Thursday, August 31, 2023

Nannolu Na Ninnolu Nee (ನನ್ನೊಳು ನಾ, ನಿನ್ನೊಳು ನೀ)

Bhavageete

Sahitya: P T Narasimhachar

Singer: Manjula Gururaj

Song link: Click Here


Nannolu na ninnolu nee

Oliva muntinte na nee (2)

Ninnolu na Nannolu nee

Olida melinte na nee

Ide olavina SaRiGaMaPaDaNi ||


Cheluvu munna, holalittitu nanna

Indu cheluvu, holaliduvudu ninna (2)

Bayake na.. salike nee (2)

Olida melinte na nee

Ide olavina SaRiGaMaPaDaNi ||


Oliva munna, jagakellaku na

Olida mele, jagakellaku nee (2)

Hinnele na.. munnele nee (2)

Olida melinte na nee

Ide olavina SaRiGaMaPaDaNi ||


ಭಾವಗೀತೆ 


ನನ್ನೊಳು ನಾ, ನಿನ್ನೊಳು ನೀ 

ಒಲಿವ ಮುಂತಿಂತೆ ನಾ ನೀ (೨)

ನಿನ್ನೊಳು ನಾ, ನನ್ನೊಳು ನೀ 

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।ಪ।।


ಚೆಲುವು ಮುನ್ನ, ಹೊಳಲಿಟ್ಟಿತು ನನ್ನಾ 

ಇಂದು ಚೆಲುವು, ಹೊಳಲಿಡುವುದು ನಿನ್ನಾ (೨)

ಬಯಕೆ ನಾ .. ಸಲಿಕೆ ನೀ .. (೨)

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।೧।।


ಒಲಿವ ಮುನ್ನ, ಜಗಕೆಲ್ಲಕೂ ನಾ 

ಒಲಿದ ಮೇಲೆ, ಜಗಕೆಲ್ಲಕೂ ನೀ  (೨)

ಹಿನ್ನಲೆ ನಾ .. ಮುನ್ನೆಲೆ ನೀ .. (೨)

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।೨।।







Wednesday, August 30, 2023

Aananda Kande Nanindu (ಆನಂದ ಕಂಡೆ ನಾನಿಂದು)

Bhaktigeete

Singer: Ileyaraja

Song link: Click Here


Aananda kande nanindu

Maatige sikkodalla, helalu baradalla ||


Ninna kanuvase, bahudinagala bayake

Varava needitu endu nanna hiriyara harake

Aledu baruva nadige kadalu eduradante

Hasida jeevige amruta phalavu doretante ||        


Hagalu jarade irali, irulu moodade irali

Kalachakravu munde, urulade irali

Taye ninnedurali kai mugidu nintiruva

Ee bhagya endendu heegeye irali ||


ಭಕ್ತಿಗೀತೆ 


ಆನಂದ ಕಂಡೆ ನಾನಿಂದು 

ಮಾತಿಗೆ ಸಿಕ್ಕೋದಲ್ಲ, ಹೇಳಲು ಬಾರದಲ್ಲ ।।ಪ।।


ನಿನ್ನ ಕಾಣುವಾಸೆ, ಬಹುದಿನಗಳ ಬಯಕೆ 

ವರವ ನೀಡಿತು ಎಂದು ನನ್ನ ಹಿರಿಯರ ಹರಕೆ 

ಅಲೆದು ಬರುವ ನದಿಗೆ ಕಡಲು ಎದುರಾದಂತೆ 

ಹಸಿದ ಜೀವಿಗೆ ಅಮೃತ ಫಲವು ದೊರೆತಂತೆ ।।೧।।


ಹಗಲು ಜಾರದೇ ಇರಲಿ, ಇರುಳು ಮೂಡದೇ ಇರಲಿ 

ಕಾಲಚಕ್ರವು ಮುಂದೆ, ಉರುಳದೇ ಇರಲಿ 

ತಾಯೇ ನಿನ್ನೆದುರಲಿ ಕೈ ಮುಗಿದು ನಿಂತಿರುವ 

ಈ ಭಾಗ್ಯ ಎಂದೆಂದು ಹೀಗೆಯೇ ಇರಲಿ ।।೨।।



Ruthu Vasanta Bandanido (ಋತು ವಸಂತ ಬಂದನಿದೋ)

