Thursday, August 29, 2024

Hoovantha Hrudayavanu (ಹೂವಂಥ ಹೃದಯವನು)

Movie: Arunaraaga (1986)

Singer: Chitra

Song link: Click Here


Hoovantha hrudayavanu hinduvireke

Haalantha manasannu kalakuvireke

Jeenantha preetiyanu mareyuvireke

Sogasaada snehavanu kadaduvireke ||


Nuraru maatinda anakavanu maadi

Striyannu keelagi kadeganisabedi

Endendu vatsalya akkareya needi

Taayagi samsara poshaneya maadi

Anuraaga mamateyanu needolu naari ||


Gandemba hamminda darpavanu beeri

Nariyara charitrya vadhe maadabedi

Hengasaru abaleyaru endella tilidu

Dourjanya toridare samskrutiye iradu

Nimmellara iruvikeya ruvaari naari ||


ಚಿತ್ರಗೀತೆ 


ಹೂವಂಥ ಹೃದಯವನು ಹಿಂಡುವಿರೇಕೆ 

ಹಾಲಂಥ ಮನಸನ್ನು ಕಲಕುವಿರೇಕೆ 

ಜೇನಂಥ ಪ್ರೀತಿಯನು ಮರೆಯುವಿರೇಕೆ 

ಸೊಗಸಾದ ಸ್ನೇಹವನು ಕದಡುವಿರೇಕೆ ।।ಪ।।


ನೂರಾರು ಮಾತಿಂದ ಅಣಕವನು ಮಾಡಿ 

ಸ್ತ್ರೀಯನ್ನು ಕೀಳಾಗಿ ಕಡೆಗಣಿಸಬೇಡಿ 

ಎಂದೆಂದು ವಾತ್ಸಲ್ಯ ಅಕ್ಕರೆಯ ನೀಡಿ 

ತಾಯಾಗಿ ಸಂಸಾರ ಪೋಷಣೆಯ ಮಾಡಿ 

ಅನುರಾಗ ಮಮತೆಯನು ನೀಡೋಳು ನಾರಿ ।।೧।।


ಗಂಡೆಬ ಹಮ್ಮಿಂದ ದರ್ಪವನು ಬೀರಿ 

ನಾರಿಯರ ಚಾರಿತ್ರ್ಯ ವಧೆ ಮಾಡಬೇಡಿ 

ಹೆಂಗಸರು ಅಬಲೆಯರು ಎಂದೆಲ್ಲ ತಿಳಿದು 

ದೌರ್ಜನ್ಯ ತೋರಿದರೆ ಸಂಸ್ಕೃತಿಯೇ ಇರದು 

ನಿಮ್ಮೆಲ್ಲರ ಇರುವಿಕೆಯ ರೂವಾರಿ ನಾರಿ ।।೨।।

                 



Friday, August 23, 2024

Hodeya Doora O Jothegara (ಹೋದೆಯ ದೂರ ಓ ಜೊತೆಗಾರ)

Movie: Anubhava (1984)

