Friday, February 23, 2024

Karpurada Gombe Nanu (ಕರ್ಪೂರದ ಗೊಂಬೆ ನಾನು)

Movie: Nagarahaavu (1972)

Singer: P Susheela

Song link: Click Here


Karpurada gombe nanu, minchante bali bande neenu 

Ninna prema jwale, soki nanna mele

Karagi karagi, neerade nanu

Karpurada gombe nanu, minchante bali bande neenu ||


Hoovali bereta, gandhada reeti

Shrutiyali kaleta, nadada reeti

Dehadi prnavu, kaletiha reeti

Ninnale berete, nannane marete, aa..aa..aa..aa

Karpurada gombe nanu, minchante bali bande neenu ||


Devana serida, hoovadu dhanya

Poojeya maadida, kaigale dhanya

Olavanu arita, hrudayave dhanya

Ninna naa padede, dhanya naa nijade aa..aa..aa..aa 

Karpurada gombe nanu, minchante bali bande neenu ||


ಚಿತ್ರಗೀತೆ 


ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು 

ನಿನ್ನ ಪ್ರೇಮ ಜ್ವಾಲೆ, ಸೋಕಿ ನನ್ನ ಮೇಲೆ 

ಕರಗಿ ಕರಗಿ, ನೀರಾದೆ ನಾನು 

ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು 

।।ಪ।।


ಹೂವಲಿ ಬೆರೆತ, ಗಂಧದ ರೀತಿ 

ಶೃತಿಯಲಿ ಕಲೆತ, ನಾದದ ರೀತಿ 

ದೇಹದಿ ಪ್ರಾಣವು, ಕಲೆತಿಹ ರೀತಿ 

ನಿನ್ನಲೇ ಬೆರೆತೆ, ನನ್ನನೇ ಮರೆತೆ, ಆ .. ಆ .. ಆ .. ಆ 

ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು

 ।।೧।।


ದೇವನ ಸೇರಿದ, ಹೂವದು ಧನ್ಯ 

ಪೂಜೆಯ ಮಾಡಿದ, ಕೈಗಳೆ ಧನ್ಯ 

ಒಲವನು ಅರಿತ, ಹೃದಯವೆ ಧನ್ಯ 

ನಿನ್ನ ನಾ ಪಡೆದೆ, ಧನ್ಯ ನಾ ನಿಜದೆ, ಆ .. ಆ .. ಆ .. ಆ 

ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು

।।೨।।

                                  



Ide Hosa Haadu (ಇದೇ ಹೊಸ ಹಾಡು)

Movie: Nanna Tamma (1970)

Singer: P B Srinivas

Song link: Click Here


Ide hosa haadu, hrudaya sakshi haadu

Hrudayaashe bashe ee haadu, aa..aa..(2) ||


Manade neneda maatugalella madhuvagi saviyuva haadu

Saviyada jeevanavella hayada olavina haadu

Olavu chaluvu ondaddella endu yaaru mareyada haadu ||


Chandrakanti chimmida haadu, mai maresi nagiso haadu

Mumbalveya munnade haadu, tayi devi harasida haadu,

Janma janmada punyada haadu, kannadambe kalisida haadu ||


ಚಿತ್ರಗೀತೆ 


ಇದೇ ಹೊಸ ಹಾಡು, ಹೃದಯ ಸಾಕ್ಷಿ ಹಾಡು 

ಹೃದಯಾಶೆ  ಭಾಷೆ ಈ ಹಾಡು, ಆ .. ಆ .. (೨) ।।ಪ।।


ಮನದೆ ನೆನೆದ ಮಾತುಗಳೆಲ್ಲ ಮಧುವಾಗಿ ಸವಿಯುವ ಹಾಡು 

ಸವಿಯಾದ ಜೀವನವೆಲ್ಲ ಹಾಯಾದ ಒಲವಿನ ಹಾಡು 

ಒಲವು ಛಲುವು ಒಂದಾದ್ದೆಲ್ಲ ಎಂದೂ ಯಾರೂ ಮರೆಯದ ಹಾಡು ।।೧।।


ಚಂದ್ರಕಾಂತಿ ಚಿಮ್ಮಿದ ಹಾಡು, ಮೈ ಮರೆಸಿ ನಗಿಸೊ ಹಾಡು 

ಮುಂಬಾಳ್ವೆಯ ಮುನ್ನಡೆ ಹಾಡು, ತಾಯಿ ದೇವಿ ಹರಸಿದ ಹಾಡು,  

ಜನ್ಮ ಜನ್ಮದ ಪುಣ್ಯದ ಹಾಡು, ಕನ್ನಡಾಂಬೆ ಕಲಿಸಿದ ಹಾಡು 

।।೨।।

                                     



