Thursday, July 21, 2022

Balegara Chennayya (ಬಳೆಗಾರ ಚೆನ್ನಯ್ಯ )

 

Bhavageete

Sahitya: K S Narasimhaswamy

Song link: Click Here



Balegara chennayya bagilige bandihenu

Olage baralappaneye doreye?

Navilura maneyinda nudiyonda tandihenu-

Baleya todisuvudilla nimage.


Mudida malligeyaralu badilla, rayare

Tourinali tayi naguthiharu

Kudida niralugilla, koragadiri, rayare

Ammanige baleya todisidaru


Andu mangalavara navilura keriyali

Olagada saddu tumbittu

Baleya todisidarandu ammanige tourinali

Angalada tumba janavittu  ||balegara|


Sirigouriyante bandaru tayi hasemanege

Seraginali kanniranorasi

Sukhadolage nimma nenedaru tayi gunavante

Deepadali biduganna nilisi


Bekada hannihudu, hoovihudu tourinali

Hosa seere, ratnadhabharana

Tayi koraguvaralli neevilladurinali

Nimagilla ondu hani karuna. ||balegara||


Dinavada basuri ussendu nittusireledu

Kudiyabaradu nanna doreye

Hindabaradu dundu malligeya dandeyanu

Onagabaradu odala chilume


Mulisu mavana mele, magaleena madidalu?

Nimagetaki kallumanasu?

Hogi banniri omme; kai mugidu beduvenu

Ammanige nimmade kanasu


ಭಾವಗೀತೆ 


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು 

ಒಳಗೆ ಬರಲಪ್ಪಣೆಯೆ ದೊರೆಯೇ ?

ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು 

ಬಳೆಯ ತೊಡಿಸುವುದಿಲ್ಲ ನಿಮಗೆ . 


ಮುಡಿದ ಮಲ್ಲಿಗೆಯರಳು ಬಾಡಿಲ್ಲ , ರಾಯರೇ 

ತೌರಿನಲಿ ತಾಯಿ ನಗುತಿಹರು,

ಕುಡಿದ ನೀರಲುಗಿಲ್ಲ, ಕೊರಗದಿರಿ , ರಾಯರೇ 

ಅಮ್ಮನಿಗೆ ಬಳೆಯ  ತೊಡಿಸಿದರು 


ಅಂದು ಮಂಗಳವಾರ ನವಿಲೂರ ಕೇರಿಯಲಿ 

ಓಲಗದ ಸದ್ದು ತುಂಬಿತ್ತು ;

ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ 

ಅಂಗಳದ ತುಂಬ ಜನವಿತ್ತು . ।।ಬಳೆಗಾರ ।।


ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ 

ಸೆರಗಿನಲಿ ಕಣ್ಣೀರನೊರೆಸಿ ;

ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ 

ದೀಪದಲಿ ಬಿಡುಗಣ್ಣ ನಿಲಿಸಿ  


ಬೇಕಾದ ಹಣ್ಣಿಹುದು ,ಹೂವಿಹುದು  ತೌರಿನಲಿ 

ಹೊಸ ಸೀರೆ ,ರತ್ನದಾಭರಣ ;

ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ 

ನಿಮಗಿಲ್ಲ ಒಂದು ಹನಿ ಕರುಣ . ।।ಬಳೆಗಾರ ।।


ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು 

ಕುದಿಯಬಾರದು ನನ್ನ ದೊರೆಯೇ ;

ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು 

ಒಣಗಬಾರದು ಒಡಲ ಚಿಲುಮೆ 


ಮುಳಿಸು ಮಾವನ ಮೇಲೆ ; ಮಗಳೇನ ಮಾಡಿದಳು ?

ನಿಮಗೇತಕೀ ಕಲ್ಲುಮನಸು ?

ಹೋಗಿ ಬನ್ನಿರಿ ಒಮ್ಮೆ ; ಕೈ ಮುಗಿದು ಬೇಡುವೆನು 

ಅಮ್ಮನಿಗೆ ನಿಮ್ಮದೇ ಕನಸು . 



No comments:

Post a Comment