Tuesday, June 7, 2022

Kelide Ninnaya Suddi (ಕೇಳಿದೆ ನಿನ್ನಯ ಸುದ್ಧಿ)


Bhaktigeete

Puranadara Dasara Keerthanegalu

Song link: Click Here


Raga: Shankarabharana

Tala: Atatala


Kelide ninnaya suddi

Kelide


Neerolu mulugideyante, dodda

Bhara giriya potteyante

Gedde, beru genasa meddeyante

Aha, mooreradariyada taralana matige

Ghora danavana samhara madideyendu ||


Nariyobbala petteyente, hetta

Nariyalanu koideyante

Ninna, narichorana kondeyante

Aha, ooranariyara sooregolluta 

Para nariyarabhimana garumadideyendu ||


Turaga ravutanadeyente, ninna

Karadi kadagolu nenu ante

Ninage sari dhareyolagillavante

Aha, varada sri purandara vittalana ninna ee

Pari pari mahimeya harishisutali nanu ||


ಭಕ್ತಿಗೀತೆ 


ಕೇಳಿದೆ 

ನಿನ್ನಯ ಸುದ್ಧಿ 

ಕೇಳಿದೆ 


ನೀರೊಳು ಮುಳುಗಿದೆಯಂತೆ ,ದೊಡ್ಡ 

ಭಾರ ಗಿರಿಯ ಪೊತ್ತೆಯೆಂತೆ 

ಗೆಡ್ಡೆ ,ಬೇರು ಗೆಣಸ ಮೆದ್ದೆಯೆಂತೆ 

ಅಹ, ಮೂರೆರಡರಿಯದ ತರಳನ ಮಾತಿಗೆ 

ಘೋರ ದಾನವನ ಸಂಹಾರ ಮಾಡಿದೆಯೆಂದು ।।ಕೇಳಿದೆ ।।


ನಾರಿಯೊಬ್ಬಳ ಪೆತ್ತೆಯೆಂತೆ ,ಹೆತ್ತ 

ನಾರಿಯಳನು ಕೋಯ್ದೆಯೆಂತೆ 

ನಿನ್ನ ,ನಾರೀಚೋರನ ಕೊಂದೆಯೆಂತೆ 

ಅಹ, ಊರನಾರಿಯರ ಸೂರೆಗೊಳ್ಳುತ 

ಪರ ನಾರಿಯರಭಿಮಾನ ಗಾರುಮಾಡಿದೆಯೆಂದು ।।ಕೇಳಿದೆ ।।


ತುರಗ ರಾವುತನಾದೆಯೆಂತೆ, ನಿನ್ನ 

ಕರದಿ ಕಡಗೋಲು ನೇಣ೦ತೆ 

ನಿನಗೆ  ಸರಿ ಧರೆಯೊಳಗಿಲ್ಲವಂತೆ 

ಅಹ, ವರದ ಶ್ರೀ ಪುರಂದರ ವಿಠ್ಠಲನ  ನಿನ್ನ ಈ 

ಪರಿಪರಿ ಮಹಿಮೆಯ ಹರುಷಿಸುತಲಿ ನಾನು ।।ಕೇಳಿದೆ।।



Monday, June 6, 2022

Dasana Madiko Enna (ದಾಸನ ಮಾಡಿಕೋ ಎನ್ನ)


