Wednesday, August 7, 2024

Olume Poojegende (ಒಲುಮೆ ಪೂಜೆಗೆಂದೆ)

Movie: Anupama (1981)

Singers: SPB, S Janaki

Song link: Click Here


Olume poojegende, kareya keli bande,

Raaga taana, premagaana, sanjeevana ||


Mamate meeti milana kande, ninna sneha soubhagya minde,

Hareya tugi saniha bande, ella preeti sammoha tande,

Harusha tanda haadiye chenda (2), olavina sari romancha bandha ||


Jotheya seri baruve naanu, nanna baala bangara neenu,

Belaku neenu kirana naanu, ninna kudi hombisila baalu,

Ninage naanu nanage neenu (2), prema jeevana endendu jenu ||


ಚಿತ್ರಗೀತೆ 


ಒಲುಮೆ ಪೂಜೆಗೆಂದೆ, ಕರೆಯಾ ಕೇಳಿ ಬಂದೆ ,

ರಾಗ ತಾನ, ಪ್ರೇಮಗಾನ, ಸಂಜೀವನಾ ।।ಪ।।


ಮಮತೆ ಮೀಟಿ ಮಿಲನ ಕಂಡೆ, ನಿನ್ನ ಸ್ನೇಹ ಸೌಭಾಗ್ಯ ಮಿಂದೆ 

ಹರೆಯ ತೂಗಿ ಸನಿಹ ಬಂದೆ, ಎಲ್ಲಾ ಪ್ರೀತಿ ಸಮ್ಮೋಹ ತಂದೆ 

ಹರುಷ ತಂದ ಹಾದಿಯೆ ಚೆಂದ (೨), ಒಲವಿನ ಸರಿ ರೋಮಾಂಚ ಬಂಧ ।।೧।।


ಜೊತೆಯಾ ಸೇರಿ ಬರುವೆ ನಾನು, ನನ್ನ ಬಾಳ ಬಂಗಾರ ನೀನು 

ಬೆಳಕು ನೀನು ಕಿರಣ ನಾನು, ನಿನ್ನ ಕೂಡಿ ಹೊಂಬಿಸಿಲ ಬಾಳು 

ನಿನಗೆ ನಾನು ನನಗೆ ನೀನು (೨), ಪ್ರೇಮ ಜೀವನ ಎಂದೆಂದು ಜೇನು 

।।೨।।

                                

Olumeya Hoove (ಒಲುಮೆಯ ಹೂವೆ)

Movie: Punarjanma (1969)