Bhavageete

Sahitya: G S Shivarudrappa

Singer: Manjula Gururaj

Song link: Click Here


Ruthu vasanta bandanido

Ruthu vasanta bandanido

Ullasava tandanido (2)

Ruthu vasanta bandanido, bandanido ||


Mabbu kavida, mounagalali

Hosa danigala hommisee

Udurideleya kombegalalee (2)

Bannada hole hariyisi ||


Battidedege, bharavasegala

Hosa bavutaverisi

Hale gaadige, hosa kudureya (2)

Hosa galiya jodisi ||


ಭಾವಗೀತೆ 


ಋತು ವಸಂತ ಬಂದನಿದೋ 

ಋತು ವಸಂತ ಬಂದನಿದೋ 

ಉಲ್ಲಾಸವಾ ತಂದನಿದೋ (೨)

ಋತು ವಸಂತ ಬಂದನಿದೋ, ಬಂದನಿದೋ ।।ಪ।।


ಮಬ್ಬು ಕವಿದ, ಮೌನಗಳಲಿ 

ಹೊಸ ದನಿಗಳ ಹೊಮ್ಮಿಸೀ 

ಉದುರಿದೆಲೆಯಾ ಕೊಂಬೆಗಳಲೀ (೨)

ಬಣ್ಣದ ಹೊಳೆ  ಹರಿಯಿಸಿ ।।೧।।


ಬತ್ತಿದೆದೆಗೆ, ಭರವಸೆಗಳಾ 

ಹೊಸ ಬಾವುಟವೇರಿಸಿ 

ಹಳೆ ಗಾಡಿಗೆ, ಹೊಸ ಕುದುರೆಯ (೨)

ಹೊಸ ಗಾಲಿಯ ಜೋಡಿಸಿ ।।೨।।






Monday, August 28, 2023

Tenavina (ತೇನವಿನಾ)

Bhavageete

Sahitya: Kuvempu

Singer: Shivamogga Subbanna

Song link: Click Here


Tenavina, tenavina, trunamapina chalati tenavina (2)

Mamateya bidu he mooda mana (2)

Tenavina, tenavina, trunamapina chalati tenavina ||


Ravigillada bhaya, sashigillada bhaya

Tara nivahake irada bhaya

Nenagetake bidu, anu shraddeya needu

Ninnane naivaidyava needu

Tenavina, tenavina, trunamapina chalati tenavina ||


Ellelliyu kai, ellelliyu kal

Ellelliyu kan tanada

Sat Chit shaktiya aananda viral

Bidu etake ninage vishada ||


ಭಾವಗೀತೆ 


ತೇನವಿನಾ, ತೇನವಿನಾ, ತೃಣಮಪಿನ ಚಲತಿ ತೇನವಿನಾ (೨)

ಮಮತೆಯ ಬಿಡೂ ಹೇ ಮೂಢ ಮನಾ (೨)

ತೇನವಿನಾ, ತೇನವಿನಾ, ತೃಣಮಪಿನ ಚಲತಿ ತೇನವಿನಾ ।।ಪ।।


ರವಿಗಿಲ್ಲದ ಭಯ, ಶಶಿಗಿಲ್ಲದ ಭಯ 

ತಾರಾ ನಿವಹಕೆ ಇರದ ಭಯ 

ನಿನಗೇತಕೆ ಬಿಡು, ಅಣು ಶ್ರದ್ದೆಯ ನೀಡು 

ನಿನ್ನನೆ ನೈವೇದ್ಯವ ನೀಡು 

ತೇನವಿನಾ, ತೇನವಿನಾ, ತೃಣಮಪಿನ ಚಲತಿ ತೇನವಿನಾ ।।೧।।


ಎಲ್ಲೆಲ್ಲಿಯು ಕೈ, ಎಲ್ಲೆಲ್ಲಿಯು ಕಾಲ್ 

ಎಲ್ಲೆಲ್ಲಿಯು ಕಣ್ ತಾನಾದ 

ಸತ್ ಚಿತ್ ಶಕ್ತಿಯ, ಆನಂದ ವಿರಲ್ 

ಬಿಡು ಏತಕೆ ನಿನಗೆ ವಿಷಾದ 

ತೇನವಿನಾ, ತೇನವಿನಾ, ತೃಣಮಪಿನ ಚಲತಿ ತೇನವಿನಾ ।।೨।।




Sunday, August 27, 2023

Banni Bhavagale (ಬನ್ನಿ ಭಾವಗಳೆ)

