Friday, November 21, 2025

Vivaaha Bhojanavidu (ವಿವಾಹ ಭೋಜನವಿದು)

Movie: Maya Bazar (1958)

Singer: M Satya

Spng link: Click Here


Hah hah.., vivaaha bhojanavidu...hah hah,

Vivaaha bhojanavidu, vichitra bhakshyagalivu,

Beegarige otanavidu, dorakonditenage bandu,

Hah,,hah, ohore gaarigegale, haahaare mandigegale,

Gulurige chiroti, hah hah ee ella nanage saati !


Bhaleere laadu saalu, vaha peni holigegalu,

Bhale jilebi modalu, hah hah..,

 Ivella nanna paalu ..!


Bhajaare happalagalu, puliyogare uppittugalu,

Vahvaare paayasagalu, hah hah...,

Ee ella nanage saaku,

Hah hah hah hah.........!


ಚಿತ್ರಗೀತೆ 


ಹ್ಹ ಹ್ಹ.., ವಿವಾಹ ಭೋಜನವಿದು .... ಹ್ಹ ಹ್ಹ,

ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು,

ಬೀಗರಿಗೆ ಔತಣವಿದು, ದೊರಕೊಂಡಿತೆನಗೆ ಬಂದು,

ಹ್ಹ ಹ್ಹ.... , ಓಹೋರೆ ಗಾರಿಗೆಗಳೆ, ಹಾಹಾರೆ ಮಂಡಿಗೆಗಳೆ,

ಗೂಳೂರಿಗೆ ಚಿರೋಟಿ, ಹ್ಹ ಹ್ಹ.. ಈ ಎಲ್ಲಾ ನನಗೆ ಸಾಟಿ !


ಭಳಿರೇ ಲಾಡು ಸಾಲು, ವಹ ಪೇಣಿ ಹೋಳಿಗೆಗಳು,

ಭಲೇ ಜಿಲೇಬಿ ಮೊದಲು, ಹ್ಹ ಹ್ಹ .. 

ಇವೆಲ್ಲ ನನ್ನ ಪಾಲು !


ಭಜಾರೆ ಹಪ್ಪಳಗಳು, ಪುಳಿಯೋಗರೆ ಉಪ್ಪಿಟ್ಟುಗಳು,

ವ್ಹಾವಾರೆ ಪಾಯಸಗಳು, ಹ್ಹ ಹ್ಹ.... ,

ಈ ಎಲ್ಲಾ ನನಗೆ ಸಾಕು,

ಹ್ಹ ಹ್ಹ ಹ್ಹ ಹ್ಹ ಹ್ಹ ..... !

            


Yaarige Yaaruntu (ಯಾರಿಗೆ ಯಾರುಂಟು)

Movie: Gaali Gopura (1962)

Singer: Ghantasala

Song link: Click Here


Yaarige yaaruntu eravina samsara,

Neera melana gulle nijavalla hariye,

Yaarige yaaro..||


Bayaaritu endu, baavi neerige pode,

Baavi jala batti baridaito hariye,

Bisila taalade, marada neralige pode,

Mara baggi, sirada mele, oragito hariye ||


Adavili mane maadi, gidake totilla katte,

Tottilina shishuve maayavayito hariye,

Tande sripurandara, vittala narayana,

Mareyade ennanu neene salaho hariye ||


ಚಿತ್ರಗೀತೆ 


ಯಾರಿಗೆ ಯಾರುಂಟು ಎರವಿನ ಸಂಸಾರ,

ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ,

ಯಾರಿಗೆ ಯಾರೋ .. ।।ಪ।।


ಬಾಯಾರಿತು ಎಂದು, ಬಾವಿ ನೀರಿಗೆ ಪೋದೆ,

ಬಾವಿ ಜಲ ಬತ್ತಿ ಬರಿದಾಯ್ತೋ ಹರಿಯೇ,

ಬಿಸಿಲಾ ತಾಳದೆ, ಮರದ ನೆರಳಿಗೆ ಪೋದೆ,

ಮರ ಬಗ್ಗಿ, ಶಿರದ ಮೇಲೆ, ಒರಗಿತೊ ಹರಿಯೇ ।।೧।।


ಅಡವಿಲಿ ಮನೆ ಮಾಡಿ, ಗಿಡಕೆ ತೊಟ್ಟಿಲ ಕಟ್ಟೆ,

ತೊಟ್ಟಿಲಿನ ಶಿಶುವೆ ಮಾಯವಾಯಿತೊ ಹರಿಯೇ,

ತಂದೆ ಶ್ರೀಪುರಂದರ, ವಿಠಲಾ ನಾರಾಯಣ,

ಮರೆಯದೆ ಎನ್ನನು ನೀನೇ ಸಲಹೋ ಹರಿಯೇ ।।೨।।

                                  

