Tuesday, November 11, 2025

Sharanu Gururaja (ಶರಣು ಗುರುರಾಜ)

Movie: Poornima (1969)

Singer: S Janaki

Song link: Click Here


Sharanu gururaja, sharanu raviteja,

Nambidavara bedikegala needuvantha yogiraja ||


Tunga nadiya teeravaasi, varamantralaya taapasi,

Brundavana jyothi roopa, neene namage daari deepa ||


Guruvu neene, tande neene, nanna kaayuva daiva neene,

Ninna namaamrutava japisi, chintegalanu mareve naanu ||


ಭಕ್ತಿಗೀತೆ 


ಶರಣು ಗುರುರಾಜ, ಶರಣು ರವಿತೇಜಾ,

ನಂಬಿದವರ ಬೇಡಿಕೆಗಳ ನೀಡುವಂಥ ಯೋಗಿರಾಜಾ ।।ಪ।।


ತುಂಗಾ ನದಿಯ ತೀರವಾಸಿ, ವರಮಂತ್ರಾಲಯ ತಾಪಸಿ,

ಬೃಂದಾವನ ಜ್ಯೋತಿರೂಪ, ನೀನೇ ನಮಗೆ ದಾರಿ ದೀಪ ।।೧।।


ಗುರುವು ನೀನೇ ತಂದೆ ನೀನೇ, ನನ್ನ ಕಾಯುವ ದೈವ ನೀನೇ,

ನಿನ್ನ ನಾಮಾಮೃತವ ಜಪಿಸಿ, ಚಿಂತೆಗಳನು ಮರೆವೆ ನಾನು 

।।೨।।

                                     

Thursday, November 6, 2025

Aacharavillada Naalige (ಆಚಾರವಿಲ್ಲದ ನಾಲಿಗೆ)

Movie: Upasane (1974)

Singer: S Janaki

Song link: 


Aacharavilllada naalige,

Ninna neecha buddiya bidu naalige,

Vicharavillade, parara dushisuvudake,

Chachikondiruvantha naalige ||


Chadi helalu beda naalige,

Ninna bedikombenu naalige, aa..aa,

Rudigodeya sri raamana naamava,

Paadutaliru kandya naalige ||


Hariya smarane maadu naalige,

Narahariya bhajisu kandya naalige, aa..aa,

Varada purandara vittalarayana,

Charana kamala neene naalige ||


ಚಿತ್ರಗೀತೆ 


ಆಚಾರವಿಲ್ಲದ ನಾಲಿಗೆ, 

ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ,

ವಿಚಾರವಿಲ್ಲದೆ ಪರರ ದೂಷಿಸುವುದಕೆ,

ಚಾಚಿಕೊಂಡಿರುವಂಥ ನಾಲಿಗೆ  ।।ಪ।।


ಚಾಡಿ ಹೇಳಲು ಬೇಡ ನಾಲಿಗೆ,

ನಿನ್ನ ಬೇಡಿಕೊಂಬೆನು ನಾಲಿಗೆ, ಆ..ಆ,

ರೂಡಿಗೊಡೆಯ ಶ್ರೀರಾಮನ ನಾಮವ,

ಪಾಡುತಲಿರು ಕಂಡ್ಯ ನಾಲಿಗೆ ।।೧।।


ಹರಿಯ ಸ್ಮರಣೆ ಮಾಡು ನಾಲಿಗೆ,

ನರಹರಿಯ ಭಜಿಸು ಕಂಡ್ಯ ನಾಲಿಗೆ, ಆ .. ಆ,

ವರದ ಪುರಂದರ ವಿಠಲರಾಯನ,

ಚರಣ ಕಮಲ ನೀನೇ ನಾಲಿಗೆ ।।೨।।

                       

Amma Endare Eno Harushavu (ಅಮ್ಮಾ ಎಂದರೆ ಏನೋ ಹರುಷವು)

Movie: Kalla Kulla (1975)

