Monday, April 11, 2022

Ele Mana Murariyane Kondado (ಎಲೆ ಮನ ಮುರಾರಿಯನೆ ಕೊಂಡಾಡೊ)

Bhaktigeete

Song link: Click Here


Ele mana murariyane kondado

Kalana dootaru kalige biddare

Nalige niluvare nodo ||ele mana||


Mandiya matige endendu marugade

Mundina gatiyanu  nodo ||ele mana||


Raajeevamukiyara gojige hogade

vijaya vittalana paado ||ele mana||



ಭಕ್ತಿಗೀತೆ 


ಎಲೆ ಮನ ಮುರಾರಿಯನೆ  ಕೊಂಡಾಡೊ  

ಕಾಲನ ದೂತರು ಕಾಲಿಗೆ ಬಿದ್ದರೆ 

ನಾಳೆಗೆ ನಿಲುವರೆ ನೋಡೋ ।।ಪ ।।


ಮಂದಿಯ ಮಾತಿಗೆ ಎಂದೆಂದು ಮರುಗದೆ 

ಮುಂದಿನ ಗತಿಯನು ನೋಡೋ ।।೧।।


ರಾಜೀವಮುಖಿಯರ ಗೋಜಿಗೆ ಹೋಗದೆ 

ವಿಜಯ ವಿಠ್ಠಲನ ಪಾಡೊ ।।೨।।



Saturday, April 9, 2022

Chaitrada Premanjaliya Suma Suma (ಚೈತ್ರದ ಪ್ರೇಮಾಂಜಲಿಯ ಸುಮ ಸುಮ)

Movie: Chaitrada premanjali (1992)