Singer: Vani Jairam

Song link: Click Here


Hodeya doora o jothegaara, seralu bandaga

Nee ariyade hode, premada naa sandeshava tandaga

Nee shrutiya, mididaaga, haadide na, husi raaga

Toride nee anuraaga, gamanisade, teralide naa.. ||


Nalla, bali saari, mella, bigidaaga, talli duraade, ariyade naa

Madana, neenagi, mudadi, seledaaga, ratiya savileele, maretenu naa

Hoovina hasige nee hasi, mohadi nannanu karedaaga

Maadide naanu parihaasa, needade ninage ullasa

Savi irula, honganasa, muridenu naa.. ||


Megha, saridaaga, taare, holedaaga,chandra mareyada, nanna toreda

Yara, bali naanu, nova, nudidenu, iniya maretaga, sahisenu naa

Baalina chinteya baanagi, dumbiya kaanada hoovagi

Taalenu naanu ekanta, baruve nee endu o kanta

Koragutihe, marugutihe, virahadi naa..||


ಚಿತ್ರಗೀತೆ 


ಹೋದೆಯ ದೂರ ಓ ಜೊತೆಗಾರ, ಸೇರಲು ಬಂದಾಗ 

ನೀ ಅರಿಯದೆ ಹೋದೆ, ಪ್ರೇಮದ ನಾ ಸಂದೇಶವ ತಂದಾಗ 

ನೀ ಶೃತಿಯ, ಮಿಡಿದಾಗ, ಹಾಡಿದೆ ನಾ, ಹುಸಿ ರಾಗ 

ತೋರಿದೆ ನೀ ಅನುರಾಗ, ಗಮನಿಸದೆ, ತೆರಳಿದೆ ನಾ .. ।।ಪ।।


ನಲ್ಲ, ಬಳಿ ಸಾರಿ, ಮೆಲ್ಲ, ಬಿಗಿದಾಗ, ತಳ್ಳಿ ದೂರಾದೆ, ಅರಿಯದೆ ನಾ 

ಮದನ, ನೀನಾಗಿ, ಮುದದಿ, ಸೆಳೆದಾಗ ರತಿಯಾ ಸವಿಲೀಲೆ, ಮರೆತೆನು ನಾ 

ಹೂವಿನಾ ಹಾಸಿಗೆ ನೀ ಹಾಸಿ, ಮೋಹದಿ ನನ್ನನು ಕರೆದಾಗ 

ಮಾಡದೆ ನಾನು ಪರಿಹಾಸ, ಮುರಿದೆನು ನಾ.. ।।೧।।


ಮೇಘ, ಸರಿದಾಗ, ತಾರೆ, ಹೊಳೆದಾಗ, ಚಂದ್ರ, ಮರೆಯಾದ, ನನ್ನ ತೊರೆದಾ 

ಯಾರ, ಬಳಿ ನಾನು, ನೋವಾ, ನುಡಿದೇನು, ಇನಿಯಾ ಮರೆತಾಗ ಸಹಿಸೆನು ನಾ 

ಬಾಳಿನ ಚಿಂತೆಯ ಬಾನಾಗಿ, ದುಂಬಿಯ ಕಾಣದ ಹೂವಾಗಿ 

ತಾಳೆನು ನಾನು ಏಕಾಂತ, ಬರುವೆ ನೀ ಎಂದು ಓ ಕಾಂತ 

ಕೊರಗುತಿಹೆ, ಮರುಗುತಿಹೆ, ವಿರಹದಿ ನಾ .. ।।೨।।

                    



He Dinakara (ಹೇ ದಿನಕರ)

Movie: Om (1995)

Singer: Dr, Rajkumar

Song link: Click Here


 Om, om, om brahmananda omkara

Atmananda sahakara, om vedantarya jhenkara

Aadhaytmadi madhusaara !


He dinakara shubhakara dharege baa

Ee dharaniya degula belagu baa

Neegisu baalina aham, aham, aham..

Manasa mandira tumbu omkara naadavo

Om,  brahmananda omkara

Atmananda sahakaara, om vedantarya jhenkaara

Aadhaytmadi madhusaara ||


Naguva manase saaku namage, hagaluganase beda

Maneya tumba preeti saaku, belli chinna beda

Tande taaye daiva, guruve namma jeeva

Emba divya mantra, namma hrudaya tumbisu.. ||


Satya helo kannadiyante antaranga maadu

Daye toro dharaniyantha manodharma needu

Nonda ella jeeva, nanndemba bhava

Balinalli tumbo, vidye vinaya karuniso..||


ಚಿತ್ರಗೀತೆ 


ಓಂ, ಓಂ, ಓಂ ಬ್ರಹ್ಮಾನಂದ ಓಂಕಾರ 

ಆತ್ಮಾನಂದ ಸಹಕಾರ, ಓಂ ವೇದಾಂತರ್ಯ ಝೇಂಕಾರ 

ಅಧ್ಯಾತ್ಮಾದಿ ಮಧುಸಾರ !


