Wednesday, June 25, 2025

Kalli Haage Nota (ಕಳ್ಳೀ ಹಾಗೆ ನೋಟ)

Movie: Ranagamahal Rahasya (1970)

Singer: SPB

Song link: Click Here


Kalli haage nota, malli haage aata,

Ee kannge eno kaata, ninn ee mai maata ||


Ninagaagi ododi na bandene, olavinda kirukaanike tandene,

Nee bali bandare ille na koduvene, onde ondu saari,

Baare moha tori, hai hai hai hai hai,

Neenage nudive aaga, bhale brahmachari ||


Arerere.. vayassada gandemba chinte bidu, mai hannage ruchi tumba nenapallidu,

Ee muniseke baa ninna manassalidu, nota ninnallittu, ninna doora bittu,

Mai hege nadugideyamma, nee nodu baa muttu ||


ಚಿತ್ರಗೀತೆ 


ಕಳ್ಳೀ ಹಾಗೆ ನೋಟ, ಮಳ್ಳೀ ಹಾಗೆ ಆಟ,

ಈ ಕಣ್ಣ್ ಗೆ ಏನೋ ಕಾಟ, ನಿನ್ನೀ ಮೈ ಮಾಟ ।।ಪ।।


ನಿನಗಾಗಿ ಓಡೋಡಿ ನಾ ಬಂದೆನೆ, ಒಲವಿಂದ ಕಿರುಕಾಣಿಕೆ ತಂದೆನೆ,

ನೀ ಬಳಿ ಬಂದರೆ ಇಲ್ಲೇ ನಾ ಕೊಡುವೆನೆ, ಒಂದೇ ಒಂದು ಸಾರಿ,

ಬಾರೇ ಮೋಹ ತೋರಿ, ಹಾಯ್ ಹಾಯ್ ಹಾಯ್ ಹಾಯ್  ಹಾಯ್,

ನೀನಾಗೆ ನುಡಿವೆ ಆಗ, ಭಲೇ ಬ್ರಹ್ಮಚಾರಿ ।।೧।।


ಅರೆರೆರೆರೆ ವಯಸ್ಸಾದ ಗಂಡೆ೦ಬ ಚಿಂತೆ ಬಿಡು, ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು, 

ಈ ಮುನಿಸೇಕೆ ಬಾ ನಿನ್ನ ಮನಸ್ಸಲಿಡು, ನೋಟಾ ನಿನ್ನಲ್ಲಿಟ್ಟು, ನಿನ್ನಾ ದೂರ ಬಿಟ್ಟು,

ಮೈ ಹೇಗೆ ನಡುಗಿದೆಯಮ್ಮಾ, ನೀ ನೋಡು ಬಾ ಮುಟ್ಟು  ।।೨।।

                               

Olavina Taruniya (ಒಲವಿನ ತರುಣಿಯ)

Movie: Rangamahal Rahasya (1970)

