೀಷಣನ ಪೊರೆದ ಮಂತ್ರ 

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ 

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ ।।೨।।


ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ 

ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ 

ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ 

ಪುಂಡರೀಕಾಕ್ಷ ಪುರಂದರ ವಿಠ್ಠಲ ಮಂತ್ರ ।।೩।।           ಶ್ರೀ 



Friday, September 9, 2022

Yava Janmada Maitri (ಯಾವ ಜನ್ಮದ ಮೈತ್ರಿ )


Bhavageete

Sahitya: Kuvempu

Song link: Click Here


Yava janmada maitri

Ee janmadali bandu

Nammibbaranu matte

Bandisihudo...... kane!


Elliddarenante

Ninna noliyade maane

Gurudevanane, o nanna necchina bandhu! ||yava||


Vishwa jeevanavondu paravillada sindhu

Mele tere noreyeddu

Bhorgareyutire regi

Adarantaraladali guptagaminiyagi;

Hrudayagalu naliyutive 

Prema thirtadi mindu! ||yava||


Adararthagirthagalu srusti karthanigirali

Vyartha jijnaseyali kala haranavadeke?

Barayya, mamabandhu, jeevanapathadolavu

Ondagi munduvariyuva ||yava||


ಭಾವಗೀತೆ 


ಯಾವ ಜನ್ಮದ ಮೈತ್ರಿ 

ಈ ಜನ್ಮದಲಿ ಬಂದು 

ನಮ್ಮಿಬ್ಬರನು ಮತ್ತೆ 

ಬಂಧಿಸಿಹುದೋ .... ಕಾಣೆ !


ಎಲ್ಲಿದ್ದರೇನಂತೆ 

ನಿನ್ನ ನೊಲಿಯದೆ ಮಾಣೆ 

ಗುರುದೇವನಾಣೆ 

ಓ ನನ್ನ ನೆಚ್ಚಿನ ಬಂಧು ! ।।ಯಾವ ।।


ವಿಶ್ವ ಜೀವನವೊಂದು 

ಪಾರವಿಲ್ಲದ ಸಿಂಧು !

ಮೇಲೆ ತೆರೆ ನೊರೆಯೆದ್ದು 

ಭೋರ್ಗರೆಯುತಿರೆ ರೇಗಿ 

ಅದರಂತರಾಳದಲಿ ಗುಪ್ತಗಾಮಿನಿಯಾಗಿ 

ಹೃದಯಗಳು ನಲಿಯುತಿವೆ 

ಪ್ರೇಮ ತೀರ್ಥದಿ ಮಿಂದು ! ।।ಯಾವ|| 


ಅದರರ್ಥಗಿರ್ಥಗಳು ಸೃಷ್ಟಿ ಕರ್ತನಿಗಿರಲಿ 

ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ ?

ಬಾರಯ್ಯ , ಮಮಬಂಧು , ಜೀವನಪಥದೊಳಾವು 

ಒಂದಾಗಿ ಮುಂದುವರಿಯುವ  ।।ಯಾವ ।।



Tanuvu Ninnadu Manavu Ninnadu (ತನುವು ನಿನ್ನದು ಮನವು ನಿನ್ನದು )


