Friday, December 2, 2022

Kashiyinda Bandanilli Vishwanatha (ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ )

Bhaktigeete

Song link: https:Click Here


Kashiyinda bandanilli vishwanatha

Kareyuvaru avananne manjunatha

Dharmada marmaviha ee nela

Kannadada hirimeya dharmastala ||


Netravati bandalu maleyagi

Devagangyanteye pavaneyagi

Annappa bandanilli sevegagi

Bhoota preta senege nathanagi ||


Hindu jaina dharmada sangamavilli

Endu sarutihanu bahubali

Inta punya kshetrake satiyelli

Yatrikane dhanyanagi nali nali ||


ಭಕ್ತಿಗೀತೆ 


ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ 

ಕರೆಯುವರು ಅವನನ್ನೇ ಮಂಜುನಾಥ 

ಧರ್ಮದಾ ಮರ್ಮವಿಹ ಈ ನೆಲ 

ಕನ್ನಡದ ಹಿರಿಮೆಯ ಧರ್ಮಸ್ಥಳ ।।ಪ ।।


ನೇತ್ರಾವತಿ ಬಂದಳು ಮಾಲೆಯಾಗಿ 

ದೇವಗಂಗೆಯಂತೆಯೇ ಪಾವನೆಯಾಗಿ 

ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ 

ಭೂತ ಪ್ರೇತ ಸೇನೆಗೆ ನಾಥನಾಗಿ ।।೧।।


ಹಿಂದು ಜೈನ ಧರ್ಮದಾ ಸಂಗಮವಿಲ್ಲಿ 

ಎಂದು ಸಾರುತಿಹನು ಬಾಹುಬಲಿ 

ಇಂಥ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ 

ಯಾತ್ರಿಕನೆ ಧನ್ಯನಾಗಿ ನಲಿ ನಲಿ ।।೨।।




Thursday, December 1, 2022

Navilaneri Banda Nagunaguta (ನವಿಲನೇರಿ ಬಂದಾ ನಗುನಗುತಾ )

Bhaktigeete

Song link: https:Click Here


Navilaneri banda nagunaguta

Nayanade ravi shashi kantiyuta

Bhakutarigella bhaya neeguta

Bandanu namma bhagyadata ||


Valliya varisida balleshwara

Jnana pandita guru guheshwara

Deva seveya hrudayeshwara

Vairagya nidhi ivanu yogeshwara ||


Mateya premada mahimanvita

Jagadeeshanolumeya sugunanivta

Jnanada vallabha ee pandita

Ivanige ellaru sharanagata ||


ಭಕ್ತಿಗೀತೆ 


ನವಿಲನೇರಿ ಬಂದಾ ನಗುನಗುತಾ 

ನಯನದೇ ರವಿ ಶಶಿ ಕಾಂತಿಯುತಾ 

ಭಕುತರಿಗೆಲ್ಲ ಭಯ ನೀಗುತಾ 

ಬಂದನು ನಮ್ಮ ಭಾಗ್ಯದಾತಾ ।।ಪ ।।


ವಲ್ಲಿಯಾ ವರಿಸಿದ ಬಲ್ಲೇಶ್ವರಾ 

ಜ್ಞಾನ ಪಂಡಿತ ಗುರು ಗುಹೇಶ್ವರಾ 

ದೇವ ಸೇವೆಯಾ ಹೃದಯೇಶ್ವರಾ 

ವೈರಾಗ್ಯ ನಿಧಿ ಇವನು ಯೋಗೀಶ್ವರಾ ।।೧।।


ಮಾತೆಯಾ ಪ್ರೇಮದಾ ಮಹಿಮಾನ್ವಿತಾ 

ಜಗದೀಶನೊಲುಮೆಯಾ ಸುಗುಣಾನ್ವಿತಾ 

ಜ್ಞಾನದ ವಲ್ಲಭ ಈ ಪಂಡಿತಾ 

ಇವನಿಗೆ ಎಲ್ಲರು ಶರಣಾಗತಾ ।।೨।।



Wednesday, November 30, 2022

Nintalli Avalu Kulitalli Avalu (ನಿಂತಲ್ಲಿ ಅವಳು ಕುಳಿತಲ್ಲಿ ಅವಳು )

