Monday, October 7, 2024

Maduveya Vayasu (ಮದುವೆಯ ವಯಸು)

Movie: Gajapati Garvabhanga (1989)

Singers: Raghavendra Rajkumar, Manjula Gururaj

Song link: Click Here


Maduveya vayasu, ellellu sogasu, kantumba nuraru kanasu

Beresutta manasu, nannannu kunisu, edeyase hoovagisu ||


Nanna kaiyi sokalu etake heege, bigiyaytu henne ninnee uduge

Mai tumba minchina balliyu odi, hoovaitu tanuvu higguta arali

Aha uhmm aha uhmm, sogasada maatadide..!


Edeyalli savira veeneya naada, impagi haadide premada veda

Aa veene raagake nannedeyalli, nudidide eega prema mrudanga

Aha uhmm aha uhmm, idu taane anuraagavu..!


ಚಿತ್ರಗೀತೆ 


ಮದುವೆಯ ವಯಸು, ಎಲ್ಲೆಲ್ಲು ಸೊಗಸು, ಕಣ್ತುಂಬ ನೂರಾರು ಕನಸು 

ಬೆರೆಸುತ್ತಾ ಮನಸು, ನನ್ನನ್ನು ಕುಣಿಸು, ಎದೆಯಾಸೆ ಹೂವಾಗಿಸು 

।।ಪ ।।


ನನ್ನ ಕೈಯಿ ಸೋಕಲೂ ಏತಕೆ ಹೀಗೆ, ಬಿಗಿಯಾಯ್ತು ಹೆಣ್ಣೆ ನಿನ್ನೀ ಉಡುಗೆ 

ಮೈ ತುಂಬ ಮಿಂಚಿನ ಬಳ್ಳಿಯು ಓಡಿ, ಹೂವಾಯ್ತು ತನುವು ಹಿಗ್ಗುತ ಅರಳಿ 

ಆಹಾ ಉಹ್ಮ್ ಆಹಾ ಉಹ್ಮ್, ಸೊಗಸಾದ ಮಾತಾಡಿದೇ ..! ।।೧।।


ಎದೆಯಲ್ಲಿ ಸಾವಿರ ವೀಣೆಯ ನಾದ, ಇಂಪಾಗಿ ಹಾಡಿದೆ ಪ್ರೇಮದ ವೇದ 

ಆ ವೀಣೆ ರಾಗಕೆ ನನ್ನೆದೆಯಲ್ಲಿ, ನುಡಿದಿದೆ ಈಗ ಪ್ರೇಮ ಮೃದಂಗ 

ಆಹಾ ಉಹ್ಮ್ ಆಹಾ ಉಹ್ಮ್, ಇದು ತಾನೆ ಅನುರಾಗವೂ ..! ।।೨।। 

                     

Thursday, October 3, 2024

Tanu Karagadavaralli (ತನು ಕರಗದವರಲ್ಲಿ)

Movie: Kitturu Chennamma (1962)

Singer: P Susheela

Song link: Click Here


Tanu karagadavaralli pushpavanolleyayya neenu (2)

Mana karagadavaralli gandhaakshateyanollayya neenu (2)

Tanu karagadavaralli pushpavanolleyayya neenu (2) ||


Arivu kantereyadavaralli..aa aa (2) aaratiyanollayya neenu (2)

Bhava shuddavilladavaralli, dhupavanollayya neenu (2)

Tanu karagadavaralli pushpavanolleyayya neenu (2) ||


Parinamigalalladavaralli naivaidyavanollayya neenu (2)

Hrudaya kamalavilladavarali.. (2) iralollayya neenu (2)

Ennalli enundendu karastaladali imbugonde (2)

Hela chenna mallikarjuna, Hela chenna mallikarjuna ||


ಚಿತ್ರಗೀತೆ 


ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು  (೨)

ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು (೨)

ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ।।ಪ।।


ಅರಿವು ಕಣ್ತೆರೆಯದವರಲ್ಲೀ .. ಆ ಆ ಆ ಆ (೨) ಆರತಿಯನೊಲ್ಲಯ್ಯಾ ನೀನು (೨)

