Friday, October 25, 2024

Jataka Kudure (ಜಟಕಾ ಕುದುರೆ)

Movie: Gajapati Garvabhanga (1989)

Singer: Manjula Gururaj

Song link: Click Here


Jataka kudure hatti pyategoguma (2)

Jarada beeda tinta karaga noduma

He.. tali katto gandu, bisi ragi mudde undu (2)

Are jaldi jaldi nadi nadi yehe..yehe.. ||


Aaha ganda, jagamonda, ninna pinda, balu danda, heyya

Hane myale baasinga kunkuma (2)

Hase mane myale chendata aaduma

Nadi gandhi bajaru kade hoguma

Osi sendi sarayi ruchi noduma

Wahre mere cheta, tale mele kambi peta

Idu ragi kallu guta, aha entha mojinaata

Are bademeeya hidi kaiya.. baa..baa..baa ||

Kudure krishna.. !


Maduve aagoke munchene sobana (2)

Ninna maigella hacchabeku arishina, hi hi..

Ayyo yaara mukha nodi bande ee dina

Idu chandi chamundiya darshana

Ore dongana kodka, ninagyake bantu naduka

Ninna aase swalpa tadka, ninna kacche sari madka

Aha.. bhale bhale maja maja baa baa.. ||


He he ganda nintkolo..! hah hah he mundeganda nintkollalo !


ಚಿತ್ರಗೀತೆ 


ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ (೨)

ಜರದಾ ಬೀಡಾ ತಿಂತ ಕರಗ ನೋಡುಮ 

ಹೇ .. ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು (೨)

ಅರೆ ಜಲ್ದಿ ಜಲ್ದಿ ನಡಿ ನಡಿ ಏಹೇ ಏಹೇ .. ।।ಪ।।


ಆಹಾ ಗಂಡ, ಜಗಮೊಂಡ, ನಿನ್ನ ಪಿಂಡ, ಬಲುದಂಡ, ಹೇಯ್ಯಾ 

ಹಣೆ ಮ್ಯಾಲೆ ಬಾಸಿಂಗ ಕುಂಕುಮ (೨)

ಹಸೆ ಮಣೆ ಮ್ಯಾಲೆ ಚೆಂಡಾಟ ಆಡುಮಾ 

ನಡಿ ಗಾಂಧಿ ಬಜಾರು ಕಡೆ ಹೋಗುಮ 

ಒಸಿ ಸೇಂದಿ ಸಾರಾಯಿ ರುಚಿ ನೋಡುಮ 

ವ್ಹಾರೆ ಮೇರೆ ಚೇಟ, ತಲೆ ಮೇಲೆ ಕಂಬಿ ಪೇಟ 

ಇದು ರಾಗಿ ಕಲ್ಲು ಗೂಟ, ಅಹ ಎಂಥ ಮೋಜಿನಾಟ 

ಅರೆ ಬಡೆಮಿಯಾ ಹಿಡಿ ಕೈಯ ಬಾ .. ಬಾ .. ಬಾ ।।೧।।

ಕುದುರೆ ಕೃಷ್ಣಾ.. !


ಮದುವೆ ಆಗೋಕೆ ಮುಂಚೇನೇ ಸೋಬನಾ (೨)

ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಶಿನಾ, ಹಿ ಹಿ.. 

ಅಯ್ಯೋ ಯಾರ ಮುಖ ನೋಡಿ ಬಂದೆ ಈ ದಿನ 

ಇದು ಚಂಡಿ ಚಾಮುಂಡಿಯ ದರ್ಶನಾ 

ಒರೆ ದೊಂಗನಾ ಕೊಡ್ಕಾ, ನಿನಗ್ಯಾಕೆ ಬಂತು ನಡುಕ 

ನಿನ್ನ ಆಸೆ ಸ್ವಲ್ಪ ತಡ್ಕ, ನಿನ್ನ ಕಚ್ಚೆ ಸರಿ ಮಾಡ್ಕ 

ಅಹಾ .. ಭಲೇ ಭಲೇ ಮಜಾ ಮಜಾ ಬಾ ಬಾ ..  ।।೨।।


ಹೇ .. ಹೇ .. ಗಂಡ ನಿಂತ್ಕೊಳೋ,  ಹ್ಹ ಹ್ಹಹೇ  ಮುಂಡೆಗಂಡ ನಿಂತ್ಕೊಳ್ಳಲೋ ..!

