Monday, January 29, 2024

Chenda Chenda Sangaati Notave Chenda (ಚೆಂದ ಚೆಂದ ಸಂಗಾತಿ ನೋಟವೆ ಚೆಂದ)

Movie: Manasa Sarovara (1982)

Singer: P Jayachandran

Song link: Click Here


Chenda chenda sangati notave chenda

Anda anda gulabi totave anda ||


Himada manige endendu tavare dhyana

Rasika manake shringara kavyada dhyana

Dumbige sumada, makaranda heeruva dhyana

Girige mugila, kugi chumbiso dhyana

Kugi chumbiso dhyana ||


Banake chenda vasanta kogile gaana

Kaviya kalege cheluvu needida gaana

Bhumige surya chandrara belakina gaana

Premige priyala bachi appuva dhyana

Bachi appuva dhyana ||


ಚಿತ್ರಗೀತೆ 


ಚೆಂದ ಚೆಂದ ಸಂಗಾತಿ ನೋಟವೆ ಚೆಂದ 

ಅಂದ ಅಂದ ಗುಲಾಬಿ ತೋಟವೆ ಅಂದ ।।ಪ।।


ಹಿಮದ ಮಣಿಗೆ ಎಂದೆಂದು ತಾವರೆ ಧ್ಯಾನ 

ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ 

ದುಂಬಿಗೆ ಸುಮದ ಮಕರಂದ ಹೀರುವ ಧ್ಯಾನ 

ಗಿರಿಗೆ ಮುಗಿಲ ಕೂಗಿ ಚುಂಬಿಸೊ ಧ್ಯಾನ 

ಕೂಗಿ ಚುಂಬಿಸೊ ಧ್ಯಾನ ।।೧।।


ಬನಕೆ ಚೆಂದ ವಸಂತ ಕೋಗಿಲೆ ಗಾನ 

ಕವಿಯ ಕಲೆಗೆ ಚೆಲುವು ನೀಡಿದ ಗಾನ 

ಭೂಮಿಗೆ ಸೂರ್ಯ ಚಂದ್ರರ ಬೆಳಕಿನ ಗಾನ 

ಪ್ರೇಮಿಗೆ ಪ್ರಿಯಳ ಬಾಚಿ ಅಪ್ಪುವ ಧ್ಯಾನ 

ಬಾಚಿ ಅಪ್ಪುವ ಧ್ಯಾನ ।।೨।।

                                     


Chandiranillada Aa Baninalli (ಚಂದಿರನಿಲ್ಲದ ಆ ಬಾನಿನಲ್ಲಿ)

Movie: Sogasugara (2011)

Singer: K J Yesudas

Song link: Click Here


Chandiranillada aa baninalli

Beladingala hudukuva obba kurudanu nanilli

Kandiddu sullu, kanaddu sullu

Nija helalu bayilla nanagillee..

Dikkilla, deseyilla, aluva kannige reppegalilla ||


Ratrigalella sukhada kanasugalaagi

Matte hagalugalella dukhada nenapugalaagi

Paapada ettina bandiya chakkadiyagi

Ee kaalavemba kaiyalli takkadiyagi

Baalode..illi dina dinaku kathegalaagi kanuttamma

Manushyannasegale vyathegalaagi uliyuttamma

Vidhiyaata, hudugaata, hettavanedeyali benkiya uta ||


Arthavilladiruva loka nammadu

Illi swartha onde badavana aaluvanthadu

Ella illi olleyadu, ella kettadu

Banda haage padeyo deya devau kottiddu

Nambikeye.. intha uru bittavara, kayo urugolu

Aadare mooru bittavara munde buda melu

Adu yaro baredoru, gayada mele bare eledoru ||


ಚಿತ್ರಗೀತೆ 


ಚಂದಿರನಿಲ್ಲದ ಆ ಬಾನಿನಲ್ಲಿ 

ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ 

ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು 

ನಿಜ ಹೇಳಲು ಬಾಯಿಲ್ಲ ನನಗಿಲ್ಲೀ .. 

