Friday, March 1, 2024

Kappeya Haadu (ಕಪ್ಪೆಯ ಹಾಡು)

ಪದ್ಯ 

ಸಾಹಿತ್ಯ : ಗೋಪಾಲಕೃಷ್ಣ ಶಗ್ರಿತ್ತಾಯ 


ಮಣ್ಣ ಬಣ್ಣ ನೀಲಿ ಕಣ್ಣ 

ಸಣ್ಣ ಜೀವಿ ನಾನು  

ಸಂಜೆ ಹೊತ್ತು ಕೆರೆಯ ಸುತ್ತ 

ನೋಡಿರುವೆಯಾ ನೀನು ?


ಬೇಸಿಗೆಯಲಿ ನೆಲದ ಒಳಗೆ 

ವಾಸವಿರುವೆನು 

ಸುಡುವ ಬಿಸಿಲ ಕಾಲದಲ್ಲಿ 

ಅಡಗಿ ಬಿಡುವೆನು 


ಬಿತ್ತಿ ಬೆಳೆವ ಹಳ್ಳಿ ರೈತ 

ನನ್ನ ಗೆಳೆಯನು 

ನನ್ನ ಕೊರಳ ಹಾಡಿಗಾಗಿ 

ಕಾಯುತಿರುವನು 


ತುಂಟ ಹುಡುಗ ನನ್ನ ಕಂಡು 

ಕಲ್ಲು ಎಸೆವನು 

ಅವನು ಬರಲು ಮಾರು ದೂರ 

ಜಿಗಿದು ಬಿಡುವೆನು 


ಅದೋ ನೋಡು ಕೆರೇರಾಯ 

ಬರುತಲಿರುವನು 

ಆದ್ದರಿಂದ ಈಗ ಹೋಗಿ 

ಮತ್ತೆ ಬರುವೆನು. 


Padya


Manna banna neeli kanna

Sanna jeevi naanu

Sanje hottu kereya sutta

Nodiruveya neenu?


Besigeyali nelada olage

Vaasaviruvenu

Suduva bisila kaaladalli

Adagi biduvenu


Bitti beleva halli raita

Nanna geleyanu

Nanna korala haadigagi

Kayutiruvanu


Tunta huduga nanna kandu

Kallu esevanu

Avanu baralu maaru dura

Jigidu biduvenu


Ado nodu kereraaya

Barutaliruvanu

Aadarinda eega hogi Matte baruvenu.

               



Thursday, February 29, 2024

Baaninda Baa Chandira (ಬಾನಿಂದ ಬಾ ಚಂದಿರ)

Movie: Kanti(2004)

Singer: Sonu Nigam

Song link: Click Here


Preetiyallu yuddhadallu sari tappu illa ellu

Enadaru tappadaru kshamaya dharitri naari

Naa helabeke sorry!


Baaninda baa chandira, ee bhumiye sundara

Ee preetiyella mele illa, baa illi preetili telo ||


Preetiyallellaru onthara murkharu

Maatu nuriddaru aadada mookaru

Bari kannalle, baredu ole

Nodu noduttale, ella helo kale

Preetige, kottoru, yaro..

Baaninda baa chandira, ee bhuviye sundara ||


Preetiya andava, kaanada andharu

Mohada preetiya, ha..kurudu antandaru

Eradu kannu kadime enu

Ondu nuradaru kodalaadevaru

Hogona kelonaa baro

Baaninda baa chandira, ee bhuviye sundara

Ee preetiyella mele illa, baa illi preetili telo ||


ಚಿತ್ರಗೀತೆ 


ಪ್ರೀತಿಯಲ್ಲೂ ಯುದ್ಧದಲ್ಲೂ ಸರಿ ತಪ್ಪು ಇಲ್ಲ ಎಲ್ಲೂ 

ಏನಾದರೂ ತಪ್ಪಾದರೂ ಕ್ಷಮಯಾ ಧರಿತ್ರಿ ನಾರಿ 

ನಾ ಹೇಳಬೇಕೇ ಸಾರಿ!