Singer: SPB, Chandrika Gururaj

Song link: Click Here


Chaitrada premanjaliya, suma suma suma  

Gandhada parimalakinta, ghama ghama ghama   

Suma ghama,  sama ghama ||


Maliigeya malli cheluvinali, melluliya mella naguvinali

Sampigeya sompu kurulinadi, tampiduva shashiya vadanadali

Matanade mandhara, ninna hesare shringara   

Kanakambari o neelambari, ninage nee sari

Sevantige soojimallige

Gidavagi, eleyagi, ninage na sari ||


Kannali neenu kamalavati, odalalli taale pushpavati

Bhayaveke anju malligeye, ba elu suttu malligeye

Parijata varavagu, suryakanthi belakagu  

Madhu tumbida gulabi suma, ninage nee sama

Nashe eriso o rajani suma

Hoodani abhimani ninage na sama ||


ಚಿತ್ರಗೀತೆ 


ಚೈತ್ರದ ಪ್ರೇಮಾಂಜಲಿಯ ಸುಮಾ  ಸುಮಾ  ಸುಮಾ  

ಗಂಧದ ಪರಿಮಳಕಿಂತ ಘಮಾ  ಘಮಾ  ಘಮಾ  

ಸುಮಾ  ಘಮಾ, ಸಮಾ ಘಮಾ  ।।ಪ।।


ಮಲ್ಲಿಗೆಯ ಮಳ್ಳಿ ಚೆಲುವಿನಲಿ,ಮೆಲ್ಲುಲಿಯ ಮೆಲ್ಲ ನಗುವಿನಲಿ 

ಸಂಪಿಗೆಯ ಸೊಂಪು ಕುರುಳಿನಡಿ, ತಂಪಿಡುವ ಶಶಿಯ ವದನದಲಿ 

ಮಾತನಾಡೆ ಮಂದಾರ, ನಿನ್ನ ಹೆಸರೆ ಶೃಂಗಾರ 

ಕನಕಾಂಬರಿ, ಓ ನೀಲಾಂಬರಿ, ನಿನಗೆ ನೀ ಸರಿ 

ಸೇವಂತಿಗೆ, ಸೂಜೀ ಮಲ್ಲಿಗೆ 

ಗಿಡವಾಗಿ, ಎಲೆಯಾಗಿ, ನಿನಗೆ ನಾ ಸರಿ ।।೧।।


ಕಣ್ಣಲ್ಲಿ ನೀನು ಕಮಲವತಿ, ಒಡಲಲ್ಲಿ ತಾಳೆ ಪುಷ್ಪವತಿ 

ಭಯವೇಕೆ ಅಂಜು ಮಲ್ಲಿಗೆಯೇ, ಬಾ ಏಳು ಸುತ್ತು ಮಲ್ಲಿಗೆಯೇ  

ಪಾರಿಜಾತ ವಾರವಾಗು, ಸೂರ್ಯ ಕಾಂತಿ ಬೆಳಕಾಗು 

ಮಧು ತುಂಬಿದಾ ಗುಲಾಬಿ ಸುಮಾ, ನಿನಗೆ ನೀ ಸಮ 

ನಶೆ ಏರಿಸೋ ಓ ರಜನಿ ಸುಮಾ  

ಹೂದಾನಿ ಅಭಿಮಾನಿ ನಿನಗೆ ನಾ ಸಮ ।।೨।।


Friday, April 8, 2022

Bhrama Murarisurarchita Lingam (ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ)

 Bhaktigeete

Song link: Click Here




Bhrama murarisurarchita lingam

Nirmala basitha shobita lingam |

Janmaja dhukka vinashaka lingam

Tat pranamami sadashiva lingam ||


Devamuni pravararchita lingam

Kamadaham karunakara lingam |

Ravana darpavinashana lingam

Tat pranamami sadashiva lingam ||


Sarva sugandhi sulepita lingam

Bhuddi vivardhana karana lingam |

Sidha surasura vanditha lingam

Tat pranamami sadashiva lingam ||


Kanaka mahamani bushita lingam

Panipathi vestitha shobitha lingam |

Dhakshasuyajna vinashana lingam

Tat pranamami sadashiva lingam ||


Kunkuma chandana lepita lingam

Pankajahara sushobita lingam |

Sanchitapapa vinashana lingam

Tat pranamami sadashiva lingam ||


Devaganarchita sevita lingam

Bhavaibhakti bireeva cha lingam |

Dinakara koti prabhakara lingam

Tat pranamami sadashiva lingam ||


Astadalopari vestita lingam

Sarvasamudbhava karana lingam |

Asta dharidra vinashana lingam

Tat pranamami sadashiva lingam ||


Suraguru suravara poojita lingam

Suravara pushpa sadarchita lingam|

Paratparam paramatmaka lingam

Tat pranamami sadashiva lingam ||


Lingastakamidam punyam yah patet shiva sannidou |

Shivaloka mavapnothi shivena saha modate ||


ಭಕ್ತಿಗೀತೆ 


ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ 

ನಿರ್ಮಲ ಭಾಸಿತ ಶೋಭಿತ ಲಿಂಗಂ ।

ಜನ್ಮಜ ದುಃಖ ವಿನಾಶಕ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ದೇವ ಮುನಿ ಪ್ರವರಾರ್ಚಿತ ಲಿಂಗಂ 

ಕಾಮದಹಂ ಕರುಣಾಕರ ಲಿಂಗಂ ।

ರಾವಣ ದರ್ಪ ವಿನಾಶನ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಸರ್ವ ಸುಗಂಧಿ ಸುಲೇಪಿತ ಲಿಂಗಂ 

ಬುದ್ಧಿ  ವಿವರ್ಧನ ಕಾರಣ ಲಿಂಗಂ ।

ಸಿದ್ಧ ಸುರಾಸುರ ವಂದಿತ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಕನಕ ಮಹಾಮಣಿ ಭೂಷಿತ ಲಿಂಗಂ 

ಫಣಿಪತಿ ವೇಷ್ಟಿತ ಶೋಭಿತ ಲಿಂಗಂ ।

ದಕ್ಷ ಸುಯಜ್ಞ ವಿನಾಶನ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಕುಂಕುಮ ಚಂದನ ಲೇಪಿತ ಲಿಂಗಂ 