                   


Premada Kadambari (ಪ್ರೇಮದ ಕಾದಂಬರಿ)

Movie: Bandhana (1984)

Singer: SPB

Song link: Click Here


Premada kadambari, baredanu kannirali

Katheyu mugide hodaru, mugiyadirali bandhana ||


Modala putaku koneya putaku, naduve enitu antara

Bandu hoguva sneha savira, nimma bandha nirantara ||


Nanna kathege antya baredu, kaviyu harasida nannanu

Koneya usirali onde aase, daiva harasali nimmanu ||


ಚಿತ್ರಗೀತೆ 


ಪ್ರೇಮದ ಕಾದಂಬರಿ, ಬರೆದನು ಕಣ್ಣೀರಲಿ 

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ ।।ಪ।।


ಮೊದಲ ಪುಟಕೂ ಕೊನೆಯ ಪುಟಕೂ, ನಡುವೆ ಎನಿತು ಅಂತರ 

ಬಂದು ಹೋಗುವ ಸ್ನೇಹ ಸಾವಿರ, ನಿಮ್ಮ ಬಂಧ ನಿರಂತರ ।।೧।।


ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು 

ಕೊನೆಯ ಉಸಿರಲಿ ಒಂದೇ ಆಸೆ, ದೈವ ಹರಸಲಿ ನಿಮ್ಮನು  ।।೨।।

                                           

Doniyolage Neenu (ದೋಣಿಯೊಳಗೆ ನೀನು)

Movie: Uyyale (1969)

Singer: P Susheela

Song link: Click Here


Doniyolage neenu kareya mele naanu

Ee manada kareyu ninage keladenu

Doniyolage neenu kareya mele naanu ||


Beesuva tangaliyu tampereyuva badalu

Doniya bahu doorake karedoyyutiruvdu

Irulinolu torutide ee nadu hagalu

Doniyolage neenu kareya mele naanu ||


Kamana billihudu noda doora gaganade

Kannali ada nodabahudu hidiyalagadu

Nannedeya bhavaneyu mugiyada haadu

Doniyolage neenu kareya mele naanu ||


Tutigu tuttigu naduve enitu antara

Nanagu ninagu naduvinalli kadala antara

Nemmadiyu ee manake saavinantara

Doniyolage neenu kareya mele naanu ||


ಚಿತ್ರಗೀತೆ 


ದೋಣಿಯೊಳಗೆ ನೀನು ಕರೆಯ ಮೇಲೆ ನಾನು 

ಈ ಮನದ ಕರೆಯು ನಿನಗೆ ಕೇಳದೇನು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।ಪ।।


ಬೀಸುವ ತಂಗಾಳಿಯು ತಂಪೆರೆಯುವ ಬದಲು 

ದೋಣಿಯ ಬಹು ದೂರಕೆ ಕರೆದೊಯ್ಯುತಿರುವುದು 

ಇರುಳಿನೊಳು ತೋರುತಿದೆ ಈ ನಡು ಹಗಲು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೧।।


ಕಾಮನ ಬಿಲ್ಲಿಹುದು ನೋಡ ದೂರ ಗಗನದೇ 

ಕಣ್ಣಲಿ ಅದ ನೋಡಬಹುದು ಹಿಡಿಯಲಾಗದೂ 

ನನ್ನೆದೆಯ ಭಾವನೆಯು ಮುಗಿಯದ ಹಾಡು 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೨।।


ತುಟಿಗೂ ತುತ್ತಿಗೂ ನಡುವೆ ಎನಿತು ಅಂತರ 

ನನಗು ನಿನಗು ನಡುವಿನಲ್ಲಿ ಕಡಲ ಅಂತರ 

ನೆಮ್ಮದಿಯು ಈ ಮನಕೆ ಸಾವಿನಂತರಾ 

ದೋಣಿಯೊಳಗೆ ನೀನು ಕರೆಯ ಮೇಲೆ ನಾನು ।।೩।।

                             


Monday, October 21, 2024

Beejavannu Bithuva (ಬೀಜವನ್ನು ಬಿತ್ತುವ)

