Bhaktigeete
Purandara Dasara Keerthanegalu
Song link: Click Here
Raga: Kedaragoula
Tala: Atatala
Doora maduvarene rangayyana, dooru maduvarene |
Dooru maduvarene charu mandiyolage
Mooru lokake muddu toro rangayyana ||
Nandagokuladalli mandegovugala
Munde kolalanudi chandadi baruvana ||
Kallatanadalli gollara mane pokka
Gullumadadeyavara galla kacchidanendu ||
Kamadindali ninna kalavalatanakagi
Shyama sundara sri purandara vittalana ||
ಭಕ್ತಿಗೀತೆ
ದೂರ ಮಾಡುವರೇನೆ ರಂಗಯ್ಯನ, ದೂರು ಮಾಡುವರೇನೆ ।।ಪ।।
ದೂರು ಮಾಡುವರೇನೆ ಚಾರು ಮಂದಿಯೊಳಗೆ
ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ।।ಅನು।।
ನಂದಗೋಕುಲದಲ್ಲಿ ಮಂದೆಗೋವುಗಳ
ಮುಂದೆ ಕೊಳಲನೂದಿ ಚಂದದಿ ಬರುವನ ।।೧।।
ಕಳ್ಳತನದಲ್ಲಿ ಗೊಲ್ಲರ ಮನೆ ಪೊಕ್ಕ
ಗುಲ್ಲುಮಾಡದೆಯವರ ಗಲ್ಲ ಕಚ್ಚಿದನೆಂದು ।।೨।।
ಕಾಮದಿಂದಲಿ ನಿನ್ನ ಕಳವಳತನಕಾಗಿ
ಶ್ಯಾಮಸುಂದರ ಶ್ರೀ ಪುರಂದರ ವಿಠ್ಠಲನ ।।೩।। ಶ್ರೀ