Singer: S Janaki

Song link: Click Here


Olavina taruniya, manavi nee keleya,

Sudheya bedembeya, i love you, i love you ||


Minchondu lateyaagi hoo needide, adaranda makaranda ninagaagide,

O priyatama, madhu sambrama, sarasa bedembeya,

I love you, i love you ||


Aananda nandanada hoo baana, ede taake jhallemba hita kampana,

Hosa youvana rasa jeevana milana bedembeya,

I love you, i love you ||


ಚಿತ್ರಗೀತೆ 


ಒಲವಿನ ತರುಣಿಯ, ಮನವ ನೀ ಕೇಳೆಯ,

ಸುಧೆಯ ಬೇಡೆ೦ಬೆಯಾ, ಐ ಲವ್ ಯು,  ಐ ಲವ್ ಯು ।।ಪ।।


ಮಿಂಚೊ೦ದು ಲತೆಯಾಗಿ ಹೂ ನೀಡಿದೆ, ಅದರಂದ ಮಕರಂದ ನಿನಗಾಗಿದೆ,

ಓ ಪ್ರಿಯತಮಾ, ಮಧು ಸಂಭ್ರಮಾ, ಸರಸ ಬೇಡೆ೦ಬೆಯಾ,

ಐ ಲವ್ ಯು,  ಐ ಲವ್ ಯು ।।೧।।


ಆನಂದ ನಂದನದ ಹೂ ಬಾಣ, ಎದೆ ತಾಕೆ ಝಲ್ಲೆಂಬ ಹಿತ ಕಂಪನ,

ಹೊಸ ಯೌವ್ವನ ರಸ ಜೀವನ, ಮಿಲನ ಬೇಡೆ೦ಬೆಯಾ,

 ಐ ಲವ್ ಯು,  ಐ ಲವ್ ಯು ।।೨।।
                                  
                           

Sunday, June 22, 2025

Swami Sridhara (ಸ್ವಾಮಿ ಶ್ರೀಧರ)

Bajane

Song link: Click Here


Swami sridhara swami he krupaakara,

Swami sadguru namo namo yateevara,

Sridhara swaroopa guru datta munivara,

He dayanidhe namo namo digambara ||


Dhareyannudharisalu bharadi bandu nindiha,

Varadapuradi aashramadali bandu nelesiha,

Niruta bhakta janara madhya kangolisuva,

He dayanidhe namo namo digambara ||


Bhavada chinte harisuvantha ee aashrama,

Bhayavu illa bedidavarigillavu shrama,

Tavakadinda bajakaruddhara maadua,

He dayanidhe namo namo digambara ||


Satya dharmada jyotiyanu belaguta,

Matte matte bhaktareccharavanu golisuva,

Bhakta janake swanandambrutavanu needuva,

He dayanidhe namo namo digambara ||


Nitya bhajane gaana seveyannu padeyuta,

Aatmajnana marga bhakta janake needuva,

Uttamottama guruve sarvottama,

He dayanidhe namo namo digambara ||


Narana roopava dharisi bhuvige bandihe,

Parama purusha neene satya jnana sagara,

Sharanu banda bhaktara ajnana harisuva,

He dayanidhe namo namo digambara ||


Kasta harisi daridryavannu tolagisi,

Shishtra abhistavannu pooraisuva,

Shresta murthy neene rakshisayya guruvara,

He dayanidhe namo namo digambara ||


Veda vedanta advaita sagara,

Veda vandhyane mangalesha guruvara,

Dayadi rakshisayya guru datta munivara,

He dayanidhe namo namo digambara ||

                    

ಭಜನೆ 


ಸ್ವಾಮಿ ಶ್ರೀಧರ ಸ್ವಾಮಿ ಹೇ ಕೃಪಾಕರ 

ಸ್ವಾಮಿ ಸದ್ಗುರು ನಮೋ ನಮೋ ಯತೀವರ 

ಶ್ರೀಧರ ಸ್ವರೂಪ ಗುರು ದತ್ತ ಮುನಿವರ 

ಹೇ ದಯಾನಿಧೇ  ನಮೋ ನಮೋ ದಿಗಂಬರ ।।ಪ।।


ಧರೆಯನುದ್ಧರಿಸಲು ಭರದಿ ಬಂದು ನಿಂದಿಹ 

ವರದಪುರದಿ ಆಶ್ರಮದಲ್ಲಿ ಬಂದು ನೆಲೆಸಿಹ 

ನಿರುತ ಭಕ್ತ ಜನರ ಮಧ್ಯೆ ಕಂಗೊಳಿಸುವಾ

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ಭವದ ಚಿಂತೆ ಹರಿಸುವಂತ ಈ ಆಶ್ರಮ 

ಭಯವು ಇಲ್ಲ ಬೇಡಿವರಿಗಿಲ್ಲವು ಶ್ರಮ 

ತವಕದಿಂದ ಭಜಕರುದ್ದಾರ ಮಾಡುವ 

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ಸತ್ಯ ಧರ್ಮದಾ ಜ್ಯೋತಿಯನು ಬೆಳಗುತಾ,

