Tuesday, October 1, 2024

Nadedado Kamana Bille (ನಡೆದಾಡೊ ಕಾಮನ ಬಿಲ್ಲೆ)

Movie: Arunaraaga (1986)

Singer: SPB

Song link: Click Here


Nadedado kamana bille, haridado mugilina minche

Talukaado banina cheluve, bhuvigilida hunnime honale

Neenendigu nana baalige aanandana,

Arunaraaga, arunaraaga, arunaraaga ||


Meenina nayana, havalada tutiya, padediha rupasi

Sampige moogu, kabbina hubbu, hondida shodasi..aa

Ninna nodi preeti moodi aase chimmi hmmide

Neenendigu nana baalige aanandana,

Arunaraaga, arunaraaga, arunaraaga ||


Dantada maiya, mallige nageya, andada urvashi

Meghada kurula, kogile kanta, galisida preyasi..aa

Nina nagu kanna tumbi sneha sanga bedide

Neenendigu nana baalige aanandana,

Arunaraaga, arunaraaga, arunaraaga ||


ಚಿತ್ರಗೀತೆ 


ನಡೆದಾಡೊ ಕಾಮನ ಬಿಲ್ಲೆ, ಹರಿದಾಡೊ ಮುಗಿಲಿನ ಮಿಂಚೆ 

ತುಳುಕಾಡೊ ಬಾನಿನ ಚೆಲುವೆ, ಭುವಿಗಿಳಿದ ಹುಣ್ಣಿಮೆ ಹೊನಲೆ 

ನೀನೆಂದಿಗೂ ನನ ಬಾಳಿಗೆ ಆನಂದದಾ 

ಅರುಣರಾಗ, ಅರುಣರಾಗ, ಅರುಣರಾಗ ।।ಪ।।


ಮೀನಿನ ನಯನ, ಹವಳದ ತುಟಿಯ, ಪಡೆದಿಹ ರೂಪಸಿ 

ಸಂಪಿಗೆ ಮೂಗು, ಕಬ್ಬಿನ ಹುಬ್ಬು, ಹೊಂದಿಹ ಷೋಡಶಿ ಆ .. 

ನಿನ್ನ ನೋಡಿ  ಪ್ರೀತಿ ಮೂಡಿ ಆಸೆ ಚಿಮ್ಮಿ ಹೊಮ್ಮಿದೆ 

ನೀನೆಂದಿಗೂ ನನ ಬಾಳಿಗೆ ಆನಂದದಾ 

ಅರುಣರಾಗ, ಅರುಣರಾಗ, ಅರುಣರಾಗ ।।೧।।


ದಂತದ ಮೈಯ, ಮಲ್ಲಿಗೆ ನಗೆಯ, ಅಂದದ ಊರ್ವಶಿ 

ಮೇಘದ ಕುರುಳ, ಕೋಗಿಲೆ ಕಂಠ, ಗಳಿಸಿದ ಪ್ರೇಯಸಿ 

ನಿನ ನಗು ಕಣ್ಣ ತುಂಬಿ ಸ್ನೇಹ ಸಂಗ ಬೇಡಿದೆ 

ನೀನೆಂದಿಗೂ ನನ ಬಾಳಿಗೆ ಆನಂದದಾ 

ಅರುಣರಾಗ, ಅರುಣರಾಗ, ಅರುಣರಾಗ ।।೨।।

                     

Nagisalu Neenu (ನಗಿಸಲು ನೀನು)

Movie: Gaalimaatu (1981)

Singer: S Janaki

Song link: Click Here


Krishna.. aa..

Nagisalu neenu naguvenu naanu (2), nanondu bombeyu, nee sutradhari

Ninna, ediru, naa patradhari ||


Veeneyu naanu, vainika neenu, tantiya meetade, nudiyuvudenu aa..

Bayasida raaga nudisi, nee nalidaga, nanagu aananda ninninda ||


Kaanade ello, neeniralenu, kunisuve ninna, taalake nanna

Namta namtam ta, namta namtam ta, nam ta namtam ta, namtanam tanam, tananana tananana nananana aa..

Kai hididenna nadesu, karunisu harasu, nanna seve sveekariso ||


ಚಿತ್ರಗೀತೆ 


ಕೃಷ್ಣಾ .. 

