Saturday, October 26, 2024

Vandane (ವಂದನೆ)

 ಪದ್ಯ 

ಸಾಹಿತ್ಯ: ಎಲ್ ಕೆ ಕಂಬಾರ 


ನವಮಾಸ ಹೊತ್ತು 

ನನ್ನನು ಹೆತ್ತು

ಸಾಕಿದ ತಾಯಿಗೆ ವಂದನೆ 


ಮೈಮುರಿ ದುಡಿದು 

ನನ್ನನು ಸಲುಹಿ 

ಬೆಳೆಸಿದ ತಂದೆಗೆ ವಂದನೆ 


ವಿದ್ಯಾ ಬುದ್ಧಿ 

ಬಾಲ್ಯದಿ ಕಲಿಸಿ 

ಹರಸಿದ ಗುರುವಿಗೆ ವಂದನೆ 


ಬಗೆ ಬಗೆ ರೋಗವ 

ವಾಸಿ ಮಾಡುವ 

ವೈದ್ಯೆಗೆ ಮಾಡುವೆ ವಂದನೆ 


ನಿತ್ಯದಿ ದುಡಿದು 

ಅನ್ನವ ನೀಡುವ 

ರೈತಗೆ ಮಾಡುವೆ ವಂದನೆ 


ನಾಡಿನ ರಕ್ಷಣೆ 

ನಿತ್ಯದಿ ಮಾಡುವ 

ಯೋಧಗೆ ಮಾಡುವೆ ವಂದನೆ. 


Padya


Navamaasa hottu

Nannanu hettu

Saakida tayige vandane


Maimuri dudidu

Nannanu saluhi

Belesida tandege vandane


Vidya buddhi

Balyadi kalisi

Harasida guruvige vandane


Bage bage rogava

Vaasi maaduva

Vaidyege vandane


Nityadi dudidu

Annava needuva

Raitage maaduve vandane


Nadina rakshane

Nityadi maaduva

Yodhage maaduve vandane.

    


Friday, October 25, 2024

Muttu Muttu Maatu Muttu (ಮುತ್ತು ಮತ್ತು ಮಾತು ಮುತ್ತು)

Movie: Mrutyunjaya (1990)

Singers: SPB, Manjula Gururaj

Song link: Click Here 


Muttu muttu maatu muttu, ninna muttu tanda mattu (2)

Hitavagi sukhavagi saviyada kanasagi

Mana uyyaleya aadide ||


Nalle nadevaga naduvenu anda, giri navilondu kunidante chenda

Nalla nudivaga dani enu chenda, aragiliyante maatella anda

Jotheyagi nadevaga, olavinda kunivaga

Matte madhumaasavu bandide ||


Suli minchondu baninda jaari, nanna maiyella haridaditeno

Nanna usirata bisiyagi hogi, tanu aralutta hoovayiteno

Idu taane anuraaga, idu taane shubhayoga

Mana aanandava kandide ||


ಚಿತ್ರಗೀತೆ 


ಮುತ್ತು ಮತ್ತು ಮಾತು ಮುತ್ತು, ನಿನ್ನ ಮುತ್ತು ತಂದ ಮತ್ತು (೨)

ಹಿತವಾಗಿ ಸುಖವಾಗಿ ಸವಿಯಾದ ಕನಸಾಗಿ 

ಮನ ಉಯ್ಯಾಲೆಯಾ ಆಡಿದೆ ।।ಪ।।


ನಲ್ಲೆ ನಡೆವಾಗ ನಡುವೆನು ಅಂದ, ಗಿರಿ ನವಿಲೊಂದು ಕುಣಿದಂತೆ ಚೆಂದ 

ನಲ್ಲ ನುಡಿವಾಗ ದನಿ ಏನು ಚೆಂದ, ಅರಗಿಳಿಯಂತೆ ಮಾತೆಲ್ಲ ಅಂದ 

ಜೊತೆಯಾಗಿ ನಡೆವಾಗ, ಒಲವಿಂದ ಕುಣಿವಾಗ 

ಮತ್ತೆ ಮಧುಮಾಸವು ಬಂದಿದೆ ।।೧।।


ಸುಳಿ ಮಿಂಚೊ೦ದು ಬಾನಿಂದ ಜಾರಿ, ನನ್ನ ಮೈಯೆಲ್ಲ ಹರಿದಾಡಿತೇನೋ 

ನನ್ನ ಉಸಿರಾಟ ಬಿಸಿಯಾಗಿ ಹೋಗಿ, ತನು ಅರಳುತ್ತ ಹೂವಾಯಿತೇನೋ 

ಇದು ತಾನೇ ಅನುರಾಗ, ಇದು ತಾನೇ ಶುಭಯೋಗ 

ಮನ ಆನಂದವ ಕಂಡಿದೆ ।।೨।।

                                                                                                                                                              

