Saturday, July 30, 2022

Karnataka Bari Nadalla (ಕರ್ನಾಟಕ ಬರಿ ನಾಡಲ್ಲ )


Nadageete

Sahitya: B R Lakshmana Rao

Song link:  Click Here



Karnataka bari nadalla

Namma samskrutiya dhatu

Kannada kevala nudiyalla

Namm antarangada mathu


Kangolisuva bari giriyalla

Sahyadriya salu

Hommide salahuva ammanede

Udalemage halu


Bari nere nugguva neeralla

Krishne kaveri tunge

Dhamani dhamaniyali hariva chetana

Kanna belaku namage  ||karnataka||


Pampa kumaravyasarendare

Alla kavigalu matra

Indu kannada kavya malege

Avare antasutra


Shilpa kaleya ba re baleyalla

Halebeedu beluru

Namma berannu torutide

Alli namma talemaru ||karnataka||


ನಾಡಗೀತೆ 


ಕರ್ನಾಟಕ ಬರಿ ನಾಡಲ್ಲ 

ನಮ್ಮ ಸಂಸ್ಕೃತಿಯ ಧಾತು 

ಕನ್ನಡ ಕೇವಲ ನುಡಿಯಲ್ಲ 

ನಮ್ಮಂತರಂಗದ  ಮಾತು 


ಕಂಗೊಳಿಸುವ ಬರಿ ಗಿರಿಯಲ್ಲ 

ಸಹ್ಯಾದ್ರಿಯ ಸಾಲು 

ಹೊಮ್ಮಿದೆ ಸಲಹುವ ಅಮ್ಮನೆದೆ 

ಉಡಲೆಮಗೆ ಹಾಲು 


ಬರಿ ನೆರೆ ನುಗ್ಗುವ ನೀರಲ್ಲ 

ಕೃಷ್ಣೆ ಕಾವೇರಿ ತುಂಗೆ 

ಧಮನಿ ಧಮನಿಯಲಿ ಹರಿವ ಚೇತನ 

ಕಣ್ಣ ಬೆಳಕು ನಮಗೆ  ।।ಕರ್ನಾಟಕ ।।


ಪಂಪ ಕುಮಾರವ್ಯಾಸರೆಂದರೆ 

ಅಲ್ಲ ಕವಿಗಳು ಮಾತ್ರ 

ಇಂದೂ ಕನ್ನಡ ಕಾವ್ಯಮಾಲೆಗೆ 

ಅವರೇ ಅಂತಃಸೂತ್ರ 


ಶಿಲ್ಪಕಲೆಯ ಬರೆ ಬಲೆಯಲ್ಲ 

ಹಳೆಬೀಡು ಬೇಲೂರು 

ನಮ್ಮ ಬೇರನ್ನು ತೋರುತ್ತಿದೆ 

ಅಲಿ ನಮ್ಮ ತಲೆಮಾರು  ।।ಕರ್ನಾಟಕ ।।






No comments:

Post a Comment