Singer: P B Srinivas

Song link: Click Here


Olumeya hoove, nee hode ellige

Ulisi kanna neera, ee nanna baalige, o..gelati

Olumeya hoove, nee hode ellige ||


Madhumaya gaanavadu naduvalle nindudeke

Hagalina rajyadali kaarirulu bandudeke 

Ninnaya sanihadali naa kanda kanasugalu

Sada enna manade nenapaagabeke, o..gelati

Olumeya hoove, nee hode ellige ||


Baalina nandanade hoovagi nee bande

Indalli ulidihudu sougandhavonde

Ninnaya notagalu ninna moga ninna nage

Ide kangalolage neenelli hode, o..gelati

Olumeya hoove, nee hode ellige 

O..gelati, o..gelati, hm..hm ||


ಚಿತ್ರಗೀತೆ 


ಒಲುಮೆಯ ಹೂವೆ, ನೀ ಹೋದೆ ಎಲ್ಲಿಗೆ 

ಉಳಿಸಿ ಕಣ್ಣ ನೀರ, ಈ ನನ್ನ ಬಾಳಿಗೆ, ಓ .. ಗೆಳತಿ 

ಒಲುಮೆಯ ಹೂವೆ, ನೀ ಹೋದೆ ಎಲ್ಲಿಗೆ ।।ಪ।।


ಮಧುಮಯ ಗಾನವದು ನಡುವಲ್ಲೆ ನಿಂದುದೇಕೆ 

ಹಗಲಿನ ರಾಜ್ಯದಲಿ ಕಾರಿರುಳು ಬಂದುದೇಕೆ 

ನಿನ್ನಯ ಸನಿಹದಲಿ ನಾ ಕಂಡ ಕನಸುಗಳು 

ಸದಾ ಎನ್ನ ಮನದೆ ನೆನಪಾಗಬೇಕೆ, ಓ .. ಗೆಳತಿ 

ಒಲುಮೆಯ ಹೂವೆ, ನೀ ಹೋದೆ ಎಲ್ಲಿಗೆ ।।೧।।


ಬಾಳಿನಾ  ನಂದನದೆ ಹೂವಾಗಿ ನೀ ಬಂದೆ 

ಇಂದಲ್ಲಿ ಉಳಿದಿಹುದು ಸೌಗಂಧವೊಂದೆ 

ನಿನ್ನಯ ನೋಟಗಳು ನಿನ್ನ ಮೊಗ ನಿನ್ನ ನಗೆ 

ಇದೇ ಕಂಗಳೊಳಗೆ ನೀನೆಲ್ಲಿ ಹೋದೆ, ಓ .. ಗೆಳತಿ 

ಒಲುಮೆಯ ಹೂವೆ, ನೀ ಹೋದೆ ಎಲ್ಲಿಗೆ

ಓ .. ಗೆಳತಿ, ಓ .. ಗೆಳತಿ, ಹೂಂ ..ಹೂಂ ।।೨।।

                       



Monday, August 5, 2024

Baare Nanna Deepika (ಬಾರೆ ನನ್ನ ದೀಪಿಕಾ)

Bhavageete

Sahitya: N S Lakshminarayana Bhatta

Song link: Click Here


Baare nanna deepika

Madhura kavya roopaka

Kanna munde suliye neenu

Kaalada tere saridu taanu

Januma januma jnapaka ||


Ninna bogase kannige

Kenne jenu donnege

Sama yavude chenne ninna

Jade haradida bennige? ||


Ninna kanasu baalige

Dhupadante gaalige

Beesi baralu, jeeva higgi

Vashavaayite daalige ||


Mugila maale nabhadali

Haala pairu holadali

Roopisutide ninna preeti

Kaviteyonda edeyali ||


ಭಾವಗೀತೆ 


ಬಾರೆ ನನ್ನ ದೀಪಿಕಾ 

ಮಧುರ ಕಾವ್ಯ ರೂಪಕ 

ಕಣ್ಣ ಮುಂದೆ ಸುಳಿಯೆ ನೀನು 

ಕಾಲದಾ ತೆರೆ ಸರಿದು ತಾನು 

ಜನುಮ ಜನುಮ ಜ್ಞಾಪಕ ।।ಪ।।


ನಿನ್ನ ಬೊಗಸೆ ಕಣ್ಣಿಗೆ 

ಕೆನ್ನೆ ಜೇನು ದೊನ್ನೆಗೆ 

ಸಮ ಯಾವುದೆ ಚೆನ್ನೆ ನಿನ್ನ 

ಜಡೆ ಹರಡಿದ ಬೆನ್ನಿಗೆ ? ।।


ನಿನ್ನ ಕನಸು ಬಾಳಿಗೆ 

ಧೂಪದಂತೆ ಗಾಳಿಗೆ 

ಬೀಸಿ ಬರಲು, ಜೀವ ಹಿಗ್ಗಿ 

ವಶವಾಯಿತು ದಾಳಿಗೆ ।।


ಮುಗಿಲ ಮಾಲೆ ನಭದಲಿ 

ಹಾಲ ಪೈರು ಹೊಲದಲಿ 

ರೂಪಿಸುತಿದೆ ನಿನ್ನ ಪ್ರೀತಿ 

ಕವಿತೆಯೊಂದ ಎದೆಯಲಿ ।।

           



Naguvudo Aluvudo (ನಗುವುದೋ ಅಳುವುದೋ)

Movie: Sampathige Sawal (1974)