ನಗಿಸಲು ನೀನು, ನಗುವೆನು ನಾನು (೨), ನಾನೊಂದು ಬೊಂಬೆಯು, ನೀ ಸೂತ್ರಧಾರಿ 

ನಿನ್ನಾ, ಎದಿರು, ನಾ ಪಾತ್ರಧಾರಿ ।।ಪ।।


ವೀಣೆಯು ನಾನು ವೈಣಿಕ ನೀನು, ತಂತಿಯ ಮೀಟದೆ ನುಡಿಯುವುದೇನು ಆ ..ಆ  

ಬಯಸಿದ ರಾಗ ನುಡಿಸಿ, ನೀ ನಲಿದಾಗ, ನನಗೂ ಆನಂದ ನಿನ್ನಿಂದಾ 

।।೧।।


ಕಾಣದೆ ಎಲ್ಲೋ ನೀನಿರಲೇನು, ಕುಣಿಸುವೆ ನಿನ್ನಾ, ತಾಳಕೆ ನನ್ನಾ

ನಂತ ನಂತಂತ, ನಂತ ನಂತಂತ, ನಂತ ನಂತಂತ, ನಂತನಂ ತನಂ 

ತನನನ ತನನನ ನನನನ ಆ ಆ .. 

ಕೈ ಹಿಡಿದೆನ್ನ ನಡೆಸು, ಕರುಣಿಸು ಹರಸು, ನನ್ನಾ ಸೇವೆ ಸ್ವೀಕರಿಸೊ 

।।೨।।

                                    

Muttinantha Maatondu (ಮುತ್ತಿನಂಥ ಮಾತೊಂದು)

Movie: Bahaddur Gandu (1976)