ಭಾವ ಶುದ್ಧವಿಲ್ಲದವರಲ್ಲಿ, ಧೂಪವನೊಲ್ಲಯ್ಯಾ ನೀನು (೨)

ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ।।೧।।


ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲಯ್ಯ ನೀನು (೨)

ಹೃದಯ ಕಮಲವಿಲ್ಲದವರಲಿ ..(೨) ಇರಲೊಲ್ಲಯ್ಯಾ ನೀನು (೨)

ಎನ್ನಲ್ಲಿ ಏನುಂಡೆಂದು ಕರಸ್ಥಲದಲಿ ಇಂಬುಗೊಂಡೆ (೨)

ಹೇಳ ಚೆನ್ನೆ ಮಲ್ಲಿಕಾರ್ಜುನಾ, ಹೇಳ ಚೆನ್ನೆ ಮಲ್ಲಿಕಾರ್ಜುನಾ 

।।೨।।

                                     

Haadu Haleyadadarenu (ಹಾಡು ಹಳೆಯದಾದರೇನು)

Movie: Manasa Sarovara (1982)

Singer: Vani Jairam

Song link: Click Here


Haadu (2) haadu haleyadadarenu, bhava nava naveena (2)

Edeya bhava hommuvudake, bhashe oratu yaana ||


Haleya haadu  haadu matte, adane keli taniyuve (2)

Haleya haadininda hosatu jeevana kattuve (2) ||


Hammu bimmu ondu illa haadu hrudaya teredide (2)

Haadinalli leenavagalenna manavu kaadide (2) ||


ಚಿತ್ರಗೀತೆ 


ಹಾಡು (೨) ಹಾಡು ಹಳೆಯದಾದರೇನು, ಭಾವ ನವ ನವೀನ (೨)

ಎದೆಯ ಭಾವ ಹೊಮ್ಮುವುದಕೆ, ಭಾಷೆ ಒರಟು ಯಾನಾ ।।ಪ।।


ಹಳೆಯ ಹಾಡು ಹಾಡು ಮತ್ತೆ, ಅದನೆ ಕೇಳಿ ತಣಿಯುವೆ (೨)

ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ (೨) ।।೧।।


ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ (೨)

ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ (೨) ।।೨।।

                 

Tangaaliyalli Naanu Teli Bande (ತಂಗಾಳಿಯಲ್ಲಿ ನಾನು ತೇಲಿ ಬಂದೆ)

Movie: Janma Janmada Anubandha (1980)

Singer: S Janaki

Sonk link: Click Here


O..o..o..o, tangaaliyalli naanu teli bande

Ninnannu preetiyinda seralende

O iniya.. (2) nannannu seralu baa baa, nannanu seralu o..o ||


Ninna ellu kaanade hogi, nanna jeeva kugi kugi

Ekangiyagi naanu nondu hode, heegeke doora odide..

O iniya.. (2) nannannu seralu baa baa, nannanu seralu o..o ||


Etake heege aleyutaliruve, yaranu heege hudukutaliruve

Kannalli nanna bimba illavenu, nee kaane enu nannannu

O iniya.. (2) nannannu seralu baa baa, nannanu seralu o..o ||


ಚಿತ್ರಗೀತೆ 


ಓ ..ಓ ..ಓ ..ಓ, ತಂಗಾಳಿಯಲ್ಲಿ ನಾನು ತೇಲಿ ಬಂದೆ 

ನಿನ್ನನ್ನು ಪ್ರೀತಿಯಿಂದ ಸೇರಲೆಂದೆ 

ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ ..ಓ ಓ  ।।ಪ।।


ನಿನ್ನಾ ಎಲ್ಲೂ ಕಾಣದೆ ಹೋಗಿ, ನನ್ನಾ ಜೀವ ಕೂಗಿ ಕೂಗಿ 

ಏಕಾಂಗಿಯಾಗಿ ನಾನು ನೊಂದು ಹೋದೆ, ಹೀಗೇಕೆ ದೂರ ಓಡಿದೇ 

ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ ..ಓ ಓ ।।೧।।


ಏತಕೆ ಹೀಗೆ ಅಲೆಯುತಲಿರುವೆ, ಯಾರನು ಹೀಗೆ ಹುಡುಕುತಲಿರುವೆ 

ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು, ನೀ ಕಾಣೆ ಏನು ನನ್ನನ್ನೂ 

ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ  ..ಓ ಓ ।।೨।।

               