Bhavageete

Sahitya: Kuvempu

Song link: Click Here


Tanuvu ninnadu manavu ninnadu

Enna jeevana dhanavu ninnadu

Nanu ninnavanemba hemmeya

Runavu matrave nannadu


Nennu holedare nanu holevenu

Nennu beledare nanu belevenu

Nanna haranada harana neenu

Enna maranada maranavu ||tanuvu||


Nanna manadali neene yukti

Enna hrudayadi neene bhakti

Neene maya moha shaktiyu

Enna jeevana muktiyu ||tanuvu||


ಭಾವಗೀತೆ 


ತನುವು ನಿನ್ನದು ಮನವು ನಿನ್ನದು 

ಎನ್ನ ಜೀವನ ಧನವು ನಿನ್ನದು 

ನಾನು ನಿನ್ನವನೆಂಬ ಹೆಮ್ಮೆಯ 

ಋಣವು ಮಾತ್ರವೆ ನನ್ನದು ।।ಪ ।।


ನೀನು ಹೊಳೆದರೆ ನಾನು ಹೊಳೆವೆನು 

ನೀನು ಬೆಳೆದರೆ ನಾನು ಬೆಳೆವೆನು 

ನನ್ನ ಹರಣದ ಹರಣ ನೀನು 

ಎನ್ನ ಮರಣದ ಮರಣವು ।।೧।।


ನನ್ನ ಮನದಲಿ ನೀನೆ ಯುಕ್ತಿ 

ಎನ್ನ ಹೃದಯದಿ ನೀನೆ  ಭಕ್ತಿ 

ನೀನೆ ಮಾಯಾ ಮೋಹ ಶಕ್ತಿಯು 

ಎನ್ನ ಜೀವನ ಮುಕ್ತಿಯು ।।೨।।



Thursday, September 8, 2022

Istu kala Ottigiddu (ಇಷ್ಟು ಕಾಲ ಒಟ್ಟಿಗಿದ್ದು)

 

Bhavageete

Sahitya: H S Venktesh Murthy

Song link: Click Here


Istu kala ottigiddu, estu beretaru

Aritevenu navu namma anntaralava


Kadala mele saviraru, maili sagiyu

Neerinala tiliyitenu hayi donige ||istu||


Sada kala tabbuvante mele bagiyu

Manna muttu dorakitenu neeli banige ||istu||


Saviraru mukhada cheluva, hididu toriyu

Ondadaru uliyite kannadiya palige ||istu||


ಭಾವಗೀತೆ 


ಇಷ್ಟು ಕಾಲ ಒಟ್ಟಿಗಿದ್ದು ,ಎಷ್ಟು ಬೆರೆತರೂ 

ಅರಿತೆವೇನು ನಾವು ನಮ್ಮ ಅಂತರಾಳವ ।।ಪ ।।


ಕಡಲ ಮೇಲೆ ಸಾವಿರಾರು ,ಮೈಲಿ ಸಾಗಿಯೂ 

ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ।।೧।।


ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ 

ಮಣ್ಣ  ಮುತ್ತು ದೊರಕಿತೇನು ನೀಲಿ ಬಾನಿಗೆ ।।೨।।


ಸಾವಿರಾರು ಮುಖದ ಚೆಲುವ ,ಹಿಡಿದು ತೋರಿಯೂ 

ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ ।।೩।।



Wednesday, September 7, 2022

Naranadamele Harinama Jihveyolirabeku (ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು)