Singer: Dr. Rajkumar

Song link: Click Here


Haaduva daniyella shruti serabeku

Noduva notadali hita kanabeku

Aaduva maatinali.. preeti irabeku ! aa..aa

Muttinantha maatondu gottenamma, ninage gottenamma

Naavu kalakke takkante nadeyabeku, endu talakke takkante kuniyabeku ||


Siritanavendu shaswathavalla, bada janarendu pranigalalla

Devara aata ballavarilla, baalina marma aritavarilla

Nenne tanaka haayagi suppattige

Indu manne gatiyaytu ee mayyige

Endu aalagaballavane arasaaguva, olle arasaaguva..he ||


Kappane moda karagalebeku, aagasadinda iliyalebeku

Kote katti maredavarella enadaru

Meese tiruvi kunidorella mannadaru

Innu neenyava lekka helu sukumaariye ayyo hemmariye..he ||


Srimantikeyu mereyalu alla, rajakumari devateyalla

Hasivu nidde kopa taapa ninagu ide

Ninnante roshaavesha namagu ide

Ee nijavannu aritaga hennaguve, illa mann tinnuve..he ||


ಚಿತ್ರಗೀತೆ 


ಹಾಡುವ ದನಿಯೆಲ್ಲ ಶೃತಿ ಸೇರಬೇಕು 

ನೋಡುವ ನೋಟದಲಿ ಹಿತ ಕಾಣಬೇಕು 

ಆಡುವ ಮಾತಿನಲೀ, ಪ್ರೀತಿ ಇರಬೇಕು, ಆ .. ಆ 

ಮುತ್ತಿನಂಥ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮ 

ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು ।।ಪ।।


ಸಿರಿತನವೆಂದೂ ಶಾಶ್ವತವಲ್ಲ, ಬಡ ಜನರೆಂದೂ ಪ್ರಾಣಿಗಳಲ್ಲ 

ದೇವರ ಆಟ ಬಲ್ಲವರಿಲ್ಲ, ಬಾಳಿನ ಮರ್ಮ ಅರಿತವರಿಲ್ಲ 

ನೆನ್ನೆ ತನಕ ಹಾಯಾಗಿ ಸುಪ್ಪತ್ತಿಗೆ 

ಇಂದು ಮಣ್ಣೇ ಗತಿಯಾಯ್ತು ಈ ಮೈಯ್ಯಿಗೆ 

ಎಂದೂ ಆಳಾಗಬಲ್ಲವನೇ ಅರಸಾಗುವ, ಒಳ್ಳೆ ಅರಸಾಗುವ .. ಹೇ 

।।೧।।


ಕಪ್ಪನೆ ಮೋಡ ಕರಗಲೆಬೇಕು, ಆಗಸದಿಂದ ಇಳಿಯಲೆಬೇಕು 

ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು 

ಮೀಸೆ ತಿರುವಿ ಕುಣಿದೋರೆಲ್ಲ ಮಣ್ಣಾದರು 

ಇನ್ನು ನೀನ್ಯಾವ ಲೆಕ್ಕ ಹೇಳು ಸುಕುಮಾರಿಯೇ ಅಯ್ಯೋ ಹೆಮ್ಮಾರಿಯೇ .. ಹೇ  ।।೨।।


ಶ್ರೀಮಂತಿಕೆಯು ಮೆರೆಯಲು ಅಲ್ಲ, ರಾಜಕುಮಾರಿ ದೇವತೆಯಲ್ಲ 

ಹಸಿವು ನಿದ್ದೆ ಕೋಪ ತಾಪ ನಿನಗೂ ಇದೆ 

ನಿನ್ನಂತೆ ರೋಷಾವೇಶ ನಮಗೂ ಇದೆ 

ಈ ನಿಜವನ್ನ ಅರಿತಾಗ ಹೆಣ್ಣಾಗುವೆ, ಇಲ್ಲ ಮಣ್ಣ್ ತಿನ್ನುವೆ ..ಹೇ ।।೩।।

                                     

Thursday, September 26, 2024

Ningi Ningi Ningi Ningi (ನಿಂಗಿ ನಿಂಗಿ ನಿಂಗಿ ನಿಂಗಿ)

Movie: Hoovu Hannu (1993)

Singer: C Ashwath

Song link: Click Here


Hoyyaare hoyyaa, hoyyaare hoyyaa 

Hoyyaare hoyyaa re hoi!

Ningi ningi ningi ningi, niddi kaddiyalle ningi

Ningi ningi ningi ningi, aasi edditalle ningi

Chandana chandra        CHO: hoyyare hoyya

Bhumeega landra           CHO: hoyyare hoyya

Aagyana nodalli ||


Varinota beeruvaki, nachikondu nintiyaka

Balidinda holuvaaki, baagilaga irabeka

Yaka hinga kaaduti, noyu hanga maaduti

Illi nanga taaguti, henna baana huduti lala..||


Niddi embudu ondu devati, premigaligaaki savati

Ena garati, ninna savati, bandareega ena maaduti

Yaka tada maadati, vyali mukha noduti

Chandramukhi holuti, yava sukha beduti lala..||


ಚಿತ್ರಗೀತೆ 


ಹೊಯ್ಯಾರೆ ಹೊಯ್ಯಾ, ಹೊಯ್ಯಾರೆ ಹೊಯ್ಯಾ 

ಹೊಯ್ಯಾರೆ ಹೊಯ್ಯಾ ರೇ ಹೊಯ್ !