Singer: P B Srinivas

Song link: Click Here


Naguvudo aluvudo neeve heli

Iruvudo biduvudo ee oorinali

Ee janara naduve naanu hege baalali

Aluvudo naguvudo, eega enu maadali ||


Badavara kambanige beleye illa,

Dhanikara vanchanege koneye illa,

Thalukina maatugala nambuvarella

Satyavanu nudidaaga sidiyuvarella, doora talluvaralla(2) ||


Taayiye maganannu nambade iralu,

Annane maneyinda horage tallalu,

Kaalave eduraagi vairiyaagalu

Attigeya kangalali kandenu naanu,

Matru vatsalyavanu (2) ||


Baddiya hana tindu badavara kondu,

Kobbida srimantane naa ninagindu,

Haakuve sampattige nanna savaalu,

Siritanada garvavanu metti nilluve,

Ninna sokku muriyuve (2) ||


ಚಿತ್ರಗೀತೆ 


ನಗುವುದೋ ಅಳುವುದೋ ನೀವೇ ಹೇಳಿ 

ಇರುವುದೋ ಬಿಡಿವುದೋ ಈ ಊರಿನಲಿ 

ಈ ಜನರ ನಡುವೆ ನಾನು ಹೇಗೆ ಬಾಳಲಿ 

ಅಳುವುದೋ ನಗುವುದೋ, ಈಗ ಏನು ಮಾಡಲಿ ।।ಪ।।


ಬಡವರ ಕಂಬನಿಗೆ ಬೆಲೆಯೇ ಇಲ್ಲ 

ಧನಿಕರ ವಂಚನೆಗೆ ಕೊನೆಯೇ ಇಲ್ಲ 

ಥಳುಕಿನಾ ಮಾತುಗಳ ನಂಬುವರೆಲ್ಲ 

ಸತ್ಯವನು ನುಡಿದಾಗ ಸಿಡಿಯುವರೆಲ್ಲ 

ದೂರ ತಳ್ಳುವರಲ್ಲ (೨) ।।೧।।


ತಾಯಿಯೇ ಮಗನನ್ನು ನಂಬದೆ ಇರಲು 

ಅಣ್ಣನೇ ಮನೆಯಿಂದ ಹೊರಗೆ ತಳ್ಳಲು 

ಕಾಲವೇ ಎದುರಾಗಿ ವೈರಿಯಾಗಲು 

ಅತ್ತಿಗೆಯ ಕಣ್ಗಳಲಿ ಕಂಡೆನು ನಾನು 

ಮಾತೃ ವಾತ್ಸಲ್ಯವನು (೨) ।।೨।।


ಬಡ್ಡಿಯ ಹಣ ತಿಂದು ಬಡವರ ಕೊಂದು 

ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು 

ಹಾಕುವೆ ಸಂಪತ್ತಿಗೆ ನನ್ನ ಸವಾಲು 

ಸಿರಿತನದ ಗರ್ವವನು ಮೆಟ್ಟಿ ನಿಲ್ಲುವೆ 

ನಿನ್ನ ಸೊಕ್ಕು ಮುರಿಯುವೆ (೨) ।।೩।।

         

Nammoornag Nanobne Jaana (ನಮ್ಮೂರ್ನಾಗ್ ನಾನೊಬ್ನೆ ಜಾಣ)

Movie: Naari Munidare Mari (1972)

Singer: SPB

Song link: Click Here


Nammoornag nanobne jaana(2)

Nan haadundre ellargu prana

Naa haadoke baibitre ha..

(hey baimucchu katte)

Haadoke baibitre sarsarne horadutte saptaswarada baana

Nammoornag nanobne jaana ||


Ho..ho ivandella burude purana

Ivan haadandre haarutte prana

Ivan haadoke baibitre (2)

Ha.. hedarkondu odutte nammura kona

Ivandella burude purana

Ha..ha Nammoornag nanobne jaana ||


Hod varsha ondsaari

Ondsaari kivdoornallayatitu ivana kacheri

DaNiSa MaDaNiSa MaPaDaNiSa GaMaPaDaNiSa

Ee varshsa keloke nanna kacheri

Allinda illinda jana gumpu seri

Hah hah atllinda oho itllinda

Ha atllinda itllinda hindlinda mundlinda

Marvaade madidru kallugala beeri

(Ayyayyo aamele nam maama)

Ee maama.. ee maama allinda kudle paraari hah..hah..

He..he..Nammoornag nanobne jaana

Nan haadundre ellargu panchaprana ||


Nan kunita andre ..

Andre adu nadeyabeku kurudurinalle

Na gejje katkondu hejje haktidre

Janarella dangaagi nagtare nodi

Hah hah ninna sanna hoi naduvanna

Ha ninna sanna naduvanna nodetge avarella

Ededdu bidbiddu hogtare odi

(Houda maama, aamele)

Mankagi hah hah mankagi haristale kannira kodi

Kannira kodi, ha ha aha ha ..hah..hah

Ivandella burude purana

Nammoornag nanobne jaana 

Haadundre haarutte prana ..illa..illa..