Jataka Kudure (ಜಟಕಾ ಕುದುರೆ)

Movie: Gajapati Garvabhanga (1989)

Singer: Manjula Gururaj

Song link: Click Here


Jataka kudure hatti pyategoguma (2)

Jarada beeda tinta karaga noduma

He.. tali katto gandu, bisi ragi mudde undu (2)

Are jaldi jaldi nadi nadi yehe..yehe.. ||


Aaha ganda, jagamonda, ninna pinda, balu danda, heyya

Hane myale baasinga kunkuma (2)

Hase mane myale chendata aaduma

Nadi gandhi bajaru kade hoguma

Osi sendi sarayi ruchi noduma

Wahre mere cheta, tale mele kambi peta

Idu ragi kallu guta, aha entha mojinaata

Are bademeeya hidi kaiya.. baa..baa..baa ||

Kudure krishna.. !


Maduve aagoke munchene sobana (2)

Ninna maigella hacchabeku arishina, hi hi..

Ayyo yaara mukha nodi bande ee dina

Idu chandi chamundiya darshana

Ore dongana kodka, ninagyake bantu naduka

Ninna aase swalpa tadka, ninna kacche sari madka

Aha.. bhale bhale maja maja baa baa.. ||


He he ganda nintkolo..! hah hah he mundeganda nintkollalo !


ಚಿತ್ರಗೀತೆ 


ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ (೨)

ಜರದಾ ಬೀಡಾ ತಿಂತ ಕರಗ ನೋಡುಮ 

ಹೇ .. ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು (೨)

ಅರೆ ಜಲ್ದಿ ಜಲ್ದಿ ನಡಿ ನಡಿ ಏಹೇ ಏಹೇ .. ।।ಪ।।


ಆಹಾ ಗಂಡ, ಜಗಮೊಂಡ, ನಿನ್ನ ಪಿಂಡ, ಬಲುದಂಡ, ಹೇಯ್ಯಾ 

ಹಣೆ ಮ್ಯಾಲೆ ಬಾಸಿಂಗ ಕುಂಕುಮ (೨)

ಹಸೆ ಮಣೆ ಮ್ಯಾಲೆ ಚೆಂಡಾಟ ಆಡುಮಾ 

ನಡಿ ಗಾಂಧಿ ಬಜಾರು ಕಡೆ ಹೋಗುಮ 

ಒಸಿ ಸೇಂದಿ ಸಾರಾಯಿ ರುಚಿ ನೋಡುಮ 

ವ್ಹಾರೆ ಮೇರೆ ಚೇಟ, ತಲೆ ಮೇಲೆ ಕಂಬಿ ಪೇಟ 

ಇದು ರಾಗಿ ಕಲ್ಲು ಗೂಟ, ಅಹ ಎಂಥ ಮೋಜಿನಾಟ 

ಅರೆ ಬಡೆಮಿಯಾ ಹಿಡಿ ಕೈಯ ಬಾ .. ಬಾ .. ಬಾ ।।೧।।

ಕುದುರೆ ಕೃಷ್ಣಾ.. !


ಮದುವೆ ಆಗೋಕೆ ಮುಂಚೇನೇ ಸೋಬನಾ (೨)

ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಶಿನಾ, ಹಿ ಹಿ.. 

ಅಯ್ಯೋ ಯಾರ ಮುಖ ನೋಡಿ ಬಂದೆ ಈ ದಿನ 

ಇದು ಚಂಡಿ ಚಾಮುಂಡಿಯ ದರ್ಶನಾ 

ಒರೆ ದೊಂಗನಾ ಕೊಡ್ಕಾ, ನಿನಗ್ಯಾಕೆ ಬಂತು ನಡುಕ 

ನಿನ್ನ ಆಸೆ ಸ್ವಲ್ಪ ತಡ್ಕ, ನಿನ್ನ ಕಚ್ಚೆ ಸರಿ ಮಾಡ್ಕ 

ಅಹಾ .. ಭಲೇ ಭಲೇ ಮಜಾ ಮಜಾ ಬಾ ಬಾ ..  ।।೨।।


ಹೇ .. ಹೇ .. ಗಂಡ ನಿಂತ್ಕೊಳೋ,  ಹ್ಹ ಹ್ಹಹೇ  ಮುಂಡೆಗಂಡ ನಿಂತ್ಕೊಳ್ಳಲೋ ..!

