Monday, April 27, 2026

Nee Yaaro Eno Sakha (ನೀ ಯಾರೋ ಏನೋ ಸಖ)

Movie: Hasiru Torana (1970)

Singer: S Janaki

Song link: Click Here


Nee yaaro eno sakha, enagaasare,

Karunaalu neenadeya, kannamare ||


Ide eno snehadharma, ide nambike eno,

Nee duravaagi hoge, maadida tappenu,

Iru neenu elladaru, sukhavagiru ||


Sada ninna noduvaase, idenetako kaane,

Baa ondu baari nodu, embude tappenu,

Iru neenu elladaru, sukhavagiru ||


ಚಿತ್ರಗೀತೆ 


ನೀ ಯಾರೋ ಏನೋ ಸಖ, ಎನಗಾಸರೆ,

ಕರುಣಾಳು ನೀನಾದೆಯಾ, ಕಣ್ಣಾಮರೆ ।।ಪ।।


ಇದೇ ಏನೋ ಸ್ನೇಹಧರ್ಮ, ಇದೇ ನಂಬಿಕೆ ಏನೋ,

ನೀ ದೂರವಾಗಿ ಹೋಗೆ, ಮಾಡಿದ ತಪ್ಪೇನೂ,

ಇರು ನೀನು ಎಲ್ಲಾದರು, ಸುಖವಾಗಿರು ।।೧।।


ಸದಾ ನಿನ್ನ ನೋಡುವಾಸೆ, ಇದೇನೇತಕೋ ಕಾಣೆ,

ಬಾ ಒಂದು ಬಾರಿ ನೋಡು, ಎಂಬುದೇ ತಪ್ಪೇನು,

ಇರು ನೀನು ಎಲ್ಲಾದರು, ಸುಖವಾಗಿರು ।।೨।।


Friday, April 24, 2026

Nidde Baaradu Innu Ee Jeevake (ನಿದ್ದೆ ಬಾರದು ಇನ್ನು ಈ ಜೀವಕೆ)

Naadageete

Sahitya: Sri Lakshman

Song link: Click Here


Nidde baaradu innu ee jeevake,

Bidda hampeya kandu kangetteno.. ||


Kannadada tai beru neeradaside,

Honnu hole adara bali taana onagide,

Chenna cheluvina hampe heladaagide,

Enna tai manedhenu baradagide ||


Bhinna murtigalannu ninnantarangadali,

Inneshtu dinavittu golaaduve?

Mundina janmadali honnu holeya,

Kannadiga harisuvanu kannoresiko amma ||


ನಾಡಗೀತೆ 


ನಿದ್ದೆ ಬಾರದು ಇನ್ನು ಈ ಜೀವಕೆ,

ಬಿದ್ದ ಹಂಪೆಯ ಕಂಡು ಕಂಗೆಟ್ಟೆನೋ.. ।।ಪ।।


ಕನ್ನಡದ ತಾಯ್ ಬೇರು ನೀರಡಸಿದೆ,

ಹೊನ್ನು ಹೊಳೆ ಅದರ ಬಳಿ ತಾಣ ಒಣಗಿದೆ,

ಚೆನ್ನ ಚೆಲುವಿನ ಹಂಪೆ ಹೇಳದಾಗಿದೆ,

ಎನ್ನ ತಾಯ್ ಮನೆಧೇನು ಬರಡಾಗಿದೆ ।।


ಭಿನ್ನ ಮೂರ್ತಿಗಳನ್ನು ನಿನ್ನ೦ತರಂಗದಲಿ,

ಇನ್ನೆಷ್ಟು ದಿನವಿಟ್ಟು ಗೋಳಾಡುವೇ ?