Viraha Nuru Nuru Taraha (ವಿರಹಾ ನೂರು ನೂರು ತರಹ)

Movie: Edakallu Guddada Mele (1973)

Singer: P Susheela

Song link: Click Here


Virahaa...! virahaa nuru nuru taraha,

Virahaa, prema kavyada, kahi baraha,

Hareya ukki, kareva hakki, 

Viraha, sahise, sahise taanendide.. ha ha !


Bhavantarangadalli allola kallola,

Premantarangadalli, eneno kolahala,

Bhrunga sanga, bayasi hoovu,

Manadi baadi baadi taanondide, ha ha !


Gandharva lokadalli.. aa....,

PaNiSaNi DaPaMaPa, GaMaPaGaGaRiSa, NiGaMaGaGa,

GaMaNiPaPa, PaNiSaGaRiSaNiSa, aa..aa..,

Gandharva lokadalli, romancha ratri,

Madhuchandra manchadalli, rasaheen ratri,

Madhura manada, aase chigura,

Chivuti chivuti, jeeva novaagide, aa aa,,!


ಚಿತ್ರಗೀತೆ 


ವಿರಹಾ ...! ನೂರು ನೂರು ತರಹ,

ವಿರಹಾ, ಪ್ರೇಮ ಕಾವ್ಯದ, ಕಹಿ ಬರಹ,

ಹರೆಯ ಉಕ್ಕಿ, ಕರೆವ ಹಕ್ಕಿ, 

ವಿರಹ, ಸಹಿಸೆ ಸಹಿಸೆ, ತಾನೆಂದಿದೆ, ಹಾ ಹಾ !


ಭಾವಂತರಂಗದಲ್ಲಿ ಅಲ್ಲೋಲ ಕಲ್ಲೋಲ,

ಪ್ರೇಮಾಂತರಂಗದಲ್ಲಿ, ಏನೇನೋ ಕೋಲಾಹಲ,

ಭೃಂಗ ಸಂಗ, ಬಯಸಿ ಹೂವು,

ಮನದಿ ಬಾಡಿ ಬಾಡಿ, ತಾನೊಂದಿದೆ, ಹಾ ಹಾ !


ಗಂಧರ್ವ ಲೋಕದಲ್ಲಿ .. ಆ ... !

ಪನಿಸನಿ ದಪಮಪ ಗಮಪಗಗರಿಸ ನಿಗಮಗಾಗ 

ಗಮನಿಪಾಪ ಪನಿಸಗರಿಸನಿಸ, ಆ ಆ,

ಗಂಧರ್ವ ಲೋಕದಲ್ಲಿ, ರೋಮಾಂಚ ರಾತ್ರಿ,

ಮಧುಚಂದ್ರ ಮಂಚದಲ್ಲಿ, ರಸಹೀನ ರಾತ್ರಿ,

ಮಧುರ ಮನದ, ಆಸೆ ಚಿಗುರ,

ಚಿವುಟಿ ಚಿವುಟಿ, ಜೀವ ನೋವಾಗಿದೆ, ಆ ಆ ..!

                          

Friday, November 14, 2025

Paadava Nambidenu (ಪಾದವ ನಂಬಿದೆನು)

Bhaktigeete

Singer: K J Yesudas

Song link: Click Here


Paadava nambidenu, prabhu paadava nambidenu,

Nishteya kandalli, kashtava neeguva, paadava nambidenu,

Swami paadava nambidenu ||

Swamiye ayyapa .... sharanu sharanu ayyappa..!