                   


Premada Kadambari (ಪ್ರೇಮದ ಕಾದಂಬರಿ)

Movie: Bandhana (1984)

Singer: SPB

Song link: Click Here


Premada kadambari, baredanu kannirali

Katheyu mugide hodaru, mugiyadirali bandhana ||


Modala putaku koneya putaku, naduve enitu antara

Bandu hoguva sneha savira, nimma bandha nirantara ||


Nanna kathege antya baredu, kaviyu harasida nannanu

Koneya usirali onde aase, daiva harasali nimmanu ||


ಚಿತ್ರಗೀತೆ 


ಪ್ರೇಮದ ಕಾದಂಬರಿ, ಬರೆದನು ಕಣ್ಣೀರಲಿ 

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ ।।ಪ।।


ಮೊದಲ ಪುಟಕೂ ಕೊನೆಯ ಪುಟಕೂ, ನಡುವೆ ಎನಿತು ಅಂತರ 

ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ ।।೧।।


ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು 

ಕೊನೆಯ ಉಸಿರಲಿ ಒಂದೇ ಆಸೆ, ದೈವ ಹರಸಲಿ ನಿಮ್ಮನು  ।।೨।।

                                           

Doniyolage Neenu (ದೋಣಿಯೊಳಗೆ ನೀನು)

Movie: Uyyale (1969)

Singer: P Susheela

Song link: Click Here


Doniyolage neenu kareya mele naanu

Ee manada kareyu ninage keladenu

Doniyolage neenu kareya mele naanu ||


Beesuva tangaliyu tampereyuva badalu

Doniya bahu doorake karedoyyutiruvdu

Irulinolu torutide ee nadu hagalu

Doniyolage neenu kareya mele naanu ||


Kamana billihudu noda doora gaganade

Kannali ada nodabahudu hidiyalagadu

Nannedeya bhavaneyu mugiyada haadu

Doniyolage neenu kareya mele naanu ||


Tutigu tuttigu naduve enitu antara

Nanagu ninagu naduvinalli kadala antara

Nemmadiyu ee manake saavinantara

Doniyolage neenu kareya mele naanu ||


ಚಿತ್ರಗೀತೆ 


ದೋಣಿಯೊಳಗೆ ನೀನು ಕರೆಯ ಮೇಲೆ ನಾನು 

ಈ ಮನದ ಕರೆಯು ನಿನಗೆ ಕೇಳದೇನು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।ಪ।।


ಬೀಸುವ ತಂಗಾಳಿಯು ತಂಪೆರೆಯುವ ಬದಲು 

ದೋಣಿಯ ಬಹು ದೂರಕೆ ಕರೆದೊಯ್ಯುತಿರುವುದು 

ಇರುಳಿನೊಳು ತೋರುತಿದೆ ಈ ನಡು ಹಗಲು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೧।।


ಕಾಮನ ಬಿಲ್ಲಿಹುದು ನೋಡ ದೂರ ಗಗನದೇ 

ಕಣ್ಣಲಿ ಅದ ನೋಡಬಹುದು ಹಿಡಿಯಲಾಗದೂ 

ನನ್ನೆದೆಯ ಭಾವನೆಯು ಮುಗಿಯದ ಹಾಡು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೨।।


ತುಟಿಗೂ ತುತ್ತಿಗೂ ನಡುವೆ ಎನಿತು ಅಂತರ 

ನನಗು ನಿನಗು ನಡುವಿನಲ್ಲಿ ಕಡಲ ಅಂತರ 

ನೆಮ್ಮದಿಯು ಈ ಮನಕೆ ಸಾವಿನಂತರಾ 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೩।।

                             


Monday, October 21, 2024

Beejavannu Bithuva (ಬೀಜವನ್ನು ಬಿತ್ತುವ)

