Bhavageete
Sahitya: H S Shivaprakash
Song link: Click Here
Sudu bayala gali nanu
Suliye parimalave neenu
Koragi marugutaliruva
Taruku birukina nelake
Suriye maleyagi neenu
Yaru nettaru illi
Mullu lohada balli
Berugalu baralu baralu
Doora gaganada nadu
Khali neeliya jadu
Tore karmugila kurulu ||sudubayala||
Saku yatane chinte
Lokagalu nannante
Dekutive ninna kadege
Kareye jeevada govu
Mereye gokulavannu
Beku nandana ilege ||sudubayala||
ಭಾವಗೀತೆ
ಸುಡು ಬಯಲ ಗಾಳಿ ನಾನು
ಸುಳಿಯೇ ಪರಿಮಳವೇ ನೀನು
ಕೊರಗಿ ಮರುಗುತಲಿರಿರುವ
ತರುಕು ಬಿರುಕಿನ ನೆಲಕೆ
ಸುರಿಯೆ ಮಳೆಯಾಗಿ ನೀನು
ಯಾರು ನೆಟ್ಟರು ಇಲ್ಲಿ
ಮುಳ್ಳು ಲೋಹದ ಬಳ್ಳಿ
ಬೇರುಗಳು ಬರಲು ಬರಲು
ದೂರ ಗಗನದ ನಾಡು
ಖಾಲಿ ನೀಲಿಯ ಜಾಡು
ತೋರೆ ಕಾರ್ಮುಗಿಲ ಕುರುಳು ।।ಸುಡುಬಯಲ ।।
ಸಾಕು ಯಾತನೆ ಚಿಂತೆ
ಲೋಕಗಳು ನನ್ನಂತೆ
ದೇಕುತಿವೆ ನಿನ್ನ ಕಡೆಗೆ
ಕರೆಯೆ ಜೀವದ ಗೋವು
ಮೇರೆಯೇ ಗೋಕುಲವನ್ನು
ಬೇಕು ನಂದನ ಇಳೆಗೆ ।।ಸುಡುಬಯಲ ।।

No comments:
Post a Comment