ಮು೦ದಿನ ಜನ್ಮದಲಿ ಹೊನ್ನು ಹೊಳೆಯ,

ಕನ್ನಡಿಗ ಹರಿಸುವನು ಕಣ್ಣೊರೆಸಿಕೋ ಅಮ್ಮ।। 

Ondu Dina Ellindalo Nee Bande (ಒಂದು ದಿನ ಎಲ್ಲಿಂದಲೋ ನೀ ಬಂದೆ)

Movie: Hasiru Torana (1970)

Singer: P B Srinivas, S Janaki

Song link: Click Here


Ondu dina, ellindalo nee bande, ennedeya mandirade, nee ninde,

Irulinali belakaagi, nee bande, ee latege aasareya, nee tande ||


Kattide neenee manege, hasiru torana,

Ninnaya maate premada, sihi hoorana,

Kangaladu, nidire toreye, neene karana,

Mai mareye naanu, ninnolave karana ||


Maitriya veene midida, madhura gaanake,

Haadide nee anuraagada, raaga maalike,

Chaitradali, banade mudade, kareye kogile,

Chendutiya cheluve, na berete ninnale ||


ಚಿತ್ರಗೀತೆ 


ಒಂದು ದಿನ, ಎಲ್ಲಿಂದಲೋ ನೀ ಬಂದೆ, ಎನ್ನೆದೆಯ ಮಂದಿರದೆ, ನೀ ನಿಂದೆ,

ಇರುಳಿನಲಿ ಬೆಳಕಾಗಿ, ನೀ ಬಂದೆ, ಈ ಲತೆಗೆ ಆಸರೆಯ, ನೀ ತಂದೆ

 ।।ಪ।।


ಕಟ್ಟಿದೆ ನೀನೀ ಮನೆಗೆ, ಹಸಿರು ತೋರಣ,

ನಿನ್ನಯ ಮಾತೆ ಪ್ರೇಮದ, ಸಿಹಿ ಹೂರಣ,

ಕಂಗಳದು, ನಿದಿರೆ ತೊರೆಯೆ, ನೀನೇ ಕಾರಣ,

ಮೈ ಮರೆಯೆ ನಾನು, ನಿನ್ನೊಲವೇ ಕಾರಣ ।।೧।।


ಮೈತ್ರಿಯ ವೀಣೆ ಮಿಡಿದ, ಮಧುರ ಗಾನಕೆ,

ಹಾಡಿದೆ ನೀ ಅನುರಾಗದ, ರಾಗ ಮಾಲಿಕೆ,

ಚೈತ್ರದಲಿ, ಬನದೆ ಮುದದೆ, ಕರೆಯೇ ಕೋಗಿಲೆ,

ಚೆಂದುಟಿಯ ಚೆಲುವೆ, ನಾ ಬೆರೆತೆ ನಿನ್ನಲೇ ।।೨।।

Januma Needuttale (ಜನುಮ ನೀಡುತ್ತಾಳೆ)

Movie: Bevu Bella (1993)

