Padya
sahitya: H Dundiraj
Ee nela ee jala ee kadu
Geejaga kattida ee gudu
Irali irali hege
Prakruti kotta koduge
Julu julu hariva holege
Koleya bereso khalare
Ba ge ba ge hogeyanu uguli
Malinagolisadiri gali
Saku innu saku
Ee tappa tiddabeku ||
Maragala kadidu kadidu
Ellede bhana bhana bisilu
Chilipili uliva hakki
Alutide bikki bikki
Saku innu saku
Hasiragabeku baduku ||
Rakshisabeku bidade
Namma nela jalagala navu
Nalina peeligegagi
Ulisiri nadina cheluvu
Sirinada cheluvu
Ee karunada cheluvu ||
ಪದ್ಯ
ಈ ನೆಲ ಈ ಜಲ ಈ ಕಾಡು
ಗೀಜಗ ಕಟ್ಟಿದ ಈ ಗೂಡು
ಇರಲಿ ಇರಲಿ ಹೀಗೆ
ಪ್ರಕೃತಿ ಕೊಟ್ಟ ಕೊಡುಗೆ
ಜುಳು ಜುಳು ಹರಿವ ಹೊಳೆಗೆ
ಕೊಳೆಯ ಬೇರೆಸೊ ಖಳರೇ
ಬಗೆಬಗೆ ಹೊಗೆಯನು ಉಗುಳಿ
ಮಲಿನಗೊಳಿಸದಿರಿ ಗಾಳಿ
ಸಾಕು ಇನ್ನು ಸಾಕು
ಈ ತಪ್ಪ ತಿದ್ದಬೇಕು ।।
ಮರಗಳ ಕಡಿದು ಕಡಿದು
ಎಲ್ಲೆಡೆ ಭಣ ಭಣ ಬಿಸಿಲು
ಚಿಲಿಪಿಲಿ ಉಲಿವ ಹಕ್ಕಿ
ಅಳುತಿದೆ ಬಿಕ್ಕಿ ಬಿಕ್ಕಿ
ಸಾಕು ಇನ್ನು ಸಾಕು
ಹಸಿರಾಗಬೇಕು ಬದುಕು ।।
ರಕ್ಷಿಸಬೇಕು ಬಿಡದೇ
ನಮ್ಮ ನೆಲ ಜಲಗಳ ನಾವು
ನಾಳಿನ ಪೀಳಿಗೆಗಾಗಿ
ಉಳಿಸಿರಿ ನಾಡಿನ ಚೆಲುವು
ಸಿರಿನಡ ಚೆಲುವು
ಈ ಕರುನಾಡ ಚೆಲುವು ।।
No comments:
Post a Comment