Jaati bheda nammallilla.., uccha neecha ulide illa,

Maaleyali maanavaru ninnavarella,

Ninna, naama smaraneyali, namma jeevanavella ||


Petadinda haadikondu, kaadu medu suttikondu,

Ottagi hadinentu mettaleri, 

Swami, ninnanu kandu, naavu mukti kori,

Paapa, nashavanu maadendu, sannidhi seri ||


ಭಕ್ತಿಗೀತೆ 


ಪಾದವ ನಂಬಿದೆನು, ಪ್ರಭು ಪಾದವ ನಂಬಿದೆನು,

ನಿಷ್ಠೆಯ ಕಂಡಲ್ಲಿ, ಕಷ್ಟವ ನೀಗುವ, ಪಾದವ ನಂಬಿದೆನು,

ಸ್ವಾಮಿ ಪಾದವ ನಂಬಿದೆನು,

ಸ್ವಾಮಿಯೇ ಅಯ್ಯಪ್ಪ .... ಶರಣು ಶರಣು ಅಯ್ಯಪ್ಪ ।।ಪ।।


ಜಾತಿ ಭೇದ ನಮ್ಮಲ್ಲಿಲ್ಲ ..,ಉಚ್ಛ ನೀಚ ಉಳಿದೇ ಇಲ್ಲ,

ಮಾಲೆಯಲಿ ಮಾನವರು ನಿನ್ನವರೆಲ್ಲ,

ನಿನ್ನ, ನಾಮ ಸ್ಮರಣೆಯಲೆ, ನಮ್ಮ ಜೀವನವೆಲ್ಲ ।।೧।।


ಪೇಟದಿಂದ ಹಾಡಿಕೊಂಡು, ಕಾಡು ಮೇಡು ಸುತ್ತಿಕೊಂಡು,

ಒಟ್ಟಾಗಿ ಹದಿನೆಂಟು ಮೆಟ್ಟಲೇರಿ,

ಸ್ವಾಮಿ, ನಿನ್ನನು ಕಂಡು, ನಾವು ಮುಕ್ತಿ ಕೋರಿ,

ಪಾಪ, ನಾಶವನು ಮಾಡೆಂದು, ಸನ್ನಿಧಿ ಸೇರಿ ।।೨।।

                              

Hariyu Haranu Seri (ಹರಿಯು ಹರನು ಸೇರಿ)