ದಿಕ್ಕಿಲ್ಲ, ದೆಸೆಯಿಲ್ಲ, ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ ।।ಪ।।


ರಾತ್ರಿಗಳೆಲ್ಲ ಸುಖದ ಕನಸುಗಳಾಗಿ 

ಮತ್ತೆ ಹಗಲುಗಳೆಲ್ಲ ದುಃಖದ ನೆನಪುಗಳಾಗಿ 

ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ 

ಈ ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ 

ಬಾಳೋದೇ .. ಇಲ್ಲಿ ದಿನ ದಿನಕೂ ಕಥೆಗಳಾಗಿ ಕಾಣುತ್ತಮ್ಮ 

ಮನುಷ್ಯನ್ನಾಸೆಗಳೇ ವ್ಯಥೆಗಳಾಗಿ ಉಳಿಯುತ್ತಮ್ಮ 

ವಿಧಿಯಾಟ, ಹುಡುಗಾಟ, ಹೆತ್ತವನೆದೆಯಲಿ ಬೆಂಕಿಯ ಊಟ ।।೧।।


ಅರ್ಥವಿಲ್ಲದಿರುವ ಲೋಕ ನಮ್ಮದು 

ಇಲ್ಲಿ ಸ್ವಾರ್ಥ ಒಂದೆ ಬಡವನಾ ಆಳುವಂಥದು 

ಎಲ್ಲ ಇಲ್ಲಿ ಒಳ್ಳೆಯದು, ಎಲ್ಲ ಕೆಟ್ಟದು 

ಬಂದ ಹಾಗೆ ಪಡೆಯೋ ದೇಯಾ ದೇವರು ಕೊಟ್ಟಿದ್ದು 

ನಂಬಿಕೆಯೇ .. ಇಂಥ ಊರು ಬಿಟ್ಟವರ, ಕಾಯೋ ಊರುಗೋಲು 

ಆದರೆ ಮೂರು ಬಿಟ್ಟವರ ಮುಂದೆ ಬುಡ ಮೇಲು 

ಅದು ಯಾರೋ ಬರೆದೋರು, ಗಾಯದ ಮೇಲೆ ಬರೆ ಎಲೆದೋರು ।।೨।।

                                     





Wednesday, January 24, 2024

Innastu Bekenna Hrudayakke Rama (ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ)