Singers: SPB, Krishnamurthy

Song link: Click Here


Amma.. amma.. ahaa.. ahaa...,

Amma endare, eno harushavu,

Namma paalige, avale daivavu,

Amma ennalu, ella maretevu,

Endu kaanada, sukhava kandevu ||


Nooru nadiyu seri, haridu bandarenu,

Janaru, adara rabhasa, kandu kadalu enuvarenu,

Koti devarella, kudi nintarenu,

Taayi haage preeti tori, saniha baruvarenu,

Endo kanasali, kanda nenapide,

Indu ninna, kaano aase, edeya tumbide ||


Nannee vayasu mareve, maguve aagi biduve,

Amma, ninna kanda, bande nodu ennuve,

Nannee tolinalli, avala balasi nalive,

Innu ninna, endu bittu, irenu ennuve,

Taayi madilali, naavu hoogalu,

Namma baalige, avale kangalu ||


ಚಿತ್ರಗೀತೆ 


ಅಮ್ಮಾ ಅಮ್ಮಾ ಆಹಾ ಆಹಾ.. !

ಅಮ್ಮಾ ಎಂದರೆ, ಏನೋ ಹರುಷವು,

ನಮ್ಮ ಪಾಲಿಗೆ, ಅವಳೇ ದೈವವು,

ಅಮ್ಮಾ ಎನ್ನಲು, ಎಲ್ಲಾ ಮರೆತೆವು,

ಎಂದೂ ಕಾಣದಾ, ಸುಖವಾ ಕಂಡೆವು ।।ಪ।।


ನೂರು ನದಿಯು ಸೇರಿ, ಹರಿದು ಬಂದರೇನು,

ಜನರು, ಅದರ ರಭಸ, ಕಂಡು ಕಡಲು ಎನುವರೇನು,

ಕೋಟಿ ದೇವರೆಲ್ಲ, ಕೂಡಿ ನಿಂತರೇನು,

ತಾಯಿ ಹಾಗೆ ಪ್ರೀತಿ ತೋರಿ, ಸನಿಹ ಬರುವರೇನು,

ಎಂದೋ ಕನಸಲಿ, ಕಂಡ ನೆನಪಿದೆ,

ಇಂದು ನಿನ್ನ, ಕಾಣೋ ಆಸೆ, ಎದೆಯಾ ತುಂಬಿದೆ ।।೧।।


ನನ್ನೀ ವಯಸು ಮರೆವೆ, ಮಗುವೇ ಆಗಿ ಬಿಡುವೆ,

ಅಮ್ಮಾ, ನಿನ್ನ ಕಂದ, ಬಂದೆ ನೋಡು ಎನ್ನುವೆ,

ನನ್ನೀ ತೋಳಿನಲ್ಲಿ, ಅವಳಾ ಬಳಸಿ ನಲಿವೆ,

ಇನ್ನು, ನಿನ್ನ, ಎಂದೂ ಬಿಟ್ಟು, ಇರೆನು ಎನ್ನುವೆ,

ತಾಯಿ ಮಡಿಲಲಿ, ನಾವು ಹೂಗಳು,

ನಮ್ಮ ಬಾಳಿಗೆ, ಅವಳೇ ಕಂಗಳು ।।೨।।

                        

Sunday, November 2, 2025

Eribanni Nodi (ಏರಿಬನ್ನಿ ನೋಡಿ)

Movie: Aliya Geleya (1971)

Singer: Pithapuram Nageshwara Rao


Ae Tanga...

