Sunday, January 23, 2022

Paravashanadenu (ಪರವಶನಾದೆನು)

Movie: paramathama (2011)
Sahitya: Jayanth Kaykini
Singer: Sonu Nigam
Song link: Click Here


Paravashanadenu, ariyuva munnave

Parichitanagali hege, pranayaku munnave

Idakinta bega innu, sigabaaraditte nenu

Innadaru koodottuko, nee nannanu

Kaleyuva munnave ||


Ninna kannigantu naanu, nirupayogi eegalu

Innu bere yenu beku, prema yogiygalu

Hoo araluva saddanu, ninna nageyalli kelaballe

Nanna ekaanthavannu,tiddhikodu neeneega nintalle

Naanene andarunu, nanaginta chooti neenu

Tutiyalliye mucchittuko, mutthondanu

Kaleyuva munnave ||


Kanasali thumba kettiruvenu, ninnanu kelade

Rekkeya neene kattiralu, ee hrudayavu haaride

Nanna kouthuka ondonde helabeku

Aalisuvaga nodu nannane saku

Sahavasa doshadinda, sari hogabahude nanu

Nanagagiye kadittuko, hataondanu

Kenakuva munnave ||


ಚಿತ್ರೆಗೀತೆ 


ಪರವಶನಾದೆನು ಅರಿಯುವ ಮುನ್ನವೇ  

ಪರಿಚಿತನಾಗಲಿ ಹೇಗೆ ಪ್ರಣಯಕು ಮುನ್ನವೇ   

ಇದಕಿಂತ ಬೇಗ ಇನ್ನು 

ಸಿಗಬಾರದಿತ್ತೆ ನೀನು 

ಇನ್ನಾದರೂ ಕೊಡಿಟ್ಟುಕೊ ನೀ ನನ್ನನೂ  

ಕಳೆಯುವ ಮುನ್ನವೇ ।।ಪ ।।


ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ 

ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲೂ  

ಹೂ .. ಅರಳುವ ಸದ್ದನೂ , ನಿನ್ನ ನಗೆಯಲಿ ಕೇಳಬಲ್ಲೆ 

ನನ್ನಾ  ಏಕಾಂತವನ್ನು, ತಿದ್ದಿಕೊಡು ನೀನೀಗ ನಿಂತಲ್ಲೆ  

ನಾನೇನೆ ಅಂದರೂನು, ನನಗಿಂತ ಚೂಟಿ ನೀನು 

ತುಟಿಯಲ್ಲಿಯೆ, ಮುಚ್ಚಿಟ್ಟುಕೊ, ಮುತ್ತೊಂದನೂ  

ಕದಿಯುವ ಮುನ್ನವೇ ।।೧।।


ಕನಸಲಿ ತುಂಬ ಕೆಟ್ಟಿರುವೆನು, ನಿನ್ನನು ಕೇಳದೆ 

ರೆಕ್ಕೆಯ ನೀನೆ  ಕಟ್ಟಿರಲು, ಈ ಹೃದಯವು ಹಾರಿದೇ  

ನನ್ನ ಕೌತುಕ, ಒಂದೊಂದೇ  ಹೇಳಬೇಕು 

ಆಲಿಸುವಾಗ ನೋಡು ನನ್ನನ್ನೆ ಸಾಕು 

ಸಹವಾಸ ದೋಷದಿಂದ, ಸರಿ ಹೋಗಬಹುದೆ ನಾನು 

ನನಗಾಗಿಯೇ ಕಾದಿಟ್ಟುಕೋ ,ಹಠವೊಂದನೂ 

ಕೆಣಕುವ ಮುನ್ನವೇ ।।೨।।




Friday, January 21, 2022

Kavite kavite (ಕವಿತೆ ಕವಿತೆ)




Movie: Gaalipata (2008)

Sahitya: Hrudayashiva

Singer: Vijay Prakash

Song link: Click Here


Kavite kavite

Neeneke padagalali

Kulite


Kavite kavite

Neeneke raagadali

Berete


Nannedeya gudalli

Kavitegala sante

O.. olave

Nee tanda haadige

Naa sote..


Kavite kavite

Neeneke padagalali

Kulite


Kavite kavite

Neeneke raagadali

Berete


Avalu baralu

Manadalli padagalade chilume

Manada kadala

Dadadato alegalalu nalume..


Hommutide

Raagadali swara meero timiru

Chimmutide

Sullaaduva kaviyada pogaru..


Avalu baralu

Manadalli padagalade chilume

Manada kadala 

Dadadato alegalalu nalume..


