Sunday, May 10, 2026

Ku Ku Enutide Belava (ಕೂ ಕೂ ಎನುತಿದೆ ಬೆಳವಾ)

Tatvapada

Santa Sishunala Sharifa Songs

Singer: C Ashwat

Song link: Click Here


Ku ku, ku ku, enutide belava,

Ku ku enutide belava,

Bandu hokkitu bhavavemba dukhada haluva ||


Purushana buttiyolittu, bahu

Harushadi halladol telaaka bittu,

Manavemba gudinolittu, tanna

Tanuvemba maradolu haaraka bittu ||


Aanandadolu taaniralu, swa

Nandadi rekkeya kedarutaliralu,

Bhuvanadolage nintiralu, deva

Sishunaaladhesha govindana varavu ||


ತತ್ವಪದ 


ಕೂ ಕೂ, ಕೂ ಕೂ, ಎನುತಿದೆ ಬೆಳವಾ,

ಕೂ ಕೂ, ಎನುತಿದೆ ಬೆಳವಾ,

ಬಂದು ಹೊಕ್ಕಿತು ಭವವೆಂಬ ದುಃಖದ ಹಳುವ ।।ಪ।।


ಪುರುಷನ ಬುಟ್ಟಿಯೊಳಿಟ್ಟು, ಬಹು 

ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು ,

ಮನವೆಂಬ ಗೂಡಿನೊಳಿಟ್ಟು, ತನ್ನ 

ತನುವೆಂಬ ಮರದೊಳು ಹಾರಾಕ ಬಿಟ್ಟು ।।೧।।


ಆನಂದದೊಳು ತಾನಿರಲು, ಸ್ವಾ

ನಂದದಿ ರೆಕ್ಕೆಯ ಕೆದರುತಲಿರಲು 

ಭುವನದೊಳಗೆ ನಿಂತಿರಲು, ದೇವ 

ಶಿಶುನಾಳಧೀಶ ಗೋವಿಂದನ ವರವು ।।೨।।


Tingalu Mulugidavo Madeshwara (ತಿಂಗಳು ಮುಳುಗಿದವೋ ಮಾದೇಶ್ವರ)

Janapada Geete

Song link: Click Here


Tingalu mulugidavo, rangole belagidavo,

Namma swami madappana poojegendu baale baagidavo ||


Appa madayyanige, tuppada deepa hacchi,

Hombaale seve maaduvaga, baale baagidavo ||


Anna maadayyanu, sanna terina myale,

Summane kutu sharanaru noduvaaga, baale baagidavo ||


Mallige hoonange, chellitu ninna paruse,

Namma chellatagaara maykarna poojege, baale baagidavo ||


Haalambadinda, haalaravi baruvaaga,

Namma swami valadi beegutta baruvaga, baale baagidavo ||


ಜಾನಪದ ಗೀತೆ 


ತಿಂಗಳು ಮುಳುಗಿದವೋ, ರಂಗೋಲೆ ಬೆಳಗಿದವೋ,

ನಮ್ಮ ಸ್ವಾಮಿ ಮಾದಪ್ಪನ ಪೂಜೆಗೆಂದು ಬಾಳೆ ಬಾಗಿದವೋ

 ।।ಪ।।


ಅಪ್ಪ ಮಾದಯ್ಯನಿಗೆ, ತುಪ್ಪದ ದೀಪ ಹಚ್ಚಿ,

ಹೊಂಬಾಳೆ ಸೇವೆ ಮಾಡುವಾಗ, ಬಾಳೆ ಬಾಗಿದವೋ ।।೧।।


ಅಣ್ಣ ಮಾದಯ್ಯನು, ಸಣ್ಣ ತೇರಿನ ಮ್ಯಾಲೆ,

ಸುಮ್ಮನೆ ಕೂತು ಶರಣರು ನೋಡುವಾಗ, ಬಾಳೆ ಬಾಗಿದವೋ

 ।।೨।।


ಮಲ್ಲಿಗೆ ಹೂನಂಗೆ, ಚೆಲ್ಲಿತು ನಿನ್ನ ಪರುಸೆ,

ನಮ್ಮ ಚೆಲ್ಲಾಟಗಾರ ಮಾಯ್ಕಾರ್ನ ಪೂಜೆಗೆ, ಬಾಳೆ ಬಾಗಿದವೋ 

।।೩।।


ಹಾಲಂಬಾಡಿ೦ದ, ಹಾಲರವಿ ಬರುವಾಗ,

ನಮ್ಮ ಸ್ವಾಮಿ ವಾಲಾಡಿ ಬೀಗುತ್ತ ಬರುವಾಗ, ಬಾಳೆ ಬಾಗಿದವೋ 

।।೪।।

Ee Mannu Nammadu (ಈ ಮಣ್ಣು ನಮ್ಮದು)