Monday, February 19, 2024

Manadaase Hakkiyagi (ಮನದಾಸೆ ಹಕ್ಕಿಯಾಗಿ)

Movie: Nammura Mandara Hoove (1997)

Singers: SPB, Manjula Gururaj

Song link: Click Here


Manadaase hakkiyagi, mugilage teli teli (2) 

Banadaage sutti sulidu, bayalage jeeki jeeki

Ho.. julu julu hariyuva nadiyali

Kila kila uliyuva giliyali

CHO: O julu julu hariyuva nadiyali

Kila kila uliyuva giliyali

Preeti maatene....

CHO: Manadase hakkiyagi, mugilage teli teli  

Banadaage sutti sulidu, bayalage jeeki jeeki ||


Chilipili haado maina, premadartha gotte ninage

Tudiva midiva jeeva olage

CHO: Tudiva midiva jeeva olage(2)

Tum tum endu haado dumbi preeti reeti gotte ninage

Koogi kareva bhava olage

CHO: Koogi kareva bhava olage (2)

Neelada nelake hasira needi tugado gidamara preeti

Bolada marake chigura tandu olado ele ele preeti

Itta male maleyalli, atta nele neleyalli

Sundara sundara selehandara handara saale

Endu preeti tandaaga

CHO: Manadase hakkiyagi, mugilage teli teli 

Banadaage sutti sulidu, bayalage jeeki jeeki

Ho.. julu julu hariyuva nadiyali

Kila kila uliyuva giliyali

CHO: Ho.. nanananana..

Preeti Naatene

Manadase hakkiyagi, mugilage teli teli 

Banadaage sutti sulidu, bayalage jeeki jeeki ||


Premi avala kaanade iralu

Preeti novu tande tahudu

Prema roga bande bahudu

CHO: Prema roga bande bahudu

Prema roga bidade baralu

Premi edeya sudade iradu

Suduva edege premave maddu

CHO:Suduva edege premave maddu (2)

Santosha tanda preeti, endu novalle mulugi saagi

Sangati kanda preeti, nitya balalli bendu hogi

Kanna raaga ranginalli, manna anda chendadalli

Chandana chandana siri, chumbana chumbana savi o..

Manadase hakkiyagi, rutumana rangu tugi

Santosha surya minugi, anuraga banu beegi

O kanasali manasali aleyuta novali nalivai kaleyuta

CHO: O kanasali manasali aleyuta novali nalivai kaleyuta

Enu ariye na

Manadase hakkiyagi, rutumana rangu tugi

Santosha surya minugi, anuraaga banu beegi ||


ಚಿತ್ರಗೀತೆ 


ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ (೨)

ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ 

ಹೋ ಜುಳು ಜುಳು ಹರಿಯುವ ನದಿಯಲಿ 

ಕಿಲ ಕಿಲ ಉಲಿಯುವ ಗಿಳಿಯಲಿ 

ಮೇಳ: ಓ ಜುಳು ಜುಳು ಹರಿಯುವ ನದಿಯಲಿ 

ಕಿಲ ಕಿಲ ಉಲಿಯುವ ಗಿಳಿಯಲಿ 

ಪ್ರೀತಿ ಮಾತೇನೆ ....

ಮೇಳ: ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ 

ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ ।।ಪ।।


ಚಿಲಿಪಿಲಿ ಹಾಡೋ ಮೈನಾ, ಪ್ರೇಮದರ್ಥ ಗೊತ್ತೇ ನಿನಗೆ 

ತುಡಿವ ಮಿಡಿವ ಜೀವ ಒಳಗೆ 

ಮೇಳ: ತುಡಿವ ಮಿಡಿವ ಜೀವ ಒಳಗೆ (೨)