ಪದ್ಯ  

ಸಾಹಿತ್ಯ: ಅಮ್ಮೆ೦ಬಳ ಅನಂತಯ್ಯ ನಾವಡ 


ಬೀಜವನ್ನು ಬಿತ್ತುವ 

ಗಿಡಗಳನ್ನು ಬೆಳೆಸುವ ।

ಸುಜಲಭರಿತ ದೇಶವನ್ನು 

ಸುಫಲವಾಗಿ ಮಾಡುವ ।।


ತೆಂಗು ಕಂಗು ಸಸಿಗಳ 

ತಾಳೆ ಬಾಳೆ ಮರಗಳ ।

ಭಂಗವಿಲ್ಲದಂತೆ ಬೆಳಸಿ 

ಅಧಿಕ ಫಲವ ಪಡೆಯುವ ।।


ಮಾವು ಹಲಸು ನೇರಳೆ 

ಲಿಂಬೆ ದ್ರಾಕ್ಷಿ ಪೇರಳೆ ।

ಸೇಬು ಚಿಕ್ಕು ಕಿತ್ತಳೆಗಳ 

ನಾವು ನಾವೆ ಬೆಳೆಸುವ ।।


ಬದನೆ ಸೌತೆ ಕುಂಬಳ 

ಹೀರೆಕಾಯಿ ಪಡುವಲ ।

ಮುದದಿ ನಾವು ಗೆಣಸು ಮೆಣಸು 

ಹರಿವೆಗಳನು ಬೆಳೆಸುವ ।।


ವಿವಿಧ ಧಾನ್ಯ ಬೆಳೆಗಳ 

ಕಾಯಿ ಪಲ್ಲೆ ಸಸಿಗಳ ।

ವಿವಿಧ ರೀತಿಯಲ್ಲಿ ಬೆಳೆಸಿ 

ಅಧಿಕ ಫಲವ ಪಡೆಯುವ ।।


ಅಧಿಕವಾಗಿ ಬಿತ್ತುವ 

ಅಧಿಕವಾಗಿ ಬೆಳೆಸುವ ।

ಅಧಿಕ ಫಲವ ಪಡೆಯುತೆಲ್ಲ 

ತೃಪ್ತಿಯಿಂದ ಬಾಳುವ ।।


Padya


Beejavannu bithuva

Gidagalannu belesuva |

Sujalabharita deshavannu

Suphalavagi maaduva ||


Tengu kangu sasigala

Taale baale maragala |

Bhangavilladante belesi

Adhika phalava padeyuva ||


Maavu halasu nerale

Limbe drakshi perale |

Sebu chikku kittalegala

Naavu naave belesuva ||


Badane soute kumbala

Heerekayi paduvala |

Mudadi naavu genasu menasu

Harivegalanu belesuva ||


Vividha dhanya belegala

Kaayi palle sasigala |

Vividha reetiyalli belesi

Adhika phalava padeyuva ||


Adikavagi bithuva

Adikavagi belesuva |

Adhika phalava padeyutella

Truptiyinda Baaluva ||

                 

Friday, October 18, 2024

Sarvajna Mattomme Hutti Baa (ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ)

Movie: Sarvajna Murthy (1965)

Singer: Pithapuram Nageswara Rao

Song link: Click Here


Sarvajna..! sarvajna.. mattomme hutti baa

Kannadada naadu nudi bedhagala serisalu

Sarvajna.. mattomme hutti baa (2) ||


Nagara kollegala ballari rayachuru (2)

Belagavi karavara mangaluru madikeri

Maateya maaleya manigalandadi seri

Kannadavu ulivante belevante nadesu baa..

Sarvajna.. mattomme hutti baa (2) ||


Abalura lavatyarisi mane maneya maatade (2)

Jatigala meeri kannada jyothi neenade

Ninna maretavarella kannadigare alla (2)

Samabhava, sama shourya, abhimana maresu baa

Sarvajna.. mattomme hutti baa (2) ||


ಚಿತ್ರಗೀತೆ 


ಸರ್ವಜ್ಞಾ ..! ಸರ್ವಜ್ಞಾ .. ಮತ್ತೊಮ್ಮೆ ಹುಟ್ಟಿ ಬಾ (೨)

ಕನ್ನಡದ ನಾಡು ನುಡಿ ಬೇಧಗಳ ಸೇರಿಸಲು 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।ಪ।।


ನಗರ ಕೊಳ್ಳೇಗಾಲ ಬಳ್ಳಾರಿ ರಾಯಚೂರು (೨)

ಬೆಳಗಾವಿ ಕಾರವಾರ ಮಂಗಳೂರು ಮಡಿಕೇರಿ 

ಮಾತೆಯ ಮಾಲೆಯ ಮಣಿಗಳಂದದಿ ಸೇರಿ 

ಕನ್ನಡವು ಉಳಿವಂತೆ ಬೆಳೆವಂತೆ ನಡೆಸು ಬಾ .. 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।೧।।