Bhaktigeete

Sahitya: Sri Gajanana Sharma

Singer: Preeti Prabhu

Song link: Click Here


Innastu bekenna hrudayakke rama

Ninnastu nemmadiyu ellihudo rama ||

Rama.. rama.. rama.. rama


Ninnistadantella ittiruve rama

Nannistadantella kottiruve rama

Kastagala  kodabeda enalare rama

Kasta sahisuva sahane kodu nanage rama

Kasta sahisuva sahane innastu rama

Kasta sahisuva sahane ninnastu rama

Raghu rama.. raghu rama.. raghu rama.. raghu rama ||


Olitinede munnedeva manava kodu rama

Seletakke sigadante stirate kodu rama

Ninnegala papagala sonneyagisu rama

Nalegalu punyagala haadiyagali rama

Nanna balige ninna hasiva kodu rama

Nanna tolige ninna kasuva kodu rama

Kannu kaledaru ninna kanasa kodu rama

Nanna haranake ninna charana kodu rama ||


Kousalyeyaguvenu madilaliru rama

Vaidehiyaguvenu odanadu rama

Padukeya taleyalidu bharatanaaguve rama

Sahavasa kodu nanu soumitri rama

Sugreevanaguvenu sneha kodu rama

Hanumanaguve ninna seve kodu rama

Shabariyaguve ninna bhava kodu rama

Raghu rama.. raghu rama.. raghu rama.. raghu rama ||


Ruta neene rutu neene shruti neene rama

Mati neene gati neene dyuti neene rama

Aarambha astitva antya nee rama

Purna nee prakata nee aananda rama

Hara neene hari neene brahma nee rama

Guri neene guru neene arivu nee rama

Raghu rama.. raghu rama.. raghu rama.. raghu rama 

Nagurama nagarama jagarama rama ||


ಭಕ್ತಿಗೀತೆ 


ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ 

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ ।।

ರಾಮ ರಾಮ ರಾಮ ರಾಮ 


ನಿನ್ನಿಷ್ಟದಂತೆಲ್ಲ ಇಟ್ಟಿರುವೆ ರಾಮ 

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ 

ಕಷ್ಟಗಳ ಕೊಡಬೇಡ ಎನಲಾರೆ ರಾಮ 

ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ 

ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ 

ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ 

ರಘುರಾಮ ರಘುರಾಮ ರಘುರಾಮ ರಘುರಾಮ ।।


ಒಳಿತಿನೆಡೆ ಮುನ್ನೆಡೆವ ಮನವ ಕೊಡು ರಾಮ 

ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ 

ನೆನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ 

ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ 

ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ 

ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ 

ಕಣ್ಣು ಕಳೆದರೂ ನಿನ್ನ ಕನಸ ಕೊಡು ರಾಮ 

ನನ್ನ ಹರಣಕೆ ನಿನ್ನ ಚರಣ ಕೊಡು ರಾಮ ।।


ಕೌಸಲ್ಯೆಯಾಗುವೆನು ಮಡಿಲಲಿರು ರಾಮ 

ವೈದೇಹಿಯಾಗುವೆನು ಒಡನಾಡು ರಾಮ 

ಪಾದುಕೆಯ ತಲೆಯಲಿಡು ಭರತನಾಗುವೆ ರಾಮ 

ಸಹವಾಸ ಕೊಡು ನಾನು ಸೌಮಿತ್ರಿ ರಾಮ 

ಸುಗ್ರೀವನಾಗುವೆನು ಸ್ನೇಹ ಕೊಡು ರಾಮ 

ಹನುಮನಾಗುವೆ ನಿನ್ನ ಸೇವೆ ಕೊಡು ರಾಮ 

ಶಬರಿಯಾಗುವೆ ನಿನ್ನ ಭಾವ ಕೊಡು ರಾಮ 

ರಘುರಾಮ ರಘುರಾಮ ರಘುರಾಮ ರಘುರಾಮ ।।


ಋತ ನೀನೆ ಋತು ನೀನೆ ಶೃತಿ ನೀನೆ ರಾಮ 

ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ 

ಆರಂಭ ಅಸ್ತಿತ್ವ ಅಂತ್ಯ ನೀ ರಾಮ 

ಪೂರ್ಣ ನೀ ಪ್ರಕಟ ನೀ ಆನಂದ ರಾಮ 

ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ 

ಗುರಿ ನೀನೆ ಗುರು ನೀನೆ ಅರಿವು ನೀ ರಾಮ 

ರಘುರಾಮ ರಘುರಾಮ ರಘುರಾಮ ರಘುರಾಮ 

ನಗುರಾಮ ನಗರಾಮ ಜಗರಾಮ ರಾಮ ।।

                         

Dhanya Nee Valmiki Muniye (ಧನ್ಯ ನೀ ವಾಲ್ಮೀಕಿ ಮುನಿಯೇ)

Bhaktigeete

Singer: Dr Rajkumar

Song link: Click Here


Dhanya nee valmiki muniye, dhanya neenu aadi kaviye

Ramana kathe helide, sri ramana kondaadide

Rama namada sudheya tandu lokakella needide ||


Ramanannu nodide, ramana nudi kelide

Rama chariteya haadide, haadisi nalidaadide

Loka maateya nodide, shokada kathe kelide

Rama rama endu nondu seetegasharya needide ||


Ninna kavyadi kaanuva janagala nee nodide

Ninna srushtiya katheyalle neenu patrava vahiside

Ninna kavyake vandane, ninna badukige vandane

O maha kavi, ninna padake vandane, abhivandane ||


ಭಕ್ತಿಗೀತೆ 


ಧನ್ಯ ನೀ ವಾಲ್ಮೀಕಿ ಮುನಿಯೇ, ಧನ್ಯ ನೀನು ಆದಿ ಕವಿಯೇ 

ರಾಮನ ಕಥೆ ಹೇಳಿದೆ, ಶ್ರೀರಾಮನ ಕೊಂಡಾಡಿದೆ 

ರಾಮನಾಮದ ಸುಧೆಯ ತಂದು ಲೋಕಕೆಲ್ಲಾ ನೀಡಿದೆ ।।ಪ।।


ರಾಮನನ್ನು ನೋಡಿದೆ, ರಾಮನ ನುಡಿ ಕೇಳಿದೆ 

ರಾಮ ಚರಿತೆಯ ಹಾಡಿದೆ, ಹಾಡಿಸಿ ನಲಿದಾಡಿದೆ 

ಲೋಕ ಮಾತೆಯ ನೋಡಿದೆ, ಶೋಕದ ಕಥೆ ಕೇಳಿದೆ 

ರಾಮ ರಾಮ ಎಂದು ನೊಂದು ಸೀತೆಗಾಶ್ರಯ ನೀಡಿದೆ ।।೧।।


ನಿನ್ನ ಕಾವ್ಯದಿ ಕಾಣುವ ಜನಗಳ ನೀ ನೋಡಿದೆ 

ನಿನ ಸೃಷ್ಟಿಯ ಕಥೆಯಲ್ಲೇ ನೀನು ಪಾತ್ರವ ವಹಿಸಿದೆ 

ನಿನ್ನ ಕಾವ್ಯಕೆ ವಂದನೆ, ನಿನ್ನ ಬದುಕಿಗೆ ವಂದನೆ 

ಓ ಮಹಾ ಕವಿ, ನಿನ್ನ ಪಾದಕೆ ವಂದನೆ, ಅಭಿವಂದನೆ ।।೨।।

                                   