Tangadava : Eribanni nodi, ee shahapasand gaadi,

Kaariginta joru kudure, nodi idara ranga,

Railiginta shoku bandi, namma maisuru tanga ||


Bhikshuka: Amma..taayi.. anna needi taayi,

Dudiyoke kasuvilla, duddu koduvore illilla,

Dukha kelorilla, nanna dukha kelorilla,

Dushta yamaneege dayeyilla, yamaneege dayeyilla ||


Taruni:Aa,,hhaa andavaada nota, idu, andavaada nota,

Elubu handara, kalege sundara,

Roopadalli ivane bhupa beku ee thara,

Lakshantaara roopayina kalegala paipoti,

Ee roopavannu torisi naa gelluvenu koti ||


Tangadava: Arere paisaa baroke isa,

Jadoo madtiya, nimdu jaadu madtiya,

Kailasakke hogontava, tamaase madtiya, neenu, tamase madtiya ||


Bhikshuka : Dudiyoke kasuvilla, duddu koduvore illilla,


Kavi: Annapoorneyu illi nelesiddalante,

Siridevi olidilli natyavaadidalante, 

Indu, nee huttida nadalli ninage hittilla,

Nettagidda deha sottagagihudalla ||


Tangadava: H  aa.. badaa badaa maatininda hotte tumbadu,

Ivana hasivu teeradu, ayya prana uliyadu,

Takdinaadin, din din, dina din, dinata ||

Jebinalli kaasillade joku etake?

Kavite kattaletake badaayi maadaletake ||


Kavi: Hottegillada pandita naanu, nannallillavu hana, mitra, nannallillavu hana,

Aadarindale nannee kavite, ee badavanige samarpana ||


Krantikaara: Badavariddede baragaala, mosagaarare uligaala, balu mosagaararige uligaala,

Gumpugulitana iruvudarinda, 

Hasivu kshamada kaligaala, idu, hasivu kshamada kaligaala,

Krantiya madee, nidhiya  kodisi, taruve sukhakaalaa kranti..kranti..kranti ||


Tangadava : Are chee! kranti kranti kranti endu,

Kiruchuvudekayya gumpu serisalekayya,

Janara nambisi, kaasanu serisi, oduvudekayya,

Kambi keeluvudekayya ||


Bhikshuka : Dayeyulladaatanu neene, Maruguva manujanu neene,

 Nanagaagi maruguva manujanu neene

Badavana kasta, badavange gottu,

Aadara toruva, annava nittu ||


Ellaru: Badavanenno jatiye tolagi hogali, tolagi hogali,

Baduki baalo daari onde dudimeyindali ||     


ಚಿತ್ರಗೀತೆ

 

ಏ ಟಾಂಗಾ .. 