Bhaktigeete

Purandara Dasara Keertanegalu

Song link: Click Here


Raga: Nadhanamakriye

Tala: Atatala


Dasana madiko enna, swami

Sasiranamada venkata ramana ||


Durbuddhigalanella bidiso

Ninna karuna kavachavenna haranakke todiso

Charanaseeve enage kodiso, abhaya

Karapushpava enna shiradalli mudiso  ||


Drudda bhakti ninnali bedi, na

Adigeraguvenayya anudina padi

Kadegannalekenna nodi, biduve

Kodu ninna dhyanava mana shuchimadi  ||


Mo re hokkavara kava birudu, enna

Mareyade rakshane madayya poredu

Duritagalellava taridu, siri

Purandara vittala ennanu  poredu ||


ಭಕ್ತಿಗೀತೆ 


ದಾಸನ ಮಾಡಿಕೋ ಎನ್ನ ,ಸ್ವಾಮಿ 

ಸಾಸಿರನಾಮದ ವೆಂಕಟ ರಮಣ 


ದುರ್ಬುದ್ಧಿಗಳನೆಲ್ಲ ಬಿಡಿಸೊ 

ನಿನ್ನ ಕರುಣಕವಚವೆನ್ನ  ಹರಣಕ್ಕೆ ತೊಡಿಸೊ 

ಚರಣಸೇವೆ ಎನಗೆ ಕೊಡಿಸೊ , ಅಭಯ 

ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ।।೧।।


ದೃಢಭಕ್ತಿ ನಿನ್ನಲಿ ಬೇಡಿ , ನಾ 

ಅಡಿಗೆರಗುವೆನಯ್ಯ ಅನುದಿನ ಪಾಡಿ 

ಕಡೆಗಣ್ಣಲೇಕೆನ್ನೆ ನೋಡಿ,  ಬಿಡುವೆ 

ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।


ಮೊರೆಹೊಕ್ಕವರ ಕಾವ ಬಿರುದು,  ಎನ್ನ 

ಮರೆಯದೆ ರಕ್ಷಣೆಮಾಡಯ್ಯಾ ಪೊರೆದು 

ದುರಿತಗಳೆಲ್ಲವ ತರಿದು,  ಸಿರಿ 

ಪುರಂದರ ವಿಠ್ಠಲ ಎನ್ನನು ಪೊರೆದು ।।೩।।                               ಶ್ರೀ 



Saturday, June 4, 2022

Ninna Premada Pariya Nanariye Kanakangi (ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ)

Bhavageete

Sahitya: K S Narasimha Swamy

Song link: Click Here



Ninna premada pariya nanariye kanakangi

Ninnolide nanna manasu ||


Hunnimeya ratriyali

 Ukkuvudu kadalagi

Ninnolume nanna kandu

Ninolide nanna manasu ||


Sagarana hrudayadali

Ratna parvata male

Minchinali meevudante

Teeradali balakuvale

Kanna chumbisi matte

Saguvudu kanasinante

Ninolide nanna manasu ||


Ale bandu kareyuvudu

Ninn olume aramanege

Olagadala ratnapurige

Aleyiduva muttinale

Kanuvudu ninnolume

Olagudiya moorthy mahime

Ninolide nanna manasu ||


Ninna premada pariya nanariye kanakangi

Tareyagade kanuve minchu

Nale ardhangi

Tareyagade kanuve minchu

Nale ardhangi.....


ಭಾವಗೀತೆ 


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ 

ನಿನ್ನೊಳಿದೆ ನನ್ನ ಮನಸು ।।ಪ ।।


ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ 

ನಿನ್ನೊಲುಮೆ ನನ್ನ ಕಂಡು 

ನಿನ್ನೊಳಿದೆ ನನ್ನ ಮನಸು ।।ಅನು ।।


ಸಾಗರನ ಹೃದಯದಲಿ ರತ್ನಪರ್ವತ ಮಾಲೆ 

ಮಿಂಚಿನಲಿ ಮೀವುದಂತೆ 

ತೀರದಲಿ ಬಳಕುವಲೆ 

ಕಣ್ಣ ಚುಂಬಿಸಿ ಮತ್ತೆ 

ಸಾಗುವುದು ಕನಸಿನಂತೆ 

ನಿನ್ನೊಳಿದೆ ನನ್ನ ಮನಸು ।।೧।।


ಅಲೆಬಂದು ಕರೆಯುವುದು 

ನಿನ್ನೊಲುಮೆ ಅರಮನೆಗೆ 

ಒಳಗಡಲ ರತ್ನಪುರಿಗೆ 

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ 

ಒಳಗುಡಿಯ ಮೂರ್ತಿಮಹಿಮೆ 

ನಿನ್ನೊಳಿದೆ ನನ್ನ ಮನಸು ।।೨।।

 
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ

ತಾರೆಯಾಗದೆ ಕಾಣುವಿ ಮಿಂಚು 

ನಾಳೆ   ಅರ್ಧಾಂಗಿ

 ತಾರೆಯಾಗದೆ ಕಾಣುವಿ ಮಿಂಚು 

ನಾಳೆ   ಅರ್ಧಾಂಗಿ...... 

                       

Wednesday, June 1, 2022

Krishnamurthy Kannu Munde Nintidantide (ಕೃಷ್ಣಮೂರ್ತಿ ಕಣ್ಣುಮುಂದೆ ನಿಂತಿದಂತಿದೆ)


Bhaktigeete

Purandara dasara keerthanegalu

Song link: Click Here


Raga: Kamboji

Tala: Triputatala


Krishnamurthy kannu munde nintidantide

Kastagalellava pariharisi mana distarthagalanella

Kottu rakshisuvantha..


Masthakadalli manikada kireeta

Kasturi tilakadindeseva lalata

Shistili kolalanooduva orenota

Koustubha edabladali olata  ||


Ghama ghamisuva sobagina suligurulu

Chiguru tulasi vanamaleya koralu

Bhage bhage honnunguravitta beralu

Sogasina nabhiya tavareyaralu  ||


Ududara oddyana nikhilabharana

Uduge peetambara ravi shatakirana

Kadaga noopura gejje galanitta charana

Odeya sri purandara vittalana karuna  ||       sri              


ಭಕ್ತಿಗೀತೆ 


ಕೃಷ್ಣಮೂರ್ತಿ ಕಣ್ಣುಮುಂದೆ ನಿಂತಿದಂತಿದೆ 

ಕಷ್ಟಗಳೆಲ್ಲವ ಪರಿಹರಿಸಿ  ಮನ ದಿಷ್ಟಾರ್ಥಗಳನೆಲ್ಲ 

ಕೊಟ್ಟು ರಕ್ಷಿಸುವಂಥ ..