ತುಂ ತುಂ ಎಂದು ಹಾಡೋ ದುಂಬಿ ಪ್ರೀತಿ ರೀತಿ ಗೊತ್ತೇ ನಿನಗೆ 

ಕೂಗಿ ಕರೆವ ಭಾವ ಒಳಗೆ 

ಮೇಳ: ಕೂಗಿ ಕರೆವ ಭಾವ ಒಳಗೆ (೨)

ನೀಳಾದ ನೆಲಕೆ ಹಸಿರ ನೀಡಿ ತೂಗಾಡೋ ಗಿಡಮರ ಪ್ರೀತಿ 

ಬೋಳಾದ ಮರಕೆ ಚಿಗುರ ತಂದು ಓಲಾಡೋ ಎಲೆ ಎಲೆ ಪ್ರೀತಿ 

ಇತ್ತ ಮಲೆ ಮಲೆಯಲ್ಲಿ, ಅತ್ತ ನೆಲೆ ನೆಲೆಯಲ್ಲಿ 

ಸುಂದರ ಸುಂದರ ಸೆಲೆ ಹಂದರ ಹಂಡರ ಸಾಲೆ 

ಎಂದೂ ಪ್ರೀತಿ ತಂದಾಗ 

ಮೇಳ: ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ 

ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ 

ಹೋ ಜುಳು ಜುಳು ಹರಿಯುವ ನದಿಯಲಿ 

ಕಿಲ ಕಿಲ ಉಲಿಯುವ ಗಿಳಿಯಲಿ 

ಮೇಳ: ಹೋ ನಾ ನಾ ನಾ ನಾ .. 

 ಪ್ರೀತಿ ನಾತೇನೆ..  

ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ 

ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ ।।೧।।


ಪ್ರೇಮಿ ಅವಳ ಕಾಣದೆ ಇರಲು 

ಪ್ರೀತಿ ನೋವು ತಂದೇ ತಹುದು 

ಪ್ರೇಮ ರೋಗ ಬಂದೇ ಬಹುದು 

ಮೇಳ: ಪ್ರೇಮ ರೋಗ ಬಂದೇ ಬಹುದು 

ಪ್ರೇಮ ರೋಗ ಬಿಡದೆ ಬರಲು 

ಪ್ರೇಮಿ ಎದೆಯ ಸುಡದೇ ಇರದು 

ಸುಡುವ ಎದೆಗೆ ಪ್ರೇಮವೆ ಮದ್ದು 

ಮೇಳ: ಸುಡುವ ಎದೆಗೆ ಪ್ರೇಮವೆ ಮದ್ದು (೨)

ಸಂತೋಷ ತಂದ ಪ್ರೀತಿ , ಎಂದೂ ನೋವಲ್ಲೆ ಮುಳುಗಿ ಸಾಗಿ 

ಸಂಗಾತಿ ಕಂಡ ಪ್ರೀತಿ, ನಿತ್ಯ ಬಾಳಲ್ಲಿ ಬೆಂದು ಹೋಗಿ 

ಕಣ್ಣ ರಾಗ ರಂಗಿನಲ್ಲಿ, ಮಣ್ಣ ಅಂದ ಚೆಂದದಲ್ಲಿ 

ಚಂದನ ಚಂದನ ಸಿರಿ, ಚುಂಬನ ಚುಂಬನ ಸವಿ ಓ .. 

ಮನದಾಸೆ ಹಕ್ಕಿಯಾಗಿ, ಋತುಮಾನ ರಂಗು ತೂಗಿ 

ಸಂತೋಷ ಸೂರ್ಯ ಮಿನುಗಿ, ಅನುರಾಗ ಬಾನು ಬೀಗಿ 

ಓ ಕನಸಲಿ ಮನಸಲಿ ಅಲೆಯುತ ನೋವಲಿ ನಲಿವಲಿ ಕಲೆಯುತ 

ಮೇಳ: ಓ ಕನಸಲಿ ಮನಸಲಿ ಅಲೆಯುತ ನೋವಲಿ ನಲಿವಲಿ ಕಲೆಯುತ 

ಏನೂ ಅರಿಯೆ ನಾ 

ಮನದಾಸೆ ಹಕ್ಕಿಯಾಗಿ, ಋತುಮಾನ ರಂಗು ತೂಗಿ 

ಸಂತೋಷ ಸೂರ್ಯ ಮಿನುಗಿ, ಅನುರಾಗ ಬಾನು ಬೀಗಿ ।।೨।।

                                    