Singer: Rajesh Krishnan

Song link: Click Here


Januma needuttale namma taayi, anna needuttale bhumi taayi

Maatu needuttale kannada taayi, paapa kaleyuttale kaveri taayi ||


Odidaru, geechidaru, oleya oodabeku, taayiyagabeku,

Taayi nelada rhuna teerisalebeku,

Taayi bhashe ninna makkalu kalibeku,

Kaveri, neeralli, bele beyisabeku ||


Jaaridaru, edavidaru, kai hidiyuttale, taayi kayuttale,

Bhumi taayi, nee sattaru karitaale,

Taayi bhashe, nee hodaru irutaale,

Savalli, kaveri, bayige sigutaale ||


ಚಿತ್ರಗೀತೆ 


ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ ,

ಮಾತು ನೀಡುತ್ತಾಳೆ ಕನ್ನಡ ತಾಯಿ, ಪಾಪ ಕಳೆಯುತ್ತಾಳೆ ಕಾವೇರಿ ತಾಯಿ ।।ಪ।।


ಓದಿದರೂ, ಗೀಚಿದರೂ,  ಒಲೆಯ ಊದಬೇಕು, ತಾಯಿಯಾಗಬೇಕು 

ತಾಯಿ ನೆಲದ ಋಣ ತೀರಿಸಲೇಬೇಕು, 

ತಾಯಿ ಭಾಷೆ ನಿನ್ನ ಮಕ್ಕಳು ಕಲೀಬೇಕು, 

ಕಾವೇರಿ, ನೀರಲ್ಲಿ, ಬೀಳೆ ಬೇಯಿಸಬೇಕು ।।೧।।


ಜಾರಿದರೂ, ಎಡವಿದರೂ, ಕೈ ಹಿಡಿಯುತ್ತಾಳೆ, ತಾಯಿ ಕಾಯುತ್ತಾಳೆ, 

ಭೂಮಿ ತಾಯಿ, ನೀ ಸತ್ತರು ಕರಿತಾಳೆ, 

ತಾಯಿ ಭಾಷೆ, ನೀ ಹೋದರು ಇರುತಾಳೆ,

ಸಾವಲ್ಲಿ, ಕಾವೇರಿ, ಬಾಯಿಗೆ ಸಿಗುತಾಳೆ ।।೨।।

Nudimana Shivaguna Sankeerthana (ನುಡಿಮನ ಶಿವಗುಣ ಸಂಕೀರ್ತನ)

Movie: Swarna Gowri (1962)

Singers: P B Srinivas, p susheela

Song link: Click Here


Nudimana shivaguna sankeerthana,

Nijapada paavana nodi paaduve naa ||


Natya leela natana lola, neene bhava rasaala,

Aa..,atya leela natana lola, neene bhava rasaala,

Kunisuva, mana tanisuva, kamaneeya kamahara deva,

Nudimana shivaguna sankeerthana ||


Naadasaara nigamaakaara, neene gaana vihaara,

Aa,, naadasaara nigamaakaara, neene gaana vihaara,

Rachana nee, madhu vachana nee, nava raaga tala laya taana,

Nudimana shivaguna sankeerthana ||


ಚಿತ್ರಗೀತೆ 


ನುಡಿಮನ ಶಿವಗುಣ ಸಂಕೀರ್ತನ,

ನಿಜಪದ ಪಾವನ ನೋಡಿ  ಪಾಡುವೆ ನಾ ।।ಪ।।


ನಾಟ್ಯ ಲೀಲಾ ನಟನಾ ಲೋಲ, ನೀನೇ ಭಾವ ರಸಾಲ,

ಆ..,ನಾಟ್ಯ ಲೀಲಾ ನಟನಾ ಲೋಲ, ನೀನೇ ಭಾವ ರಸಾಲ,

ಕುಣಿಸುವ, ಮನ ತಣಿಸುವ, ಕಮನೀಯ ಕಾಮಹರ ದೇವ,

ನುಡಿಮನ ಶಿವಗುಣ ಸಂಕೀರ್ತನ ।।೧।।


ನಾದಸಾರ ನಿಗಮಾಕಾರ, ನೀನೇ ಗಾನ ವಿಹಾರ,

ಆ..,ನಾದಸಾರ ನಿಗಮಾಕಾರ, ನೀನೇ ಗಾನ ವಿಹಾರ,

ರಚನ ನೀ, ಮಧು ವಚನ ನೀ, ನವ ರಾಗ ತಾಳ ಲಯ ತಾಣ,

ನುಡಿಮನ ಶಿವಗುಣ ಸಂಕೀರ್ತನ ।।೨।।

Thursday, April 23, 2026

Neeniddarenu Hattira (ನೀನಿದ್ದರೇನು ಹತ್ತಿರ)

Movie: Aananda Kanda (1968)