ಹೇ ದಿನಕರ ಶುಭಕರ ಧರೆಗೆ ಬಾ, ಈ ಧರಣಿಯ ದೇಗುಲ ಬೆಳಗು ಬಾ 

ನೀಗಿಸು ಬಾಳಿನ ಅಹಂ, ಅಹಂ, ಅಹಂ.. 

ಮಾನಸ ಮಂದಿರ ತುಂಬು ಓಂಕಾರ ನಾದವೋ 

ಓಂ, ಬ್ರಹ್ಮಾನಂದ ಓಂಕಾರ 

ಆತ್ಮಾನಂದ ಸಹಕಾರ, ಓಂ ವೇದಾಂತರ್ಯ ಝೇಂಕಾರ 

ಅಧ್ಯಾತ್ಮಾದಿ ಮಧುಸಾರ !


ನಗುವ ಮನಸೆ ಸಾಕು ನಮಗೆ, ಹಗಲುಗನಸೆ ಬೇಡ

ಮನೆಯ ತುಂಬ ಪ್ರೀತಿ ಸಾಕು, ಬೆಳ್ಳಿ ಚಿನ್ನ ಬೇಡ 

ತಂದೆ ತಾಯೆ ದೈವ, ಗುರುವೆ ನಮ್ಮ ಜೀವಾ 

ಎಂಬ ದಿವ್ಯ ಮಂತ್ರ, ನಮ್ಮ ಹೃದಯಾ ತುಂಬಿಸು .. !


ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು 

ದಯೆ ತೋರೋ ಧರಣಿಯಂಥ ಮನೋಧರ್ಮ ನೀಡು 

ನೊಂದ ಎಲ್ಲ ಜೀವಾ, ನನ್ನದೆಂಬ ಭಾವಾ 

ಬಾಳಿನಲ್ಲಿ ತುಂಬೋ, ವಿದ್ಯೆ ವಿನಯ ಕರುಣಿಸೋ .. !

                      

Thursday, August 22, 2024

Sri Krishnam Jagat Karanam (ಶ್ರೀ ಕೃಷ್ಣಂ ಜಗತ್ ಕಾರಣಂ)

Movie: Krishnam Pranaya Sakhi (2024)

Singer: Rakshita Suresh

Song link: Click Here


Sri krishnam jagat karanam, jagadeka jaganmohanam

Sri krihnam jagat paalakam, jaya jaya he jagannayakam

Jagat paadukam, jagad rakshakam, jagad vanditam, jagad chalakam

Govinda, gopala, mathuapuri bala, aananda lola krihna..!


Aatura padadante, aayudha iradante, yuddhava nee gedde.. leelamaya

Neenilladenilla, nnindale ella, ee satyava nudide geetamaya

Neenade purushottama, hari neene lokottama

Jagat poshakam, jagad veekshakam, jagad shasakam, jagad prerakam

Naa ninna nenapalli, nee nanna manadalli, iruvante harasu krishna..!


Andanda brahmanda, tumbide ninnalli, na ninnalondade bhagavantane

Venu swara sanchri, dasha roop avataari, neeniruve nanagaagi paramatmane

Omkara ninna rupavo, shreenkara pratirupavo

Jagad shobhtam, jayam vardhitam, jagad chetanam, jagadeeshwaram

Jagavanne nadesone, jagavella ninadene, maribeda nanna krishna..!


Sri krishnam jagat karanam, jagadeka jaganmohanam

Sri krihnam jagat paalakam, jaya he jagannayakam !