Bhavageete

Sahitya: N S Lakshminarayana Bhatta

Singer: Shivamogga Subbanna

Song link: Click Here


Banni bhavagale banni nannedege, kareyuve kaibeesi (2)

Battidedeyalli, beleyiri hasiranu (2)

Preetiya male surisi (2) ||


Banni sanje hombisilina holeyolu

Meeyuva mugilinali

Tavarinedege tampereyuva meghada

Preetiya dhareyali (2) ||


Lokake hodisida kari tere sarisuva

Arunodayadalli

Pacchekomme bili pattala neyuva

Hunnime hastadali (2) ||


Banni banni nannedeya bayalidu

Bittada kanne nela

Beleyiri illi bage bage teneya

Namisuve nooru sala

Nimmane kanavirisi, nimage manavarisi

Kayuttiruvenu kshana kshanavu

Edeyanu hadagolisi (2) ||


ಭಾವಗೀತೆ 


ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ, ಕರೆಯುವೆ ಕೈಬೀಸಿ (೨)

ಬತ್ತಿದೆದೆಯಲ್ಲಿ, ಬೆಳೆಯಿರಿ ಹಸಿರನು (೨)

ಪ್ರೀತಿಯ ಮಳೆ ಸುರಿಸಿ ।।ಪ।।


ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು 

ಮೀಯುವ ಮುಗಿಲಿನಲಿ 

ತವರಿನೆದೆಗೆ ತಂಪೆರೆಯುವ ಮೇಘದ 

ಪ್ರೀತಿಯ ಧಾರೆಯಲಿ (೨) ।।


ಲೋಕಕೆ ಹೊದಿಸಿದ ಕರಿತೆರೆ ಸರಿಸುವ 

ಅರುಣೋದಯದಲ್ಲಿ 

ಪಚ್ಚೆಕೊಮ್ಮೆ ಬಿಳಿ ಪತ್ತಲ ನೇಯುವ (೨)

ಹುಣ್ಣಿಮೆ ಹಸ್ತದಲಿ (೨) ।।


ಬನ್ನಿ ಬನ್ನಿ ನನ್ನೆದೆಯ ಬಯಲಿದು 

ಬಿತ್ತದ ಕನ್ನೆನೆಲ 

ಬೆಳೆಯಿರಿ ಇಲ್ಲಿ ಬಗೆ ಬಗೆ ತೆನೆಯ 

ನಮಿಸುವೆ ನೂರು ಸಲ 

ನಿಮ್ಮನೇ ಕನವರಿಸಿ, ನಿಮಗೇ ಮನವರಿಸಿ 

ಕಾಯುತ್ತಿರುವೆನು ಕ್ಷಣ ಕ್ಷಣವೂ 

ಎದೆಯನು ಹದಗೊಳಿಸಿ (೨) ।।




Saturday, August 26, 2023

Hakkiya Haadige Taleduguva Hoo (ಹಕ್ಕಿಯ ಹಾಡಿಗೆ ತಲೆದೂಗುವ ಹೂ)

Bhavageete

Sahitya: K S Narasimha Swamy

Singer: S Janaki

Song linkClick Here


Hakkiya haadige taleduguva hoo, nanaguva aase (2)

Hasuvina koralina, gejjeya daniyu

Nanaguva aase (2) ||


Habbida kamana, billina melina, mugilaguva aase (2)

Chinnada bannada, jinkeya kannina

Minchaguva aase (2) ||


Totada kampina, usirali teluva, jenaguva aase (2)

Kadalina neeliya, neerali balukuva

Meenaguva aase (2) ||


Sidilanu kaaruva, birumaleganjade, munnadeyuva aase (2)