ಬಾನಿಂದ ಬಾ ಚಂದಿರ, ಈ ಭುವಿಯೇ ಸುಂದರ 

ಈ ಪ್ರೀತಿಯೆಲ್ಲ ಮೇಲೆ ಇಲ್ಲ, ಬಾ ಇಲ್ಲಿ ಪ್ರೀತಿಲಿ ತೇಲೋ ।।ಪ।।


ಪ್ರೀತಿಯಲ್ಲೆಲ್ಲರು ಒಂಥರ ಮೂರ್ಖರು 

ಮಾತು ನೂರಿದ್ದರೂ ಆಡದ ಮೂಕರು 

ಬರಿ ಕಣ್ಣಲ್ಲೇ, ಬರೆದು ಓಲೆ 

ನೋಡು ನೋಡುತ್ತಲೆ, ಎಲ್ಲ ಹೇಳೋ ಕಲೆ 

ಪ್ರೀತಿಗೆ, ಕಟ್ಟೋರು, ಯಾರೋ .. 

ಬಾನಿಂದ ಬಾ ಚಂದಿರ, ಈ ಭುವಿಯೇ ಸುಂದರ ।।೧।।


ಪ್ರೀತಿಯ ಅಂದವ, ಕಾಣದಾ ಅಂಧರು 

ಮೋಹದ ಪ್ರೀತಿಯ, ಹಾ .. ಕುರುಡು ಅಂತಂದರು 

ಎರಡು ಕಣ್ಣು ಕಡಿಮೆ ಏನು 

ಒಂದು ನೂರಾದರು ಕೊಡಲಾದೇವರು 

ಹೋಗೋಣ ಕೇಳೋಣಾ ಬಾರೋ 

ಬಾನಿಂದ ಬಾ ಚಂದಿರ, ಈ ಭುವಿಯೇ ಸುಂದರ 

ಈ ಪ್ರೀತಿಯೆಲ್ಲ ಮೇಲೆ ಇಲ್ಲ, ಬಾ ಇಲ್ಲಿ ಪ್ರೀತಿಲಿ ತೇಲೋ ।।೨।।

                         

Amara Madhura Prema (ಅಮರಾ ಮಧುರಾ ಪ್ರೇಮಾ)

Movie: Ratnagiri Rahasya (1957)

Singer: P Susheela

Song link: Click Here


Amara.. madhura.. prema!

Nee baa bega chandamama.. baa bega chandamama.. ||


Amara madhura prema!

Nee baa bega chandamama, baa bega chandamama ||


Sadanuraagadi taa ninagagi, kadide ee sumaraji, aa..(2)

Suma yauvanavu baaduva modale (2)

Baradadeno nee bali saari, baa bega chandamama ||


Manadali aaseya tumbida mele

Marete odalubahude, o..o

Olavu, nenavu, nalavu, chalavu (2)

Kanaso katheyo aaguva munna

Baa bega chandamaama (2) ||


ಚಿತ್ರಗೀತೆ 


ಅಮರಾ.. ಮಧುರಾ.. ಪ್ರೇಮಾ 

ನೀ ಬಾ ಬೇಗ ಚಂದಮಾಮ.. ಬಾ ಬೇಗ ಚಂದಮಾಮ.. ।।


ಅಮರಾ ಮಧುರಾ ಪ್ರೇಮಾ 

ನೀ ಬಾ ಬೇಗ ಚಂದಮಾಮ, ಬಾ ಬೇಗ ಚಂದಮಾಮ ।।ಪ।।


ಸದಾನುರಾಗದಿ ತಾ ನಿನಗಾಗಿ, ಕಾದಿದೆ ಈ ಸುಮಾರಾಜಿ, ಆ .. (೨)

ಸುಮ ಯೌವ್ವನವು ಬಾಡುವ ಮೊದಲೆ (೨)