Raja Muddu Raja (ರಾಜಾ ಮುದ್ದು ರಾಜಾ)

Movie: Sampattige Saval (1974)

Singers: P B Srinivas, S Janaki

Song link: Click Here


Raja muddu raja, nukuvanta kopa nannalleke

Sarasada wele dura nillabeke, kopaveke

Ninagagi bande, olavannu tande, nanadella ninde

Raja muddu raja, nukuvanta kopa nannalleke, muddu raja ||


Olidu banda nanna, bedendarenu chenna, raja nanna raja

Olidu banda nanna bedendarenu chenna raja

Aase baaradenu, naanandavillavnu

Manasinnu kallenu raja, beda raja

Nukuvanta kopa nannalleke, muddu raja ||


Hanada sokkininda meredaado ninna chenda, balle, naa balle

Benkiyante naanu, tannirinante neenu

Nee nanna jotegenu nille, doora nille


Gandu beeriyalla, naa hindinante illa, nalla nanna nalla

Gandu beeriyalla, naa hindinante illa, nalla

Tande maata talli, naanodi bandenalla

Ninnane sullalla raja muddu raja ||


Nannalleno moha idenu ninna sneha, illa sari alla

Nanna urillella gandobbanu huttilla adakagi bidalaare veera hammera

Raja muddu raja, nukuvanta kopa nannalleke

Preetiyinda maiya balasabeke, innu saake, saake illa beke (2) ||


ಚಿತ್ರಗೀತೆ 


ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲ್ಲೇಕೆ 

ಸರಸದ ವೇಳೆ ದೂರ ನಿಲ್ಲಬೇಕೇ, ಕೋಪವೇಕೇ 

ನಿನಗಾಗಿ ಬಂದೆ, ಒಲವನ್ನು ತಂದೆ, ನನದೆಲ್ಲಾ ನಿಂದೇ 

ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲ್ಲೇಕೆ, ಮುದ್ದು ರಾಜಾ ।।ಪ।।


ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜಾ ನನ್ನ ರಾಜಾ 

ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ ರಾಜಾ 

ಆಸೆ ಬಾರದೇನು, ನಾನಂದವಿಲ್ಲವೇನು 

ಮನಸ್ಸಿನ್ನು ಕಲ್ಲೇನು ರಾಜಾ, ಬೇಡ ರಾಜಾ 

ನೂಕುವಂತ ಕೋಪ ನನ್ನಲ್ಲೇಕೆ, ಮುದ್ದು ರಾಜಾ ।।೧।।


ಹಣದ ಸೊಕ್ಕಿನಿಂದ ಮೆರೆದಾಡೊ ನಿನ್ನ ಚೆಂದ, ಬಲ್ಲೆ, ನಾ ಬಲ್ಲೆ 

ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು 

ನೀ ನನ್ನ ಜೊತೆಗೇನು ನಿಲ್ಲೇ, ದೂರ ನಿಲ್ಲೇ 

ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ, ನಲ್ಲಾ ನನ್ನ ನಲ್ಲಾ 

ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ, ನಲ್ಲಾ

ತಂದೆ ಮಾತ ತಳ್ಳಿ, ನಾನೋಡಿ ಬಂದೆನಲ್ಲ 

ನಿನ್ನಾಣೆ ಸುಳ್ಳಲ್ಲ ರಾಜಾ, ಮುದ್ದು ರಾಜಾ ।।೨।।


ನನ್ನಲ್ಲೇನೋ ಮೋಹ ಇದೇನು ನಿನ್ನ ಸ್ನೇಹ, ಇಲ್ಲ ಸರಿ ಅಲ್ಲ  

ನನ್ನ ಊರಿಲ್ಲೆಲ್ಲ ಗಂಡೊಬ್ಬನು ಹುಟ್ಟಿಲ್ಲ, ಅದಕಾಗಿ ಬಿಡಲಾರೆ ವೀರ ಹಮ್ಮಿರ 

ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲ್ಲೇಕೆ 

ಪ್ರೀತಿಯಿಂದ ಮೈಯ ಬಳಸಬೇಕೇ, ಇನ್ನು ಸಾಕೇ, ಸಾಕೇ ಇಲ್ಲ ಬೇಕೇ (೨) ।।೩।।

                                   


Hoovondu Bali Bandu (ಹೂವೊಂದು ಬಳಿ ಬಂದು)

