Sunday, February 22, 2026

Ninna Savinenape (ನಿನ್ನ ಸವಿನೆನಪೆ)

Movie: Anuraaga Bandhana (1978)

Singer: S Janaki

Song link: Click Here


Ninna savinenape, manadalli aaradhane,

Preetiya savimaate upaasane,

Ninna sangadali, anganga minchayitu,

Shrungara rasadhare bayalayitu ||


Hoo baana hudalu kamanabillu,

Ee prana mudipaytu ninna seralu,

Usirata neenu, bisi midukaata naanu,

Ninnali naa maruladenu, neene ee baala baanu ||


Kannalli sanneya swagata needi,

Nee tande rasakavya savi munnudi,

Mana tumba neenu, ninna pratibimba naanu,

Ninna vina naa baalenu, innu daye baaradenu,

Swami shankarane sashidharane gangadhara, baalali belakaagu maheshwara,

Namma kai hididu kapadu karunakara, ninnalli sharanaade shivashankara ||


ಚಿತ್ರಗೀತೆ 


ನಿನ್ನ ಸವಿನೆನಪೆ, ಮನದಲ್ಲಿ ಆರಾಧನೆ,

ಪ್ರೀತಿಯ ಸವಿಮಾತೆ ಉಪಾಸನೆ,

ನಿನ್ನ ಸಂಗದಲಿ, ಅಂಗಾಂಗ ಮಿಂಚಾಯಿತು,

ಶೃಂಗಾರ ರಸಧಾರೆ ಬಯಲಾಯಿತು ।।ಪ।।


ಹೂ ಬಾಣ ಹೂಡಲು ಕಾಮನಬಿಲ್ಲು,

ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು,

ಉಸಿರಾಟ ನೀನು, ಬಿಸಿ ಮಿಡುಕಾಟ ನಾನು,

ನಿನ್ನಲಿ ನಾ ಮರುಳಾದೆನು, ನೀನೇ ಈ ಬಾಳ ಬಾನು ।।೧।।


ಕಣ್ಣಲ್ಲಿ ಸನ್ನೆಯ ಸ್ವಾಗತ ನೀಡಿ,

ನೀ ತಂದೆ ರಸಕಾವ್ಯ ಸವಿ ಮುನ್ನುಡಿ,

ಮನ ತುಂಬಾ ನೀನು, ನಿನ್ನ ಪ್ರತಿಬಿಂಬ ನಾನು,

ನಿನ್ನ ವಿನಾ ನಾ ಬಾಳೆನು, ಇನ್ನು ದಯೆ ಬಾರದೇನು,

ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ, ಬಾಳಲಿ ಬೆಳಕಾಗು ಮಹೇಶ್ವರ,

ನಮ್ಮ ಕೈ ಹಿಡಿದು ಕಾಪಾಡು ಕರುಣಾಕರ, ನಿನ್ನಲ್ಲಿ ಶರಣಾದೆ ಶಿವಶಂಕರ ।।೨।।

                             

Sharade Daye Toride (ಶಾರದೆ ದಯೆ ತೋರಿದೆ)

Movie: Malaya Maaruta (1986)

