Thursday, February 29, 2024

Amara Madhura Prema (ಅಮರಾ ಮಧುರಾ ಪ್ರೇಮಾ)

Movie: Ratnagiri Rahasya (1957)

Singer: P Susheela

Song link: Click Here


Amara.. madhura.. prema!

Nee baa bega chandamama.. baa bega chandamama.. ||


Amara madhura prema!

Nee baa bega chandamama, baa bega chandamama ||


Sadanuraagadi taa ninagagi, kadide ee sumaraji, aa..(2)

Suma yauvanavu baaduva modale (2)

Baradadeno nee bali saari, baa bega chandamama ||


Manadali aaseya tumbida mele

Marete odalubahude, o..o

Olavu, nenavu, nalavu, chalavu (2)

Kanaso katheyo aaguva munna

Baa bega chandamaama (2) ||


ಚಿತ್ರಗೀತೆ 


ಅಮರಾ.. ಮಧುರಾ.. ಪ್ರೇಮಾ 

ನೀ ಬಾ ಬೇಗ ಚಂದಮಾಮ.. ಬಾ ಬೇಗ ಚಂದಮಾಮ.. ।।


ಅಮರಾ ಮಧುರಾ ಪ್ರೇಮಾ 

ನೀ ಬಾ ಬೇಗ ಚಂದಮಾಮ, ಬಾ ಬೇಗ ಚಂದಮಾಮ ।।ಪ।।


ಸದಾನುರಾಗದಿ ತಾ ನಿನಗಾಗಿ, ಕಾದಿದೆ ಈ ಸುಮಾರಾಜಿ, ಆ .. (೨)

ಸುಮ ಯೌವ್ವನವು ಬಾಡುವ ಮೊದಲೆ (೨)

ಬಾರದದೇನೋ ನೀ ಬಳಿ ಸಾರಿ, ಬಾ ಬೇಗ ಚಂದಮಾಮ (೨) ।।೧।।


ಮನದಲಿ ಆಸೆಯ ತುಂಬಿದ ಮೇಲೆ 

ಮರೆತೇ ಓಡಲುಬಹುದೇ, ಓ .. ಓ 

ಒಲವು, ನೆನವು, ನಲವು, ಚಲವು (೨)

ಕನಸೂ ಕಥೆಯೋ ಆಗುವ ಮುನ್ನಾ 

ಬಾ ಬೇಗ ಚಂದಮಾಮ (೨) ।।೨।।

               


Baaluvantha Hoove (ಬಾಳುವಂಥ ಹೂವೆ)

Movie: Aakasmika (1993)

Singer: Dr. Rajkumar

Song link: Click Here


Baaluvantha hoove baaduva aase eke (2)

Haaduvantha kogile aluva aase eke

Kavalu dariyalli baalu sadhyave

Avali doni mele yaana yogyave ||


Yarigilla novu, yarigilla saavu

Vyartha vyasanadinda sihiyu kuda bevu

Baalu ondu sante, sante tumba chinte

Madya madagalinda chinte belevudante

Anke irada manasanu dandisuvudu nyaya

Mooka mugdha dehava himsisuvudu heya

Sanna biruku saalade tumbu doni tala seralu

Sanna aluku saalade tumbu baduku baradaagalu ||


Baala kadanadalli bharavasegalu beku

Naale nannadennuva nambikegalu beku

Jeevarashiyalli manavarige aadyate

Naave moodaraadare jnanakkelli pujyate

Illi eesabeku iddu jaisabeku

Naagareekarada mele sugunaragabeku

Ninna haladi kannali janaraneke ne noduve

Manada donku kaanade jagavaneke nee durave ||


ಚಿತ್ರಗೀತೆ 


ಬಾಳುವಂಥ ಹೂವೆ ಬಾಡುವ ಆಸೆ ಏಕೆ (೨)