Deshabhaktigeete

Sahitya: R N Jayagopal

Song link: Click Here


Ee mannu nammadu, ee gaali nammadu,

Kalakalane hariyutiha neeru nammadu,

Kanakanadalu bharateeya rakta nammadu, nammadu, nammadu ||


Namma kaiva himalayave tande samaana,

Gange tunge kaveriyu tayi samaana,

Ee deshada janarellaru sodara samaana,

Ee nadina hrudayavadu daiva sannidhana, daiva sannidhana ||


Ajanta, ellora, halebeedu, belura shilegalivu kaleya aagara,

Hindu, budda, jaina, kraista, musalmaana dharmagala mahasagara,

Nadedu hoda chariteyu naale enuva kaviteyu,

Ee naada mannalide jeevana saara, jeevana saara ||


Tangaalige taleya tugo pairina haadu, pairina haadu,

Aa haadige koduva yantrada jaadu, yantrada jaadu,

Vijnanavu ajnanava gelluva paadu,

Hosa bharata nirmanavu saagide nodu, saagide nodu ||


ದೇಶಭಕ್ತಿ ಗೀತೆ 


ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು,

ಕಲಕಲನೆ ಹರಿಯುತಿಹ ನೀರು ನಮ್ಮದು,

ಕಣಕಣದಲು ಭಾರತೀಯ ರಕ್ತ ನಮ್ಮದು, ನಮ್ಮದು, ನಮ್ಮದು ।।ಪ।।


ನಮ್ಮ ಕಾಯ್ವ ಹಿಮಾಲಯವೆ ತಂದೆ ಸಮಾನ,

ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ,

ಈ ದೇಶದ ಜನರೆಲ್ಲರೂ ಸೋದರ ಸಮಾನ,

ಈ ನಾಡಿನ ಹೃದಯವದು ದೈವ ಸನ್ನಿಧಾನ, ದೈವ ಸನ್ನಿಧಾನ 

।।೧।।


ಅಜಂತ, ಎಲ್ಲೋರ, ಹಳೇಬೀಡು, 

ಬೇಲೂರ ಶಿಲೆಗಳಿವು ಕಲೆಯ ಆಗರ,

ಹಿಂದೂ, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ ಮಹಾಸಾಗರ ,

ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು,

ಈ ನಾಡ ಮಣ್ಣಲಿದೆ ಜೀವನ ಸಾರ, ಜೀವನ ಸಾರ ।।೨।।


ತಂಗಾಳಿಗೆ ತಲೆಯ ತುಗೊ ಪೈರಿನ ಹಾಡು, ಪೈರಿನ ಹಾಡು,

ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಯಂತ್ರದ ಜಾಡು,

ವಿಜ್ಞಾನವು, ಅಜ್ಞಾನವ ಗೆಲ್ಲುವ ಪಾಡು,

ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು, ಸಾಗಿದೆ ನೋಡು 

।।೩।।

Thursday, April 30, 2026

Ravi Neenu Aagasadinda (ರವಿ ನೀನು ಆಗಸದಿಂದ)

Movie: Hosabelaku (1982)