Singer: SPB

Song link: Click Here


Sharade daye toride,

Ninna karuneya kadalalli muttade, na muttade ||


Haala belakinali biliya kamaladali, biliya vastravanu dharisi,

Biliya kusumagala maale koralalire, belli veeneyanu nudisi,

Ninna kangala belakanu, nanna kangalali tumbide,

Elu maguve, melelu endu, hosa baala tandeyamma ||


Andhakaradali nondu balalutire, bandu kaiya hidide,

Kanda ekaluve munde daari ide, endu neene nudide,

Tande tayiya punyavo, nanendo madida pujeyo,

Indu ninna, krupeyinda naanu, aananda padedenamma ||


ಚಿತ್ರಗೀತೆ 


ಶಾರದೆ ದಯೆ ತೋರಿದೆ,

ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ, ನಾ ಮುತ್ತಾದೆ ।।ಪ।।


ಹಾಲ ಬೆಳಕಿನಲಿ ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ,

ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ,

ನಿನ್ನ ಕಂಗಳ ಬೆಳಕನು, ನನ್ನ ಕಂಗಳಲಿ ತುಂಬಿದೆ,

ಏಳು ಮಗುವೆ, ಮೇಲೇಳು ಎಂದು, ಹೊಸ ಬಾಳ ತಂದೆಯಮ್ಮಾ ।।೧।।


ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ ಹಿಡಿದೆ,

ಕಂದ ಏಕಳುವೆ ಮುಂದೆ ದಾರಿ ಇದೆ, ಎಂದು ನೀನೇ ನುಡಿದೆ,

ತಂದೆ ತಾಯಿಯ ಪುಣ್ಯವೋ, ನಾನೆಂದೋ ಮಾಡಿದ ಪೂಜೆಯೋ,

ಇಂದು ನಿನ್ನ, ಕೃಪೆಯಿಂದ ನಾನು, ಆನಂದ ಪಡೆದೆನಮ್ಮಾ 

।।೨।।

                       

Saturday, February 21, 2026

Singara Sheela (ಸಿಂಗಾರ ಶೀಲ)

Movie: Bhakta Kanakadasa (1960)

Singer: P B Srinivas, S Janaki

Song link: Click Here


Singara sheela, sangeeta lola, aa..aa..aa..aa!

Singaara sheela, sangeeta lola,

Shreeranga ninna leele, kandu dhanye naanala ||


Sarasa summana santosha bhava,

Sharadhiyentagi tumbito jeeva,

Hariye, poreye, ee ninna maaye,

Enendu helalayya, deena bandhu neenayya ||


Kavida gadaandhakaarava neegi,

Belaka nee tande nannavanagi,

Nalide, olide, nalmeya tande,

Kapado kamadhenu neene endu toride ||


Manadolekinta mohada veene,

Madhura jhenkara tandito kaane,

Kunive, tanive, seveya gaive,

Sriranga ninna leele, haadi haadi baaluve ||


ಚಿತ್ರಗೀತೆ 


ಸಿಂಗಾರ ಶೀಲ, ಸಂಗೀತ ಲೋಲ, ಆ .. ಆ .. ಆ .. ಆ ..!

ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯೆನಾನಳಾ,

ಸಿಂಗಾರ ಶೀಲ, ಸಂಗೀತ ಲೋಲ ।।ಪ।।


ಸರಸ ಸುಮ್ಮಾನ ಸಂತೋಷ ಭಾವ,

ಶರಧಿಯೆ೦ತಾಗಿ ತುಂಬಿತೊ ಜೀವ,

ಹರಿಯೇ, ಪೊರೆಯೇ, ಈ ನಿನ್ನ ಮಾಯೆ,

ಏನೆಂದು ಹೇಳಲಯ್ಯಾ, ದೀನ ಬಂಧು ನೀನಯ್ಯಾ ।।೧।।


ಕವಿದ ಗಾಡಾ೦ಧಕಾರವ ನೀಗಿ,

ಬೆಳಕ ನೀ ತಂದೆ ನನ್ನವನಾಗಿ,

ನಲಿದೆ, ಒಲಿದೆ, ನಲ್ಮೆಯ ತಂದೆ,

ಕಾಪಾಡೊ ಕಾಮಧೇನು ನೀ ಎಂದು ತೋರಿದೆ ।।೨।।


ಮನದೊಳೇಕಿಂತ ಮೋಹದ ವೀಣೆ,

ಮಧುರ ಝೇಂಕಾರ ತಂದಿತೋ ಕಾಣೆ,

ಕುಣಿವೇ, ತಣಿವೇ, ಸೇವೆಯ ಗೈವೆ,

ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೆ ।।೩।।

             

Jotheyali Jothe Jotheyali (ಜೊತೆಯಲಿ ಜೊತೆ ಜೊತೆಯಲಿ)

Movie: Geeta (1981)