ಬಾರದದೇನೋ ನೀ ಬಳಿ ಸಾರಿ, ಬಾ ಬೇಗ ಚಂದಮಾಮ (೨) ।।೧।।


ಮನದಲಿ ಆಸೆಯ ತುಂಬಿದ ಮೇಲೆ 

ಮರೆತೇ ಓಡಲುಬಹುದೇ, ಓ .. ಓ 

ಒಲವು, ನೆನವು, ನಲವು, ಚಲವು (೨)

ಕನಸೂ ಕಥೆಯೋ ಆಗುವ ಮುನ್ನಾ 

ಬಾ ಬೇಗ ಚಂದಮಾಮ (೨) ।।೨।।

               


Baaluvantha Hoove (ಬಾಳುವಂಥ ಹೂವೆ)

Movie: Aakasmika (1993)

Singer: Dr. Rajkumar

Song link: Click Here


Baaluvantha hoove baaduva aase eke (2)

Haaduvantha kogile aluva aase eke

Kavalu dariyalli baalu sadhyave

Avali doni mele yaana yogyave ||


Yarigilla novu, yarigilla saavu

Vyartha vyasanadinda sihiyu kuda bevu

Baalu ondu sante, sante tumba chinte

Madya madagalinda chinte belevudante

Anke irada manasanu dandisuvudu nyaya

Mooka mugdha dehava himsisuvudu heya

Sanna biruku saalade tumbu doni tala seralu

Sanna aluku saalade tumbu baduku baradaagalu ||


Baala kadanadalli bharavasegalu beku

Naale nannadennuva nambikegalu beku

Jeevarashiyalli manavarige aadyate

Naave moodaraadare jnanakkelli pujyate

Illi eesabeku iddu jaisabeku

Naagareekarada mele sugunaragabeku

Ninna haladi kannali janaraneke ne noduve

Manada donku kaanade jagavaneke nee durave ||


ಚಿತ್ರಗೀತೆ 


ಬಾಳುವಂಥ ಹೂವೆ ಬಾಡುವ ಆಸೆ ಏಕೆ (೨)

ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ 

ಕವಲು ದಾರಿಯಲ್ಲಿ ಬಾಳು ಸಾಧ್ಯವೇ 

ಅವಳಿ ದೋಣಿ ಮೇಲೆ ಯಾನ ಯೋಗ್ಯವೇ ।।ಪ।।


ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು 

ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು 

ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ 

ಮದ್ಯ ಮದಗಳಿಂದ ಚಿಂತೆ ಬೆಳೆವುದಂತೆ 

ಅಂಕೆ ಇರದ ಮನಸನು ದಂಡಿಸುವುದು ನ್ಯಾಯ 

ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯಾ 

ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು 

ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು ।।೧।।


ಬಾಳ ಕದನದಲ್ಲಿ ಭರವಸೆಗಳು ಬೇಕು 

ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು 

ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ 

ನಾವೆ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ 

ಇಲ್ಲಿ ಈಸಬೇಕು ಇದ್ದು ಜೈಸಬೇಕು 

ನಾಗರೀಕರಾದ ಮೇಲೆ ಸುಗುಣರಾಗಬೇಕು 

ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ 

ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ ।।೨।।

                           



Janma Janmada Anubandha (ಜನ್ಮ ಜನ್ಮದ ಅನುಬಂಧ)

Movie: Sakshatkara (1971)

Singer: P B Srinivas

Song link: Click Here


Aa..aa..aa..aa..janma janmada anubandha

Hrudaya hrudayagala premanubandha

Janma janmada anubandha ||


Ananta prakrutiya lavanyadante

Aa..aa..aa..aa..

Lavanyavatiyara vaiyyaradante

Aa..aa..aa..aa..

Shringara kavyada rasalahariyante (2)

Tunga bhadra (2) sangamadante

Janma janma anubandha

Hrudaya hrudayagala premanubandha

Janma janmada anubandha ||


Aa..aa..aa..aa..

Srigandha seemeya tangaliyante

Aa..aa..aa..aa..

Bangara bhumiya hombaalinante

Aa..aa..aa..aa..