Tuesday, January 23, 2024

Barabaarade Omme Barabaarade (ಬರಬಾರದೇ ಒಮ್ಮೆ ಬರಬಾರದೇ)

Bhktigeete

Sahitya: Chi Udayshankar

Singer: Dr. Rajkumar

Song link: Click Here


Barabaarade omme barabaarade

Kanasalaadaru nanna kann munde kshana kala

Nilabaarade rama nilabaarade ||


Aa ninna soundarya, aa ninna gambhirya

Naa kandu aascharya padabaarade

Sri rama ninaginnu dayebaarade ||


Manasinalli maneya maadi nenapina beladingalinda

Anudina aananda tarutiha 

Janaka suteya bhagya nidhiye ||


Aa kanna kantiya aa mogada shantiya 

Naa noduvaase irabaarade

Aa punya nanagindu kodabaarade ||


Bhaktiyinda gellalaare, viraktiyinda nillalaare

Mukti bedalu ashakta naanu

Karune toreya nanna doreye ||


ಭಕ್ತಿಗೀತೆ 


ಬರಬಾರದೇ ಒಮ್ಮೆ ಬರಬಾರದೇ 

ಕನಸಲಾದರೂ ನನ್ನ ಕಣ್ಣ್ ಮುಂದೆ ಕ್ಷಣ ಕಾಲ 

ನಿಲಬಾರದೇ ರಾಮ ನಿಲಬಾರದೇ! ।।ಪ।।


ಆ ನಿನ್ನ ಸೌಂದರ್ಯ, ಆ ನಿನ್ನ ಗಾಂಭೀರ್ಯ 

ನಾ ಕಂಡು ಆಶ್ಚರ್ಯ ಪಡಬಾರದೇ 

ಶ್ರೀ ರಾಮ ನಿನಗಿನ್ನೂ ದಯೆಬಾರದೇ ।।೧।।


ಮನಸಿನಲ್ಲಿ  ಮನೆಯ ಮಾಡಿ ನೆನಪಿನ ಬೆಳದಿಂಗಳಿಂದ 

ಅನುದಿನ ಆನಂದ ತರುತಿಹ 

ಜನಕ ಸುತೆಯ ಭಾಗ್ಯ ನಿಧಿಯೆ ।।೨।।


ಆ ಕಣ್ಣ ಕಾಂತಿಯ ಆ ಮೊಗದ ಶಾಂತಿಯ 

ನಾ ನೋಡುವಾಸೆ ಇರಬಾರದೇ 

ಆ ಪುಣ್ಯ ನನಗಿಂದು ಕೊಡಬಾರದೇ ।।೩।।


ಭಕ್ತಿಯಿಂದ ಗೆಲ್ಲಲಾರೆ, ವಿರಕ್ತಿಯಿಂದ ನಿಲ್ಲಲಾರೆ 

ಮುಕ್ತಿ ಬೇಡಲು ಅಶಕ್ತ ನಾನು 

ಕರುಣೆ ತೋರೆಯ ನನ್ನ ದೊರೆಯೇ ।।೪।।

           


Monday, January 22, 2024

Belli Modada Anchininda (ಬೆಳ್ಳಿ ಮೋಡದ ಅಂಚಿನಿಂದ)

Movie: Belli Moda (1967)

