Movie: Premaanubandha (1981)
Singer: SPB
Song link: Click Here
Beladingalondu hennagi bandante kande (2)
Kandu ninte, nintu sothe, sothu kaviyagi kavite haadide
Beladingalondu hennagi bandante kande ||
Hosadagi moggondu hoovagi, aa hoove ee henna mogavaagi
Sulidaado minchinda kannagi, Gili maatu avalaado maatagi
Tangaalige oladuva (2) lateyondu naduvayiteno
Navilondu kunidante, nadevaaga santoshagonde ||
Hagalalli kann munde neeneruve, irulalli kanasalli nee baruve
Jotheyaagi iruvaase tandiruve, nanagendu hosabaala nee taruve
Bangaariye.. singaariye.. ha (2), nannomme nee nodu cheluve
Olavinda bandeega, nannannu nee seru hoove ||
ಚಿತ್ರಗೀತೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ (೨)
ಕಂಡು ನಿಂತೆ, ನಿಂತು ಸೋತೆ, ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ ।।ಪ।।
ಹೊಸದಾಗಿ ಮೊಗ್ಗೊಂದು ಹೂವಾಗಿ, ಆ ಹೂವೆ ಈ ಹೆಣ್ಣ ಮೊಗವಾಗಿ
ಸುಳಿದಾಡೊ ಮಿಂಚಿಂದ ಕಣ್ಣಾಗಿ, ಗಿಳಿ ಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಓಲಾಡುವಾ (೨) ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ, ನಡೆವಾಗ ಸಂತೋಷಗೊಂಡೆ ।।೧।।
ಹಗಲಲ್ಲಿ ಕಣ್ ಮುಂದೆ ನೀನಿರುವೆ, ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ, ನನಗೆಂದು ಹೊಸಬಾಳ ನೀ ತರುವೆ
ಬಂಗಾರಿಯೇ .., ಸಿಂಗಾರಿಯೇ .. ಹಾ (೨), ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ, ನನ್ನನ್ನು ನೀ ಸೇರು ಹೂವೆ ।।೨।।

