Bhaktigeete
Singer: Dr. Rajkumar
Song link: Click Here
Hariyu haranu seri dharege tanda muddu kandane,
Smarane matradinda varava koduva deva devane ||
Beesuva tangaaliyella, ninna ullasake,
Kaananada sobagella, ninna santoshake,
Giriyo gaviyo, kaado naado, ninna sancharake,
Shabarimaleya yatre matra, nanna manada shuddige ||
Hagalu irulu, minchu gudugu, ella ninna aatake,
Suriva maleya hanigalella, deva ninna snanake,
Hariva nadiya neerella, ninna paada teerthake,
Ninna smarane ondu matra, nanna aanandake ||
Kareyuva haalella, endu ninna abhishekake,
Araluva sumarashiyella, ninna paada poojege,
Aaduva savimaatella, ninage koduva kaanike,
Ninna seve ondu matra, nanna uddarake ||
ಭಕ್ತಿಗೀತೆ
ಹರಿಯು ಹರನು ಸೇರಿ ಧರೆಗೆ ತಂದ ಮುದ್ದು ಕಂದನೆ,
ಸ್ಮರಣೆ ಮಾತ್ರದಿಂದ ವರವ ಕೊಡುವ ದೇವ ದೇವನೆ ।।ಪ।।
ಬೀಸುವ ತಂಗಾಳಿಯೆಲ್ಲ, ನಿನ್ನಾ ಉಲ್ಲಾಸಕೆ,
ಕಾನನದ ಸೊಬಗೆಲ್ಲ, ನಿನ್ನಾ ಸಂತೋಷಕೆ,
ಗಿರಿಯೋ, ಗವಿಯೋ, ಕಾಡೋ, ನಾಡೋ, ನಿನ್ನಾ ಸಂಚಾರಕೆ,
ಶಬರಿಮಲೆಯ ಯಾತ್ರೆ ಮಾತ್ರ, ನನ್ನ ಮನದ ಶುದ್ದಿಗೆ ।।೧।।
ಹಗಲು ಇರುಳು, ಮಿಂಚು ಗುಡುಗು, ಎಲ್ಲಾ ನಿನ್ನ ಆಟಕೆ,
ಸುರಿವ ಮಳೆಯ ಹನಿಗಳೆಲ್ಲ, ದೇವ ನಿನ್ನ ಸ್ನಾನಕೆ,
ಹರಿವ ನದಿಯ ನೀರೆಲ್ಲ, ನಿನ್ನ ಪಾದ ತೀರ್ಥಕೆ,
ನಿನ್ನ ಸ್ಮರಣೆ ಒಂದು ಮಾತ್ರ, ನನ್ನ ಆನಂದಕೆ ।।೨।।
ಕರೆಯುವ ಹಾಲೆಲ್ಲ, ಎಂದೂ ನಿನ್ನ ಅಭಿಷೇಕಕೆ,
ಅರಳುವ ಸುಮರಾಶಿಯೆಲ್ಲಾ, ನಿನ್ನ ಪಾದ ಪೂಜೆಗೆ,
ಆಡುವ ಸವಿಮಾತೆಲ್ಲಾ, ನಿನಗೆ ಕೊಡುವ ಕಾಣಿಕೆ,
ನಿನ್ನ ಸೇವೆ ಒಂದು ಮಾತ್ರ, ನನ್ನ ಉದ್ಧಾರಕೆ ।।೩।।
No comments:
Post a Comment