Singers: P B Srinivas, P Susheela

Song link: Click Here


Belli modada anchininda, moodi banda asha kirana

Belli modada aacheyinda, odi banda minugutaare ||


Vikasita sumavo vana devateyo, mana mandirada adhidevateyo

Devaru neevu dasiyu nanu, tanu mana nimade innenu

Belli modada aacheyinda, odi banda minugutaare ||


Antaranga bhavataranga, kalakala hariva premada ganga

Premadaganga jaladali mindu, pavanalade nanindu

Belli modada aacheyinda, odi banda minugutaare ||


Pranayada kavya rachiside neenu, putaputavella tumbide jenu

Jenina dhare saviyuva baare, neene nanna minugutaare

Belli modada anchininda moodi banda asha kirana ||



ಚಿತ್ರಗೀತೆ 


ಬೆಳ್ಳಿ ಮೋಡದ ಅಂಚಿನಿಂದ, ಮೂಡಿ ಬಂದಾ ಆಶಾ ಕಿರಣ 

ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।ಪ।।


ವಿಕಸಿತ ಸುಮವೋ ವನ ದೇವತೆಯೊ, ಮನಮಂದಿರದ ಅಧಿದೇವತೆಯೋ 

ದೇವರು ನೀವೂ ದಾಸಿಯು ನಾನು, ತನು ಮನ ನಿಮದೆ ಇನ್ನೇನು  

ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।೧।।


ಅಂತರಂಗ ಭಾವತರಂಗ, ಕಲಕಲ ಹರಿವ ಪ್ರೇಮದ ಗಂಗಾ 

ಪ್ರೇಮದಗಾಂಗ ಜಲದಲಿ ಮಿಂದು, ಪಾವನಳಾದೆ ನಾನಿಂದು 

ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।೨।।


ಪ್ರಣಯದ ಕಾವ್ಯ ರಚಿಸಿದೆ ನೀನು, ಪುಟಪುಟವೆಲ್ಲಾ ತುಂಬಿದೆ ಜೇನು 

ಜೇನಿನ ಧಾರೆ ಸವಿಯುವ ಬಾರೆ, ನೀನೇ ನನ್ನ ಮಿನುಗುತಾರೆ 

ಬೆಳ್ಳಿ ಮೋಡದ ಅಂಚಿನಿಂದ, ಮೂಡಿ ಬಂದಾ ಆಶಾ ಕಿರಣ ।।೩।।

                            


Jeevanaraga Ee Anuraga (ಜೀವನರಾಗ ಈ ಅನುರಾಗ)

Movie: Saku Magalu (1963)

Singer: S Janaki

Song link: Click Here


 Jeevanaraga ee anuraga

Madhuraanandavide, baalina swargavide (2) 


Hrudayagalalle swapnavide, lokadi endu satyavide

Soukhyavide sampadade, amruta shantiyide, umm amruta shantiyide

Hmm hmm....

Jeevanaraga ee anuraga

Madhuraanandavide, baalina swargavide ||


Kirunagu chimmali chendutiya muddu maatina aaratiya 

Korikeyo kanikeyo, premada geetegalu, umm premada geetegalu

Hmm hmm

Jeevanaraga ee anuraga

Madhuraanandavide, baalina swargavide ||



ಚಿತ್ರಗೀತೆ 


ಜೀವನರಾಗ ಈ ಅನುರಾಗ 

ಮಧುರಾನಂದವಿದೆ, ಬಾಳಿನ ಸ್ವರ್ಗವಿದೆ (೨) ।।ಪ।।


ಹೃದಯಗಳಲ್ಲೇ ಸ್ವಪ್ನವಿದೆ, ಲೋಕದಿ ಎಂದು ಸತ್ಯವಿದೆ 

ಸೌಖ್ಯವಿದೆ ಸಂಪದದೆ, ಅಮೃತ ಶಾಂತಿಯಿದೆ, ಊಂ ಅಮೃತ ಶಾಂತಿಯಿದೆ

ಹೂಂ ಹೂಂ .. 

ಜೀವನರಾಗ ಈ ಅನುರಾಗ 

 ಮಧುರಾನಂದವಿದೆ, ಬಾಳಿನ ಸ್ವರ್ಗವಿದೆ ।।೧।।


ಕಿರುನಗು ಚಿಮ್ಮಲಿ ಚೆಂದುಟಿಯ ಮುದ್ದು ಮಾತಿನ ಆರತಿಯ (೨)

ಕೋರಿಕೆಯೋ ಕಾಣಿಕೆಯೋ, ಪ್ರೇಮದ ಗೀತೆಗಳು, ಊಂ ಪ್ರೇಮದ ಗೀತೆಗಳು

ಹೂಂ ಹೂಂ .. 

ಜೀವನರಾಗ ಈ ಅನುರಾಗ 

 ಮಧುರಾನಂದವಿದೆ, ಬಾಳಿನ ಸ್ವರ್ಗವಿದೆ ।।೨।।