ಪಂಕಜಹಾರ ಸುಶೋಭಿತ ಲಿಂಗಂ ।

ಸಂಚಿತ ಪಾಪ ವಿನಾಶನ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ದೇವಗಾಣಾರ್ಚಿತ ಸೇವಿತ ಲಿಂಗಂ 

ಭಾವೈ ಭಕ್ತಿ ಭಿರೇವ ಚ ಲಿಂಗಂ ।

ದಿನಕರ ಕೋಟಿ ಪ್ರಭಾಕರ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಅಷ್ಟ ದಲೋಪರಿ ವೇಷ್ಟಿತ ಲಿಂಗಂ 

ಸರ್ವ ಸಮುದ್ಭವ ಕಾರಣ ಲಿಂಗಂ ।

ಅಷ್ಟ ದರಿದ್ರ ವಿನಾಶನ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಸುರಗುರು ಸುರವರ ಪೂಜಿತ ಲಿಂಗಂ 

ಸುರವನ ಪುಷ್ಪ ಸದಾರ್ಚಿತ ಲಿಂಗಂ ।

ಪರಾತ್ಪರಂ ಪರಮಾತ್ಮಕ ಲಿಂಗಂ 

ತತ್ ಪ್ರಣಮಾಮಿ ಸದಾಶಿವ ಲಿಂಗಂ ।।


ಲಿಂಗಾಷ್ಟಕ ಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ ।

ಶಿವ ಲೋಕ ಮವಾಪ್ನೋತಿ ಶಿವೇನ ಸಹ ಮೋದತೇ ।। 



Thursday, April 7, 2022

Hari Namave Chanda (ಹರಿ ನಾಮವೇ ಚಂದ)

Movie: Bhakta kumbara (1974)
                             Singer: P B Sreenivas
                             Song link: Click Here


Hari namave chanda (2) ada nambiko kanda (2)

Hari namave.... hari namave ||


Hindina sala teerisalendu, bandihevayya janmava taledu ..aa

Mundina baduku bandhuraveniso, guri sadhiso.. kanda ||


Mannina hage magise manava, chinmayanembo namada jalava

Serisi beresi mukutiya galisi, sukhiyago nee.. kanda ||


Govinda govinda govinda nendu

Endendu neenandu aananda hondu

Tandeyante bandu talekavanayya bandhu

Santhanendu, gunavanthanendu, bhagavantha ninna poreva

Dhanyanago, jagamanyanago, ghana soubhagya koduva

Paratpara hari vittala....aa (2), Paratpara vara vittala (2)

Vittala.... vittala....vittala vittala panduranga

Jaya hari vittala panduranga

Vittala vittala jaya jaya vittala (4) ||


ಭಕ್ತಿಗೀತೆ 


ಹರಿ ನಾಮವೇ ಚಂದ (೨), ಅದ ನಂಬಿಕೋ ಕಂದ (೨)

ಹರಿ ನಾಮವೇ ...... ಹರಿ ನಾಮವೇ...... ।।ಪ।।


ಹಿಂದಿನ ಸಾಲ ತೀರಿಸಲೆಂದು, ಬಂದಿಹೆವಯ್ಯಾ  ಜನ್ಮವ ತಳೆದು ..... ಆಆ ಆಆ

ಮುಂದಿನ ಬದುಕು ಬಂಧುರವೆನಿಸೋ, ಗುರಿ ಸಾಧಿಸೋ .. ಕಂದ ।।೧।।


ಮಣ್ಣಿನ ಹಾಗೆ ಮಾಗಿಸೆ ಮನವ, ಚಿನ್ಮಯನೆಂಬೋ ನಾಮದ ಜಲವ 

ಸೇರಿಸಿ ಬೆರೆಸಿ ಮುಕುತಿಯ  ಗಳಿಸಿ, ಸುಖಿಯಾಗೊ  .... ನೀ ..... ಕಂದಾ ।।೨।।


ಗೋವಿಂದ ಗೋವಿಂದ ಗೋವಿಂದನೆಂದು 

ಎಂದೆಂದು ನೀನಂದು ಆನಂದ ಹೊಂದು 

ತಂದೆಯಂತೆ ಬಂದು, ತಲೆ ಕಾವನಯ್ಯಾ ಬಂಧು 

ಸಂತನೆಂದು, ಗುಣವಂತನೆಂದು ಭಗವಂತ ನಿನ್ನ ಪೊರೆವ 

ಧನ್ಯನಾಗೊ, ಜಾಗಮಾನ್ಯನಾಗೊ ಘನ ಸೌಭಾಗ್ಯ ಕೊಡುವ 

ಪರಾತ್ಪರ ಹರಿ ವಿಠ್ಠಲ (೨) ಪರಾತ್ಪರ ವರ ವಿಠ್ಠಲ (೨) 