Bhaktigeete

Sri Purandara Dasara Keerthanegalu

Song link: Click Here


Raga: Naadanamakriye

Tala: Aaditala


Naranadamele harinama jihveyolirabeku


Bhuta dayaparanagirabeku

Patakavellava kaleyalubeku

Matumatige hariyennabeku ||1||


Aaru varga vanaliyalubeku

Mooru gunagala meeralu beku

Seri bhramanolirabeku ||2||


Asta madamgala tuliyalubeku

Dustara sangava bidalu beku

Krishna keshava ennabeku ||3||


Veda shastrava nodalubeku

Bedha ahankarava neegalu beku

Madhava smaraneyolirabeku ||4||


Shanti kshame daye pidiyalubeku

Bhranti krodava kaleyalubeku

Santara sangadi ratiyirabeku ||5||


Guruvina charanakkeragalu beku

Tarunopayava nariyalubeku

Virakti margadalirabeku ||6||


Bandaddundu sukisalubeku

Ninda stutigala talalubeku

Tande purandara vittalananennabeku ||7||          ||sri||


ಭಕ್ತಿಗೀತೆ 


ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ।।ಪ ।।


ಭೂತ ದಯಾಪರನಾಗಿರಬೇಕು 

ಪಾತಕವೆಲ್ಲವ ಕಳೆಯಲುಬೇಕು 

ಮಾತುಮಾತಿಗೆ ಹರಿಯೆನ್ನಬೇಕು ।।೧।।


ಆರು ವರ್ಗವ ನಳಿಯಲುಬೇಕು 

ಮೂರು ಗುಣಗಳ ಮೀರಲು ಬೇಕು 

ಸೇರಿ ಬ್ರಹ್ಮನೊಳಿರಬೇಕು ।।೨।।


ಅಷ್ಟ ಮದಂಗಳ ತುಳಿಯಲುಬೇಕು 

ದುಷ್ಟರ ಸಂಗವ ಬಿಡಲು ಬೇಕು 

ಕೃಷ್ಣ ಕೇಶವ ಎನ್ನಬೇಕು ।।೩।।


ವೇದ ಶಾಸ್ತ್ರವ ನೋದಲುಬೇಕು 

ಬೇಧ ಅಹಂಕಾರವ ನೀಗಲು ಬೇಕು 

ಮಾಧವ ಸ್ಮರಣೆಯೊಳಿರಬೇಕು ।।೪।।


ಶಾಂತಿ ಕ್ಷಮೆ ದಯೆ ಪಿಡಿಯಲುಬೇಕು 

ಭ್ರಾಂತಿ ಕ್ರೋಧವ ಕಳೆಯಲುಬೇಕು 

ಸಂತರ ಸಂಗದಿ ರತಿಯಿರಬೇಕು ।।೫।।


ಗುರುವಿನ ಚರಣಕ್ಕೆರಗಲು ಬೇಕು 

ತರುಣೋಪಾಯವ ನರಿಯಲುಬೇಕು 

ವಿರಕ್ತಿ ಮಾರ್ಗದಲಿರಬೇಕು ।।೬।।


ಬಂದದ್ದುಂಡು ಸುಖಿಸಲು ಬೇಕು 

ನಿಂದಾ ಸ್ತುತಿಗಳ ತಾಳಲುಬೇಕು 

ತಂದೆ ಪುರಂದರ ವಿಠ್ಠಲನ ನೆನ್ನಬೇಕು ।।೭।।      ।।ಶ್ರೀ ।।



Tuesday, September 6, 2022

Indu Shukravara (ಇಂದು ಶುಕ್ರವಾರ )

 