ಮಸ್ತಕದಲ್ಲಿ  ಮಾಣಿಕದ  ಕಿರೀಟ 

ಕಸ್ತೂರಿ ತಿಲಕದಿಂದೆಸೆವ ಲಲಾಟ 

ಶಿಸ್ತಿಲಿ ಕೊಳಲ ನೂದುವ ಓರೆನೋಟ 

ಕೌಸ್ತುಭ ಎಡಬಲದಲಿ ಓಲಾಟ ।।೧।।


ಘಮಘಮಿಸುವ ಸೊಬಗಿನ ಸುಳಿಗುರುಳು 

ಚಿಗುರು ತುಳಸಿವನಮಾಲೆಯ ಕೊರಳು 

ಬಗೆಬಗೆ ಹೊನ್ನುಂಗುರವಿಟ್ಟ ಬೆರಳು 

ಸೊಗಸಿನ ನಾಭಿಯ ತಾವರೆಯರಳು ।।೨।।


ಉಡುದಾರ ಒಡ್ಯಾಣ ನಿಖಿಲಾಭರಣ 

ಉಡುಗೆ ಪೀತಾಂಬರ ರವಿ ಶತಕಿರಣ 

ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ 

ಒಡೆಯ ಶ್ರೀ ಪುರಂದರ ವಿಠ್ಠಲನ ಕರುಣ  ।।೩।।                     ಶ್ರೀ 



Tuesday, May 31, 2022

Srinivasa Neene Paliso (ಶ್ರೀನಿವಾಸ ನೀನೇ ಪಾಲಿಸೋ)

Bhaktigeete

Purandara dasara keerthanegalu

 Song link: Click Here



Raga: Aanandabairavi

Tala: Aaditala


Srinivasa neene paliso

Sritajanapala

Ganalola sri mukundane

Dhyna malpa sajjanara manadim paripalipa

Venugopala mukunda vedavedya nityananda ||


Endige ninna padabjava ponduva sukha

Endige labyavo madhava

Andhakaranyadhalli nindu tathatrisutiheno

Andhadim bhavaabdhiyolu 

Mindu nondeno mukunda  ||


Eastu dina kasta paduvudo yashode kanda

Dristiyinda noodalagade

Mutti ninna bhajisalare ketta narajanmadava

Dusta karya madidagyu eastanagi kaiyya pididu 

||


Anudina aneka rogangala anubhavisuvenu

Ghanamahimane kelayya

Tanuvinalli balavilla neneda matra salahuva

Hanumadeesha purandara vittalane kaiyyapididu  ||      


ಭಕ್ತಿಗೀತೆ 


ಶ್ರೀನಿವಾಸ ನೀನೇ ಪಾಲಿಸೋ 

ಶ್ರೀತಜನಪಾಲ 

ಗಾನಲೋಲ ಶ್ರೀ ಮುಕುಂದನೇ 

ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ 

ವೇಣುಗೋಪಾಲ ಮುಕುಂದ ವೇದವೇದ್ಯ ನಿತ್ಯಾನಂದ 


ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ 

ಎಂದಿಗೆ ಲಭ್ಯವೋ ಮಾಧವ 

ಅಂಧಕಾರಣ್ಯದಲಿ ನಿಂದು ತತರಿಸುತಿಹೆನೋ 

ಅಂದದಿಂ ಭಾವಾಬ್ದಿಯೊಳು

ಮಿಂದು ನೊಂದೆನೊ ಮುಕುಂದ ।।೧।।


ಎಷ್ಟು ದಿನ ಕಷ್ಟಪಡುವುದೊ ಯಶೋದೆ ಕಂದ 

ದ್ರಿಷ್ಟಿಯಿಂದ ನೋಡಲಾಗದೆ 

ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ 

ದುಷ್ಟಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯ ಪಿಡಿದು ।।೨।।


ಅನುದಿನ ಅನೇಕ ರೋಗಂಗಳ ಅನುಭವಿಸುವೆನು 

ಘನಮಹಿಮನೆ ಕೇಳಯ್ಯ 

ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ 

ಹನುಮದೀಶ ಪುರಂದರ ವಿಠ್ಠಲನೇ ಕೈಯ್ಯಪಿಡಿದು ।।೩।।      ಶ್ರೀ 



Monday, May 30, 2022

Gajavadhana Beduve (ಗಜವದನ ಬೇಡುವೆ)