 

Movie: Sri Kannikaparameshwari Katha (1966)

Singer: P B Sreenivas

Song link: https:Click Here


Nintalli avalu kulitalli avalu

Nodida kade ella avale avalu ||


Kannu munde kunidu kenakadutihalu

Kaiyya needalu sigade mareyagutihalu

Matinali mouna, kanninali hoobana

Hoodenna jeevada sutra hididihalu ||


Mantra tantrava balla mayagati avalu

Mohajalava beesi marulu madihalu

Uliyalo maretavala aliyalo

Tiliyadee chinteye chiteyaytu hagaliralu ||


ಚಿತ್ರಗೀತೆ 


ನಿಂತಲ್ಲಿ ಅವಳು ಕುಳಿತಲ್ಲಿ ಅವಳು 

ನೋಡಿದಾ ಕಡೆ ಎಲ್ಲ ಅವಳೇ ಅವಳು ।।ಪ ।।


ಕಣ್ಣು ಮುಂದೆ ಕುಣಿದು ಕೆಣಕಾಡುತಿಹಳು

ಕೈಯ ನೀಡಲು ಸಿಗದೆ ಮರೆಯಾಗುತಿಹಳು  

ಮಾತಿನಲಿ ಮೌನ ಕಣ್ಣಿನಲಿ ಹೂಬಾಣ 

ಹೂಡೆನ್ನ ಜೀವದ ಸೂತ್ರ ಹಿಡಿದಿಹಳು ।।೧।।


ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು 

ಮೋಹಜಾಲವ ಬೀಸಿ ಮರುಳು ಮಾಡಿಹಳು 

ಉಳಿಯಲೋ  ಮರೆತವಳ ಅಳಿಯಲೋ 

ತಿಳಿಯದೀ ಚಿಂತೆಯೇ ಚಿತೆಯಾಯ್ತು ಹಗಲಿರಳು ।।೨।।



Tuesday, November 29, 2022

Aananda Sadana Aravinda Nayana (ಆನಂದ ಸದನಾ - ಅರವಿಂದ ನಯನಾ )

Movie: Satya Harishchandra (1965)

Singer: Chandramati

Song link: https:Click Here


Aananda sadana - aravinda nayana

Inavamsha mani bhushana

Dina dinavu bele nandana ||


Vratanema niyama kruta punya dharma

Phalavagi nee bandeyo

Nooraru yugavu nina kirti dwajavo

Nelesi nalisee neraleeyalo

Dina dinavu bele nandana ||


Bhuviyalli munigalu diviyalli suraru

Olaisi talekavaro

Eerelu loka neenalo tanaka

Sirigu kalegu tavaragalo 

Dina dinavu bele nandana ||


ಚಿತ್ರಗೀತೆ 


ಆನಂದ ಸದನಾ - ಅರವಿಂದ ನಯನಾ 

ಇನವಂಶ ಮಣಿ ಭೂಷಣಾ 

ದಿನದಿನವೂ ಬೆಳೆನಂದನಾ ।।ಪ ।।


ವ್ರತನೇಮ ನಿಯಮ ಕೃತಪುಣ್ಯ ಧರ್ಮ 

ಫಲವಾಗಿ ನೀ ಬಂದೆಯೋ 

ನೂರಾರು ಯುಗವೂ ನಿನ ಕೀರ್ತಿ ಧ್ವಜವೂ  

ನೆಲೆಸಿ ನಲಿಸೀ ನೆರಳೀಯಲೋ 

ದಿನದಿನವೂ ಬೆಳೆನಂದನಾ ।।೧।।


ಭುವಿಯಲ್ಲಿ ಮುನಿಗಳು ದಿವಿಯಲ್ಲಿ ಸುರರು 

ಓಲೈಸಿ ತಲೆಕಾವರೋ 

ಈರೇಳು ಲೋಕ ನೀನಾಳೋ ತನಕ 

ಸಿರಿಗೂ ಕಲೆಗೂ ತವರಾಗಲೊ

 ದಿನದಿನವೂ ಬೆಳೆನಂದನಾ ।।೨।।




Monday, November 28, 2022

Kuladalli Keelyavudo Hucchappa (ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ )

  • Movie: Satya Harishchandra (1965)
  • Singer: Ghantasala
  • Song link: https:Click Here


Kuladalli keelyavudo hucchappa

Mathadalli melyavudo

Hutti sayuva halu 

Mansa mansana madhya

Keelyavudo melyavudo ||


Tilaka ittare swargavu sigadu

Vibhuti balidare kailasa baradu

Itta gandha boodinama

Chatta kattalu niranama ||


Saivarigella shiva doddonu

Vaishnavarige hari sarvottamanu

Uttama madhyama adhamarellaru

Satta mele samanagtaro ||


Talegondu reeti neetiya jatiya

Heluva jogi siddaru gurugalu

Masanadalli ee veerabahuva

Kaiyya melgade bhudiyagtaro ||


ಚಿತ್ರಗೀತೆ 


ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ 

ಮತದಲ್ಲಿ ಮೇಲ್ಯಾವುದೋ 

ಹುಟ್ಟಿ ಸಾಯುವ ಹಾಳು 

ಮನಸಾ ಮನಸಾನ ಮಧ್ಯ 

ಕೀಳ್ಯಾವುದೊ ಮೇಲ್ಯಾವುದೋ ।।ಪ ।।


ತಿಲಕ ಇಟ್ಟರೆ ಸ್ವರ್ಗವು ಸಿಗದು 

ವಿಭೂತಿ ಬಳಿದರೆ ಕೈಲಾಸ ಬರದು 

ಇಟ್ಟ ಗಂಧ ಬೂದೀನಾಮ 

ಚಟ್ಟ ಕಟ್ಟಲು ನಿರನಾಮ ।।೧।।


ಸೈವರಿಗೆಲ್ಲಾ ಶಿವ ದೊಡ್ಡೋನು 

ವೈಷ್ಣವರಿಗೆ ಹರಿ ಸರ್ವೋತ್ತಮನು 

ಉತ್ತಮ ಮಧ್ಯಮ ಅಧಮರೆಲ್ಲರೂ 

ಸತ್ತ ಮೇಲೆ ಸಮನಾಗ್ತಾರೋ ।।೨।।


ತಲೆಗೊಂದು ರೀತಿ ನೀತಿಯ ಜಾತಿಯ 

ಹೇಳುವ ಜೋಗಿ ಸಿದ್ದರು ಗುರುಗಳು 

ಮಸಣದಲ್ಲಿ ಈ ವೀರಬಾಹುವ 

ಕೈಯ್ಯ ಮೇಲ್ಗಡೆ ಬೂದಿಯಾಗ್ತಾರೋ ।।೩।।    


                                                                                                                                                                                                                                                                               

Saturday, November 26, 2022

Muyyakke Muyyi Teeritu (ಮುಯ್ಯಕ್ಕೆ ಮುಯ್ಯಿ ತೀರಿತು)