ಚಿತ್ರಗೀತೆ 


ಶ್ರೀ  ಕೃಷ್ಣಂ ಜಗತ್ ಕಾರಣಂ, ಜಗದೇಕ ಜಗನ್ಮೋಹನಂ 

ಶ್ರೀ ಕೃಷ್ಣಂ ಜಗತ್ ಪಾಲಕಂ, ಜಯ ಜಯ ಹೇ ಜಗನ್ನಾಯಕಂ 

ಜಗತ್ ಪಾದುಕಂ, ಜಗದ್ ರಕ್ಷಕಂ, ಜಗದ್ ವಂದಿತಂ, ಜಗದ್ ಚಾಲಕಂ 

ಗೋವಿಂದ, ಗೋಪಾಲ, ಮಥುರಾಪುರೀ ಬಾಲ, ಆನಂದ ಲೋಲ ಕೃಷ್ಣಾ  ।।ಪ।।


ಆತುರ ಪಡದಂತೆ, ಆಯುಧ ಇರದಂತೆ, ಯುದ್ಧವ ನೀ ಗೆದ್ದೇ, ಲೀಲಾಮಯಾ 

ನೀನಿಲ್ಲದೇನಿಲ್ಲ, ನಿನ್ನಿಂದಲೇ ಎಲ್ಲಾ, ಈ ಸತ್ಯವಾ ನುಡಿದೆ ಗೀತಾಮಯಾ  

ನೀನಾದೆ  ಪುರುಷೋತ್ತಮಾ, ಹರಿ ನೀನೆ ಲೋಕೋತ್ತಮಾ 

ಜಗತ್ ಪೋಷಕಂ, ಜಗದ್ ವೀಕ್ಷಕಂ, ಜಗದ್ ಶಾಸಕಂ, ಜಗದ್ ಪ್ರೇರಕಂ 

ನಾ ನಿನ್ನ ನೆನಪಲ್ಲಿ, ನೀ ನನ್ನ ಮನದಲ್ಲಿ, ಇರುವಂತೆ ಹರಸು ಕೃಷ್ಣಾ ।।೧।।


ಅಂಡಾಂಡ ಬ್ರಹ್ಮಾಂಡ, ತುಂಬಿದೆ ನಿನ್ನಲ್ಲಿ, ನಾ ನಿನ್ನಲೊಂದಾದೇ ಭಗವಂತನೇ 

ವೇಣು ಸ್ವರ ಸಂಚಾರಿ, ದಶ ರೂಪ ಅವತಾರಿ, ನೀನಿರುವೆ ನನಗಾಗಿ ಪರಮಾತ್ಮನೇ 

ಓಂಕಾರ ನಿನ್ನ ರೂಪವೋ, ಶ್ರೀ೦ಕಾರ ಪ್ರತಿರೂಪವೋ 

ಜಗತ್ ಶೋಭಿತಂ, ಜಯಂ ವರ್ಧಿತಂ, ಜಗದ್ ಚೇತನಂ, ಜಗಧೀಶ್ವರಂ 

ಜಗವನ್ನೆ ನಡೆಸೋನೆ, ಜಗವೆಲ್ಲ ನಿನದೇನೇ, ಮರೀಬೇಡ ನನ್ನ ಕೃಷ್ಣಾ ।।೨।।


ಶ್ರೀ  ಕೃಷ್ಣಂ ಜಗತ್ ಕಾರಣಂ, ಜಗದೇಕ ಜಗನ್ಮೋಹನಂ 

ಶ್ರೀ ಕೃಷ್ಣಂ ಜಗತ್ ಪಾಲಕಂ, ಜಯ ಹೇ ಜಗನ್ನಾಯಕಂ !

                   


Belli Hakkiyaguva (ಬೆಳ್ಳಿ ಹಕ್ಕಿಯಾಗುವ)

Movie: Emme Tammanna (1966)

Singer: S Janaki, P B Srinivas

Song link: Click Here


Belli hakkiyaguva, belli modake eruva (2)

Doora doora saaguva, naave naave aaguva (2)

Haaruva.... teluva.... aanandade

Belli hakkiyaguva, belli modake eruva ||


Noorondu daari namagagide, baanache oore bali bandide

Ene aadaru elle hodaru (2), naane neenu endagide

Belli hakkiyaguva, belli modake eruva ||


Hoo mele dumbi sukhavaagide, santosha geete modalaagide

Kannu tumbide, maatu kugide, innu eko nee durade

Belli hakkiyaguva, belli modake eruva ||


ಚಿತ್ರಗೀತೆ 


ಬೆಳ್ಳಿ ಹಕ್ಕಿಯಾಗುವ, ಬೆಳ್ಳಿ ಮೋಡಕೆ ಏರುವ (೨)