Naleya badukina, irulina tiruvige

Deepavaniduvase (2) ||


ಭಾವಗೀತೆ 


ಹಕ್ಕಿಯ ಹಾಡಿಗೆ, ತಲೆದೂಗುವ ಹೂ, ನಾನಾಗುವ ಆಸೆ (೨)

ಹಸುವಿನ ಕೊರಳಿನ, ಗೆಜ್ಜೆಯ ದನಿಯು 

ನಾನಾಗುವ ಆಸೆ (೨) ।।


ಹಬ್ಬಿದ ಕಾಮನ, ಬಿಲ್ಲಿನ ಮೇಲಿನ, ಮುಗಿಲಾಗುವ ಆಸೆ (೨)

ಚಿನ್ನದ ಬಣ್ಣದ, ಜಿಂಕೆಯ ಕಣ್ಣಿನ 

ಮಿಂಚಾಗುವ ಆಸೆ (೨) ।।


ತೋಟದ ಕಂಪಿನ, ಉಸಿರಲಿ ತೇಲುವ, ಜೇನಾಗುವ ಆಸೆ (೨)

ಕಡಲಿನ ನೀಲಿಯ, ನೀರಲಿ ಬಳುಕುವ 

ಮೀನಾಗುವ ಆಸೆ (೨) ।।


ಸಿಡಿಲನು ಕಾರುವ, ಬಿರುಮಳೆಗಂಜದೆ, ಮುನ್ನಡೆಯುವ ಆಸೆ (೨)

ನಾಳೆಯ ಬದುಕಿನ, ಇರುಳಿನ ತಿರುವಿಗೆ 

ದೀಪಾವನಿಡುವಾಸೆ (೨) ।।



Friday, August 25, 2023

Kambada Myalina Gombeye (ಕಂಬದ ಮ್ಯಾಲಿನ ಗೊಂಬೆಯೇ)

Movie: Nagamandala (1997)

Sahitya: Gopal Vajpeyee

Singer: Sangeeta Katti

Song link: Click Here


Kambada myalina gombeye

Nambale na ninna nageyanna

Bhittiya myalina chittarave

Chittagotta hela uttaarava

Obbale nanilli tabbibbugondihena

Mabbu hariyuvudena, habbavaguvudena ||


Neeroleya nigi kenda satyave, ee abhyanjanavinnu nityave

Olle ghamagudutiyalle seegeye, ninna vasaneye haradirali heegeye

Obbale nanilli tabbibbugondihena

Mabbu hariyuvudena, habbavaguvudena ||


Oppisuve hoo hannu bhagavanta, neteele harasu nage iralanta

Karpoorava belaguve devane, tappadeye baralenna gunavanta

Obbale nanilli tabbibbugondihena

Mabbu hariyuvudena, habbavaguvudena ||


ಚಿತ್ರಗೀತೆ 


ಕಂಬದ ಮ್ಯಾಲಿನ ಗೊಂಬೆಯೇ 

ನಂಬಲೇ ನಾ ನಿನ್ನಾ ನಗೆಯನ್ನಾ 

ಭಿತ್ತಿಯ ಮ್ಯಾಲಿನ ಚಿತ್ತಾರವೇ 

ಚಿತ್ತಗೊಟ್ಟ ಹೇಳ ಉತ್ತಾರವಾ 

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ 

ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।ಪ।।


ನೀರೊಲೆಯ ನಿಗಿ ಕೆಂಡ ಸತ್ಯವೇ, ಈ ಅಭ್ಯ೦ಜನವಿನ್ನು ನಿತ್ಯವೇ 

ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ, ನಿನ್ನ ವಾಸನೆಯೇ ಹರಡಿರಲಿ ಹೀಗೆಯೇ 

 ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ 

ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।೧।।


ಒಪ್ಪಿಸುವೆ ಹೂ ಹಣ್ಣು ಭಗವಂತ, ನೆತ್ತೀಲೆ ಹರಸು ನಗೆ ಇರಲಂತ 

ಕರ್ಪೂರವ ಬೆಳಗುವೆ ದೇವನೇ, ತಪ್ಪದೆಯೇ ಬರಲೆನ್ನ ಗುಣವಂತ 

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ 

ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।೨।।