ಮತ್ತೆ ಮತ್ತೆ ಭಕ್ತರೆಚ್ಚರವನು  ಗೊಳಿಸುವ,

ಭಕ್ತಜನಕೆ ಸ್ವಾನಂದಾ೦ಮೃತ ನೀಡುವ,

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ನಿತ್ಯ ಭಜನೆ ಗಾನ ಸೇವೆಯನ್ನು ಪಡೆಯುತಾ 

ಆತ್ಮಜ್ಞಾನ ಮಾರ್ಗ ಭಕ್ತ ಜನಕೆ ನೀಡುವ 

ಉತ್ತಮೋತ್ತಮ ಗುರುವೆ ಸರ್ವೋತ್ತಮ 

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ನರನ ರೂಪವಾ ಧರಿಸಿ ಭುವಿಗೆ ಬಂದಿಹೆ,

ಪರಮ ಪುರುಷ ನೀನೆ ಸತ್ಯ ಜ್ಞಾನ ಸಾಗರ,

ಶರಣು ಬಂದ ಭಕ್ತರ ಅಜ್ಞಾನ ಹರಿಸುವ,

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ಕಷ್ಟ ಹರಿಸಿ ದಾರಿದ್ರ್ಯವನ್ನು ತೊಲಗಿಸಿ,

ಶಿಷ್ಟರ ಅಭಿಷ್ಟವನ್ನು ಪೂರೈಸುವಾ,

ಶ್ರೇಷ್ಠ ಮೂರ್ತಿ ನೀನೆ ರಕ್ಷಿಸಯ್ಯಾ ಗುರುವರ,

ಹೇ ದಯಾನಿಧೇ ನಮೋ ನಮೋ ದಿಗಂಬರ ।।


ವೇದ ವೇದಾಂತ ಅದ್ವೈತ ಸಾಗರ 

ವೇದ ವಂದ್ಯನೇ ಮಂಗಳೇಶ ಗುರುವರ 

ದಯದಿ ರಕ್ಷಿಸಯ್ಯ ಗುರು ದತ್ತ ಮುನಿವರಾ 

ಹೇ ದಯಾನಿಧೇ ನಮೋ ನಮೋ ದಿಗಂಬರ ।।

                               ಶ್ರೀ 

                         

Manninalli Ambike Maadida kalakruti (ಮಣ್ಣಿನಲ್ಲಿ ಅಂಬಿಕೆ ಮಾಡಿದ ಕಲಾಕೃತಿ)