ದೂರ ದೂರ ಸಾಗುವ, ನಾವೇ ನಾವೇ ಆಗುವ (೨)

ಹಾರುವ .... ತೇಲುವ .... ಆನಂದದೆ 

ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।ಪ।।


ನೂರೊಂದು'ದಾರಿ ನಮಗಾಗಿದೆ, ಬಾನಾಚೆ ಊರೇ ಬಳಿ ಬಂದಿದೆ 

ಏನೇ ಆದರೂ ಎಲ್ಲೇ ಹೋದರೂ, ನಾನೇ ನೀನು ಎಂದಾಗಿದೆ 

ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।೧।।


ಹೂ ಮೇಲೆ ದುಂಬಿ ಸುಖವಾಗಿದೆ, ಸಂತೋಷ ಗೀತೆ ಮೊದಲಾಗಿದೆ 

ಕಣ್ಣು ತುಂಬಿದೆ, ಮಾತು ಕೂಗಿದೆ, ಇನ್ನೂ ಏಕೋ ನೀ ದೂರದೆ 

ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।೨।।

                      

Monday, August 19, 2024

Aaseya Bhava (ಆಸೆಯ ಭಾವ)

Movie: Mangalya Bhagya (1976)

Singer: SPB

Click Here: Click Here


Aaseya bhava, olavina jeeva, ondagi bandide (2)

Hosa bage gungina nishe taaneridantide

Aaseya bhava, olavina jeeva, ondagi bandide ||


Kaamana billinali kaanada kantiyanu

Chimmisi hommuva cheluvike illide

Premada seemeyali sourabha tumbida

Baadada hoovina kiru nage chellide

Baalina bhagya nouke teera seri teli telide

Manasina roopa mangala deepa aananda tandide

Hosa bage gungina nishe taaneridantide

Aaseya bhava, olavina jeeva, ondagi bandide ||


Kannina sanneyali kavyava nee bareve

Hejjeya bhavake hamsave nachide

Gaaliya beesinali gaanavu neenade

Nannede spandana ninnade chetana

Premada leelealli jeeva bhava natyavaadide

Jeevana jyothi, needuta shanti, vaibhoga tandide

Hosa bage gungina nishe taaneridantide

Aaseya bhava, olavina jeeva, ondagi bandide ||


Doorada hrudayagala sanihada begeyali

Virahada vedane mugilanu seride 

Teerada dahadali meerida kaatarake

Mereye illada tuditavu tumbide

Yavudo modiyalli lokavella tugi saagide

Premada jodi baalali kudi haayagi haadide

Hosa bage gungina nishe taaneridantide

Aaseya bhava, olavina jeeva, ondagi bandide ||


ಚಿತ್ರಗೀತೆ 


ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ (೨)

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।ಪ।।


ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು

 ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ 

ಪ್ರೇಮದ ಸೀಮೆಯಲಿ ಸೌರಭ ತುಂಬಿದ 

ಬಾಡದ ಹೂವಿನ ಕಿರು ನಗೆ ಚೆಲ್ಲಿದೆ 

ಬಾಳಿನ ಭಾಗ್ಯ ನೌಕೆ ತೀರ ಸೇರಿ ತೇಲಿ ತೇಲಿದೆ 

ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೧।।


ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆವೆ  

ಹೆಜ್ಜೆಯ ಭಾವಕೆ ಹಂಸವೆ ನಾಚಿದೆ 

ಗಾಳಿಯ ಬೀಸಿನಲಿ ಗಾನವು ನೀನಾದೆ 

ನನ್ನೆದೆ ಸ್ಪಂದನ ನಿನ್ನದೇ ಚೇತನ 

ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ 

ಜೀವನ ಜ್ಯೋತಿ, ನೀಡುತ ಶಾಂತಿ, ವೈಭೋಗ ತಂದಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೨।।