Singers: Dr. Rajkumar, S Janaki

Song link: Click Here


Ravi..,ravi..,ravi..,

Ravi neenu aagasadinda, mareyaagi hogade nillu,

Balalli kattale tumbi, nee odade ||


Kadalinda neeranu taruve, maleyante bhumige surive,

Neladalli hasiranu tumbi, santosha sambhrama koduve,

Ninagaagi lateyali hoova, naa nagisuve ||


Ravi ninna kantiya jeeva, nee nanna baalina daiva,

Nee duravadare heege, naa talalarenu noova,

Ee nanna premada hoova naa marevene ||


ಚಿತ್ರಗೀತೆ 


ರವಿ ..,ರವಿ ..,ರವಿ..,

ರವಿ ನೀನು ಆಗಸದಿಂದ, ಮರೆಯಾಗಿ ಹೋಗದೆ ನಿಲ್ಲು,

ಬಾಳಲ್ಲಿ ಕತ್ತಲೆ ತುಂಬಿ, ನೀ ಓಡದೇ ।।ಪ।।


ಕಡಲಿಂದ ನೀರನು ತರುವೆ, ಮಳೆಯಂತೆ ಭೂಮಿಗೆ ಸುರಿವೆ,

ನೆಲದಲ್ಲಿ ಹಸಿರನು ತುಂಬಿ, ಸಂತೋಷ ಸಂಭ್ರಮ ಕೊಡುವೆ,

ನಿನಗಾಗಿ ಲತೆಯಲಿ ಹೂವ, ನಾ ನಗಿಸುವೆ ।।೧।।


ರವಿ ನಿನ್ನ ಕಾಂತಿಯ ಜೀವ, ನೀ ನನ್ನ ಬಾಳಿನ ದೈವ,

ನೀ ದೂರವಾದರೆ ಹೀಗೆ, ನಾ ತಾಳಲಾರೆನು ನೋವ,

ಈ ನನ್ನ ಪ್ರೇಮದ ಹೂವ ನಾ ಮರೆವೆನೆ ।।೨।।

Nannali Nanilla (ನನ್ನಲಿ ನಾನಿಲ್ಲ)

Movie: Kariya (2003)

Singers: Udit Narayan, Shamita Malnad

Song link: Click Here


Nannali naanilla, manadali neenella,

Neenilladenenu illa,

Nannaya tanavilla, kaledenu nanella,

Heegendu aagene illa,

Neenene nanaade, naneke heegade ||


O deva indu, avalilli bandu, tanagi ella helali,

Eindadarunu na helalenu, aa dhairyavilla nannali,

Ho.., maatinda mouna mareyagali,

Nannaya tanavilla, kaledenu nanella, heegendu aagene illa ||


Aa ondu maatu, tuti mele nintu, daniyagalende kadide,

Naa helabeke, nee helabeke, ee preeti ella helade,

Yaradarenu annabarade,

Nannali naanilla, manadali neenella, Neenilladenenu illa ||


ಚಿತ್ರಗೀತೆ 


ನನ್ನಲಿ ನಾನಿಲ್ಲ, ಮನದಲಿ ನೀನೆಲ್ಲಾ,

ನೀನಿಲ್ಲದೇನೇನೂ ಇಲ್ಲ,

ನನ್ನಯ ತನವಿಲ್ಲ, ಕಳೆದೆನು ನಾನೆಲ್ಲ, 

ಹೀಗೆಂದು ಆಗೇನೇ ಇಲ್ಲ,

ನೀನೇನೆ ನಾನಾದೆ, ನಾನೇಕೆ ಹೀಗಾದೆ ।।ಪ।।


ಓ ದೇವ ಇಂದು, ಅವಳಿಲ್ಲಿ ಬಂದು, ತಾನಾಗಿ ಎಲ್ಲಾ ಹೇಳಲಿ,

ಇಂದಾದರೂನು ನಾ ಹೇಳಲೇನು, ಆ ಧೈರ್ಯವಿಲ್ಲ ನ್ನನ್ನಲಿ,

ಹೋ ..ಮಾತಿಂದ ಮೌನ ಮರೆಯಾಗಲಿ,

ನನ್ನಯ ತನವಿಲ್ಲ, ಕಳೆದೆನು ನಾನೆಲ್ಲ, ಹೀಗೆಂದು ಆಗೇನೇ ಇಲ್ಲ 

।।೧।।


ಆ ಒಂದು ಮಾತು, ತುಟಿ ಮೇಲೆ ನಿಂತು, ದನಿಯಾಗಲೆಂದೇ ಕಾದಿದೇ,

ನಾ ಹೇಳಬೇಕೆ, ನೀ ಹೇಳಬೇಕೆ, ನೀ ಈ ಪ್ರೀತಿ ಎಲ್ಲ ಹೇಳದೆ,

ಯಾರಾದರೇನೂ ಅನ್ನಬಾರದೇ,

ನನ್ನಲಿ ನಾನಿಲ್ಲ, ಮನದಲಿ ನೀನೆಲ್ಲಾ, ನೀನಿಲ್ಲದೇನೇನೂ ಇಲ್ಲ

।।೨।।

Kannare Kande Naa Kamakshiya (ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ)