Haadoke baibittre, sar sarne horadutte saptaswarada baana

La la la .. la la la la la.. ||


ಚಿತ್ರಗೀತೆ 


ಆಹಾ .. ನಮ್ಮೂರ್ನಾಗ್ ನಾನೊಬ್ನೆ ಜಾಣ (೨)

ನನ್ ಹಾಡೂ೦ದ್ರೆ ಎಲ್ಲಾರ್ ಗೂ  ಪ್ರಾಣ 

ನಾ ಹಾಡೋಕೆ ಬಾಯ್ಬಿಟ್ರೆ ಹಾ .. 

(ಹೇಯ್ ಬಾಯ್ಮುಚ್ಚು ಕತ್ತೆ) 

ಹಾಡೋಕೆ ಬಾಯ್ಬಿಟ್ರೆ ಸರ್ ಸರ್ನೆ ಹೊರಡುತ್ತೆ ಸಪ್ತಸ್ವರದ ಬಾಣ 

ನಮ್ಮೂರ್ನಾಗ್ ನಾನೊಬ್ನೆ ಜಾಣ ।


ಹೋ ಹೋ .. ಇವನ್ದೆಲ್ಲ ಬುರುಡೆ ಪುರಾಣ 

ಇವನ್ ಹಾಡಂದ್ರೆ ಹಾರುತ್ತೆ ಪ್ರಾಣ 

ಇವನ್ ಹಾಡೋಕೆ ಬಾಯ್ಬಿಟ್ರೆ (೨)

ಹಾ .. ಹೆದರ್ಕೊಂಡು ಓಡುತ್ತೆ ನಮ್ಮೂರ ಕೋಣ 

 ಇವನ್ದೆಲ್ಲ ಬುರುಡೆ ಪುರಾಣ 

ಹಾ ಹಾ .. ನಮ್ಮೂರ್ನಾಗ್ ನಾನೊಬ್ನೆ ಜಾಣ।


ಹೋದ್ ವರ್ಷ, ಒಂದ್ಸಾರಿ 

ಒಂದ್ಸಾರಿ, ಕಿವಡೂರ್ನಲ್ಲಾ ಯಿ ತು  ಇವನ ಕಛೇರಿ 

ದನಿಸ ಮದನಿಸ ಮಪದನಿಸ ಗಮಪದನಿಸ 

ಈ ವರ್ಷ ಕೇಳೋಕೆ ನನ್ನ ಕಛೇರಿ 

 ಅತ್ಲಿ೦ದ, ಇತ್ಲಿ೦ದ, ಜನ ಗುಂಪು ಸೇರಿ 

ಹ ಹ ಅತ್ಲಿ೦ದ, ಇತ್ಲಿ೦ದ, ಹಿಂದ್ಲಿ೦ದ, ಮುಂದ್ಲಿದ 

ಮರ್ವಾದೆ ಮಾಡಿದ್ರು ಕಲ್ಲುಗಳ ಬೀರಿ 

(ಅಯ್ಯಯ್ಯಯ್ಯೋ ಆಮೇಲೆ ನಮ್ ಮಾಮ)?

ಈ ಮಾಮ.. ಈ ಮಾಮ ಅಲ್ಲಿಂದ ಕೂಡ್ಲೇ ಪರಾರಿ ಹ್ಹಹ್ಹ.. 

ಹೇ ಹೇ .. ನಮ್ಮೂರ್ನಾಗ್ ನಾನೊಬ್ನೆ ಜಾಣ

ನನ್ ಹಾಡೂ೦ದ್ರೆ ಎಲ್ಲಾರ್ ಗೂ  ಪಂಚಪ್ರಾಣ  ।

 

ನನ್ ಕುಣಿತ ಅಂದ್ರೇ 

ಅಂದ್ರೇ, ಅದು ನಡೆಯಬೇಕು ಕುರುಡೂರಿನಲ್ಲೇ 

ನಾ ಗೆಜ್ಜೆ ಕಟ್ಕೊಂಡು ಹೆಜ್ಜೆ ಹಾಕ್ತಿದ್ರೆ 

ಜನರೆಲ್ಲ ದಂಗಾಗಿ ನಗ್ತಾರೆ ನೋಡಿ 

ಹ ಹ  ನಿನ್ನ ಸಣ್ಣ ನಡುವನ್ನ 

ಹಾ ನಿನ್ನ ಸಣ್ಣ ನಡುವನ್ನ ನೋಡ್ಡೇಟ್ಗೆ  ಅವರೆಲ್ಲ 

ಎದ್ದೆದ್ದು ಬಿದ್ಬಿದ್ದು ಹೋಗ್ತಾರೆ ಓಡಿ 

(ಹೌದಾ ಮಾಮಾ, ಆಮೇಲೆ)