Movie: Shubamangala (1975)

Singer: R N Sudarshan

Song link: Click Here


Hoovondu bali bandu

Takitu ennedeya

Enendu kelalu helitu

Jenanta sihi nudiya

Jenanta sihi nudiya ||


Kaveri seemeya kanyeyu nanu

Beluru baleya pratinidhi nanu

Tungeya, bhadreya (2) tourina hoo nanu ||


Suryana kantiya sundari nanu

Tingala belakina tangiyu nanu

Premada kavyake premada kavyake

Poojeya hoo nanu, poojeya hoo nanu ||


Arishina kunkuma shobhite naanu

Vadhuvina shringara bhushite naanu

Mangala sutrava (2) beduva hoo nanu ||


ಚಿತ್ರಗೀತೆ 


ಹೂವೊಂದು ಬಳಿ ಬಂದು 

ತಾಕಿತು ಎನ್ನೆದೆಯಾ 

ಏನೆಂದು ಕೇಳಲು ಹೇಳಿತು 

ಜೇನಂತ ಸಿಹಿ ನುಡಿಯಾ 

ಜೇನಂತ ಸಿಹಿ ನುಡಿಯಾ ।।ಪ।।


ಕಾವೇರಿ ಸೀಮೆಯ ಕನ್ಯೆಯು ನಾನು 

ಬೇಲೂರು ಬಾಲೆಯ ಪ್ರತಿನಿಧಿ ನಾನು 

ತುಂಗೆಯ ಭದ್ರೆಯ (೨) ತೌರಿನ ಹೂ ನಾನು ।।೧।।


ಸೂರ್ಯನ ಕಾಂತಿಯ ಸುಂದರಿ ನಾನು 

ತಿಂಗಳ ಬೆಳಕಿನ ತಂಗಿಯು ನಾನು 

ಪ್ರೇಮದ ಕಾವ್ಯಕೆ ಪ್ರೇಮದ ಕಾವ್ಯಕೆ 

ಪೂಜೆಯ ಹೂ ನಾನು, ಪೂಜೆಯ ಹೂ ನಾನು ।।೨।।


ಅರಿಶಿನ ಕುಂಕುಮ ಶೋಭಿತೆ  ನಾನು 

ವಧುವಿನ ಶೃಂಗಾರ ಭೂಷಿತೆ ನಾನು 

ಮಂಗಳ ಸೂತ್ರವ ಬೇಡುವ ಹೊ ನಾನು ।।೩।।

                             


Friday, February 16, 2024

Arpane Ninage Arpane (ಅರ್ಪಣೆ ನಿನಗೆ ಅರ್ಪಣೆ)

Movie: Swapna (1981)

Singer: SPB

Song link: Click Here


Arpane ninage arpane (2)

Ee bala aaradhane, arpane ninage arpane

O priye (3)


Laksha deepa jotheyagi belagi marevante kanna minchu

Muttu ratna maleyagi chelli holevante nageya sanchu

Arali ninta kamaladante pada

Idalu hejje uliiva gejjenada

Shrutiyu swaravu kaletiralu hosa raagada prarambha

Manasu manasu beretiralu aunraagada aarambha

Aa manase, ondu aalayavagi

Aa aalaya devate neenade (2)

Dhupa deepa veda nada ella arpane, arpane ninage arpane ||


Odalinalli kanakanavu ninna pratibimba tumbidaga

Olavininda kshana kshanavu ninna hesaranne japisuvaga

Midive indu nayanadinda dura

Padevudendu tutiya jena saara

Banu bhumi seridare adu prakrutiya sammilana

Jeeva jeeva seridare adu pranayada shubhamilana

Aa pranayave ondu gopuravage

Aa gopura  kalashavu neenage (2)

Hannu hoovu homa havana ella arpane ||


ಚಿತ್ರಗೀತೆ 


ಅರ್ಪಣೆ ನಿನಗೆ ಅರ್ಪಣೆ  (೨)