Bhaktigeete

Singer: Dr. Rajkumar

Song link: Click Here


Hariyu haranu seri dharege tanda muddu kandane,

Smarane matradinda varava koduva deva devane ||


Beesuva tangaaliyella, ninna ullasake,

Kaananada sobagella, ninna santoshake,

Giriyo gaviyo, kaado naado, ninna sancharake,

Shabarimaleya yatre matra, nanna manada shuddige ||


Hagalu irulu, minchu gudugu, ella ninna aatake,

Suriva maleya hanigalella, deva ninna snanake,

Hariva nadiya neerella, ninna paada teerthake,

Ninna smarane ondu matra, nanna aanandake ||


Kareyuva haalella, endu ninna abhishekake,

Araluva sumarashiyella, ninna paada poojege,

Aaduva savimaatella, ninage koduva kaanike,

Ninna seve ondu matra, nanna uddarake ||


ಭಕ್ತಿಗೀತೆ 


ಹರಿಯು ಹರನು ಸೇರಿ ಧರೆಗೆ ತಂದ ಮುದ್ದು ಕಂದನೆ,

ಸ್ಮರಣೆ ಮಾತ್ರದಿಂದ ವರವ ಕೊಡುವ ದೇವ ದೇವನೆ ।।ಪ।।


ಬೀಸುವ ತಂಗಾಳಿಯೆಲ್ಲ, ನಿನ್ನಾ ಉಲ್ಲಾಸಕೆ,

ಕಾನನದ ಸೊಬಗೆಲ್ಲ, ನಿನ್ನಾ ಸಂತೋಷಕೆ,

ಗಿರಿಯೋ, ಗವಿಯೋ, ಕಾಡೋ, ನಾಡೋ, ನಿನ್ನಾ ಸಂಚಾರಕೆ,

ಶಬರಿಮಲೆಯ ಯಾತ್ರೆ ಮಾತ್ರ, ನನ್ನ ಮನದ ಶುದ್ದಿಗೆ ।।೧।।


ಹಗಲು ಇರುಳು, ಮಿಂಚು ಗುಡುಗು, ಎಲ್ಲಾ ನಿನ್ನ ಆಟಕೆ,

ಸುರಿವ ಮಳೆಯ ಹನಿಗಳೆಲ್ಲ, ದೇವ ನಿನ್ನ ಸ್ನಾನಕೆ,

ಹರಿವ ನದಿಯ ನೀರೆಲ್ಲ, ನಿನ್ನ ಪಾದ ತೀರ್ಥಕೆ,

ನಿನ್ನ ಸ್ಮರಣೆ ಒಂದು ಮಾತ್ರ, ನನ್ನ ಆನಂದಕೆ ।।೨।।


ಕರೆಯುವ ಹಾಲೆಲ್ಲ, ಎಂದೂ ನಿನ್ನ ಅಭಿಷೇಕಕೆ,

ಅರಳುವ ಸುಮರಾಶಿಯೆಲ್ಲಾ, ನಿನ್ನ ಪಾದ ಪೂಜೆಗೆ,

ಆಡುವ ಸವಿಮಾತೆಲ್ಲಾ, ನಿನಗೆ ಕೊಡುವ ಕಾಣಿಕೆ,

ನಿನ್ನ ಸೇವೆ ಒಂದು ಮಾತ್ರ, ನನ್ನ ಉದ್ಧಾರಕೆ ।।೩।।

                                 

Navile Navile Hennavile (ನವಿಲೆ ನವಿಲೆ ಹೆಣ್ಣವಿಲೆ)

Movie: Bhale Jodi (1970)

Singer: L R Eshwari

Song link: Click Here


Navile navile hennavile, siri navile, nannaleno nooru bhava,

Eko kaane, hele jaane, kaaranavaa,

O..eko kaane hele jaane kaaranavaa ||


Doorada marade bellane hakki, tuvvi tuvvi ennutide,

Ennede hakki marudani needi, haadutide,

O.. ennede hakki marudani needi, haadutide,

Hoovarali nalidaadutide, nannante neenennutide ||


Ondede manavu avananu kandu, sedu sedu ennutide,

Matte eko kangalu avanane, nodu nodu ennutide,

Tangaali bisi enisutide, minchenito sulidaadutide ||


ಚಿತ್ರಗೀತೆ 


ನವಿಲೆ ನವಿಲೆ ಹೆಣ್ಣವಿಲೆ, ಸಿರಿ ನವಿಲೆ, ನನ್ನಲೇನೂ ನೂರು ಭಾವ,

ಏಕೋ ಕಾಣೆ, ಹೇಳೇ ಜಾಣೆ, ಕಾರಣವಾ,

ಓ.. ಏಕೋ ಕಾಣೆ ಹೇಳೇ ಜಾಣೆ ಕಾರಣವಾ ।।ಪ।।


ದೂರದ ಮರದೆ ಬೆಳ್ಳನೆ ಹಕ್ಕಿ, ಟುವ್ವಿ ಟುವ್ವಿ ಎನ್ನುತಿದೆ,

ಎನ್ನೆದೆ ಹಕ್ಕಿ ಮರುದನಿ ನೀಡಿ, ಹಾಡುತಿದೆ,

ಓ .. ಓ ಎನ್ನೆದೆ ಹಕ್ಕಿ ಮರುದನಿ ನೀಡಿ, ಹಾಡುತಿದೆ,

ಹೂವರಳಿ ನಲಿದಾಡುತಿದೆ, ನನ್ನಂತೆ ನೀನೆನ್ನುತಿದೆ .. ।।೧।।


ಒಂದೆಡೆ ಮನವು ಅವನನು ಕಂಡು, ಸೇಡು ಸೇಡು ಎನ್ನುತಿದೆ,

ಮತ್ತೆ ಏಕೋ ಕಂಗಳು ಅವನನೆ, ನೋಡು ನೋಡು ಎನ್ನುತಿದೆ,

ತಂಗಾಳಿ ಬಿಸಿ ಎನಿಸುತಿದೆ, ಮಿಂಚೆನಿತೋ ಸುಳಿದಾಡುತಿದೆ 

।।೨।।

                          

Tuesday, November 11, 2025

Hanuma Ballanu Rama Naamada (ಹನುಮ ಬಲ್ಲನು ರಾಮ ನಾಮದ)