ಪದ್ಯ  

ಸಾಹಿತ್ಯ: ಅಮ್ಮೆ೦ಬಳ ಅನಂತಯ್ಯ ನಾವಡ 


ಬೀಜವನ್ನು ಬಿತ್ತುವ 

ಗಿಡಗಳನ್ನು ಬೆಳೆಸುವ ।

ಸುಜಲಭರಿತ ದೇಶವನ್ನು 

ಸುಫಲವಾಗಿ ಮಾಡುವ ।।


ತೆಂಗು ಕಂಗು ಸಸಿಗಳ 

ತಾಳೆ ಬಾಳೆ ಮರಗಳ ।

ಭಂಗವಿಲ್ಲದಂತೆ ಬೆಳಸಿ 

ಅಧಿಕ ಫಲವ ಪಡೆಯುವ ।।


ಮಾವು ಹಲಸು ನೇರಳೆ 

ಲಿಂಬೆ ದ್ರಾಕ್ಷಿ ಪೇರಳೆ ।

ಸೇಬು ಚಿಕ್ಕು ಕಿತ್ತಳೆಗಳ 

ನಾವು ನಾವೆ ಬೆಳೆಸುವ ।।


ಬದನೆ ಸೌತೆ ಕುಂಬಳ 

ಹೀರೆಕಾಯಿ ಪಡುವಲ ।

ಮುದದಿ ನಾವು ಗೆಣಸು ಮೆಣಸು 

ಹರಿವೆಗಳನು ಬೆಳೆಸುವ ।।


ವಿವಿಧ ಧಾನ್ಯ ಬೆಳೆಗಳ 

ಕಾಯಿ ಪಲ್ಲೆ ಸಸಿಗಳ ।

ವಿವಿಧ ರೀತಿಯಲ್ಲಿ ಬೆಳೆಸಿ 

ಅಧಿಕ ಫಲವ ಪಡೆಯುವ ।।


ಅಧಿಕವಾಗಿ ಬಿತ್ತುವ 

ಅಧಿಕವಾಗಿ ಬೆಳೆಸುವ ।

ಅಧಿಕ ಫಲವ ಪಡೆಯುತೆಲ್ಲ 

ತೃಪ್ತಿಯಿಂದ ಬಾಳುವ ।।


Padya


Beejavannu bithuva

Gidagalannu belesuva |

Sujalabharita deshavannu

Suphalavagi maaduva ||


Tengu kangu sasigala

Taale baale maragala |

Bhangavilladante belesi

Adhika phalava padeyuva ||


Maavu halasu nerale

Limbe drakshi perale |

Sebu chikku kittalegala

Naavu naave belesuva ||


Badane soute kumbala

Heerekayi paduvala |

Mudadi naavu genasu menasu

Harivegalanu belesuva ||


Vividha dhanya belegala

Kaayi palle sasigala |

Vividha reetiyalli belesi

Adhika phalava padeyuva ||


Adikavagi bithuva

Adikavagi belesuva |

Adhika phalava padeyutella

Truptiyinda Baaluva ||

                 

Friday, October 18, 2024

Sarvajna Mattomme Hutti Baa (ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ)

Movie: Sarvajna Murthy (1965)

Singer: Pithapuram Nageswara Rao

Song link: Click Here


Sarvajna..! sarvajna.. mattomme hutti baa

Kannadada naadu nudi bedhagala serisalu

Sarvajna.. mattomme hutti baa (2) ||


Nagara kollegala ballari rayachuru (2)

Belagavi karavara mangaluru madikeri

Maateya maaleya manigalandadi seri

Kannadavu ulivante belevante nadesu baa..

Sarvajna.. mattomme hutti baa (2) ||


Abalura lavatyarisi mane maneya maatade (2)

Jatigala meeri kannada jyothi neenade

Ninna maretavarella kannadigare alla (2)

Samabhava, sama shourya, abhimana maresu baa

Sarvajna.. mattomme hutti baa (2) ||


ಚಿತ್ರಗೀತೆ 


ಸರ್ವಜ್ಞಾ ..! ಸರ್ವಜ್ಞಾ .. ಮತ್ತೊಮ್ಮೆ ಹುಟ್ಟಿ ಬಾ (೨)

ಕನ್ನಡದ ನಾಡು ನುಡಿ ಬೇಧಗಳ ಸೇರಿಸಲು 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।ಪ।।


ನಗರ ಕೊಳ್ಳೇಗಾಲ ಬಳ್ಳಾರಿ ರಾಯಚೂರು (೨)

ಬೆಳಗಾವಿ ಕಾರವಾರ ಮಂಗಳೂರು ಮಡಿಕೇರಿ 

ಮಾತೆಯ ಮಾಲೆಯ ಮಣಿಗಳಂದದಿ ಸೇರಿ 

ಕನ್ನಡವು ಉಳಿವಂತೆ ಬೆಳೆವಂತೆ ನಡೆಸು ಬಾ .. 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।೧।।


ಅಬಲೂರಲವತರಿಸಿ ಮನೆ ಮನೆಯ ಮಾತಾದೆ (೨)

ಜಾತಿಗಳ ಮೀರಿ ಕನ್ನಡ ಜ್ಯೋತಿ ನೀನಾದೆ 

ನಿನ್ನ ಮರೆತವರೆಲ್ಲ ಕನ್ನಡಿಗರೇ ಅಲ್ಲಾ (೨)

ಸಮಭಾವ, ಸಮ ಶೌರ್ಯ, ಅಭಿಮಾನ ಮರೆಸು ಬಾ 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।೨।।