ಈ ಬಾಳ ಆರಾಧನೆ, ಅರ್ಪಣೆ ನಿನಗೆ ಅರ್ಪಣೆ 

ಓ ಪ್ರಿಯೇ.. (೩) ।।ಪ।।


ಲಕ್ಷ ದೀಪ ಜೊತೆಯಾಗಿ ಬೆಳಗಿ ಮೆರೆವಂತೆ ಕಣ್ಣ ಮಿಂಚು 

ಮುತ್ತು ರತ್ನ ಮಳೆಯಾಗಿ ಚೆಲ್ಲಿ ಹೊಳೆವಂತೆ ನಗೆಯ ಸಂಚು 

ಅರಳಿ ನಿಂತ ಕಮಲದಂತೆ ಪಾದ 

ಇಡಲು ಹೆಜ್ಜೆ ಉಲಿವ ಗೆಜ್ಜೆನಾದ 

ಶೃತಿಯು ಸ್ವರವು ಕಲೆತಿರಲು ಹೊಸ ರಾಗದ ಪ್ರಾರಂಭ 

ಮನಸು ಮನಸು  ಬೆರೆತಿರಲು ಅನುರಾಗದ ಆರಂಭ 

ಆ ಮನಸೆ , ಒಂದು ಆಲಯವಾಗಿ 

ಆ ಆಲಯ ದೇವತೆ  ನೀನಾದೆ (೨)

ಧೂಪ ದೀಪ ವೇದ ನಾದ ಎಲ್ಲಾ ಅರ್ಪಣೆ, ಅರ್ಪಣೆ ನಿನಗೆ ಅರ್ಪಣೆ ।।೧।।


ಒಡಲಿನಲ್ಲಿ ಕಣಕಣವು ನಿನ್ನ ಪ್ರತಿಬಿಂಬ ತುಂಬಿದಾಗ 

ಒಲವಿನಿಂದ  ಕ್ಷಣ ಕ್ಷಣವು ನಿನ್ನ ಹೆಸರನ್ನು ಜಪಿಸುವಾಗ 

ನಿದಿರೆಯಿಂದು ನಯನದಿಂದ ದೂರ 

ಪಡೆವುದೆಂದು ತುಟಿಯ ಜೇನ ಸಾರ 

ಬಾನು ಭೂಮಿ ಸೇರಿದರೆ ಅದು ಪ್ರಕೃತಿಯ ಸಮ್ಮಿಲನ 

ಜೀವ ಜೀವ ಸೇರಿದರೆ ಅದೇ  ಪ್ರಣಯದ ಶುಭಮಿಲನ 

ಆ ಪ್ರಣಯವೇ ಒಂದು ಗೋಪುರವಾಗೆ  

ಆ ಗೋಪುರ ಕಳಶವು ನೀನಾಗೇ (೨)

ಹಣ್ಣು ಹೂವು ಹೋಮ ಹವನ ಎಲ್ಲಾ ಅರ್ಪಣೆ ।।೨।।

                        



Olavina Priyalate (ಒಲವಿನ ಪ್ರಿಯಲತೆ)

Movie: Kulavadhu (1963)

Singer: P B Srinivas

Song link: Click Here


Olavina priyalate, avalade chinte

Avala maate, madhura geete, avale enna devate ||


Mareyadantha premarashi, hrudayadasha rupasi

Manadolado aa vilasi, olidu banda preyasi ||


Pranayaraagada jeeva gelati, bala belago srimati

Sanne maatina sarasagati, kannadambeya kulasati ||


ಚಿತ್ರಗೀತೆ 


ಒಲವಿನ ಪ್ರಿಯಲತೆ, ಅವಳದೆ ಚಿಂತೆ 

ಅವಳ ಮಾತೆ, ಮಧುರ ಗೀತೆ, ಅವಳೆ ಎನ್ನ ದೇವತೆ ।।ಪ।।


ಮರೆಯದಂಥ ಪ್ರೇಮರಾಶಿ, ಹೃದಯದಾಶಾ ರೂಪಸಿ 

ಮನದೊಳಾಡೋ ಆ ವಿಲಾಸಿ, ಒಲಿದು ಬಂದ ಪ್ರೇಯಸಿ ।।೧।।


ಪ್ರಣಯರಾಗದ ಜೀವ ಗೆಳತಿ, ಬಾಳ ಬೆಳಗೋ ಶ್ರೀಮತಿ 

ಸನ್ನೆ ಮಾತಿನ ಸರಾಸಗಾತಿ, ಕನ್ನಡಾಂಬೆಯ ಕುಲಸತಿ ।।೨।।