ಟಾಂಗಾದವ :  ಏರಿಬನ್ನಿ ನೋಡಿ, ಈ ಷಾಹ್ ಪಸಂದು ಗಾಡಿ,

ಕಾರಿಗಿಂತ ಜೋರು ಕುದುರೆ, ನೋಡಿ ಇದರ ರಂಗ,

ರೈಲಿಗಿಂತ, ಷೋಕು ಬಂಡಿ, ನಮ್ಮ ಮೈಸೂರು ಟಾಂಗಾ ।।


ಭಿಕ್ಷುಕ : ಅಮ್ಮಾ .. ತಾಯಿ .. ಅನ್ನ ನೀಡಿ ತಾಯಿ, 

ದುಡಿಯೋಕೆ ಕಸುವಿಲ್ಲ, ದುಡ್ಡು ಕೊಡುವೋರೆ ಇಲ್ಲಿಲ್ಲ,

ದುಃಖ ಕೇಳೋರಿಲ್ಲ, ನನ್ನ ದುಃಖ ಕೇಳೋರಿಲ್ಲ,

ದುಷ್ಟ ಯಮನೀಗೆ ದಯೆಯಿಲ್ಲಾ, ಯಮನೀಗೆ ದಯೆಯಿಲ್ಲಾ ।। 


ತರುಣಿ : ಆ .. ಹಾ.. ಅಂದವಾದ ನೋಟ, ಇದು 

ಅಂದವಾದ ನೋಟ   

ಎಲುಬು ಹಂದರ, ಕಲೆಗೆ ಸುಂದರ, 

ರೂಪದಲ್ಲಿ ಇವನೆ ಭೂಪ, ಬೇಕು ಈ ಥರಾ, 

ಲಕ್ಷಾಂತರ ರೂಪಾಯಿನ, ಕಲೆಗಳ ಪೈಪೋಟಿ,

ಈ ರೂಪವನ್ನು ತೋರಿಸಿ, ನಾ ಗೆಲ್ಲುವೆನು ಕೋಟಿ ।।


ಟಾಂಗಾದವ : ಅರೆರೆ ಪೈಸಾ ಬರೋಕೆ ಐಸಾ,

ಜಾದೂ ಮಾಡ್ತಿಯಾ, ನಿಮ್ದು ಜಾದೂ ಮಾಡ್ತಿಯಾ,

ಕೈಲಾಸಕ್ಕೆ ಹೋಗೋನ್ತಾವ ತಮಾಸೆ ಮಾಡ್ತಿಯಾ, ನೀನು ತಮಾಸೆ ಮಾಡ್ತಿಯಾ।।


ಭಿಕ್ಷುಕ : ದುಡಿಯೋಕೆ ಕಸುವಿಲ್ಲ, ದುಡ್ಡು ಕೊಡುವೋರೆ ಇಲ್ಲಿಲ್ಲ,


ಕವಿ : ಅನ್ನಪೂರ್ಣೆಯು ಇಲ್ಲಿ ನೆಲೆಸಿದ್ದಳಂತೇ,

ಸಿರಿದೇವಿ ಒಲಿದಿಲ್ಲಿ, ನಾಟ್ಯವಾಡಿದಳಂತೇ.. 

ಇಂದು, ನೀ ಹುಟ್ಟಿದ ನಾಡಲ್ಲಿ ನಿನಗೇ ಹಿಟ್ಟಿಲ್ಲ,

ನೆಟ್ಟಗಿದ್ದ ದೇಹ ಸೊಟ್ಟಗಾಗಿಹುದಲ್ಲ ।।


ಟಾಂಗಾದವ : ಹಾ .. ಬಡಾ ಬಡಾ ಮಾತಿನಿಂದ ಹೊಟ್ಟೆ ತುಂಬದು,

ಇವನಾ ಹಸಿವು ತೀರದು, ಅಯ್ಯಾ ಪ್ರಾಣ ಉಳಿಯದು,

ತಕ್ ದಿನಾದಿನ್, ದಿನಾದಿನ್, ದಿನಾದಿನ್, ದಿನ್ ತಾ ,

ಜೇಬಿನಲ್ಲಿ ಕಾಸಿಲ್ಲದೆ ಜೋಕು ಏತಕೆ ?