Naa Haadalu Neevu Haadabeku (ನಾ ಹಾಡಲೂ ನೀವು ಹಾಡಬೇಕು)

Movie: Kalla Kulla (1975)

Singer: SPB

Song link: Click Here


Naa haadalu neevu haadabeku, tugaduta taala hakabeku

Ellaru, ondaguta, nakku naliyabeku

Haaduta kunidaduta, maiya mareyabeku

CHO: nakku naliyabeku, maiya mareyabeku ||


Chellatavado vayasu, sangati beku

Ee snehadinda namma, aase teerabeku

Rasamaya nimishada, aananda mai tumbide

Mareyada anubhava, namage kaadide ||


Santoshada ee samaya, sada saviyabeku

Ee samaya jaradante, nodi nadeyabeku

Muttina hah hah naguvali endendu teladuva

Chinnada hrudayava, inde dochuva ||


ಚಿತ್ರಗೀತೆ 


ನಾ ಹಾಡಲೂ ನೀವು ಹಾಡಬೇಕು, ತೂಗಾಡುತ ತಾಳ ಹಾಕಬೇಕು 

ಎಲ್ಲರೂ, ಒಂದಾಗುತಾ, ನಕ್ಕು ನಲಿಯಬೇಕು 

ಹಾಡುತಾ, ಕುಣಿದಾಡುತಾ, ಮೈಯ ಮರೆಯಬೇಕು 

ಚೊ: ನಕ್ಕು ನಲಿಯಬೇಕು, ಮೈಯ ಮರೆಯಬೇಕು ।।ಪ।।


ಚೆಲ್ಲಾಟವಾಡೊ ವಯಸು, ಸಂಗಾತಿ ಬೇಕು 

ಈ ಸ್ನೇಹದಿಂದ ನಮ್ಮ, ಆಸೆ ತೀರಬೇಕು 

ರಸಮಯ, ನಿಮಿಷದ, ಆನಂದ ಮೈ ತುಂಬಿದೆ 

ಮರೆಯದ, ಅನುಭವ, ನಮಗೆ ಕಾದಿದೆ ।।೧।।


ಸಂತೋಷದಾ ಈ ಸಮಯ, ಸದಾ ಸವಿಯಬೇಕು 

ಈ ಸಮಯ ಜಾರದಂತೆ, ನೋಡಿ ನಡೆಯಬೇಕು 

ಮುತ್ತಿನ  ಹ್ಹಹ್ಹ ನಗುವಲಿ ಎಂದೆಂದು ತೇಲಾಡುವಾ 

ಚಿನ್ನದ ಹೃದಯವ ಇಂದೇ ದೋಚುವಾ ।।೨।।      

                  


    
                                                                                                      

Mareyada Nenapanu (ಮರೆಯದ ನೆನಪನು)

Movie: Sahasa Simha (1982)

Singer: SPB

Song link: Click Here


Mareyada nenapanu edeyalli tande neenu (2)

Ninagaagi arasi bande, he.. (2) nee ello alle naanu

Mareyada nenapanu edeyalli tande neenu ||


Kanasallu ninna roopa, ee manadalli taralu taapa

Kannalli mucchi ninna naa karedoiva aase chinna

Naguvemba baleya beesi, naa nudiyalli jena soosi

Sere hidive bidade ninna..

Mareyada nenapanu edeyalli tande neenu ||


Minchante sulidu neenu, mareyagi hodarenu

Sulivannu tiliyaballa, hosa modi balle naanu

Balalli bidisadantha endendu muriyadantha

Bandhanade hidive ninna..