Bhaktigeete

Singer: Dr. Rajkumar

Song link: Click Here


Manninalli ambike maadida kalakruti,

Jeeva taledu amma enalu nakkala parvati,

Needidalu aakrutige devi mahashakti,

Aa roopadallittu deviya parinati ||


Snana gruha kaadanu aa putta balaka,

Allige bandanu mooloka nayaka,

Shivananne tadedanu aa dwarapalaka,

Kupita shivanu aadanu shishuvina antaka ||


Shiveyu sishuvigaagi surisidaaga kambani,

Shivanu marugi needidanu santaiso mardani,

Gajamukhava jodisida gajacharmambaradharanu,

Shivaganake pradhaniyaada ambika tanayanu ||


Devagana sallisitu pushpa maalike,

Gandharvaru haadidaru raaga maalike,

Ivana saati daivavilla loka lokake,

Ee maha ganapanige illa holike,

Gananatha jai jai gananatha ||


ಭಕ್ತಿಗೀತೆ 


ಮಣ್ಣಿನಲ್ಲಿ ಅಂಬಿಕೆ ಮಾಡಿದ ಕಲಾಕೃತಿ,

ಜೀವ ತಳೆದು ಅಮ್ಮಾ ಎನಲು ನಕ್ಕಳಾ ಪಾರ್ವತಿ,

ನೀಡಿದಳು ಆಕೃತಿಗೆ ದೇವಿ ಮಹಾಶಕ್ತಿ,

ಆ ರೂಪದಲ್ಲಿತ್ತು ದೇವಿಯಾ ಪರಿಣತಿ ।।ಪ।।


ಸ್ನಾನ ಗೃಹ ಕಾದನು ಆ ಪುಟ್ಟ ಬಾಲಕ,

ಅಲ್ಲಿಗೆ ಬಂದನು ಮೂಲೋಕ ನಾಯಕ,

ಶಿವನನ್ನೇ ತಡೆದನು ಆ ದ್ವಾರಪಾಲಕ,

ಕುಪಿತ ಶಿವನು ಆದನು ಶಿಶುವಿನ ಅಂತಕ ।।೧।।


ಶಿವೆಯು ಶಿಶುವಿಗಾಗಿ ಸುರಿಸಿದಾಗ ಕಂಬನಿ,

ಶಿವನು ಮರುಗಿ ನೀಡಿದನು ಸಂತೈಸೋ ಮಾರ್ದನಿ,

ಗಜಮುಖವ ಜೋಡಿಸಿದ ಗಜಚರ್ಮಾ೦ಬರಧರನು,

ಶಿವಗಣಕೆ ಪ್ರಧಾನಿಯಾದ ಅಂಬಿಕಾ ತನಯನು ।।೨।।


ದೇವಗಣ ಸಲ್ಲಿಸಿತು ಪುಷ್ಪ ಮಾಲಿಕೆ,

ಗಂಧರ್ವರು ಹಾಡಿದರು ರಾಗ ಮಾಲಿಕೆ,

ಇವನ ಸಾಟಿ ದೈವವಿಲ್ಲ ಲೋಕ ಲೋಕಕೆ,

ಈ ಮಹಾ ಗಣಪನಿಗೆ ಇಲ್ಲ ಹೋಲಿಕೆ,

ಗಣನಾಥ ಜೈ ಜೈ ಗಣನಾಥ ।।೩।। 

               

Thursday, June 19, 2025

Tereyalo Kannu Nodelo Innu (ತೆರೆಯಲೊ ಕಣ್ಣು ನೋಡೆಲೊ ಇನ್ನೂ)

Movie: Bhale Basava (1969)

Singer: L R Eshwari

Song link: Click Here


Tereyalo kannu nodelo innu, hareyada hennu maagada hannu,

Maaralu bandihe kaananna, kolluvaniddare baaranna ||


Malleege maiya nodu, sampige mooga nodu,

Daalimbe tutiya sanne ninnanne karedide nodu,

Kuniyuva hejje gejje ghallu, ninagende naatande geneya ||


Hanniginta ootaa illa, henniginta loka illa,

Hareyakke samane illa, aanandakke eneye illa,

Ee kannu hennu hannu ninde, Bachkollo dochkollo geneya ||


ಚಿತ್ರಗೀತೆ 


ತೆರೆಯಲೊ ಕಣ್ಣು ನೋಡೆಲೊ ಇನ್ನೂ, ಹರೆಯದ ಹೆಣ್ಣು ಮಾಗದ ಹಣ್ಣು,

ಮಾರಲು ಬಂದಿಹೆ ಕಾಣಣ್ಣಾ, ಕೊಳ್ಳುವನಿದ್ದರೆ ಬಾರಣ್ಣಾ ।।ಪ।।


ಮಲ್ಲೀಗೆ ಮೈಯಾ ನೋಡೂ, ಸಂಪೀಗೆ ಮೂಗ ನೋಡೂ,

ದಾಳಿಂಬೆ ತುಟಿಯಾ ಸನ್ನೇ, ನಿನ್ನನ್ನೇ ಕರೆದಿದೆ ನೋಡೂ,

ಕುಣಿಯುವ ಹೆಜ್ಜೆ ಗೆಜ್ಜೆ ಘಲ್ಲೂ, ನಿನಗೆಂದೇ ನಾತಂದೆ ಗೆಣೆಯಾ 

।।೧।।


ಹಣ್ಣಿಗಿಂತ ಊಟ ಇಲ್ಲಾ, ಹೆಣ್ಣಿಗಿಂತ ಲೋಕ ಇಲ್ಲಾ,

ಹರೆಯಕ್ಕೆ ಸಮನೇ ಇಲ್ಲಾ, ಆನಂದಕ್ಕೆ ಎಣೆಯೇ ಇಲ್ಲಾ,

ಈ ಕಣ್ಣು ಹೆಣ್ಣು ಹಣ್ಣು ನಿಂದೇ, ಬಾಚ್ಕೊಳ್ಳೋ ದೋಚ್ಕೊಳ್ಳೋ ಗೆಣೆಯಾ ।।೨।। 

         