ವಿಠ್ಠಲ .. ವಿಠ್ಠಲ, ವಿಠ್ಠಲ ವಿಠ್ಠಲ ಪಾಂಡುರಂಗ 

ಜಯ ಹರಿ ವಿಠ್ಠಲ ಪಾಂಡುರಂಗ (೨)

ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ..  (೪)

                                   

Neeneko Ninna Hangeko (ನೀನೇಕೋ ನಿನ್ನ ಹಂಗೇಕೋ)


Bhaktigeete

Purandara Dasara Keerthanegalu

Song link: Click Here




Raga: Kaanada

Tala: Aditala


Neeneko ninna hangeko

Ninna namada balavondiddare sako

Neeneko ninna hangeko 


Kari makaripe sikki moreyidutiruvaga  

Adimoolavemba namave kayto ||neeneko||


Pralladana pita bhadisutiruvaga

Narahariyamba namave kayto ||neeneko||


Baleya sabheyalli seereya selevaga

Krishna krishna embo namave kayto ||neeneko||


Yamana dootaru bandu ajamila nelevaga

Narayananembo  namave kayto ||neeneko||


Aamara Eemara dhaynisutiruvaga

Rama rama emba namave kayto ||nenyako||


Hasule aa druvaraya adavige popaga

Vasudevanemboa namave kayto ||neeneko||


Ninna namake sari kanenu jagadolu

Ganna mahima siri purandara vittala ||neeneko||


ಭಕ್ತಿಗೀತೆ 


ನೀನೇಕೋ ನಿನ್ನ ಹಂಗೇಕೋ 

ನಿನ್ನ ನಾಮದ ಬಲವೊಂದಿದ್ದರೆ ಸಾಕೋ 

ನೀನೇಕೋ ನಿನ್ನ ಹಂಗೇಕೋ 


ಕರಿ ಮಕರಿಪೆ ಸಿಕ್ಕಿ ಮೊರೆಯಿಡುತಿರುವಾಗ 

ಆದಿಮೂಲವೆಂಬ ನಾಮವೆ ಕಾಯ್ತೋ ||೧।।


ಪ್ರಲ್ಲಾದನ  ಪಿತ ಬಾಧಿಸುತ್ತಿರುವಾಗ 

ನರಹರಿಯಂಬ ನಾಮವೆ ಕಾಯ್ತೋ ।।೨।।


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ 

ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ ।।೩।।


ಯಮನ ದೂತರು ಬಂದು ಅಜಮಿಳನೆಳೆವಾಗ 

ನಾರಾಯಣನೆಂಬ ನಾಮವೆ ಕಾಯ್ತೋ ।।೪।।


ಆಮರ ಈಮರ ಧ್ಯಾನಿಸುತಿರುವಾಗ 

ರಾಮ ರಾಮ ಎಂಬ ನಾಮವೆ ಕಾಯ್ತೋ ।।೫।।


ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ 

ವಾಸುದೇವನೆಂಬ ನಾಮವೆ ಕಾಯ್ತೋ ।।೬।।


ನಿನ್ನ ನಾಮಕೆ ಸರಿಕಾಣೆನು ಜಗದೊಳು 

ಘನಮಹಿಮ ಸಿರಿ ಪುರಂದರ ವಿಠ್ಠಲ ।।೭।। 





Wednesday, April 6, 2022

Satyam Shivam Sundharam (सत्यं शिवं सुंदरम)

Movie: Satyam Shivam Sundaram (1978)
                       Singer: Lata Mangeshkar
                       Song link: Click Here


Eshwar satya hai, satya hi shiv hai, shiv hi sundar hai,

Jaago utkar dekho, jeewan-joth ujaagar hai!