Singers: SPB, S Janaki

Song link: Click Here


Jotheyali jothe jotheyali, iruvenu heege endu,

Hosa harushava taruvenu innu endu,

Ho.. entha maatadide, indu nee, entha maatadide,

Nanna manasina bhavane neene helide ||


Preeti endarenu endu eega aritenu,

Savi nudiyali, tanu aralitu, savi ganasali mana, kuniyitu,

Olavina ee maatige, karagi hode notake,

Koduve ninage baa preeti kanike ||


Modadalli jodiyaagi, teli naliyuva,

Haaraduva araginigala, maatadisi muddaduva,

Kaamana billeruva, jaaruta naavaduva,

Hagalu irulu ondaagi haaduva ||


ಚಿತ್ರಗೀತೆ 


ಜೊತೆಯಲಿ ಜೊತೆ ಜೊತೆಯಲಿ, ಇರುವೆನು ಹೀಗೆ ಎಂದು,

ಹೊಸ ಹರುಷವ ತರುವೆನು ಇನ್ನು ಎಂದು,

ಹೋ  ..ಎಂಥ ಮಾತಾಡಿದೆ ಇಂದು ನೀ, ಎಂಥ ಮಾತಾಡಿದೆ,

ನನ್ನ ಮನಸಿನ ಭಾವನೆ ನೀನೆ ಹೇಳಿದೆ ।।ಪ।।


ಪ್ರೀತಿ ಎಂದರೇನು ಎಂದು ಈಗ ಅರಿತೆನೂ,

ಸವಿ ನುಡಿಯಲಿ, ತನು ಅರಳಿತು, ಸವಿಗನಸಲಿ ಮನ ಕುಣಿಯಿತು,

ಒಲವಿನಾ ಈ ಮಾತಿಗೆ, ಕರಗಿ ಹೋದೆ ನೋಟಕೆ,

ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ ।।೧।।


ಮೋಡದಲ್ಲಿ ಜೋಡಿಯಾಗಿ, ತೇಲಿ ನಲಿಯುವ,

ಹಾರಾಡುವ ಅರಗಿಣಿಗಳ, ಮಾತಾಡಿಸಿ ಮುದ್ದಾಡುವ,

ಕಾಮನ ಬಿಲ್ಲೇರುವ, ಜಾರುತ ನಾವಾಡುವ,

ಹಗಲು ಇರುಳು ಒಂದಾಗಿ ಹಾಡುವ ।।೨।।

             

Shrungara Roopanu Shanmukhanu (ಶೃಂಗಾರ ರೂಪನು ಷಣ್ಮುಖನು)

Bhaktigeete

Singer: Dr. Rajkumar

Song link: Click Here


Shrungara roopanu shanmukhanu,

Bangaradodalina karunanta ranganu,

Dandayudhavannu dharisida swamiyu,

Dharmava kaayuva kankana baddanu ||


Parvati premadi harasida kuvaranu,

Parashiva mecchida panditanu,

Paapava neeguva parama puneetanu,

Pranava rahasyava ballavaneetanu ||


Gangeyu sahisada benkiya odalu,

Antarangavidu premada kadalu,

Aananda mooruti nagunagutiralu,

Kailasa bhuviyalle yaavagalu ||


ಭಕ್ತಿಗೀತೆ  


ಶೃಂಗಾರ ರೂಪನು ಷಣ್ಮುಖನು,

ಬಂಗಾರದೊಡಲಿನ ಕರುಣಾಂತ ರಂಗನು,

ದಂಡಾಯುಧವನ್ನು ಧರಿಸಿದ ಸ್ವಾಮಿಯೂ,

ಧರ್ಮವ ಕಾಯುವ ಕಂಕಣ ಬದ್ದನು ।।ಪ।।


ಪಾರ್ವತಿ ಪ್ರೇಮದಿ ಹರಸಿದ ಕುವರನೂ,

ಪರಶಿವ ಮೆಚ್ಚಿದ ಪಂಡಿತನೂ,

ಪಾಪವ ನೀಗುವ ಪರಮ ಪುನೀತನು,

ಪ್ರಣವ ರಹಸ್ಯವ ಬಲ್ಲವನೀತನು ।।೧।।


ಗಂಗೆಯೂ ಸಹಿಸದ ಬೆಂಕಿಯ ಒಡಲು,

ಅಂತರಂಗವಿದು ಪ್ರೇಮದ ಕಡಲು,

ಆನಂದ ಮೂರುತಿ ನಗುನಗುತಿರಲು,

ಕೈಲಾಸ ಭುವಿಯಲ್ಲೇ ಯಾವಾಗಲೂ ।।೨।।

             


Sundara Manohara Tampina Dhara (ಸುಂದರ ಮನೋಹರ ತಂಪಿನ ಧಾರಾ)