ಹಾಡುವಂಥ ಕೋಗಿಲೆ ಅಳುವ ಆಸೆ ಏಕೆ 

ಕವಲು ದಾರಿಯಲ್ಲಿ ಬಾಳು ಸಾಧ್ಯವೇ 

ಅವಳಿ ದೋಣಿ ಮೇಲೆ ಯಾನ ಯೋಗ್ಯವೇ ।।ಪ।।


ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು 

ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು 

ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ 

ಮದ್ಯ ಮದಗಳಿಂದ ಚಿಂತೆ ಬೆಳೆವುದಂತೆ 

ಅಂಕೆ ಇರದ ಮನಸನು ದಂಡಿಸುವುದು ನ್ಯಾಯ 

ಮೂಕ ಮುಗ್ಧ ದೇಹವ ಹಿಂಸಿಸುವುದು ಹೇಯಾ 

ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು 

ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು ।।೧।।


ಬಾಳ ಕದನದಲ್ಲಿ ಭರವಸೆಗಳು ಬೇಕು 

ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು 

ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ 

ನಾವೆ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ 

ಇಲ್ಲಿ ಈಸಬೇಕು ಇದ್ದು ಜೈಸಬೇಕು 

ನಾಗರೀಕರಾದ ಮೇಲೆ ಸುಗುಣರಾಗಬೇಕು 

ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ 

ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ ।।೨।।

                           



Janma Janmada Anubandha (ಜನ್ಮ ಜನ್ಮದ ಅನುಬಂಧ)

Movie: Sakshatkara (1971)

Singer: P B Srinivas

Song link: Click Here


Aa..aa..aa..aa..janma janmada anubandha

Hrudaya hrudayagala premanubandha

Janma janmada anubandha ||


Ananta prakrutiya lavanyadante

Aa..aa..aa..aa..

Lavanyavatiyara vaiyyaradante

Aa..aa..aa..aa..

Shringara kavyada rasalahariyante (2)

Tunga bhadra (2) sangamadante

Janma janma anubandha

Hrudaya hrudayagala premanubandha

Janma janmada anubandha ||


Aa..aa..aa..aa..

Srigandha seemeya tangaliyante

Aa..aa..aa..aa..

Bangara bhumiya hombaalinante

Aa..aa..aa..aa..

Punya purushara itihaasadante (2)

Kannada janara (2) oudaryadante

Janma janma anubandha

Hrudaya hrudayagala premanubandha

Janma janmada anubandha ||


ಚಿತ್ರಗೀತೆ 


ಆ .. ಆ .. ಆ .. ಆ .. ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।ಪ।।


ಅನಂತ ಪ್ರಕೃತಿಯ ಲಾವಣ್ಯದಂತೆ 

ಆ .. ಆ .. ಆ .. ಆ ..

ಲಾವಣ್ಯವತಿಯರ ವೈಯ್ಯಾರದಂತೆ 

ಆ .. ಆ .. ಆ .. ಆ ..

ಶೃಂಗಾರ ಕಾವ್ಯದ ರಸಲಹರಿಯಂತೆ (೨)

ತುಂಗಾ ಭದ್ರ (೨) ಸಂಗಮದಂತೆ 

ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।೧।।


ಆ .. ಆ .. ಆ .. ಆ ..

ಶ್ರೀಗಂಧ ಸೀಮೆಯ ತಂಗಾಳಿಯಂತೆ 

ಆ .. ಆ .. ಆ .. ಆ ..

ಬಂಗಾರ ಭೂಮಿಯ ಹೊಂಬಾಳಿನಂತೆ 

ಆ .. ಆ .. ಆ .. ಆ ..

ಪುಣ್ಯ ಪುರುಷರ ಇತಿಹಾಸದಂತೆ (೨)

ಕನ್ನಡ ಜನರ (೨) ಔದಾರ್ಯದಂತೆ 

ಜನ್ಮ ಜನ್ಮದ ಅನುಬಂಧ 

ಹೃದಯ ಹೃದಯಗಳ ಪ್ರೇಮಾನುಬಂಧ 

ಜನ್ಮ ಜನ್ಮದ ಅನುಬಂಧ ।।೨।।

         

Tuesday, February 27, 2024

Idu Nanna Ninna Prema Geete Chinna (ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನಾ)

Movie: Premaloka (1987)