Kandya Kandyeno Cheluva (ಕಂಡ್ಯಾ ಕಂಡ್ಯೇನೋ ಚೆಲುವಾ)

Movie: Bhale Basava (1969)

Singer: S Janaki

Song link: Click Here


Kandya kandyeno cheluva, nan jaanatanava,

Kelo kelelo basava ||


Obbana kattidde obbana bittidde,

Obbana karakondu olaghode cheluva!

Yavonna kattidde? yavonna bittidde?

Yavonna karakondu olaghode cheluva?

Hasuvanna kattidde, karuvanna bittidde,

Haalanna karakondu olaghode cheluva ||


Obbana haasidde, obbana hoddidde,

Obbana elakondu malagidde cheluva!

Yavonna haasidde? yavonna hoddidde?

Yavonna elakondu malagidde cheluve?

Haasige haasidde, kamliya hoddidde,

Taledimbu elakondu malagidde cheluva ||


Obbange kalkotte, obbange kaikotte,

Obbange seereyannu kottu bitte cheluva!

Yaarige kalkotte? yaarige kai kotte?

Yaarige seereyanna kottu bitte cheluve?

Kanchugarge kalkotte, balegarge kaikotte,

Madivalge seereyanne kottubitte cheluva ||


ಚಿತ್ರಗೀತೆ 


ಕಂಡ್ಯಾ ಕಂಡ್ಯೇನೋ ಚೆಲುವಾ, ನನ್ ಜಾಣತನವಾ,

ಕೇಳೋ ಕೇಳೇಲೋ, ಬಸವಾ ।।ಪ।।


ಒಬ್ಬಾನ ಕಟ್ಟಿದ್ದೆ, ಒಬ್ಬಾನ ಬಿಟ್ಟಿದ್ದೆ,

ಒಬ್ಬಾನ ಕರಕೊಂಡು ಒಳಗ್ಹೋದೆ  ಚೆಲುವಾ !

ಯಾವೋನ್ನ ಕಟ್ಟಿದ್ದೆ ? ಯಾವೋನ್ನ ಬಿಟ್ಟಿದ್ದೆ ?

ಯಾವೋನ್ನ ಕರಕೊಂಡು  ಒಳಗ್ಹೋದೆ ಚೆಲುವೇ ?

ಹಸುವನ್ನ ಕಟ್ಟಿದ್ದೆ, ಕರುವನ್ನ ಬಿಟ್ಟಿದ್ದೆ,

ಹಾಲನ್ನ ಕರಕೊಂಡು ಒಳಗ್ಹೋ ದೆ ಚೆಲುವಾ ।।೧।।


ಒಬ್ಬಾನ ಹಾಸಿದ್ದೆ, ಒಬ್ಬಾನ ಹೊದ್ದಿದ್ದೆ,

ಒಬ್ಬಾನ ಎಳಕೊಂಡು ಮಲಗಿದ್ದೆ ಚೆಲುವಾ!

ಯಾವೋನ್ನ ಹಾಸಿದ್ದೆ ? ಯಾವೋನ್ನ ಹೊದ್ದಿದ್ದೆ ?

ಯಾವೋನ್ನ ಎಳಕೊಂಡು ಮಲಗಿದ್ದೆ ಚೆಲುವೇ ?

ಹಾಸಿಗೆ ಹಾಸಿದ್ದೆ, ಕಂಬ್ಳೀಯ ಹೊದ್ದಿದ್ದೆ,

ತಲೆದಿಂಬು ಎಳಕೊಂಡು ಮಲಗಿದ್ದೆ ಚೆಲುವಾ ।।೨।।


ಒಬ್ಬಂಗೆ ಕಾಲ್ಕೊಟ್ಟೆ , ಒಬ್ಬಂಗೆ ಕೈಕೊಟ್ಟೆ,

ಒಬ್ಬಂಗೆ ಸೀರೆಯನ್ನು ಕೊಟ್ಟು ಬಿಟ್ಟೆ ಚೆಲುವಾ!