Punya purushara itihaasadante (2)

Kannada janara (2) oudaryadante

Janma janma anubandha

Hrudaya hrudayagala premanubandha

Janma janmada anubandha ||


ಚಿತ್ರಗೀತೆ 


ಆ .. ಆ .. ಆ .. ಆ .. ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।ಪ।।


ಅನಂತ ಪ್ರಕೃತಿಯ ಲಾವಣ್ಯದಂತೆ 

ಆ .. ಆ .. ಆ .. ಆ ..

ಲಾವಣ್ಯವತಿಯರ ವೈಯ್ಯಾರದಂತೆ 

ಆ .. ಆ .. ಆ .. ಆ ..

ಶೃಂಗಾರ ಕಾವ್ಯದ ರಸಲಹರಿಯಂತೆ (೨)

ತುಂಗಾ ಭದ್ರ (೨) ಸಂಗಮದಂತೆ 

ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।೧।।


ಆ .. ಆ .. ಆ .. ಆ ..

ಶ್ರೀಗಂಧ ಸೀಮೆಯ ತಂಗಾಳಿಯಂತೆ 

ಆ .. ಆ .. ಆ .. ಆ ..

ಬಂಗಾರ ಭೂಮಿಯ ಹೊಂಬಾಳಿನಂತೆ 

ಆ .. ಆ .. ಆ .. ಆ ..

ಪುಣ್ಯ ಪುರುಷರ ಇತಿಹಾಸದಂತೆ (೨)

ಕನ್ನಡ ಜನರ (೨) ಔದಾರ್ಯದಂತೆ 

ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।೨।।

         

Tuesday, February 27, 2024

Idu Nanna Ninna Prema Geete Chinna (ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನಾ)

Movie: Premaloka (1987)

Singers: S Janaki, SPB

Song link: Click Here


Idu nanna ninna prema geete chinna

Idu yastu saari haadidaru chenna

Idu nillalaaradendu koneyagalaaradendu

Ee premalokada geeteyu ||


Kelo saradaara chukkiglante naanu neenu baninalli baa

Kelo hammeera hakkigalante naanu neenu balinalli baa

Elu bannagala kamana billu

Nammadene prematota maaduva

Allondu premada gudanna kattuva

Ee namma premaraaga haaduva ||


Kele singari hoovalli dumbi serikollo, hottu idu baa

Kele bangari premigalilli needikollo muttu idu baa baa

Nanna ninna sneha bandhanavidu

Mareyalagadu, alisalagadendigu

Kelenna gelati innondu sarati janmavanettidaru navonde ||


ಚಿತ್ರಗೀತೆ 


ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನಾ 

ಇದು ಎಷ್ಟು ಸಾರಿ ಹಾಡಿದರು ಚೆನ್ನ 

ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು 

ಈ ಪ್ರೇಮಲೋಕದಾ ಗೀತೆಯು ।।ಪ।।


ಕೇಳೋ ಸರದಾರ ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ 

ಕೇಳೋ ಹಮ್ಮೀರ ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ ಬಾ 

ಏಳು ಬಣ್ಣಗಳ ಕಾಮನ ಬಿಲ್ಲು 

ನಮ್ಮದೇನೆ ಪ್ರೇಮತೋಟ ಮಾಡುವ 

ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ 

ಈ ನಮ್ಮ ಪ್ರೇಮರಾಗ ಹಾಡುವಾ ।।೧।।


ಕೇಳೆ ಸಿಂಗಾರಿ ಹೂವಲ್ಲಿ ದುಂಬಿ ಸೇರಿಕೊಳ್ಳೊ ಮುತ್ತು ಇದು ಬಾ ಬಾ 

ನನ್ನ ನಿನ್ನ ಸ್ನೇಹ ಬಂಧನವಿದು 

ಮರೆಯಲಾಗದು, ಅಳಿಸಲಾಗದೆಂದಿಗೂ 

ಕೇಳೆನ್ನ ಗೆಳತಿ ಇನ್ನೊಂದು ಸರತಿ ಜನ್ಮವನೆತ್ತಿದರು ನಾವೊಂದೇ 

।।೨।।

                         