Bhaktigeete

Singer: Dr. Balamuralikrishna

Song link: Click Here


Sundara manohara, tampina dhara,

Sakala paapahara kumara dhara ||


Mangalamaya swara sangeeta dhara,

Kangala seleyuva cheluvina dhara,

Sambana kushtava neegida dhara,

Kukke subramanya kumara dhara ||


Raviya varadinda udisida dhara,

Vasukiya nova harisida dhara,

Ella narakagala kaleyuva dhara,

Kukke subramanya kumara dhara ||


Jnanavahiniyodane haridiha dhara,

Betaalana shapava kalediha dhara,

Bhaktara abheshtava siddipa teera,

Kukke subramanya kumara dhara ||


ಭಕ್ತಿಗೀತೆ 


ಸುಂದರ ಮನೋಹರ, ತಂಪಿನ ಧಾರಾ,

ಸಕಲ ಪಾಪಹರ ಕುಮಾರ ಧಾರಾ ।।ಪ।।


ಮಂಗಳಮಯ ಸ್ವರ ಸಂಗೀತ ಧಾರಾ,

ಕಂಗಳ ಸೆಳೆಯುವ ಚೆಲುವಿನ ಧಾರಾ,

ಸಾಂಬನ ಕುಷ್ಠವ ನೀಗಿದ ಧಾರಾ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೧।।


ರವಿಯ ವರದಿಂದ ಉದಿಸಿದ ಧಾರಾ,

ವಾಸುಕಿಯ ನೋವ ಹರಿಸಿದ ಧಾರಾ,

ಎಲ್ಲ ನರಕಗಳ ಕಳೆಯುವ ಧಾರಾ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೨।।


ಜ್ಞಾನ ವಾಹಿನಿಯೊಡನೆ ಹರಿದಿಹ ಧಾರಾ,

ಬೇತಾಳನ ಶಾಪವ ಕಳೆದಿಹ ಧಾರಾ,

ಭಕ್ತರ ಅಭೀಷ್ಟವ ಸಿದ್ದಿಪ ತೀರ,

ಕುಕ್ಕೆ ಸುಬ್ರಮಣ್ಯ ಕುಮಾರ ಧಾರಾ ।।೩।।

               


Illige Runavu Teeritu (ಇಲ್ಲಿಗೆ ಋಣವು ತೀರಿತು)

Movie: Mane Katti Nodu (1966)

Singer: P B Srinivas

Song link: Click Here


Illige runavu teeritu, neenu kattida ee maneya..

Mane katti nodu, maduve maadi nodu,

Kannadada gaade idu tiliyalaareya, mane katti nodu ||


Aasegalu nurentu, kaadiralu ee nantu,

Nambide nee geleyaranu, nambisi nadeda manujaranu ||


Ellihudu nina paalu, irulayte savi baalu,

Snehavadu mannaytu, hanave janagala manavaytu ||


Badukidaru baalalla, neeniralu mane illa,

Yaara mana yaara mane, masana aduve maneyalla ||


ಚಿತ್ರಗೀತೆ 


ಇಲ್ಲಿಗೆ ಋಣವು ತೀರಿತು, ನೀನು ಕಟ್ಟಿದ ಮನೆಯ ..

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು,

ಕನ್ನಡದ ಗಾದೆ ಇದು ತಿಳಿಯಲಾರೆಯ, ಮನೆ ಕಟ್ಟಿ ನೋಡು

 ।।ಪ।।


ಆಸೆಗಳು ನೂರೆಂಟು, ಕಾಡಿರಲು ಈ ನಂಟು,

ನಂಬಿದೆ ನೀ ಗೆಳೆಯರನು, ನಂಬಿಸಿ ನಡೆದ ಮನುಜರನು ।।೧।।


ಎಲ್ಲಿಹುದು ನಿನ ಪಾಲು, ಇರುಳಾಯ್ತೆ ಸವಿ ಬಾಳು,

ಸ್ನೇಹವದು ಮಣ್ಣಾಯ್ತು, ಹಣವೇ ಜನಗಳ ಮನವಾಯ್ತು ।।೨।।


ಬದುಕಿದರೂ ಬಾಳಲ್ಲ ನೀನಿರಲೂ ಮನೆ ಇಲ್ಲ,

ಯಾರ ಮನ ಯಾರ ಮನೆ, ಮಸಣ ಅದುವೆ ಮನೆಯಲ್ಲ ।।೩।।