Song link: Click Here
Hindustanavu endu mareyada, bharata ratnavu janmisali
Ee kannada maateya madilalli, ee kannada nudiya gudiyalli ||
Deshabhaktiya bisi bisi nettaru, dhamani dhamaniyali tumbirali
Vishwa premada shanti mantrada, ghoshava ellede molagisali
Sakala dharmada satva smanvaya, tatva jyothiya belagisali ||
Kannada tayiya komala hrudayada, bhavya shasana bareyisali
Kannada nadina ede edeyallu, kannada vaniya stapisali
Ee mannina punyada divya charitreya, kallu kallinalu kettisali ||
ದೇಶಭಕ್ತಿಗೀತೆ
ಹಿಂದೂಸ್ತಾನವು ಎಂದು ಮರೆಯದ, ಭಾರತ ರತ್ನವು ಜನ್ಮಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ, ಈ ಕನ್ನಡ ನುಡಿಯ ಗುಡಿಯಲ್ಲಿ ।।ಪ ।।
ದೇಶಭಕ್ತಿಯ ಬಿಸಿ ಬಿಸಿ ನೆತ್ತರು, ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದ ಶಾಂತಿ ಮಂತ್ರದ,ಘೋಷವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ,ತತ್ವ ಜ್ಯೋತಿಯ ಬೆಳಗಿಸಲಿ ।।೧।।
ಕನ್ನಡ ತಾಯಿಯ ಕೋಮಲ ಹೃದಯದ, ಭವ್ಯ ಶಾಸನ ಬರೆಯಿಸಲಿ
ಕನ್ನಡ ನಾಡಿನ ಎದೆ ಎದೆಯಲ್ಲೂ, ಕನ್ನಡ ವಾಣಿಯ ಸ್ಥಾಪಿಸಲಿ
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ, ಕಲ್ಲು ಕಲ್ಲಿನಲು ಕೆತ್ತಿಸಲಿ ।।೨।।