Satyam shivam sundaram, satyam shivam sundaram


Ram avadh mein, kashi mein shiv, kanha vrindavan mein,

Daya karo prabhu, dekhun inko, har ghar ke aangan mein,

Radha-mohan sharanam, satyam shivam sundaram!


Ek surya hai, ek gagan hai, ek hi dharti maata,

Daya karo prabhu, ek banen sab, sab ka ek se nata

Radha-mohan sharanam, satyam shivam sundaram!


Satya beej hai, ankur hai shiv, sundar phool hamara

Daya karo prabhu, ho na kalankit, yah vardhan thumara

Radhamohan sharanam, satyam shivam sundaram!


Satya na jana, shiv ko na mana, sundar na pehchana

Daya karo prabhu, seekhen hum sab, mann ka deep jalana

Radhamohan sharanam, satyam shivam sundaram!


गाना 


ईश्वर सत्य है, सत्य ही शिव है, शिव ही सुंदर है,

जागो उठकर देखो, जीवन-जोत उजागर है !

 

सत्यं शिवं  सुंदरम, सत्यं शिवं  सुंदरम 


राम अवध में, काशी में शिव, कान्हा वृंदावन में, 

दया करो प्रभु, देखूँ इनको, हर घर के आंगन में 

राधा मोहन शरणम, सत्यं शिवं सुंदरम !  


एक सूर्य है, एक गगन है, एक ही धरती माता 

दया करो प्रभु, एक बनें सब, सबका एक से नाता 

राधा मोहन शरणम, सत्यं शिवं सुंदरम !    


सत्य बीज है, अंकुर है शिव, सुन्दर फूल हमारा 

दया करो प्रभु, हो न कलंकीत, यह वरदान तुम्हारा 

राधा मोहन शरणम, सत्यं शिवं सुंदरम !  


सत्य न जाना, शिव को न माना, सुँदर न पहचाना 

दया करो प्रभु, सीखें हम सब, मन का दीप जलना 

राधा मोहन शरणम, सत्यं शिवं सुंदरम !  

                    

Tuesday, April 5, 2022

Ello Jogappa Ninna Aramane (ಎಲ್ಲೋ ಜೋಗಪ್ಪ ನಿನ್ನ ಅರಮನೆ)

Janapada geete

                                         Song link: Click Here


Kinnori nudisona..aa  dani chandavo..

Kinnori nudisona..aaaa  beralinanda chandavo..


Chukkinugrakke nari manasotalo

Bellinugrakke nari manasotalo

Bellinugrakke nari manasotalo


Ello jogappa ninna aramane

Ello jogappa ninna talamane

Ello jogappa ninna aramane

Ello jogappa ninna talamane


Ello jogappa ninna aramane.....


Betta hatt hogabeku, betta ilid hogabeku (2)

Allade kane nan aramane, nari

Allade kane nan aramane (2)

Allade kane nan talamane  ||ello jogappa||


Karvarad keriya gare padasale mele (2)

Loluki nudiya nudisone (2)

Moggagi baro turubeege  ||ello jogappa||


Ellina holava bitte, olleya gandana bitte (2)

Taladta jogi koode hogabhude? nari

Taladta jogi koode hogabhude (3)  ||ello jogappa||


Ninna kandagalenna kannuri kano jogi (2)

Ninnali nanage manasade jogi

Ninnali nanage manasade (3)   ||ello jogappa||


Ellanu bitta mele, nannan yake bida olle (2)

Ninnalli nanage manasade nari

Ninnali nanage manasade (3)  ||ello jogappa||

Nanna tolalli ninna kinnori madikondu (2)

Chandada padava nudisenu nari

Chandada padava nudisenu (3)  ||ello jogappa||

 