ಮಂಕಾಗಿ   ಹ್ಹಹ್ಹ, ಮಂಕಾಗಿ ಹರಿಸ್ತಾಳೆ ಕಣ್ಣೀರ ಕೋಡಿ 

ಕಣ್ಣೀರ ಕೋಡಿ, ಹಾ ಹಾ ಹಾ ಹಾ .... ಹ್ಹಹ್ಹ.... 

ಇವನ್ದೆಲ್ಲ ಬುರುಡೆ ಪುರಾಣ

 ನಮ್ಮೂರ್ನಾಗ್ ನಾನೊಬ್ನೆ ಜಾಣ

ಹಾಡಂದ್ರೆ ಹಾರುತ್ತೆ ಪ್ರಾಣ .. ಇಲ್ಲಾ ಇಲ್ಲಾ 

ಹಾಡೋಕೆ  ಬಾಯ್ಬಿಟ್ರೆ  ಸರ್ ಸರ್ನೆ ಹೊರಡುತ್ತೆ ಸಪ್ತಸ್ವರದ ಬಾಣ

ಲಾ ಲಾ ಲಾ  ಲಾ ಲಾ ಲಾ ಲಾ ಲಾ .. ।     

                                   


                              

Friday, August 2, 2024

Gopilola He Gopala (ಗೋಪಿಲೋಲ ಹೇ ಗೋಪಾಲ)

Movie: Naari Munidare Maari (1972)

Singer: P Susheela

Song link: Click Here


Krishna..

Gopilola..he gopala, ee jagavella ninnade jaala,

Etake ee leela? gopalakrishna etake ee leela ||


Neene tumbida aasegalalli, neene niraseya toruveya?

Neene urisida deepagalannu, neene aarisi noduveya,

Neene needida kannugalalli, neene tumbuve kambaniya,

Gopalakrishna tumbuve kambaniya ||


Sundara hoogala jotheyalliye nee, mullugalannu serisuve,

Bellane belakina jotheyale neenu, kari neralannu torisuve,

Nadi toregalanu lokake needi, adarali suliyanu adagisuve,

Gopalakrishna suliyanu adagisuve ||


Vidha vidhavaada notava torisi, pari pari aatava aadisuve,

Sukha dukhagala bhavagalinda, bage bage bannava modisuve,

Lokada ella sutrava hididu, elliyo adagi aadisuve,

Gopalakrishna adagi aadisuve ||


ಚಿತ್ರಗೀತೆ 


ಕೃಷ್ಣಾ .. 