Mugila hegala

Meleri teluthide hrudaya

Madila huduki

Ede bagilige banto

Pranaya..


Unmada tanagi 

haadago samaya

Ekantha kallannu 

maduvudo kaviya

Mugila hegala meleri

Telutide hrudaya

Madila huduki

Ede bagilige

Banto pranaya....


ಚಿತ್ರಗೀತೆ 


ಕವಿತೆ ಕವಿತೆ

ನೀನೇಕೆ ಪದಗಳಲಿ ಕುಳಿತೆ 


ಕವಿತೆ ಕವಿತೆ

ನೀನೇಕೆ ರಾಗದಲಿ ಬೆರೆತೆ 


ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ 

ಓ  ........ ಒಲವೆ 

ನೀ ತಂದ ಹಾಡಿಗೆ ನಾ ಸೋತೆ 


ಕವಿತೆ ಕವಿತೆ

ನೀನೇಕೆ ಪದಗಳಲಿ ಕುಳಿತೆ 


ಕವಿತೆ ಕವಿತೆ

ನೀನೇಕೆ ರಾಗದಲಿ ಬೆರೆತೆ 


ಅವಳು ಬರಲು 

ಮನದಲ್ಲಿ ಪದಗಳದೇ ಚಿಲುಮೆ 

ಮನದ ಕಡಲ ದಡ ದಾಟೊ  ಅಲೆಗಳಲೂ   ನಲುಮೆ 


ಹೊಮ್ಮುತಿದೆ ರಾಗದಲಿ ಸ್ವರ ಮಿರೋ ತಿಮಿರು 

ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು 


ಅವಳು ಬರಲು 

ಮನದಲ್ಲಿ ಪದಗಳದೇ ಚಿಲುಮೆ 

ಮನದ ಕಡಲ ದಡದಾಟೊ  ಅಲೆಗಳಲೂ  ನಲುಮೆ 


ಮುಗಿಲ ಹೆಗಲ 

ಮೇಲೇರಿ ತೇಲುತಿದೆ ಹೃದಯ 

ಮಡಿಲ ಹುಡುಕಿ 

ಎದೆ ಬಾಗಿಲಿಗೆ ಬಂತೋ ಪ್ರಣಯ 


 ಉನ್ಮಾದ ತಾನಾಗಿ ಹಾಡಾಗೊ  ಸಮಯ 

ಏಕಾಂತ ಕಲ್ಲನ್ನು ಮಾಡುವುದೋ ಕವಿಯ 


ಮುಗಿಲ ಹೆಗಲ 

ಮೇಲೇರಿ ತೇಲುತಿದೆ ಹೃದಯ 

ಮಡಿಲ ಹುಡುಕಿ 

ಎದೆ ಬಾಗಿಲಿಗೆ ಬಂತೋ ಪ್ರಣಯ ... 



Wednesday, January 19, 2022

Elli Jarito Manavu (ಎಲ್ಲಿ ಜಾರಿತೋ ಮನವು )

Bhavageete

                          Sahitya: N S Laxminarayana Bhatta

                        Song link: Click Here


Elli jarito manavu

Elle mirito

Elli aleyutihudo eke

Nilladayito ||


Duradondu teeradinda

Teli parijata gandha

Dati bantu beli sala

Meeti haleya madhura nova ||


Baninalli onti tare

Sone suriva erula more

Kattalalli kulitu olage

Bikkutihalu yaro neere ||


Hinde yava janmadallo

Minda prema jalada kampu

Bandu cheeru edeya bhava

Helalare talalare ||


ಭಾವಗೀತೆ 


ಎಲ್ಲಿ ಜಾರಿತೋ ಮನವು 

ಎಲ್ಲೆ ಮೀರಿತೋ 

ಎಲ್ಲಿ ಅಲೆಯುತಿಹುದೋ ಏಕೆ 

ನಿಲ್ಲದಾಯಿತೋ .. ।।ಪ ।।


ದೂರದೊಂದು ತೀರದಿಂದ 

ತೇಲಿ ಪಾರಿಜಾತ ಗಂಧ 

ದಾಟಿ ಬಂತು ಬೇಲಿ ಸಾಲ 

ಮೀಟಿ ಹಳೆಯ ಮಧುರ ನೋವ ।।೧।।


ಬಾನಿನಲ್ಲಿ ಒಂಟಿ ತಾರೆ 

ಸೋನೆ ಸುರಿವ ಇರುಳ ಮೋರೆ 

ಕತ್ತಲಲ್ಲಿ ಕುಳಿತು ಒಳಗೆ 

ಬಿಕ್ಕುತಿಹಳು ಯಾರೋ ನೀರೆ ।।೨।।


ಹಿಂದೆ ಯಾವ ಜನ್ಮದಲ್ಲೋ 

ಮಿಂದ ಪ್ರೇಮ ಜಲದ ಕಂಪು 

ಬಂದು ಕಾಡುತಿರಲು ಎದೆಯ 

ಹೇಳಲಾರೆ ತಾಳಲಾರೆ ।।೩।।



Tuesday, January 11, 2022

Munjaneddu Kumbaranna (ಮುಂಜಾನೆದ್ದು ಕುಂಬಾರಣ್ಣ)