Movie: Runamukthalu (1984)

Singer: Vani Jairam

Song link: Click Here


Kannare kande naa kamakshiya,

Bedida vara koduva varalakshmiya ||


Parama kalyaniya, padmalochaneya,

Padmanabhapriye padminiya,

Padma mandirada, padma sundariya,

Padma gandhiniya, paadaravindava,

Kande naa, kande naa ||


Sangeeta loleya, sarasavaniya,

Suraloka, soubhagya, sampanneya,

Srimante, dheemante, jayalakshmiya,

Gajalakshmi, srilakshmi, paadaravindava,

Kande naa, kande naa ||



ಚಿತ್ರಗೀತೆ 


ಕಣ್ಣಾರೆ ಕಂಡೆ ನಾ ಕಾಮಾಕ್ಷಿಯಾ,

ಬೇಡಿದ ವರ ಕೊಡುವ ವರಲಕ್ಷ್ಮಿಯಾ ।।ಪ।।


ಪರಮ ಕಲ್ಯಾಣಿಯ, ಪದ್ಮ ಲೋಚನೆಯ,

ಪದ್ಮನಾಭಪ್ರಿಯೆ ಪದ್ಮಿನಿಯಾ,

ಪದ್ಮ ಮಂದಿರದ, ಪದ್ಮ ಸುಂದರಿಯ,

ಪದ್ಮಗಂಧಿನಿಯ, ಪಾದಾರವಿಂದವ,

ಕಂಡೆ ನಾ, ಕಂಡೆ ನಾ ।।೧।।


ಸಂಗೀತಲೋಲೆಯ, ಸರಸವಾಣಿಯ,

ಸುರಲೋಕ, ಸೌಭಾಗ್ಯ, ಸಂಪನ್ನೆಯಾ,

ಶ್ರೀಮಂತೆ, ಧೀಮಂತೆ, ಜಯಲಕ್ಷ್ಮಿಯಾ,

ಗಜಲಕ್ಷ್ಮಿ, ಶ್ರೀಲಕ್ಷ್ಮೀ, ಪಾದಾರವಿಂದವ,

ಕಂಡೆ ನಾ, ಕಂಡೆ ನಾ ।।೨।।

Nanna Jeeva Neenu (ನನ್ನ ಜೀವ ನೀನು)

Movie: Geeta (1981)

Singers: SPB, S Janaki

Song link: Click Here


Nanna jeeva neenu, neenu, neenu,

Nanna baala jyothi neenu, neenu, neenu,

Nanna jeeva neenu, nanna baala jyothi neenu,

Ninna kanna kambani, nanna baala jyothi neenu ||


Badihoda hoovinante, eke heege kaanuve,

Noduva, aasege, ninna kangalaguve,

Harusha tumbi nagisuve ||


Yaara shapa bandito, yaara kopa sokito,

Ninnanu, nanindu ninnanu, nodo aase maadodenu,

Chinte eke naanillave ||


ಚಿತ್ರಗೀತೆ 


ನನ್ನ ಜೀವ ನೀನು, ನೀನು, ನೀನು,

ನನ್ನ ಬಾಳ ಜ್ಯೋತಿ ನೀನು, ನೀನು, ನೀನು,

ನನ್ನ ಜೀವ ನೀನು, ನನ್ನ ಬಾಳ ಜ್ಯೋತಿ ನೀನು, 

ನಿನ್ನ ಕಣ್ಣ ಕಂಬನಿ, ನನ್ನಾಣೆ ನೋಡಲಾರೆನು ।।ಪ।।


ಬಾಡಿ ಹೋದ ಹೂವಿನಂತೆ, ಏಕೆ ಹೀಗೆ ಕಾಣುವೆ,

ನೋಡುವಾ ಆಸೆಗೆ, ನಿನ್ನ ಕಂಗಳಾಗುವೆ,

ಹರುಷ ತುಂಬಿ ನಗಿಸುವೆ ।।೧।।


ಯಾರ ಶಾಪ ಬಂದಿತೋ, ಯಾರ ಕೋಪ ಸೋಕಿತೋ,

ನಿನ್ನನೂ, ನಾನಿಂದು ನಿನ್ನನೂ,

ನೋಡೋ ಆಸೆ ಮಾಡೋದೇನು, ಚಿಂತೆ ಏಕೆ ನಾನಿಲ್ಲವೆ ।।೨।।