ದೂರದ ಹೃದಯಗಳ ಸನಿಹದ ಬೇಗೆಯಲಿ 

ವಿರಹದ ವೇದನೆ ಮುಗಿಲನು ಸೇರಿದೆ 

ತೀರದ ದಾಹದಲಿ ಮೀರಿದ ಕಾತರಕೆ 

ಮೇರೆಯ ಇಲ್ಲದಾ ತುಡಿತವು ತುಂಬಿದೆ 

ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ 

ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ 

ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ 

ಆಸೆಯ ಭಾವ, ಒಲವಿನ ಜೀವಾ, ಒಂದಾಗಿ ಬಂದಿದೆ ।।೨।।

                        

Amma Node Kannbittu (ಅಮ್ಮಾ ನೋಡೆ ಕಣ್ಬಿಟ್ಟ)

Movie: Beedi Basavanna (1967)

Singer: P B Srinivas

Song link: Click Here


Amma..amma|

Amma node kannittu ninnaya magana olaguttu (2)

Kaiya neenu chachabeda enna hinde barabeda

Endinante baiyyabeda hedi ennabeda

Amma node kannittu ninnaya magana olaguttu

 Amma..amma!


Aaseya alle adimittu, durade nille dayavittu (2)

Kabbina jalle balu sottu, sihiye adara olaguttu

Amma node kannittu ninnaya magana olaguttu

 Amma..amma !


Ennaya tayi kaituttu, ella devara takattu (2)

Gedditu aatade ivattu, kollamma nina sampattu

Amma node kannittu ninnaya magana olaguttu

 Amma..amma!


ಚಿತ್ರಗೀತೆ 


ಅಮ್ಮಾ .. ಅಮ್ಮಾ ।

ಅಮ್ಮಾ ನೋಡೆ ಕಣ್ಬಿಟ್ಟು  ನಿನ್ನಯ ಮಗನ ಒಳಗುಟ್ಟು (೨)

ಕೈಯ ನೀನು ಚಾಚಬೇಡ ಎನ್ನ ಹಿಂದೆ ಬರಬೇಡ 

ಎಂದಿನಂತೆ ಬೈಯಬೇಡ ಹೇಡಿ ಎನ್ನಬೇಡ 

ಅಮ್ಮಾ ನೋಡೆ ಕಣ್ಣಿಟ್ಟು ನಿನ್ನಯ ಮಗನ ಒಳಗುಟ್ಟು

ಅಮ್ಮಾ .. ಅಮ್ಮಾ ।।ಪ।।


ಆಸೆಯ ಅಲ್ಲೇ ಅದಿಮಿಟ್ಟು ದೂರದೆ ನಿಲ್ಲೆ ದಯವಿಟ್ಟು (೨)

ಕಬ್ಬಿನ ಜಲ್ಲೆ ಬಲು ಸೊಟ್ಟು ಸಿಹಿಯೇ ಅದರ ಒಳಗುಟ್ಟು 

ಅಮ್ಮಾ ನೋಡೆ ಕಣ್ಬಿಟ್ಟು ನಿನ್ನಯ ಮಗನ ಒಳಗುಟ್ಟು

ಅಮ್ಮಾ .. ಅಮ್ಮಾ ।।೧।।


ಎನ್ನಯ ತಾಯಿ ಕೈತುತ್ತು ಎಲ್ಲ ದೇವರ ತಾಕತ್ತು (೨)

ಗೆದ್ದಿತು ಆಟದೆ ಇವತ್ತು ಕೊಳ್ಳಮ್ಮಾ ನಿನ ಸಂಪತ್ತು 

ಅಮ್ಮಾ ನೋಡೆ ಕಣ್ಬಿಟ್ಟು ನಿನ್ನಯ ಮಗನ ಒಳಗುಟ್ಟು

ಅಮ್ಮಾ .. ಅಮ್ಮಾ।।೨।।