ಅಬಲೂರಲವತರಿಸಿ ಮನೆ ಮನೆಯ ಮಾತಾದೆ (೨)

ಜಾತಿಗಳ ಮೀರಿ ಕನ್ನಡ ಜ್ಯೋತಿ ನೀನಾದೆ 

ನಿನ್ನ ಮರೆತವರೆಲ್ಲ ಕನ್ನಡಿಗರೇ ಅಲ್ಲಾ (೨)

ಸಮಭಾವ, ಸಮ ಶೌರ್ಯ, ಅಭಿಮಾನ ಮರೆಸು ಬಾ 

ಸರ್ವಜ್ಞಾ ಮತ್ತೊಮ್ಮೆ ಹುಟ್ಟಿ ಬಾ (೨) ।।೨।।

                  

Devanna Nina Mele Manasanna (ದೇವಣ್ಣಾ ನಿನ ಮೇಲೆ ಮನಸಣ್ಣ)

Movie: Deva (1989)

Singers: SPB, S Janaki

Song link: Click Here


Ehe.. tararara rarara rarararaa..!

Devanna, he devanna, are hoi devanna, nillu

Devanna nina mele manasanna, magaite ee hannu nodanna !


Devanna nina mele manasanna, magaite ee hannu nodanna

Ningamma nina mele manasamma, bandivnee kai tumba needamma

Bayakeya billa nee mididare nalla, naa savaralu galla ee savi rasagulla

Nee kaanada sukha koduve ||


Nee nanna soke ee navireke, pranayada benkige nee seleve (are ha haa ha aha )

Nee nanna soke ee navireke, pranayada benkige nee seleve, 

Ee novu saaku naa serabeku, Bbari maatalle yake nee suduve, 

Tangaali tampaagi beesuvenu, ee bege taapake anjuvenu

O nalle baare nanna sere ||


Hoovante neenu dumbiyante naanu, madhuvina battala needuveya (are ha haa aha)

Hoovante neenu dumbiyante naanu, madhuvina battala needuveya

Ee tanuvu nindu ee manavu nindu, idee balella ninge mudupayya

Tolalli ninnannu tuguvenu, novella ninninda neeguvenu

Ee baaligendu neene raja ||      


ಚಿತ್ರಗೀತೆ 


ಏಹೇ .. ತರರರ ರರರ ರರರರಾ !

ದೇವಣ್ಣಾ, ಹೇ  ದೇವಣ್ಣಾ, ಅರೆ ಹೋಯ್ ದೇವಣ್ಣಾ, ನಿಲ್ಲು 

ದೇವಣ್ಣಾ ನಿನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ!


ದೇವಣ್ಣಾ ನಿನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ

ನಿಂಗಮ್ಮಾ ನಿನ್ನ ಮೇಲೆ ಮನಸಮ್ಮ, ಬಂದೀವ್ನಿ ಕೈ ತುಂಬ ನೀಡಮ್ಮ 

ಬಯಕೆಯ ಬಿಲ್ಲ ನೀ ಮಿಡಿದರೆ ನಲ್ಲ, ನಾ ಸವರಲು ಗಲ್ಲ ಈ ಸವಿ ರಸಗುಲ್ಲ 

ನೀ ಕಾಣದ ಸುಖ ಕೊಡುವೆ ।।ಪ।।


ನೀ ನನ್ನ ಸೋಕೆ ಈ ನವಿರೇಕೆ, ಪ್ರಣಯದ ಬೆಂಕಿಗೆ ನೀ ಸೆಳೆವೆ (ಅರೆ ಹಾ ಹಾ ಆಹಾ) 

ನೀ ನನ್ನ ಸೋಕೆ ಈ ನವಿರೇಕೆ, ಪ್ರಣಯದ ಬೆಂಕಿಗೆ ನೀ ಸೆಳೆವೆ 

ಈ ನೋವು ಸಾಕು ನಾ ಸೇರಬೇಕು, ಬರಿ ಮಾತಲ್ಲೆ ಯಾಕೆ ನೀ ಸುಡುವೆ 

ತಂಗಾಳಿ ತಂಪಾಗಿ ಬೀಸುವೆನು, ಈ ಬೇಗೆ ತಾಪಕೆ ಅಂಜುವೆನು

 ಓ ನಲ್ಲೆ ಬಾರೆ ನನ್ನ ಸೇರೆ ।।೧।।


ಹೂವಂತೆ ನೀನು ದುಂಬಿಯಂತೆ ನಾನು, ಮಧುವಿನ ಬಟ್ಟಲ ನೀಡುವೆಯಾ (ಅರೆ ಹಾ ಹಾ ಆಹಾ) 