Friday, February 23, 2024

Bandaalo Bandaalo Binkada Singari (ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ)

Movie: Baa Nalle Madhuchandrake (1993)

Singer: SPB

Song link: Click Here


Bandaalo bandaalo binkada singari

Bandaalo bandaalo chandira chakori

Tandaalo, tandaalo, tandaalo premada siri ||


Malebilla mele ilijaaro baale

Rati devi soundarya savati nee

Kavite nee, kavya spurti nee

Edeyaaladolavu hennagi banda

Bhuloka soundarya rani nee

Prana nee, neelaveni nee

Nakkaalo nakkaalo hunnime haalante

Ukkyaalo ukkyaalo tungeya neerante

Jeevanada chandrodayake, mai manada pranayaalayake ||


Malenada sirige mana sotu ninta

Hasirura giribale hennu nee, kannu nee, bala banna nee

Naduratriyalli jalarashi mele

Guri toro ekanta taare nee, neere nee, kavya dhare nee

Mudyalo mudyalo maagiya kanasante

Muttyalo muttyalo becchane muttante

Jeevanada chandrodayake maimanada pranayaalayake ||


ಚಿತ್ರಗೀತೆ 


ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ 

ಬಂದಾಳೋ ಬಂದಾಳೋ ಚಂದಿರ ಚಕೋರಿ 

ತಂದಾಳೋ, ತಂದಾಳೋ, ತಂದಾಳೋ ಪ್ರೇಮದ ಸಿರಿ ।।ಪ।।


ಮಳೆಬಿಲ್ಲ ಮೇಲೆ ಇಳಿಜಾರೋ ಬಾಲೆ 

ರತಿ ದೇವಿ ಸೌಂದರ್ಯ ಸವತಿ ನೀ 

ಕವಿತೆ ನೀ, ಕಾವ್ಯ ಸ್ಫೂರ್ತಿ ನೀ 

ಎದೆಯಾಳದೊಲವು ಹೆಣ್ಣಾಗಿ ಬಂದ 

ಭೂಲೋಕ ಸೌಂದರ್ಯ ರಾಣಿ ನೀ 

ಪ್ರಾಣ ನೀ, ನೀಲವೇಣಿ ನೀ 

ನಕ್ಕಾಳೋ  ನಕ್ಕಾಳೋ ಹುಣ್ಣಿಮೆ ಹಾಲಂತೆ 

ಉಕ್ಕ್ಯಾಳೋ ಉಕ್ಕ್ಯಾಳೋ ತುಂಗೆಯ ನೀರಂತೆ 

ಜೀವನದ ಚಂದ್ರೋದಯಕೆ, ಮೈ ಮನದ ಪ್ರಣಯಾಲಯಕೆ

 ।।೧।।


ಮಲೆನಾಡ ಸಿರಿಗೆ ಮನ ಸೋತು ನಿಂತ 

ಹಸಿರೂರ ಗಿರಿಬಾಲೆ ಹೆಣ್ಣು ನೀ, ಕಣ್ಣು ನೀ, ಬಾಳ ಬಣ್ಣ ನೀ 

ನಡುರಾತ್ರಿಯಲ್ಲಿ ಜಲರಾಶಿ ಮೇಲೆ 

ಗುರಿ ತೋರೊ ಏಕಾಂತ ತಾರೆ ನೀ, ನೀರೆ ನೀ, ಕಾವ್ಯ ಧಾರೆ ನೀ 

ಮೂಡ್ಯಾಳೋ ಮೂಡ್ಯಾಳೋ ಮಾಗಿಯ ಕನಸಂತೆ 

ಮುತ್ತ್ಯಾಳೋ ಮುತ್ತ್ಯಾಳೋ ಬೆಚ್ಚನೆ ಮುತ್ತಂತೆ 

ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಾಯಕೆ 

।।೨।।