Janapada Geete

                                          Song link: Click Here


Munjaneddu kumbaranna

Halu banundana

Haryadi manna tulidana

Haari haryadi manna tuliyutta madyana

Naryaru hooruvantha irani ||


Hottareddu kumbaranna

Tuppa banundana

Gatteesi manna tulidana,

Gattisi manna tuliyuta madyana

Mitreru horuvantha irani ||


Akki hittu nanu takkondu tandeevni

Gindeeli tandivni tili duppa

Gindeeli tandivni tili duppa kumbaranna

Tandeedu namma irani ||


Kumbaranna na madadi

Kadagada kai ikki

Kodada myalena baredala,

Kodada myalena baredala

 kalyanada sharana basavana nilisyala ||



ಜನಪದ ಗೀತೆ 


ಮುಂಜಾನೆದ್ದು ಕುಂಬಾರಣ್ಣ 

ಹಾಲು ಬಾನುಂಡಾನ 

ಹಾರ್ಯಾಡಿ  ಮಣ್ಣಾ  ತುಳಿದಾನಾ 

ಹಾರಿ ಹಾರ್ಯಾಡಿ ಮಣ್ಣ ತುಳಿಯೂತ  ಮಾಡ್ಯಾನ 

ನಾರ್ಯರು ಹೊರುವಂಥ  ಐರಾಣಿ ।।ಪ ।।


ಹೊತ್ತಾರೆದ್ದು ಕುಂಬಾರಣ್ಣ 

ತುಪ್ಪ ಬಾನುಂಡಾನ

ಘಟ್ಟೀಸಿ  ಮಣ್ಣಾ ತುಳಿದಾನಾ 

ಘಟ್ಟಿಸಿ ಮಣ್ಣಾ ತುಳಿಯೂತ  ಮಾಡ್ಯಾನ 

ಮಿತ್ರೇರು  ಹೊರುವಂಥ  ಐರಾಣಿ ।।೧।।


ಅಕ್ಕಿ ಹಿಟ್ಟು ನಾನು ತಕ್ಕೊಂಡು  ತಂದೀವ್ನಿ 

ಗಿಂಡೀಲಿ  ತಂದೀವ್ನಿ ತಿಳಿ ದುಪ್ಪ 

ಗಿಂಡೀಲಿ ತಂದೀವ್ನಿ ತಿಳಿ ದುಪ್ಪ  ಕುಂಬಾರಣ್ಣ 

ತಂದೀಡು  ನಮ್ಮ ಐರಾಣಿ ।।೨।।


ಕುಂಬಾರಣ್ಣಾನ   ಮಡದಿ 

ಕಡಗಾದ ಕೈಯಿಕ್ಕಿ 

ಕೊಡದ ಮ್ಯಾಲೇನ ಬರೆದಾಳ 

ಕೊಡದ ಮ್ಯಾಲೇನ ಬರೆದಾಳ್ , ಕಲ್ಯಾಣದ 

ಶರಣ ಬಸವನ ನಿಲಿಸ್ಯಾಳ ।।೩।।



Sunday, January 9, 2022

Attitta Nodadiru (ಅತ್ತಿತ್ತ ನೋಡದಿರು)

 Bhavageete

Sahitya: K S Narasimhaswamy

Song link: Click Here



Attitta nodadiru, attu horaladadiru

Nidde baruvalu hoddu malagu maguvve

Jo    jo jo jo

Jo    jo jo jo


Sutti horaladadiru, matte hatta hoodadiru

Nidde baruvalu kaddu malagu maguve

Jo    jo jo jo

Jo    jo jo jo


Malagu chelvina tereye, malagu olmeya sereye

Malagu tottila siriyee devarante

Malagu muddina giniye, malagu muttina maniye

Malgu chandiranoora hoguveyante....


Taregala jaratari angi todisuvarante

Chandirana tangiyaru ninna karedu

Hoova mudisuvarante, hala kudisuvarante

Veene nudisuvarante sutta neredu....