ನಿಂಗಿ ನಿಂಗಿ ನಿಂಗಿ ನಿಂಗಿ, ನಿದ್ದೀ ಕದ್ದೀಯಲ್ಲೆ ನಿಂಗಿ 

ನಿಂಗಿ ನಿಂಗಿ ನಿಂಗಿ ನಿಂಗಿ, ಆಸಿ ಎದ್ದೀತಲ್ಲೆ ನಿಂಗಿ 

ಚಂದಾನ ಚಂದ್ರ        ಚೊ: ಹೊಯ್ಯಾರೆ ಹೊಯ್ಯಾ

ಭೂಮೀಗ ಲಾಂದ್ರ     ಚೊ: ಹೊಯ್ಯಾರೆ ಹೊಯ್ಯಾ

ಆಗ್ಯಾನ ನೋಡಲ್ಲಿ ।।ಪ।।


ವಾರಿನೋಟ ಬೀರುವಾಕಿ, ನಾಚಿಕೊಂಡು ನಿಂತಿಯಾಕ 

ಬಾಳಿದಿಂಡ ಹೋಲುವಾಕಿ, ಬಾಗಿಲಾಗ ಇರಬೇಕ 

ಯಾಕ ಹಿಂಗ ಕಾಡುತಿ, ನೋಯು ಹಂಗ ಮಾಡುತಿ 

ಇಲ್ಲಿ ನಂಗ ತಾಗುತಿ, ಹೆಣ್ಣ ಬಾಣ ಹೂಡುತಿ ।।೧।।


ನಿದ್ದಿ ಎಂಬುದು ಒಂದು ದೇವತಿ, ಪ್ರೇಮಿಗಳಿಗಾಕಿ ಸವತಿ 

ಏನ ಗರತಿ, ನಿನ್ನ ಸವತಿ, ಬಂದರೀಗ ಏನ ಮಾಡುತಿ 

ಯಾಕ ತಡ ಮಾಡತಿ, ವ್ಯಾಳಿ ಮುಖ ನೋಡುತಿ 

ಚಂದ್ರಮುಖಿ ಹೋಲುತಿ, ಯಾವ ಸುಖ ಬೇಡುತಿ ।।೨।।

                       

Ninna Kanna Notadalle (ನಿನ್ನ ಕಣ್ಣ ನೋಟದಲ್ಲೆ)

Movie: Babruvahana (1977)

Singer: P B Srinivas

Song link: Click Here


Ninna kanna notadalle, nooru aase kandenu (2)

Ninna tutiya naguvinalli, nanne maretu hodenu

Ninna kanna notadalle, nooru aase kandenu ||


Ninna naduva kandu taane balli balukitu (2)

Ninna nadeya kanda hamse nachi oditu (2)

Ninna natya kandu navilu kuniyadayitu

Cheluvinarasi, nanna manavu, indu ninnadayitu

Ninna kanna notadalle, nooru aase kandenu ||


Solanendu kaanadantha, veera parthanu (2)

Ninna kanna baanadinda, sotu hodanu (2)

Cheluve ninna, snehadalli, karagi hodenu

Tolinalli balasidaga, naane neenadenu 

Ninna kanna notadalle, nooru aase kandenu ||


ಚಿತ್ರಗೀತೆ 


ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು (೨)

ನಿನ್ನ ತುಟಿಯ ನಗುವಿನಲ್ಲಿ, ನನ್ನೆ ಮರೆತು ಹೋದೆನೂ 

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।ಪ।।


ನಿನ್ನ ನಡುವ ಕಂಡು ತಾನೆ ಬಳ್ಳಿ ಬಳುಕಿತು (೨)

ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು (೨)

ನಿನ್ನ ನಾಟ್ಯ ಕಂಡು ನವಿಲು ಕುಣಿಯದಾಯಿತು 

ಚೆಲುವಿನರಸಿ, ನನ್ನ ಮನವು, ಇಂದು ನಿನ್ನದಾಯಿತು 

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।೧।।


ಸೋಲನೆಂದು ಕಾಣದಂಥ, ವೀರ ಪಾರ್ಥನು (೨)

ನಿನ್ನ ಕಣ್ಣ ಬಾಣದಿಂದ, ಸೋತು ಹೋದನು (೨)

ಚೆಲುವೆ ನಿನ್ನ, ಸ್ನೇಹದಲ್ಲಿ, ಕರಗಿ ಹೋದೆನು 

ತೋಳಿನಲ್ಲಿ ಬಳಸಿದಾಗ, ನಾನೇ ನೀನಾದೆನು

ನಿನ್ನ ಕಣ್ಣ ನೋಟದಲ್ಲೆ, ನೂರು ಆಸೆ ಕಂಡೆನು ।।೨।।

                   


Panchamaveda Premada Naada (ಪಂಚಮವೇದ ಪ್ರೇಮದ ನಾದ)

Movie: Gejje Pooje (1970)