Singers: S Janaki, SPB

Song link: Click Here


Idu nanna ninna prema geete chinna

Idu yastu saari haadidaru chenna

Idu nillalaaradendu koneyagalaaradendu

Ee premalokada geeteyu ||


Kelo saradaara chukkiglante naanu neenu baninalli baa

Kelo hammeera hakkigalante naanu neenu balinalli baa

Elu bannagala kamana billu

Nammadene prematota maaduva

Allondu premada gudanna kattuva

Ee namma premaraaga haaduva ||


Kele singari hoovalli dumbi serikollo, hottu idu baa

Kele bangari premigalilli needikollo muttu idu baa baa

Nanna ninna sneha bandhanavidu

Mareyalagadu, alisalagadendigu

Kelenna gelati innondu sarati janmavanettidaru navonde ||


ಚಿತ್ರಗೀತೆ 


ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನಾ 

ಇದು ಎಷ್ಟು ಸಾರಿ ಹಾಡಿದರು ಚೆನ್ನ 

ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು 

ಈ ಪ್ರೇಮಲೋಕದಾ ಗೀತೆಯು ।।ಪ।।


ಕೇಳೋ ಸರದಾರ ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ 

ಕೇಳೋ ಹಮ್ಮೀರ ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ ಬಾ 

ಏಳು ಬಣ್ಣಗಳ ಕಾಮನ ಬಿಲ್ಲು 

ನಮ್ಮದೇನೆ ಪ್ರೇಮತೋಟ ಮಾಡುವ 

ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ 

ಈ ನಮ್ಮ ಪ್ರೇಮರಾಗ ಹಾಡುವಾ ।।೧।।


ಕೇಳೆ ಸಿಂಗಾರಿ ಹೂವಲ್ಲಿ ದುಂಬಿ ಸೇರಿಕೊಳ್ಳೊ ಮುತ್ತು ಇದು ಬಾ ಬಾ 

ನನ್ನ ನಿನ್ನ ಸ್ನೇಹ ಬಂಧನವಿದು 

ಮರೆಯಲಾಗದು, ಅಳಿಸಲಾಗದೆಂದಿಗೂ 

ಕೇಳೆನ್ನ ಗೆಳತಿ ಇನ್ನೊಂದು ಸರತಿ ಜನ್ಮವನೆತ್ತಿದರು ನಾವೊಂದೇ 

।।೨।।

                         




Friday, February 23, 2024

Bandaalo Bandaalo Binkada Singari (ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ)

Movie: Baa Nalle Madhuchandrake (1993)