Singer: P Susheela

Song link: Click Here


Neeniddarenu hattira, eshtondu naduve antara,

Ee agalike innetake, nee nanna arita nantara ||


Hooballigelli aasare, adhara marave toredare,

Nambida daiva munidare, ee hennigelli aasare ||


Hrudaya hageya dudade, olavu alli moodade,

Nageya honalu hariyade, namma baalu belagade ||


ಚಿತ್ರಗೀತೆ 


ನೀನಿದ್ದರೇನು ಹತ್ತಿರ, ಎಷ್ಟೊಂದು ನಡುವೆ ಅಂತರ,

ಈ ಅಗಲಿಕೆ ಇನ್ನೇತಕೆ, ನೀ ನನ್ನ ಅರಿತ ನಂತರ ।।ಪ।।


ಹೂಬಳ್ಳಿಗೆಲ್ಲಿ ಆಸರೆ, ಆಧಾರ ಮರವೆ ತೊರೆದರೆ,

ನಂಬಿದ ದೈವ ಮುನಿದರೆ, ಈ ಹೆಣ್ನಿಗೆಲ್ಲಿ ಆಸರೆ ।।೧।।


ಹೃದಯ ಹಗೆಯ ದೂಡದೆ, ಒಲವು ಅಲ್ಲಿ ಮೂಡದೆ,

ನಗೆಯ ಹೊನಲು ಹರಿಯದೆ, ನಮ್ಮ ಬಾಳು ಬೆಳಗದೆ ।।೨।।

Saarutide Srushti (ಸಾರುತಿದೆ ಸೃಷ್ಟಿ)

ಪದ್ಯ 

ಸಾಹಿತ್ಯ : ಸಿದ್ದಯ್ಯ ಪುರಾಣಿಕ 


ಹೆಣ್ಣಿನಲಿ ಬೆಣ್ಣೆಯಲಿ ಕೆನೆಮೊಸರು ಹಾಲಿನಲಿ 

ಕಂದದಲಿ ಜೇನಿನಲಿ ರಸಗಬ್ಬು ಬಾಳೆಯಲಿ 

ಎಳನೀರು ಹೊಳೆನೀರು ಹಾಲ್ದೆನೆಯ ಕಾಳಿನಲಿ 

ಸಾರುತಿದೆ ಸೃಷ್ಟಿಯಿದು ಸವಿಯಾಗಿ ನಿಂದು 

ಸವಿಯಾಗು ಸವಿಯಾಗು ಸವಿಯಾಗು ! ಎಂದು.


ತಾರೆಯಲಿ ಚಂದ್ರನಲಿ ಸೂರ್ಯನಲಿ ರನ್ನದಲಿ 

ಕಂಚಿನಲಿ ಮಿಂಚಿನಲಿ ಮುತ್ತಿನಲಿ ಚಿನ್ನದಲಿ 

ಜ್ಯೋತಿಯಲಿ ನಯನದಲಿ ಉಷೆಯ ಹೊಂಬಣ್ಣದಲಿ 

ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು 

ಛವಿಯಾಗು ಛವಿಯಾಗು ಛವಿಯಾಗು ! ಎಂದು.


ಶಬ್ದದಲಿ  ಸವಿಯಾಗಿ ಅರ್ಥದಲಿ ಬೆಳಕಾಗಿ 

ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ 

ಬಾಳುವೆಯ ಸವಿಬೆಳಕ ಬರೆಯುವವ ಬೇಕಾಗಿ 

ಸಾರುತಿದೆ ಸೃಷ್ಟಿಯಿದು ಛವಿಯಾಗಿ ನಿಂದು 

ಕವಿಯಾಗು ಕವಿಯಾಗು ಕವಿಯಾಗು ! ಎಂದು.


Padya


 Henninali benneyali kenemosaru haalinali

Kandadali jeninali rasagabbu baaleyali

Elaneeru holeneeru haldeneya kaalinali

Saarutide srushtiyidu saviyagi nindu

Saviyagu saviyagu saviyagu ! endu.


Taareyali chandranali suryanali rannadali

Kanchinali minchinali muttinali chinnadali

Jyothiyali nayanadali usheya hombannadali

Saarutide srushtiyidu chaviyagi nindu

Chaviyagu chaviyagu chaviyagu ! endu.


Shabdadali saviyagi arthadali belakagi

Baala bhavyategilli belaku savi sakagi

Baaluveya savibelaka bareyuvava bekagi

Saarutide srushtiyidu chaviyagi nindu

Kaviyagu kaviyagu kaviyagu ! endu.