Singer: S Janaki

Song link: Click Here


Panchamaveda premada naada

Pranayada sarigama bhavananda

Hrudaya sangama anuraaga bandha

Raga ragini yoganu bandha ||


Jeeva jeevada swara sanchara

Amruta chetana rasadhara

Radha madhava venu vihara

Geeteya preetiya jeevana saara ||


Premagaanade paravasha ee dhare

Manasa lokada gangeya dhare

Divya digantada bhagya taare

Bhavya rasikate baaligasare ||


ಚಿತ್ರಗೀತೆ 


ಪಂಚಮವೇದ ಪ್ರೇಮದ ನಾದ 

ಪ್ರಣಯದ ಸರಿಗಮ ಭಾವಾನಂದ 

ಹೃದಯ ಸಂಗಮ ಅನುರಾಗ ಬಂಧಾ 

ರಾಗರಾಗಿಣಿ ಯೋಗಾನು ಬಂಧಾ ।।ಪ।।


ಜೀವ ಜೇವದ ಸ್ವರ ಸಂಚಾರ 

ಅಮೃತ ಚೇತನ ರಸಧಾರ 

ರಾಧಾ ಮಾಧವ ವೇಣು ವಿಹಾರ 

ಗೀತೆಯ ಪ್ರೀತಿಯ ಜೀವನ ಸಾರ ।।೧।।


ಪ್ರೇಮ ಗಾನದೆ ಪರವಶ ಈ ಧರೆ 

ಮಾನಸ ಲೋಕದ ಗಂಗೆಯ ಧಾರೆ 

ದಿವ್ಯ ದಿಗಂತದ ಭಾಗ್ಯ ತಾರೆ 

ಭವ್ಯ ರಸಿಕತೆ ಬಾಳಿಗಾಸರೆ ।।೨।।

       


Ninna Lagna Patrike (ನಿನ್ನ ಲಗ್ನ ಪತ್ರಿಕೆ)

Movie: Amma (1986)

Singer: S Janaki

Song link: Click Here


Ninna lagna patrike, enna kugi karedide

Ninna srimantike baa endide (2)

Naanenu baralilla, enagaase enu illa, enagaase enu illa ||


Nilukada hannige needide kaiya, balukuva balli bagideyayya (2)

Hannu kaige sikkare bedende enayya, ninnaya manava nambenayya

Naanenu baralilla, enagaase enu illa, enagaase enu illa ||


Seraganu hididu eleyuve eke, karedare barene kanna sannege (2)

Baliyali naanire jen madhuveke, naleya kanasu indetake

Naanenu baralilla, enagaase enu illa, enagaase enu illa 

Ninna lagna patrike, enna kugi karedide

Ninna srimantike baa endide (3) ||


ಚಿತ್ರಗೀತೆ 


ನಿನ್ನ ಲಗ್ನ ಪತ್ರಿಕೆ, ಎನ್ನ ಕೂಗಿ ಕರೆದಿದೆ 

ನಿನ್ನ ಶ್ರೀಮಂತಿಕೆ ಬಾ ಎಂದಿದೆ (೨)

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

।।ಪ।।


ನಿಲುಕದ ಹಣ್ಣಿಗೆ ನೀಡಿದೆ ಕೈಯ, ಬಳುಕುವ ಬಳ್ಳಿ ಬಾಗಿದೆಯಯ್ಯ (೨)

ಹಣ್ಣು ಕೈಗೆ ಸಿಕ್ಕರೆ ಬೇಡೆಂದೆ ಏನಯ್ಯ, ನಿನ್ನಯ ಮನವ ನಂಬೇನಯ್ಯ                     

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

।।೧।।


ಸೆರಗನು ಹಿಡಿದು ಎಳೆಯುವೆ ಏಕೆ, ಕರೆದರೆ ಬರೆನೆ ಕಣ್ಣ ಸನ್ನೆಗೆ (೨)

ಬಳಿಯಲಿ ನಾನಿರೆ ಜೇನ್ ಮಧುವೇಕೆ, ನಾಳೆಯ ಕನಸು ಇಂದೇತಕೆ 

ನಾನೇನು ಬರಲಿಲ್ಲ, ಎನಗಾಸೆ ಏನೂ ಇಲ್ಲ, ಎನಗಾಸೆ ಏನೂ ಇಲ್ಲ 

ನಿನ್ನ ಲಗ್ನ ಪತ್ರಿಕೆ, ಎನ್ನ ಕೂಗಿ ಕರೆದಿದೆ 

ನಿನ್ನ ಶ್ರೀಮಂತಿಕೆ ಬಾ ಎಂದಿದೆ (೩) ।।೨।।