ಕವಿತೆ ಕಟ್ಟಲೇತಕೆ ಬಡಾಯಿ ಮಾಡಲೇತಕೆ ।।


ಕವಿ : ಹೊಟ್ಟೆಗಿಲ್ಲದಾ ಪಂಡಿತ ನಾನು, ನನ್ನಲ್ಲಿಲ್ಲವು ಹಣ ಮಿತ್ರ, ನನ್ನಲ್ಲಿಲ್ಲವು ಹಣ,

ಆದ್ದರಿಂದಲೇ ನನ್ನೀ ಕವಿತೆ ಈ ಬಡವನಿಗೆ ಸಮರ್ಪಣ ।।


ಕ್ರಾಂತಿಕಾರ : ಬಡವರಿದ್ದೆಡೆ ಬರಗಾಲ, ಮೋಸಗಾರಗೇ ಉಳಿಗಾಲ, ಬಲು ಮೋಸಗಾರಗೇ ಉಳಿಗಾಲ,

ಗುಂಪು ಗೂಳಿತನ ಇರುವುದರಿಂದ, ಹಸಿವು ಕ್ಷಾಮದ ಕಲಿಗಾಲ, ಇದು, ಹಸಿವು ಕ್ಷಾಮದ ಕಲಿಗಾಲ,

ಕ್ರಾಂತಿಯ ಮಾಡೀ, ನಿಧಿಯ ಕೂಡಿಸೀ, ತರುವೆ ಸುಖಕಲಾ,

ಕ್ರಾಂತಿ.. ಕ್ರಾಂತಿ.. ಕ್ರಾಂತಿ ।।


ಟಾಂಗಾದವ : ಅರೆ ಛೀ ! ಕ್ರಾಂತಿ.. ಕ್ರಾಂತಿ.. ಕ್ರಾಂತಿ ಎಂದು,

ಕಿರುಚುವುದೇಕಯ್ಯ, ಗುಂಪು ಸೇರಿಸಲೇಕಯ್ಯಾ,

ಜನರಾ ನಂಬಿಸಿ, ಕಾಸನು ಸೇರಿಸಿ, ಓಡುವುದೇಕಯ್ಯಾ,

ಕಂಬಿ ಕೀಳುವುದೇಕಯ್ಯಾ ।।


 ಭಿಕ್ಷುಕ : ದಯೆಯುಳ್ಳದಾತನು ನೀನೆ, ಮರುಗುವ ಮನುಜನು ನೀನೆ, 

ನನಗಾಗಿ ಮರುಗುವ ಮನುಜನು ನೀನೆ,

ಮರುಗುವ ಮನುಜನು ನೀನೆ. ಬಡವನ ಕಷ್ಟ, ಬಡವ೦ಗೆ ಗೊತ್ತು,

ಆದರೆ ತೋರುವ, ಅನ್ನವ ನಿತ್ತು ।।


ಎಲ್ಲರೂ : ಬಡವನೆನ್ನೋ ಜಾತಿಯೆ, ತೊಲಗಿ ಹೋಗಲಿ, ತೊಲಗಿ ಹೋಗಲಿ,

ಬದುಕಿ ಬಾಳೋ ದಾರಿ ಒಂದೇ, ದುಡಿಮೆಯಿಂದಲಿ ।।

                                                                                                     

Thursday, October 30, 2025

Manninda kaaya Manninda (ಮಣ್ಣಿಂದ ಕಾಯ ಮಣ್ಣಿಂದ)

Movie: Aliya Geleya (1971)

Singer: P B Srinivas

Song link: Click Here


Manninda kaaya, manninda,

Manna bittavarig,e aadharave illa,

Annagalira, neevu kelirayya ||


Anna udaka vastra eevude mannu,

Paavana gangeya tadiye mannu,

Unnatavaada parvatave mannu,

Kannu moorullana kailaasave mannu ||


Bhatta bangaarava belevude mannu,

Sattavaranu hooli suduvude mannu,

Uttamavaada vaikunthave mannu,

Purandara vittalana purave mannu ||


ಚಿತ್ರಗೀತೆ 


ಮಣ್ಣಿಂದ ಕಾಯ, ಮಣ್ಣಿಂದ,

ಮಣ್ಣ ಬಿಟ್ಟವರಿಗೆ, ಆಧಾರವೆ ಇಲ್ಲ,

ಅಣ್ಣಗಳಿರ, ನೀವು ಕೇಳಿರಯ್ಯಾ ।।ಪ।।


ಅನ್ನ ಉದಕ ವಸ್ತ್ರ ಈವುದೆ ಮಣ್ಣು,

ಪಾವನ ಗಂಗೆಯ ತಡಿಯೆ ಮಣ್ಣು,

ಉನ್ನತವಾದ ಪರ್ವತವೆ ಮಣ್ಣು,

ಕಣ್ಣು ಮೂರುಳ್ಳನ ಕೈಲಾಸವೆ ಮಣ್ಣು ।।೧।।


ಭತ್ತ ಬಂಗಾರವ ಬೆಳೆವುದೆ ಮಣ್ಣು,

ಸತ್ತವರನು ಹೂಳಿ ಸುಡುವುದೆ ಮಣ್ಣು,

ಉತ್ತಮವಾದ ವೈಕುಂಠವೆ ಮಣ್ಣು,

ಪುರಂದರ ವಿಠಲನ ಪುರವೆ ಮಣ್ಣು ।।೨।।

                 

Neenomme Maatade Indu (ನೀನೊಮ್ಮೆ ಮಾತಾಡೆ ಇಂದು)