ಯಾರಿಗೆ ಕಾಲ್ಕೊಟ್ಟೆ ? ಯಾರಿಗೆ  ಕೈಕೊಟ್ಟೆ?

ಯಾರಿಗೆ ಸೀರೆಯನ್ನ ಕೊಟ್ಟು ಬಿಟ್ಟೆ ಚೆಲುವೇ ?

ಕಂಚುಗಾರ್ಗೆ  ಕಾಲ್ಕೊಟ್ಟೆ, ಬಳೆಗಾರ್ಗೆ ಕೈಕೊಟ್ಟೆ,

ಮಡಿವಾಳ್ಗೆ ಸೀರೆಯನ್ನೆ ಕೊಟ್ಟು ಬಿಟ್ಟೆ ಚೆಲುವಾ ।।೩।।

                           

Polish Polish Boot Polish (ಪಾಲಿಷ್ ಪಾಲಿಷ್ ಬೂಟ್ ಪಾಲಿಷ್)

Movie: Takka Bitre Sikka (1970)

Singers: L R Anjali, B K Sumitra


Polish polish boot polish banni banni!


Beleda hennu gandu tiliyabeku eradu,

Bootigondu polish, bodygondu malish!


Nimma nimma khayish nodi maaduve polish,

Hennu gandu emba jati jutigilla,

Amma, avva, ayya, appa ellarigonde polish ||


Hiriya kiriyaremba bhedavembudilla,

Sarige peta keshto bariya talegu ashte,

Lawyer, nayar, mayergella pakka shining, polish ||


Kalu hidiva karma kottanendu brahma,

Nachabeda tamma dudimeyonde dharma,

Melu, keelu, ella sullu ! olle maate polish ||


ಚಿತ್ರಗೀತೆ 


ಪಾಲಿಷ್ ಪಾಲಿಷ್ ಬೂಟ್ ಪಾಲಿಷ್ ಬನ್ನಿ ಬನ್ನಿ !


ಬೆಳೆದ ಹೆಣ್ಣು ಗಂಡು ತಿಳಿಯಬೇಕು ಎರಡು,

ಬೂಟಿಗೊಂದು ಪಾಲಿಷ್, ಬಾಡಿಗೊಂದು ಮಾಲಿಷ್! 


ನಿಮ್ಮ ನಿಮ್ಮ ಖಾಯಿಷ್ ನೋಡಿ ಮಾಡುವೆ ಪಾಲಿಷ್,

ಹೆಣ್ಣು ಗಂಡು ಎಂಬ ಜಾತಿ ಜೂತಿಗಿಲ್ಲ,

ಅಮ್ಮ, ಅವ್ವ, ಅಯ್ಯ, ಅಪ್ಪ  ಎಲ್ಲರಿಗೊಂದೇ ಪಾಲಿಷ್ ।।೧।।


ಹಿರಿಯ ಕಿರಿಯರೆಂಬ ಬೇಧವೆಂಬುದಿಲ್ಲ,

ಸರಿಗೆ ಪೇಟ ಕೆಷ್ಟೋ ಬರಿಯ ತಲೆಗು ಅಷ್ಟೆ,

ಲಾಯರ್, ನಾಯರ್, ಮೇಯರ್ ಗೆಲ್ಲ, ಪಕ್ಕ ಶೈನಿಂಗ್, ಪಾಲಿಷ್ 

।।೨।।


ಕಾಲು ಹಿಡಿವ ಕರ್ಮ ಕೊಟ್ಟನೆಂದು ಬ್ರಹ್ಮ,

ನಾಚಬೇಡ ತಮ್ಮ ದುಡಿಮೆಯೊಂದೆ ಧರ್ಮ,

ಮೇಲು, ಕೀಳು ಎಲ್ಲಾ ಸುಳ್ಳು ! ಒಳ್ಳೆಯ ಮಾತೆ ಪಾಲಿಷ್ ! ।।೩।।