Banna bannada kanasu karaguvudu balu bega

Hagalu baruvanu belli mugila naduve

Chinnadambariyali ninna kaluhuvaraga

Pattadaneya mele putta maguve....


      

ಭಾವಗೀತೆ 


ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು 

ನಿದ್ದೆ ಬರುವಳು ಹೊದ್ದು ಮಲಗು ಮಗುವೇ 

ಜೋ   ಜೋ ಜೋ ಜೋ 

ಜೋ   ಜೋ ಜೋ ಜೋ 


ಸುತ್ತಿ ಹೊರಳಾಡದಿರು , ಮತ್ತೆ ಹಠ ಹೂಡದಿರು 

ನಿದ್ದೆ ಬರುವಳು ಕದ್ದು ಮಲಗು ಮಗುವೆ 

ಜೋ   ಜೋ ಜೋ ಜೋ 

ಜೋ   ಜೋ ಜೋ ಜೋ 


ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ 

ಮಲಗು ತೊಟ್ಟಿಲ ಸಿರಿಯೆ , ದೇವರಂತೆ ;

ಮಲಗು ಮುದ್ದಿನ ಗಿಣಿಯೆ , ಮಲಗು ಮುತ್ತಿನ ಮಣಿಯೆ ,

ಮಲಗು ಚಂದಿರನೂರ ಹೋಗುವೆಯಂತೆ . 


ತಾರೆಗಳ ಜರತಾರಿಯಂಗಿ  ತೊಡಿಸುವರಂತೆ 

ಚಂದಿರನ ತಂಗಿಯರು ನಿನ್ನ ಕರೆದು ;

ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,

ವೀಣೆ ನುಡಿಸುವರಂತೆ ಸುತ್ತ ನೆರೆದು . 


ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ ;

ಹಗಲು ಬರುವನು ಬೆಳ್ಳಿಮುಗಿಲ ನಡುವೆ ,

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ 

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ . 

                                            









Saturday, January 8, 2022

Mayadanta Malebantnna (ಮಾಯದಂತ ಮಳೆ ಬಂತಣ್ಣಾ)

Janapada Geete
                                         Song link: Click Here


Mayadantha male bantanna, madagada kerege

Angaiyastu moodanage, bhumi tukada gaali beesi

Gudugi goodagi chelidalo, gangamma tayi ||


Eeri myagala ballalu raya

Kereya olagada bestara huduga

Odi odi suddiya kodirayyo

Na nilluvalla ||


Aaru savira oddara karesi

Mooru savira guddali tarsi

Solu solige mannanna haksayyo

Na nilluvalalla ||


Aaru savira kurigalu tarsi

Mooru savira kudugoola tarsi

Kallu kallige raitava bidisayyo

Na niluvalalla ||


Ondu bandeeli velyadadike

Ondu bandeeli chegali tamata

Moole moolegu gangamna madsayyo

Na niluvalalla ||


ಜನಪದ ಗೀತೆ 


ಮಾಯದಂಥ  ಮಳೆ ಬಂತಣ್ಣಾ  

ಮದಗಾದ ಕೆರೆಗೆ 

ಅಂಗೈಯಷ್ಟು ಮೋಡನಾಗಿ  

ಭೂಮಿ ತೂಕದ ಗಾಳಿ ಬೀಸಿ 

ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ ।।ಪ ।।


ಏರಿಮ್ಯಾಗಳ ಬಳ್ಳಾಳು ರಾಯ 

ಕೆರೆಯಾ  ಒಳಗಡ ಬೆಸ್ತರ ಹುಡುಗ 

ಓಡಿ ಓಡಿ ಸುದ್ದಿಯ ಕೊಡಿರಯ್ಯೋ  

ನಾ ನಿಲ್ಲುವಳಲ್ಲಾ  ।।೧।।


ಆರು ಸಾವಿರ ಒಡ್ಡರ ಕರೆಸಿ 

ಮೂರು ಸಾವಿರ ಗುದ್ದಲಿ ತರ್ಸಿ  

ಸೋಲು ಸೋಲಿಗೆ ಮಣ್ಣನ್ನ  ಹಾಕ್ಸಯ್ಯೋ 

ನಾ ನಿಲ್ಲುವಳಲ್ಲಾ  ।।೨।।


ಆರು ಸಾವಿರ ಕುರಿಗಳ ತರ್ಸಿ 

ಮೂರು ಸಾವಿರ ಕಾಡುಗೋಲ ತರ್ಸಿ 

ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೋ 

ನಾ ನಿಲ್ಲುವಳಲ್ಲಾ  ।।೩।।


ಒಂದು ಬಂಡೀಲಿ ವೀಳ್ಯದಡಿಕೆ 

ಒಂದು ಬಂಡೀಲಿ ಚಿಗಳಿ  ತಮಟ 

ಮೂಲೆ ಮೂಲೆಗೂ ಗಂಗಮ್ನ ಮಾಡ್ಸಯ್ಯೋ 

ನಾ ನಿಲ್ಲುವಳಲ್ಲಾ  ।।೪।।






Thursday, January 6, 2022

Nimbiya Banada (ನಿಂಬಿಯಾ ಬನಾದ)