 Bhaktigeete

Song link: Click Here

Raga: Dhanashree

 Tala: Aaditala


Gajavadhana beduve

Gouritanaya

Trijaga vandhitane

Sujanara porevane


Pashankushadhara parama pavitra

Mooshika vahana munijana prema


Modadi ninnaya padava toro

Sadhu vandhitane aadaradindali


Sarasijanabha sri purandhara vittalana

Nirata neneyuvanthe dayamado


ಭಕ್ತಿಗೀತೆ 


ಗಜವದನ  ಬೇಡುವೆ 

ಗೌರೀತನಯ 

ತ್ರಿಜಗ  ವಂದಿತನೆ  ಸುಜನರ  ಪೊರೆವನೆ 


ಪಾಶಾಂಕುಶಧರ  ಪರಮ  ಪವಿತ್ರ 

ಮೂಷಿಕವಾಹನ  ಮುನಿಜನಪ್ರೇಮ ।।೧।।


ಮೋದದಿ  ನಿನ್ನಯ ಪಾದವ  ತೋರೊ 

ಸಾಧು  ವಂದಿತನೆ  ಆದರದಿಂದಲಿ ।।೨।।


ಸರಸಿಜನಾಭ  ಶ್ರೀ  ಪುರಂದರ ವಿಠ್ಠಲನ 

ನಿರತ  ನೆನೆಯುವಂತೆ  ದಯಾಮಾಡೊ ।।೩।।           ಶ್ರೀ ।।





Saturday, May 28, 2022

Sahyadri Shreniya Girigala Naduve (ಸಹ್ಯಾದ್ರಿ ಶ್ರೇಣಿಯ ಗಿರಿಗಳ ನಡುವೆ)


Bhaktigeete

Sri Sridhara Swami bhaktigeete


Sahyadri shreniya girigala naduve

Teerthavu ondittu

Sridhara teerthavu ondittu


Julu julu julu julu ennuta

Neeradu haridittu

Adaralli na mai tolede

Nanella papava kalede

Guruvanu na arite

Sadguruvanu na arite ||1||


Melina kutiyali aarati veelege

Bheriyu molagittu

Dham dham dham dham nadhake

Gida mara nadugittu

Adaralli nanu berete

Nannanu nane marete

Guruvanu na arite

Sadguruvanu na arite ||2||


Samadhi budadali hasu maghu ondu

Japavanu nadesittu

Om guru om guru ennuta minigala enisittu

Adakandu na jaga marete

Na nade sojiga bharite

Guruvanu na arite

Sadguruvanu na arite ||3||


ಭಕ್ತಿಗೀತೆ 


ಸಹ್ಯಾದ್ರಿ ಶ್ರೇಣಿಯ ಗಿರಿಗಳ ನಡುವೆ 

ತೀರ್ಥವು ಒಂದಿತ್ತು 

ಶ್ರೀಧರ ತೀರ್ಥವು ಒಂದಿತ್ತು 


ಜುಳು ಜುಳು ಜುಳು ಜುಳು ಎನ್ನುತ 

ನೀರದು ಹರಿದಿತ್ತು 

ಅದರಲ್ಲಿ ನಾ ಮೈ ತೊಳೆದೆ 

ನನ್ನೆಲ ಪಾಪವ ಕಳೆದೆ 

ಗುರುವನು ನಾ ಅರಿತೆ 

ಸದ್ಗುರುವನು ನಾ ಅರಿತೆ ।।೧।।


ಮೇಲಿನ ಕುಟಿಯಲಿ  ಆರತಿ ವೇಳೆಗೆ 

ಭೇರಿಯು ಮೊಳಗಿತ್ತು 

ಡಂ ಡಂ ಡಂ ಡಂ ನಾದಕೆ 

ಗಿಡಮರ ನಡುಗಿತ್ತು 

ಅದರಲ್ಲಿ ನಾನು ಬೆರೆತೆ 

ನನ್ನನ್ನು ನಾನೇ ಮರೆತೆ 

ಗುರುವನು ನಾ ಅರಿತೆ 

ಸದ್ಗುರುವನು ನಾ ಅರಿತೆ ।।೨।।


ಸಮಾಧಿ ಬುಡದಲಿ ಹಸು ಮಗು ಒಂದು 

ಜಪವನು ನಡೆಸಿತ್ತು 

ಓಂ ಗುರು ಓಂ ಗುರು ಎನ್ನುತ ಮಣಿಗಳ ಎಣಿಸಿತ್ತು 

ಅದಕಂಡು ನಾ ಜಗ ಮರೆತೆ 

ನಾ ನಾದೆ ಸೋಜಿಗ ಭರಿತೆ 

ಗುರುವನು ನಾ ಅರಿತೆ 

ಸದ್ಗುರುವನು ನಾ ಅರಿತೆ ।।೩।।