Bhaktigeete

Song link: Click Here


Sarva mangala mangalye

Shive sarvartha sadake

Sharanye trayambake devi

Narayani namostute ||


Indu shukravara 

Shubhava taruva vara

Sumangaliyarella ninna 

Poojisuva punyavara


Munjaneya madi uttu

Kunkumava hanegittu

Rangoliya bagiligittu

Hannu kayi needuva vara ||indu||


Mallige jaji hoomale haki

Chandana hacchi singara madi

Karpuradarati ninage belagi

Bhaktiyindali bhajisuva vara ||indu||


Suhasiniyarige kunkuma hacchi

Sambramadinda bagina needi

Sarva mangaleya keertiya haadi

Sakala bhagyava beduva vara  ||indu||


ಭಕ್ತಿಗೀತೆ 


ಸರ್ವ ಮಂಗಳ ಮಾಂಗಲ್ಯೇ 

ಶಿವೇ ಸರ್ವಾರ್ಥ ಸಾಧಕೆ  

ಶರಣ್ಯೇ  ತ್ರಯಂಬಕೆ  ದೇವಿ 

ನಾರಾಯಣಿ  ನಮೋಸ್ತುತೆ ।।


ಇಂದು ಶುಕ್ರವಾರ 

ಶುಭವ ತರುವ ವಾರ 

ಸುಮಂಗಲಿಯರೆಲ್ಲಾ ನಿನ್ನ 

ಪೂಜಿಸುವ ಪುಣ್ಯ ವಾರ 


ಮುಂಜಾನೆಯ ಮಡಿಯುಟ್ಟು 

ಕುಂಕುಮವ ಹಣೆಗಿಟ್ಟು 

ರಂಗೋಲಿಯ ಬಾಗಿಲಿಗಿಟ್ಟು 

ಹಣ್ಣು ಕಾಯಿ ನೀಡುವ ವಾರ ।।ಇಂದು।।


ಮಲ್ಲಿಗೆ ಜಾಜಿ ಹೂಮಾಲೆ ಹಾಕಿ 

ಚಂದನ ಹಚ್ಚಿ ಸಿಂಗಾರ ಮಾಡಿ 

ಕರ್ಪುರದಾರತಿ ನಿನಗೆ ಬೆಳಗಿ 

ಭಕ್ತಿಯಿಂದಲಿ ಭಜಿಸುವ ವಾರ ।।ಇಂದು।।


ಸುವಾಸಿನಿಯರಿಗೆ ಕುಂಕುಮ ಹಚ್ಚಿ 

ಸಂಭ್ರಮದಿಂದ ಬಾಗೀನ ನೀಡಿ 

ಸರ್ವ ಮಂಗಲೆಯ ಕೀರ್ತಿಯ ಹಾಡಿ 

ಸಕಲ ಭಾಗ್ಯವ ಬೇಡುವ ವಾರ ।।ಇಂದು।।



Nenapideya O Gelati (ನೆನಪಿದೆಯಾ ಓ ಗೆಳತಿ)

 

Bhavageete

Sahitya: B R Laxshmana Rao

Song link: Click Here



Nenapideya o gelati, nenapideya ninage

Nanna ninna kannu kudi ondada ghalige


Nenapideya o iniya, nenapideya ninage

Nanna ninna hrudaya kudi ondada ghalige


Sankrantiya sanjeyandu

Kande ninnanu gudiyali

Hosa hareyada beragadenu

Ninna matada maiyyali 


Manna hanateya belakinalli

Kannu kannu kudalu

Yava parichaya hage holedu

Nanna ninnede seleyitu || nenapideya||


Sankochada koshadalli

Adagi kulita nannolu

Hosalokave tereyitandu

Saridu ella teregalu 


Banna bannada rekke padeda

Chetteyante haride

Ninna hrudayada preeti jenu

Manataniye na heeride || nenapideya||


ಭಾವಗೀತೆ 


ನೆನಪಿದೆಯಾ ಓ ಗೆಳತಿ , ನೆನಪಿದೆಯಾ ನಿನಗೆ 

ನನ್ನ ನಿನ್ನ ಕಣ್ಣು ಕೊಡಿ ಒಂದಾದ ಘಳಿಗೆ 


ನೆನಪಿದೆಯಾ ಓ ಇನಿಯ  , ನೆನಪಿದೆಯಾ ನಿನಗೆ 

ನನ್ನ ನಿನ್ನ ಹೃದಯ  ಕೊಡಿ ಒಂದಾದ ಘಳಿಗೆ 


ಸಂಕ್ರಾಂತಿಯ ಸಂಜೆಯಂದು 

ಕಂಡೆ ನಿನ್ನನು ಗುಡಿಯಲಿ 

ಹೊಸ ಹರೆಯದ ಬೆರಗದೇನು 

ನಿನ್ನ ಮಾಟದ ಮೈಯಲಿ 


ಮಣ್ಣ ಹಣತೆಯ ಬೆಳಕಿನಲ್ಲಿ 

ಕಣ್ಣು ಕಣ್ಣು ಕೂಡಲು 

ಯಾವ ಪರಿಚಯ ಹಾಗೆ ಹೊಳೆದು 

ನನ್ನ ನಿನ್ನೆಡೆ ಸೆಳೆಯಿತು ।।ನೆನಪಿದೆಯಾ।।


ಸಂಕೋಚದ ಕೋಶದಲ್ಲಿ 

ಅಡಗಿ ಕುಳಿತ ನನ್ನೊಳು 

ಹೊಸಲೋಕವೆ ತೆರೆಯಿತಂದು 

ಸರಿದು ಎಲ್ಲಾ ತೆರೆಗಳು


ಬಣ್ಣ ಬಣ್ಣದ ರೆಕ್ಕೆ ಪಡೆದ 

ಚಿಟ್ಟೆಯಂತೆ ಹಾರಿದೆ 

ನಿನ್ನ ಹೃದಯದ ಪ್ರೀತಿ ಜೇನು 

ಮನತಣಿಯೇ ನಾ ಹೀರಿದೆ ।।ನೆನಪಿದೆಯಾ।।