ಜನಪದ ಗೀತೆ 


ಕಿನ್ನೋರಿ ನುಡಿಸೋನ, ದನಿ ಚಂದವೋ 

ಕಿನ್ನೋರಿ ನುಡಿಸೋನ, ಬೆರಳಿನಂದ ಚಂದವೋ


ಚುಕ್ಕಿನುಂಗ್ರಕ್ಕೆ ನಾರಿ ಮನಸೋತಳೋ 

ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ

ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ


ಎಲ್ಲೋ ಜೋಗಪ್ಪ ನಿನ್ನ ಅರಮನೆ 

ಎಲ್ಲೋ ಜೋಗಪ್ಪನಿನ್ನ ತಳಮನೆ 

ಎಲ್ಲೋ ಜೋಗಪ್ಪ ನಿನ್ನ ಅರಮನೆ 

ಎಲ್ಲೋ ಜೋಗಪ್ಪನಿನ್ನ ತಳಮನೆ 


ಎಲ್ಲೋ ಜೋಗಪ್ಪ ನಿನ್ನ ಅರಮನೆ....  


ಬೆಟ್ಟ ಹತ್ತೂಗಬೇಕು, ಬೆಟ್ಟ ಇಳಿದೋಗಬೇಕು (೨)

ಅಲ್ಲಾದೆ ಕಣೆ ನನ್ನಾರಮನೇ, ನಾರಿ 

ಅಲ್ಲಾದೆ ಕಣೆ ನನ್ ಅರಮನೆ (೨)

ಅಲ್ಲಾದೆ ಕಣೆ ನನ್ ತಳಮನೆ ||ಎಲ್ಲೋ ಜೋಗಪ್ಪ||


ಕಾರ್ವಾರದ್ ಕೇರಿಯ, ಗಾರೆ ಪಡಸಾಲೆ ಮೇಲೆ (೨)

ಲೋಲುಕಿ ನುಡಿಯ ನುಡಿಸೋನೆ (೨)

ಮೊಗ್ಗಾಗಿ ಬಾರೋ ತುರುಬೀಗೆ ||ಎಲ್ಲೋ ಜೋಗಪ್ಪ||


ಎಳ್ಳಿನ ಹೊಲವಾ ಬಿಟ್ಟೆ 

ಒಳ್ಳೆಯ ಗಂಡನ ಬಿಟ್ಟೆ (೨)

ತಳ್ಳಾಡ್ತ ಜೋಗಿ ಕೊಡೆ ಹೋಗಬಹುದೇ ? ನಾರಿ 

ತಳ್ಳಾಡ್ತ ಜೋಗಿ ಕೊಡೆ ಹೋಗಬಹುದೇ (೩)
 
||ಎಲ್ಲೋ ಜೋಗಪ್ಪ||


ನಿನ್ನಾ ಕಾಂಡಗಲ್ಲೆನ್ನ ಕಣ್ಣೂರಿ ಕಣೋ ಜೋಗಿ (೨)

ನಿನ್ನಲಿ ನನಗೆ ಮನಸಾದೇ, ಜೋಗಿ

 ನಿನ್ನಲಿ ನನಗೆ ಮನಸಾದೇ(೩) ||ಎಲ್ಲೋ ಜೋಗಪ್ಪ||


ಎಲ್ಲಾನು ಬಿಟ್ಟಮ್ಯಾಲೆ ನನ್ನನ್ಯಾಕೆ ಬಿಡವೊಲ್ಲೆ (೨)

ನಿನ್ನಲಿ ನನಗೆ ಮನಸಾದೇ, ನಾರಿ 

ನಿನ್ನಲಿ ನನಗೆ ಮನಸಾದೇ(೩) ||ಎಲ್ಲೋ ಜೋಗಪ್ಪ||


ನನ್ನಾ ತೋಳಲ್ಲಿ ನಿನ್ನ ಕಿನ್ನೋರಿ ಮಾಡಿಕೊಂಡು (೨)

ಚಂದದ ಪದವ ನುಡಿಸೇನು, ನಾರಿ 

ಚಂದದ ಪದವ ನುಡಿಸೇನು(೩) ||ಎಲ್ಲೋ ಜೋಗಪ್ಪ||