Bhaktigeete

Sri Purandara Dasara Keerthanegalu

Song link: https:Click Here


Raga: Purvi

Tala: Atatala


Muyyakke muyyi teeritu

Jagadayya vijayya sahayya pandariraya ||


Sannavanendu na neeru tarendare

Benne kalla krishna marave madi

Chinnada gindili neeru tandittare

Kannu kanade na ttonede pandariraya ||


Enna pesaru madi sulege kankanavannu

Neenitte nijarupadi

Enna peedisi parama bandana madi

Ninna muyyake muyyi teerisikondeyya ||


Bhaktavatsalanembo birudu bekadare

Bhaktaradeena nagirabedave

Yuktiyali ninnanta devara na kane

Muktisha purandara vittala pandariraya ||


ಭಕ್ತಿಗೀತೆ 


ಮುಯ್ಯಕ್ಕೆ ಮುಯ್ಯಿ ತೀರಿತು ।।ಪ ।।

ಜಗದಯ್ಯ ವಿಜಯ್ಯ ಸಾಹಾಯ್ಯ ಪಂಢರಿರಾಯ ।।ಅನು ।।


ಸಣ್ಣವನೆಂದು ನಾ ನೀರು ತಾರೆಂದರೆ 

ಬೆಣ್ಣೆ ಕಳ್ಳ ಕೃಷ್ಣ ಮರವೆ ಮಾಡಿ 

ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ 

ಕಣ್ಣು ಕಾಣದೆ ನಾ ಠೂಣದೆ  ಪಂಢರಿರಾಯ ।।೧।।


ಎನ್ನ ಪೆಸರು ಮಾಡಿ ಸೂಳೆಗೆ ಕಂಕಣವನ್ನು 

ನೀನಿತ್ತೆ ನಿಜರೂಪದಿ 

ಎನ್ನ ಪೀಡಿಸಿ ಪರಮ ಭಂಡನಮಾಡಿ 

ನಿನ್ನ ಮುಯ್ಯಕೆ ಮುಯ್ಯಿ ತೀರಿಸಿಕೊಂಡೆಯ್ಯ ।।೨।।


ಭಕ್ತ ವತ್ಸಲನೆಂಬೊ ಬಿರುದು ಬೇಕಾದರೆ 

ಭಕ್ತರಾಧೀನ ನಾಗಿರಬೇಡವೆ 

ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ 

ಮುಕ್ತೀಶ ಪುರಂದರ ವಿಠ್ಠಲ ಪಂಢರಿರಾಯ ।।೩।।






Wednesday, November 23, 2022

Kannige Bandavalu (ಕಣ್ಣಿಗೆ ಬಂದವಳು )

Bhavageete

Sahitya: Jayanth Kaikini

song link: https:Click Here


Kannige bandavalu

Kanasige baradiruveya

Matige bandavalu

Manasige baradiruveya ||


Gayavella mayuvanta

Ratriyondu kanase

Dala dalagala novinalli

Arali ninta manase |


Tangaliya kareye

Hosalokava tereye

Konegu bandavalu

Belagu taradiruveya ||kannige||


Bayarida bisilinalli

Hosahagala teru

Eleyade dariyalli

Bittu hodavararu |


Nucchu nooru sante

Mecchi kadu ninte

Sakha endavalu

Mukha toradiruveya ||kannige||


ಭಾವಗೀತೆ 


ಕಣ್ಣಿಗೆ ಬಂದವಳು 

ಕನಸಿಗೆ ಬಾರದಿರುವೆಯಾ 

ಮಾತಿಗೆ ಬಂದವಳು 

ಮನಸಿಗೆ ಬಾರದಿರುವೆಯಾ ।।ಪ ।।


ಗಾಯವೆಲ್ಲ ಮಾಯುವಂತ 

ರಾತ್ರಿಯೊಂದು ಕನಸೆ 

ದಳದಳಗಳ ನೋವಿನಲ್ಲಿ 

ಅರಳಿನಿಂತ ಮನಸೆ ।


ತಂಗಾಳಿಯ ಕರೆಯೆ 

ಹೊಸಲೋಕವ ತೆರೆಯೆ 

ಕೊನೆಗೂ ಬಂದವಳು 

ಬೆಳಗು ತಾರದಿರುವೆಯಾ ।।ಕಣ್ಣಿಗೆ ।।


ಬಾಯಾರಿದ ಬಿಸಿಲಿನಲ್ಲಿ 

ಹೊಸಹಗಲ ತೇರು 

ಎಳೆಯದೆ ದಾರಿಯಲ್ಲಿ 

ಬಿಟ್ಟು ಹೋದವರಾರು ।


ನುಚ್ಚುನೂರು ಸಂತೆ 

ಮೆಚ್ಚಿ ಕಾದು ನಿಂತೆ 

ಸಖ  ಎಂದವಳು 

ಮುಖ ತೋರದಿರುವೆಯಾ ।।ಕಣ್ಣಿಗೆ ।।