Janapada geete

                                           Song link: Click Here


 Nimbiya banadamaygala 

Chandrama chendadida, nimbiya ||


Edoone nima dhyana elutale nima gyana

Siddara dhyana shivu gyana nimbiya

Siddara nee dhyana, shivu gyana maad shivne

Nidre gannage nima dhyana, nimbiya ||


Arele mavina beragi iruvole

Valgada saddige odagole, nimbiya

Valgada saddige vodagole sarasatiye

Nam nalige todara bidisavva, nimbiya ||


Entele mavina dantagi iruvole

Ganteya saddige odagole,nimbiya

Ganteya saddige odagole satasatiye

Nam gantala todara bidisavva, nimbiya ||


Ragi beeso kalle rajaana badigalle

Raya annayana aramane, nimbiya

Raya annayana aramane ragikalle

Ni raja beedige danidoore, nimbiya ||


Kallava matayi mellava rageeya

Jalla jallane uduravva, nimbiya

Jallane  jallane uduravva na ninage

Belladaratiya belagenu, nimbiya ||


ಜಾನಪದ ಗೀತೆ 


ನಿಂಬಿಯಾ  ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ 

ನಿಂಬಿಯ ।।ಪ।।


ಎದ್ದೋನೆ ನಿಮ ಧ್ಯಾನ  , ಏಳುತಲೇ ನಿಮ ಗ್ಯಾನ 

ಸಿದ್ದರ ಧ್ಯಾನ  ಶಿವು ಗ್ಯಾನ ನಿಂಬಿಯಾ  

ಸಿದ್ಧಾರ ನೀ  ಧ್ಯಾನ  ಶಿವು ಗ್ಯಾನ ಮಾಡ್ ಶಿವನೇ  

ನಿದ್ರೆ  ಗಣ್ಣಾಗೆ  ನಿಮ ಧ್ಯಾನ  ನಿಂಬಿಯಾ  ।।೧।।


ಆರೆಲೇ  ಮಾವಿನ ಬೇರಾಗಿ  ಇರುವೋಳೆ 

ವಾಲ್ಗದ  ಸದ್ಧಿಗೆ ಒದಗೋಳೆ ನಿಂಬಿಯ .. 

ವಾಲ್ಗದ ಸದ್ಧಿಗೆ ಒದಗೋಳೆ ಸರಸತಿಯೆ 

ನಮ್ ನಾಲಿಗೆ ತೊಡರಾ  ಬಿಡಿಸವ್ವ ನಿಂಬಿಯಾ  ।।೨।।


ಎಂಟೆಲೇ  ಮಾವಿನ ದಂಟಾಗಿ  ಇರುವೋಳೆ 

ಗಂಟೆಯ  ಸದ್ದಿಗೆ ಒದಗೋಳೆ ನಿಂಬಿಯ 

ಗಂಟೆಯ  ಸದ್ದಿಗೆ ಒದಗೋಳೆ ಸರಸತಿಯೆ 

ನಮ್ ಗಂಟಲ ತೊಡರಾ  ಬಿಡಿಸವ್ವ  ನಿಂಬಿಯಾ  ।।೩।।


ರಾಗಿ ಬೀಸೋ ಕಲ್ಲೆ ರಾಜಾನ ಬಡಿಗಲ್ಲೆ 

ರಾಯ ಅಣ್ಣಯ್ಯನ ಅರಮನೆ ನಿಂಬಿಯಾ 

ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೆ 

ನೀ ರಾಜಬೀದಿಗೆ ದನಿದೋರೆ  ನಿಂಬಿಯಾ  ।।೪।।


ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗೀಯ 

ಜಲ್ಲಾ  ಜಲ್ಲಾನೆ  ಉದುರವ್ವ ನಿಂಬಿಯಾ  

ಜಲ್ಲಾನೆ ಜಲ್ಲಾನೆ  ಉದುರವ್ವ ನಾ ನಿನಗೆ 

ಬೆಲ್ಲದಾರತಿಯ ಬೆಳಗೇನು ನಿಂಬಿಯಾ  ।।೫।।