Singer: SPB

Song link: Click Here


Bandaalo bandaalo binkada singari

Bandaalo bandaalo chandira chakori

Tandaalo, tandaalo, tandaalo premada siri ||


Malebilla mele ilijaaro baale

Rati devi soundarya savati nee

Kavite nee, kavya spurti nee

Edeyaaladolavu hennagi banda

Bhuloka soundarya rani nee

Prana nee, neelaveni nee

Nakkaalo nakkaalo hunnime haalante

Ukkyaalo ukkyaalo tungeya neerante

Jeevanada chandrodayake, mai manada pranayaalayake ||


Malenada sirige mana sotu ninta

Hasirura giribale hennu nee, kannu nee, bala banna nee

Naduratriyalli jalarashi mele

Guri toro ekanta taare nee, neere nee, kavya dhare nee

Mudyalo mudyalo maagiya kanasante

Muttyalo muttyalo becchane muttante

Jeevanada chandrodayake maimanada pranayaalayake ||


ಚಿತ್ರಗೀತೆ 


ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ 

ಬಂದಾಳೋ ಬಂದಾಳೋ ಚಂದಿರ ಚಕೋರಿ 

ತಂದಾಳೋ, ತಂದಾಳೋ, ತಂದಾಳೋ ಪ್ರೇಮದ ಸಿರಿ ।।ಪ।।


ಮಳೆಬಿಲ್ಲ ಮೇಲೆ ಇಳಿಜಾರೋ ಬಾಲೆ 

ರತಿ ದೇವಿ ಸೌಂದರ್ಯ ಸವತಿ ನೀ 

ಕವಿತೆ ನೀ, ಕಾವ್ಯ ಸ್ಫೂರ್ತಿ ನೀ 

ಎದೆಯಾಳದೊಲವು ಹೆಣ್ಣಾಗಿ ಬಂದ 

ಭೂಲೋಕ ಸೌಂದರ್ಯ ರಾಣಿ ನೀ 

ಪ್ರಾಣ ನೀ, ನೀಲವೇಣಿ ನೀ 

ನಕ್ಕಾಳೋ  ನಕ್ಕಾಳೋ ಹುಣ್ಣಿಮೆ ಹಾಲಂತೆ 

ಉಕ್ಕ್ಯಾಳೋ ಉಕ್ಕ್ಯಾಳೋ ತುಂಗೆಯ ನೀರಂತೆ 

ಜೀವನದ ಚಂದ್ರೋದಯಕೆ, ಮೈ ಮನದ ಪ್ರಣಯಾಲಯಕೆ

 ।।೧।।


ಮಲೆನಾಡ ಸಿರಿಗೆ ಮನ ಸೋತು ನಿಂತ 

ಹಸಿರೂರ ಗಿರಿಬಾಲೆ ಹೆಣ್ಣು ನೀ, ಕಣ್ಣು ನೀ, ಬಾಳ ಬಣ್ಣ ನೀ 

ನಡುರಾತ್ರಿಯಲ್ಲಿ ಜಲರಾಶಿ ಮೇಲೆ 

ಗುರಿ ತೋರೊ ಏಕಾಂತ ತಾರೆ ನೀ, ನೀರೆ ನೀ, ಕಾವ್ಯ ಧಾರೆ ನೀ 

ಮೂಡ್ಯಾಳೋ ಮೂಡ್ಯಾಳೋ ಮಾಗಿಯ ಕನಸಂತೆ 

ಮುತ್ತ್ಯಾಳೋ ಮುತ್ತ್ಯಾಳೋ ಬೆಚ್ಚನೆ ಮುತ್ತಂತೆ 

ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಾಯಕೆ 

।।೨।।

                                                  


Kaddu Noduve Eke (ಕದ್ದು ನೋಡುವೆ ಏಕೆ)

Movie: Bandhavya (1971)

Singer: S Janaki

Song link: Click Here


Jagavemba gudiyalli baalemba mantapadi

Kulita nava vadhu varare hrudayagalu besedaytu

Bhayaveke kannige ||


Kaddu noduve eke (2)

Ele kanne, kadivudella nalumeyaladdiruvaga

Kaddu noduve eke ||


Rupava nodi aaturave, drusti takeetemba katurave (2)

Aarambhaveega baduku kadiruvaga avasaravekiga

Ellavu.. ninnade aagiruvaga, kaddu noduve eke ||


Noduva aasege tadeyenu, mamateya kangalu kurudenu

Santasada nota tumb nintiruvaga

Kadiyuve enannu ellara.. edurali neeniruvaga

Kaddu noduve eke (2)

Ele kanne, kadivudella nalumeyaladdiruvaga

Kaddu noduve eke ||


ಚಿತ್ರಗೀತೆ 


ಜಗವೆಂಬ ಗುಡಿಯಲ್ಲಿ ಬಾಳೆಂಬ ಮಂಟಪದಿ 

ಕುಳಿತ ನವ ವಧು ವರರೇ ಹೃದಯಗಳು ಬೆಸೆದಾಯ್ತು 

ಭಯವೇಕೆ ಕಣ್ಣಿಗೆ ।।


ಕದ್ದು ನೋಡುವೆ ಏಕೆ (೨)

ಎಲೆ ಕಣ್ಣೆ, ಕದಿವುದೆಲ್ಲ ನಲುಮೆಯಲದ್ದಿರುವಾಗ 

ಕದ್ದು ನೋಡುವೆ ಏಕೆ ।।ಪ।।


ರೂಪವ ನೋಡಿ ಆತುರವೇ, ದೃಷ್ಟಿ ತಾಕೀತೆಂಬ ಕಾತುರವೇ (೨)

ಆರಂಭವೀಗ ಬದುಕು ಕಾದಿರುವಾಗ ಅವಸರವೇಕೀಗ 

ಎಲ್ಲವೂ.. ನಿನ್ನದೆ ಆಗಿರುವಾಗ, ಕದ್ದು ನೋಡುವೆ ಏಕೆ ।।೧।।


ನೋಡುವ ಆಸೆಗೆ ತಡೆಯೇನು, ಮಮತೆಯ ಕಂಗಳು ಕುರುಡೇನು 

ಸಂತಸದ ನೋಟ ತುಂಬಿ ನಿಂತಿರುವಾಗ 

ಕದಿಯುವೆ ಏನನ್ನು ಎಲ್ಲರ.. ಎದುರಲಿ ನೀನಿರುವಾಗ 

ಕದ್ದು ನೋಡುವೆ ಏಕೆ (೨)