Mareyada nenapanu edeyalli tande neenu ||


ಚಿತ್ರಗೀತೆ 


ಮರೆಯದ ನೆನಪನು ಎದೆಯಲ್ಲಿ ತಂದೆ ನೀನು (೨)

ನಿನಗಾಗಿ ಅರಸಿ ಬಂದೆ , ಹೇ .. (೨) ನೀ ಎಲ್ಲೋ ಅಲ್ಲೆ ನಾನು 

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು ।।ಪ।।


ಕನಸಲ್ಲೂ ನಿನ್ನ ರೂಪ, ಈ ಮನದಲ್ಲಿ ತರಲು ತಾಪಾ 

ಕಣ್ಣಲ್ಲಿ ಮುಚ್ಚಿ ನಿನ್ನ ನಾ ಕರೆದೊಯ್ವ ಆಸೆ ಚಿನ್ನಾ 

ನಗುವೆಂಬ ಬಲೆಯ ಬೀಸಿ, ನಾ ನುಡಿಯಲ್ಲಿ ಜೇನ ಸೊಸಿ 

ಸೆರೆ ಹಿಡಿವೆ ಬಿಡದೆ ನಿನ್ನಾ .. 

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು ।।೧।।


ಮಿಂಚಂತೆ ಸುಳಿದು ನೀನು, ಮರೆಯಾಗಿ ಹೋದರೇನೂ

ಸುಳಿವನ್ನು ತಿಳಿಯಬಲ್ಲ, ಹೊಸ ಮೋಡಿ ಬಲ್ಲೆ ನಾನೂ 

ಬಾಳಲ್ಲಿ ಬಿಡಿಸದಂಥ ಎಂದೆಂದು ಮುರಿಯದಂಥ 

ಬಂಧನದೆ ಹಿಡಿವೆ ನಿನ್ನಾ .. 

ಮರೆಯದ ನೆನಪನು ಎದೆಯಲ್ಲಿ ತಂದೆ ನೀನು ।।೨।।

                 

Mareyadiru Sneha (ಮರೆಯದಿರೂ ಸ್ನೇಹ)

Movie: Pratidwani (1971)

Singer: P B Srinivas

Song link: Click Here


Mareyadiru sneha, bageyadiru droha

Nyayavannu ulisu, anyayavannu alisu

Endu.. endendu

Mareyadiru sneha, bageyadiru droha ||


Baalinali guriya, sadhisuva chalava

Bidadante nadeyabeku, adakaagi dudiyabeku

Endu.. endendu

Mareyadiru sneha, bageyadiru droha ||


Satyavane nudidu, dharmadale nadedu

Sariyaada dariyalli, guriyannu serabeku

Endu.. endendu

Mareyadiru sneha, bageyadiru droha ||


ಚಿತ್ರಗೀತೆ 


ಮರೆಯದಿರೂ ಸ್ನೇಹ, ಬಗೆಯದಿರೂ ದ್ರೋಹ 

ನ್ಯಾಯವನ್ನು ಉಳಿಸು, ಅನ್ಯಾಯವನ್ನು ಅಳಿಸು 

ಎಂದೂ .. ಎಂದೆಂದೂ 

ಮರೆಯದಿರೂ ಸ್ನೇಹ, ಬಗೆಯದಿರೂ ದ್ರೋಹ ।।ಪ।।


ಬಾಳಿನಲಿ ಗುರಿಯ, ಸಾಧಿಸುವ ಛಲವ 

ಬಿಡದಂತೆ ನಡೆಯಬೇಕು, ಅದಕಾಗಿ ದುಡಿಯಬೇಕು 

ಎಂದೂ .. ಎಂದೆಂದೂ 

ಮರೆಯದಿರೂ ಸ್ನೇಹ, ಬಗೆಯದಿರೂ ದ್ರೋಹ ।।೧।।


ಸತ್ಯವನೇ ನುಡಿದು, ಧರ್ಮದಲೇ ನಡೆದು 

ಸರಿಯಾದ ದಾರಿಯಲ್ಲಿ, ಗುರಿಯನ್ನು ಸೇರಬೇಕು 

ಎಂದೂ .. ಎಂದೆಂದೂ 

ಮರೆಯದಿರೂ ಸ್ನೇಹ, ಬಗೆಯದಿರೂ ದ್ರೋಹ ।।೨।।