Bhaktigeete

Singer: Dr. Rajkumar

Song link: Click Here


Hanuma ballanu, rama naamada, divya mahimeyannu,

Bheema ballanu, krishna naamada, divya shaktiyannu,

Naanu balle, gururaaya nendare, padeve sakalavannu ||


Daasaralliye hanumananthaha, daasarellu illa,

Bhaktaralliye bheemananthaha, bhaktarellu illa,

Deenaralliye, nanna holuva, deenarellu illa ||


Pranadevara, pranavendare, ramachandra taane,

Krishna nudidudu, tanna pranavendu, pandavaranu taane,

Nanna maana dhana, pranavellavu, raghavendra neene ||


Anjaneyana haage, dutana, karya maadalaare,

Bheemasenana, veera bhaktiya, naanu toralaare,

Raghavendrana, kanasalladaru, maretu baalalaare ||


Rama krishnaru, bere alla, aa hariya roopa taane,

Hanuma bheemaru, bere alla, aa vaayu putrarene,

Raghavendranu bere alla, aa devarmsha taane ||


Raghavendrana, pooje maado, hoovella harige seri,

Raghavendrana, smarane maaduva, manavu hariya seri,

Raghavendranu, ninage toruva, mukti padeva daari ||


ಭಕ್ತಿಗೀತೆ 


ಹನುಮ ಬಲ್ಲನು, ರಾಮ ನಾಮದ, ದಿವ್ಯ ಮಹಿಮೆಯನ್ನು,

ಭೀಮ ಬಲ್ಲನು, ಕೃಷ್ಣ ನಾಮದ, ದಿವ್ಯ ಶಕ್ತಿಯನ್ನು,

ನಾನು ಬಲ್ಲೆ, ಗುರುರಾಯನೆಂದರೆ, ಪಡೆವೆ ಸಕಲವನ್ನು ।।ಪ।।


ದಾಸರಲ್ಲಿಯೇ ಹನುಮನಂಥಹ, ದಸರೆಲ್ಲೂ ಇಲ್ಲ,

ಭಕ್ತರಲ್ಲಿಯೇ ಭೀಮನಂಥಹ,  ಭಕ್ತರೆಲ್ಲೂ ಇಲ್ಲ,

ದೀನರಲ್ಲಿಯೇ, ನನ್ನ ಹೋಲುವ, ದೀನರೆಲ್ಲೂ ಇಲ್ಲ ।।೧।।


ಪ್ರಾಣದೇವರ, ಪ್ರಾಣವೆಂದರೆ, ರಾಮಚಂದ್ರ ತಾನೇ,

ಕೃಷ್ಣ ನುಡಿದುದು, ತನ್ನ ಪ್ರಾಣವೆಂದು, ಪಾಂಡವರನು ತಾನೇ,

ನನ್ನ ಮಾನ ಧನ, ಪ್ರಾಣವೆಲ್ಲವು, ರಾಘವೇಂದ್ರ ನೀನೇ ।।೨।।


ಆಂಜನೇಯನ ಹಾಗೆ, ದೂತನ,  ಕಾರ್ಯ ಮಾಡಲಾರೆ,

ಭೀಮಸೇನನ, ವೀರ ಭಕ್ತಿಯ, ನಾನು ತೋರಲಾರೆ,

ರಾಘವೇಂದ್ರನ, ಕನಸಲ್ಲಾದರು, ಮರೆತು ಬಾಳಲಾರೆ ।।೩।।


ರಾಮ - ಕೃಷ್ಣರು ಬೇರೆ  ಅಲ್ಲ, ಆ ಹರಿಯ ರೂಪ ತಾನೇ,

ಹನುಮ - ಭೀಮರು ಬೇರೆ ಅಲ್ಲ, ಆ ವಾಯು ಪುತ್ರರೇನೆ,

ರಾಘವೆಂದ್ರನು ಬೇರೆ ಅಲ್ಲ, ಆ ದೇವರಂಶ ತಾನೇ ।।೪।।


ರಾಘವೆಂದ್ರನ, ಪೂಜೆ ಮಾಡೋ, ಹೂವೆಲ್ಲ ಹರಿಗೆ ಸೇರಿ,

ರಾಘವೆಂದ್ರನ, ಸ್ಮರಣೆ ಮಾಡುವ, ಮನವು ಹರಿಯ ಸೇರಿ,

ರಾಘವೆಂದ್ರನು, ನಿನಗೆ ತೋರುವ, ಮುಕ್ತಿ ಪಡೆವ ದಾರಿ ।।೫।।