ಗೋಪಿಲೋಲ ಹೇ ಗೋಪಾಲ, ಈ ಜಗವೆಲ್ಲಾ ನಿನ್ನದೇ ಜಾಲ 

ಏತಕೆ ಈ ಲೀಲಾ ? ಗೋಪಾಲಕೃಷ್ಣ ಏತಕೆ ಈ ಲೀಲಾ ।।ಪ।।


ನೀನೆ ತುಂಬಿದ ಆಸೆಗಳಲ್ಲಿ, ನೀನೆ ನಿರಾಸೆಯ ತೋರುವೆಯಾ 

ನೀನೆ ಉರಿಸಿದ ದೀಪಗಳನ್ನು, ನೀನೆ ಆರಿಸಿ ನೋಡುವೆಯಾ 

ನೀನೆ ನೀಡಿದ ಕಣ್ಣುಗಳಲ್ಲಿ, ನೀನೆ ತುಂಬುವೆ ಕಂಬನಿಯಾ 

ಗೋಪಾಲಕೃಷ್ಣ ತುಂಬುವೆ ಕಂಬನಿಯಾ  ।।೧।।


ಸುಂದರ ಹೂಗಳ ಜೊತೆಯಲ್ಲಿಯೇ ನೀ, ಮುಳ್ಳುಗಳನ್ನೂ ಸೇರಿಸುವೆ 

ಬೆಳ್ಳನೆ ಬೆಳಕಿನ ಜೊತೆಯಲೆ ನೀನು, ಕರಿ ನೆರಳನ್ನೂ ತೋರಿಸುವೆ 

ನದಿ ತೊರೆಗಳನು ಲೋಕಕೆ ನೀಡಿ, ಅದರಲಿ ಸುಳಿಯನು ಅಡಗಿಸುವೆ 

ಗೋಪಾಲಕೃಷ್ಣ ಸುಳಿಯನು ಅಡಗಿಸುವೆ ।।೨।।


ವಿಧ ವಿಧವಾದ ನೋಟವ ತೋರಿಸಿ, ಪರಿ ಪರಿ ಆಟವ ಆಡಿಸುವೆ 

ಸುಖ ದುಃಖಗಳ ಭಾವಗಳಿಂದ, ಬಗೆ ಬಗೆ ಬಣ್ಣವ ಮೂಡಿಸುವೆ 

ಲೋಕದ ಎಲ್ಲಾ ಸೂತ್ರವ ಹಿಡಿದು, ಎಲ್ಲಿಯೋ ಅಡಗಿ ಆಡಿಸುವೆ 

ಗೋಪಾಲಕೃಷ್ಣ ಅಡಗಿ ಆಡಿಸುವೆ ।।೩।।

                          



Mateya Mamateya Roopagale (ಮಾತೆಯ ಮಮತೆಯ ರೂಪಗಳೇ)

Movie: Naari Munidare Maari (1972)

Singer: P Susheela

Song link: Click Here


Mateya mamateya roopagale, ellara manegala deepagale

Malagi malagi haayagi, naleya aaseya kudiyagi

Llu..llu..llaayee (2) ||


Jo jo jo jo ennutali, jogula haaduva maateyarilla

Tammaya makkala muddadi, tottila tuguva kaigalu illa

Nanariye indu taitanava, aadaru balle ele manava

Adakaagi bandihe nimagaagi, nimmaya seveya saluvagi ||


Nimagindu lokavu neediruva, aluvella irali namagagi

Naleya balannu rupisuva, naguvella irali nimagagi

Ratriya naavu kaleyale beku, hagalannu kanuva saluvagi

Manava kuada hitakagi, neralannu needuva maravagi ||


ಚಿತ್ರಗೀತೆ 


ಮಾತೆಯ ಮಮತೆಯ ರೂಪಗಳೇ, ಎಲ್ಲರ ಮನೆಗಳ ದೀಪಗಳೇ 

ಮಲಗಿ ಮಲಗಿ ಹಾಯಾಗಿ, ನಾಳೆಯ ಆಸೆಯ ಕುಡಿಯಾಗಿ 

ಳು .. ಳು .. ಳ್ಳಾಯೀ (೨) ।।ಪ।।


ಜೋ ಜೋ ಜೋ ಜೋ ಎನ್ನುತಲಿ, ಜೋಗುಳ ಹಾಡುವ ಮಾತೆಯರಿಲ್ಲ 

ತಮ್ಮಯ ಮಕ್ಕಳ ಮುದ್ದಾಡಿ, ತೊಟ್ಟಿಲ ತೂಗುವ ಕೈಗಳೂ ಇಲ್ಲ 

ನಾನರಿಯೆ ಇಂದು ತಾಯ್ತನವ,ಆದರೂ ಬಲ್ಲೆ ಎಳೆ ಮನವ 

ಅದಕಾಗಿ ಬಂದಿಹೆ ನಿಮಗಾಗಿ, ನಿಮ್ಮಯ ಸೇವೆಯ ಸಲುವಾಗಿ 

।।೧।।


ನಿಮಗಿಂದು ಲೋಕವು ನೀಡಿರುವ, ಅಳುವೆಲ್ಲಾ ಇರಲಿ ನಮಗಾಗಿ 

ನಾಳೆಯ ಬಾಳನ್ನು ರೂಪಿಸುವ, ನಗುವೆಲ್ಲಾ ಇರಲಿ ನಿಮಗಾಗಿ 

ರಾತ್ರಿಯ ನಾವು ಕಳೆಯಲೇ ಬೇಕು, ಹಗಲನ್ನು ಕಾಣುವ ಸಲುವಾಗಿ 

ಮಾನವ ಕುಲದ ಹಿತಕಾಗಿ, ನೆರಳನ್ನು ನೀಡುವ ಮರವಾಗಿ ।।೨।।