ಹೂವಂತೆ ನೀನು ದುಂಬಿಯಂತೆ ನಾನು, ಮಧುವಿನ ಬಟ್ಟಲ ನೀಡುವೆಯಾ 

ಈ ತನುವು ನಿಂದು ಈ ಮನವು ನಿಂದು, ಇಡೀ ಬಾಳೆಲ್ಲ ನಿಂಗೇ ಮುಡುಪಯ್ಯಾ 

ತೋಳಲ್ಲಿ ನಿನ್ನನ್ನು ತೂಗುವೆನು, ನೋವೆಲ್ಲ ನಿನ್ನಿಂದ ನೀಗುವೆನು 

ಈ ಬಾಳಿಗೆಂದು ನೀನೇ ರಾಜಾ ।।೨।।

                                                              

Doora Doora Alle Nilli (ದೂರ ದೂರ ಅಲ್ಲೆ ನಿಲ್ಲಿ)

Movie: Professor Huchuraya (1974)

Singers: P B Srinivas, P Susheela

Song link: Click Here


Doora doora alle nilli nanna devare (2)

Samyama sheela, sadalipa jaala, hoodalu eki chala

Prema gange allu eke madi mailige (2)

Olavigu elle, iruvude nalle, salladu ee katara 

Doora doora alle nilli nanna devare (2) ||


Hareyada baale, aralida molle (2)

Poojege munna baadalu olle

Aa..aralada baadada aragili neenu (2)

Kahi vishavalla olavina jenu (2)

Yaavudene aagirali, kulada hesaru maasadirali

Aaha..! doora doora alle nilli nanna devare (2) ||


Hennina baalu hannina holu (2)

Jaaridaromme mannina dhulu

Doorada ee bage virahada bege baa bali nanna navarasa gange

Korala taali padeda ghalige ella mudipu nanna dorege

Aaha..aa doora doora alle nilli nanna devare (2) ||


ಚಿತ್ರಗೀತೆ 


ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (೨)

ಸಂಯಮ ಶೀಲ, ಸಡಲಿಪ ಜಾಲ, ಹೂಡಲು ಏಕೀ ಛಲಾ .. 

ಪ್ರೇಮ ಗಂಗೆ ಅಲ್ಲು ಏಕೆ ಮಡಿ ಮೈಲಿಗೆ  (೨)

ಒಲವಿಗೂ ಎಲ್ಲೆ, ಇರುವುದೆ ನಲ್ಲೆ, ಸಲ್ಲದು ಈ ಕಾತರಾ .. 

ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (೨) ।।ಪ।।


ಹರೆಯದ ಬಾಲೆ, ಅರಳಿದ ಮೊಲ್ಲೆ (೨)

ಪೂಜೆಗೆ ಮುನ್ನಾ ಬಾಡಲು ಒಲ್ಲೆ 

ಆ .. ಅರಳದ ಬಾಡದ ಅರಗಿಳಿ ನೀನು (೨)

ಕಹಿ ವಿಷವಲ್ಲ ಒಲವಿನ ಜೇನು (೨)

ಯಾವುದೇನೇ ಆಗಿರಲಿ, ಕುಲದ ಹೆಸರು ಮಾಸದಿರಲಿ 

ಆಹಾ .. ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (೨) ।।೧।।


ಹೆಣ್ಣಿನ ಬಾಳು ಹಣ್ಣಿನ ಹೋಳು 

ಜಾರಿದರೊಮ್ಮೆ ಮಣ್ಣಿನ ಧೂಳು  (೨)

ದೂರದ ಈ ಬಗೆ ವಿರಹದ ಬೇಗೆ ಬಾ ಬಳಿ ನನ್ನ ನವರಸ ಗಂಗೆ 

ಕೊರಳ ತಾಳಿ ಪಡೆದ ಘಳಿಗೆ ಎಲ್ಲ ಮುಡಿಪು ನನ್ನ ದೊರೆಗೆ 

ಆಹಾ ..ಆ, ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (೨) ।।೨।।