Movie: Aliya Geleya (1971)

Singer: P B Srinivas

Song link: Click Here


Neenomme maatade indu, neenomme maatade,

Cheluve itta nee.. node ||


Minchante mruduvaagi nagalu,

Munnuru minchu nannallu, aa aa

Ninna dhaniye impaada veene,

Ninnantha sobagellu naa kane ||


Nintaaga belura shileyante,

Nadevaaga hoovina terante, aa aa

Nanna manade hego ninte,

Dinavella ninnade chinte ||


ಚಿತ್ರಗೀತೆ 


ನೀನೊಮ್ಮೆ ಮಾತಾಡೆ  ಇಂದು, ನೀನೊಮ್ಮೆ ಮಾತಾಡೆ,

ಚೆಲುವೆ ಇತ್ತ ನೀ ..ನೋಡೆ ।।ಪ।।


ಮಿಂಚಂತೆ ಮೃದುವಾಗಿ ನಗಲೂ,

ಮುನ್ನೂರು ಮಿಂಚು ನನ್ನಲ್ಲು ಆ ಆ,

ನಿನ್ನ ಧನಿಯೆ ಇಂಪಾದ ವೀಣೆ,

ನಿನಂಥ ಸೊಬಗೆಲ್ಲು ನಾ ಕಾಣೆ ।।೧।।


ನಿಂತಾಗ ಬೇಲೂರ ಶಿಲೆಯಂತೆ,

ನಡೆವಾಗ ಹೂವಿನ ತೇರಂತೆ ಆ ಆ,

ನನ್ನ ಮಾಣದೆ ಹೇಗೋ ನಿಂತೆ,

ದಿನವೆಲ್ಲ ನಿನ್ನದೆ ಚಿಂತೆ ।।೨।।

                

Nagutide Dhare Indu (ನಗುತಿದೆ ಧರೆ ಇಂದು)

Movie: Aliya Geleya (1971)

Singer: P B Srinivas

Song link: Click Here


Nagutide dhare indu, muttina maleyalli,

Telona naavindu harushada holeyalli ||


Taavare hoovina kangalali, tumbida bayakeya tampirali,

Aadida maatu nenapirali, naaleya namma baalinali,

Hosa hosa anubhava dorakali, hosa hosa kaviteya bareyali ||


Siritana badatana enirali, nammaya manasu ondirali,

Ambali ganjiye aagirali, adarale sukhavu namagirali,

Kila kila nageyu hariyalee, pulakita manavu naliyali ||


ಚಿತ್ರಗೀತೆ 


ನಗುತಿದೆ ಧರೆ ಇಂದು ಮುತ್ತಿನ ಮಳೆಯಲ್ಲೀ,

ತೇಲೋಣ ನಾವಿಂದು ಹರುಷದ ಹೊಳೆಯಲ್ಲೀ ।।ಪ।।


ತಾವರೆ ಹೂವಿನ ಕಂಗಳಲಿ, ತುಂಬಿದ ಬಯಕೆಯ ತಂಪಿರಲಿ,

ಆಡಿದ ಮಾತು ನೆನಪಿರಲಿ, ನಾಳೆಯ ನಮ್ಮ ಬಾಳಿನಲಿ,

ಹೊಸ ಹೊಸ ಅನುಭವ ದೊರಕಲೀ, ಹೊಸ ಹೊಸ ಕವಿತೆಯ ಬರೆಯಲೀ ।।೧।।


ಸಿರಿತನ ಬಡತನ ಏನಿರಲಿ, ನಮ್ಮಯ ಮನಸು ಒಂದಿರಲಿ,

ಅಂಬಲಿ ಗಂಜಿಯೆ ಆಗಿರಲಿ, ಅದರಲೆ ಸುಖವು ನಮಗಿರಲಿ,

ಕಿಲ ಕಿಲ ನಗೆಯು ಹರಿಯಲೀ, ಪುಲಕಿತ ಮನವು ನಲಿಯಲೀ 

।।೨।।