ಎಲೆ ಕಣ್ಣೆ, ಕದಿವುದೆಲ್ಲ ನಲುಮೆಯಲದ್ದಿರುವಾಗ 

ಕದ್ದು ನೋಡುವೆ ಏಕೆ ।।೨।।

                           



Hakkiyu Haarutide (ಹಕ್ಕಿಯು ಹಾರುತಿದೆ)

Movie: Bhupatiranga (1970)

Singer: P B Srinivas

Song link: Click Here


Ohoho....hakkiyu haarutide (2)

Durake hakkiyu haarutide, hagalirulemba rekkegalodane

Kaalada hakkiyu haarutide, hakkiyu haarutide.. ||


Ee dina illi nale adello, andina dinagalu indello (2)

Nenapanu matra nammali ulisi, saagida samayavu eegello

Enanu jagake saarutali, pari pari notava torutali

Hakkiyu haarutide.. ||


Bandavarellaru nadeyalebeku, tammeya baalina yatreyali (2)

Samayavu vayasanu tumbuvudu

Ellara balina patreyali, kaalada chakravu urulutire

Baalina bandiyu teralutire, hakkiyu haarutide..||


Obbare bandaru ee jagake, ellarajotheyali baaluvaru (2)

Tayi tande sodara sodari

Mamateya rupava toruvaru

Balyada kanasu suliyutire, pretiya pashavu seleyutire ||


ಚಿತ್ರಗೀತೆ 


ಓಹೋಹೋ .... ಹಕ್ಕಿಯು ಹಾರುತಿದೆ (೨)

ದೂರಕೆ ಹಕ್ಕಿಯು ಹಾರುತಿದೆ, ಹಗಲಿರುಳೆಂಬ ರೆಕ್ಕೆಗಳೊಡನೆ 

ಕಾಲದ ಹಕ್ಕಿಯು ಹಾರುತಿದೆ, ಹಕ್ಕಿಯು ಹಾರುತಿದೆ.. ।।ಪ।।


ಈ ದಿನ ಇಲ್ಲಿ ನಾಳೆ ಅದೆಲ್ಲೋ, ಅಂದಿನ ದಿನಗಳು ಇಂದೆಲ್ಲೊ (೨)

ನೆನಪನು ಮಾತ್ರ ನಮ್ಮಲಿ ಉಳಿಸಿ, ಸಾಗಿದ ಸಮಯವು ಈಗೆಲ್ಲೊ 

ಏನನು ಜಗಕೆ ಸಾರುತಲಿ, ಪರಿ ಪರಿ ನೋಟವ ತೋರುತಲಿ 

ಹಕ್ಕಿಯು ಹಾರುತಿದೇ .. ।।೧।।


ಬಂದವರೆಲ್ಲರು ನಡೆಯಲೇಬೇಕು, ತಮ್ಮಯ ಬಾಳಿನ ಯಾತ್ರೆಯಲಿ (೨)

ಸಮಯವು ವಯಸನು ತುಂಬುವುದು 

ಎಲ್ಲರ ಬಾಳಿನ ಪಾತ್ರೆಯಲಿ, ಕಾಲದ ಚಕ್ರವು ಉರುಳುತಿರೆ  

ಬಾಳಿನ ಬಂಡಿಯು ತೆರಳುತಿದರೆ, ಹಕ್ಕಿಯು ಹಾರುತಿದೇ .. ।।೨।।


ಒಬ್ಬರೆ ಬಂದರು ಈ ಜಗಕೆ, ಎಲ್ಲರ ಜೊತೆಯಲಿ ಬಾಳುವರು (೨)

ತಾಯಿ ತಂದೆ ಸೋದರ ಸೋದರಿ 

ಮಮತೆಯ ರೂಪವ ತೋರುವರು 

ಬಾಲ್ಯದ ಕನಸು ಸುಳಿಯುತಿರೆ, ಪ್ರೀತಿಯು ಪಾಶವು ಸೆಳೆಯುತಿರೆ .. ।।೩।।