Wednesday, July 19, 2023

Subbabhattara Magale (ಸುಬ್ಬಭಟ್ಟರ ಮಗಳೇ)

Bhavageete

Sahitya: B R Lakshmana Rao

Singer: C Ashwath

Song link: Click Here


Subbabhattara magale, idella nande tagolle (4)


Neeli naileksina megha vinyasada aakashada seere

Digantagale mere

Munjavina bangarada betta beladingala belli

Nina bhagyake ene elli

Subbabhattara magale, idella nande tagolle (2)


Ratri tereyuvudu ado nannade

Jigi jigi odave dukaanu, aarisiko bekenu

Chikke mugutige chandr padakakke nihaarike haara

Nanna sampattestu aapara 

Subbabhattara magale, idella nande tagolle (2)


Nasukali hittala hullina mele, rashi rashi muttu, innu ninna swattu

Sugandha teeduva vasanta pavana, sapta varnada kamaanu, ninage pouru

Subbabhattara magale, idella nande tagolle (2)


Pataragittiya pakkavaneri hoopada kalige haari

Prayada madhu heeri

Julu julu hariyuva kalada holeyali

Teluva mulu mulugi, nina hosatanadali belagi

Subbabhattara magale, idella nande tagolle (2)


ಭಾವಗೀತೆ 


ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೪)


ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ ಆಕಾಶದ ಸೀರೆ 

ದಿಗಂತಗಳೇ ಮೇರೆ 

ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ 

ನಿನ ಭಾಗ್ಯಕೆ ಎಣೆ ಎಲ್ಲಿ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ(೨)


ರಾತ್ರಿ ತೆರೆಯುವುದು ಅದೋ ನನ್ನದೆ 

ಜಿಗಿ ಜಿಗಿ ಒಡವೆ ದುಕಾನು, ಆರಿಸಿಕೋ ಬೇಕೇನು 

ಚಕ್ಕೆ ಮೂಗುತಿಗೆ ಚಂದ್ರ ಪದಕಕ್ಕೆ ನೀಹಾರಿಕೆ ಹಾರ 

ನನ್ನ ಸಂಪತ್ತೆಷ್ಟು ಅಪಾರ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೨)


ನಸುಕಲಿ ಹಿತ್ತಲ ಹುಲ್ಲಿನ ಮೇಲೆ, ರಾಶಿ ರಾಶಿ ಮುತ್ತು, ಇನ್ನು ನಿನ್ನ ಸ್ವತ್ತು 

ಸುಗಂಧ ತೀಡುವ ವಸಂತ ಪವನ, ಸಪ್ತ ವರ್ಣದ ಕಮಾನು, ನಿನಗೆ ಪೌರು 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ(೨)


ಪತರಗಿತ್ತಿಯ ಪಕ್ಕವನೇರಿ ಹೂಪಡ ಕಾಲಿಗೆ ಹಾರಿ 

ಪ್ರಾಯದ ಮಧು ಹೀರಿ 

ಜುಳು ಜುಳು ಹರಿಯುವ ಕಾಲದ ಹೊಳೆಯಲಿ 

ತೇಲುವ ಮುಳುಮುಳುಗಿ, ನಿನ ಹೊಸತನದಲಿ ಬೆಳಗಿ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೨)



Tuesday, July 18, 2023

Naane Veene Neene Tanti (ನಾನೇ ವೀಣೆ, ನೀನೆ ತಂತಿ)

Movie: Mavana Magalu (1965)

Sahitya: Kuvempu

Singer: P B Srinivas, S Janaki

Song link: Click Here


Naane veene, neene tanti

Avane vainika, avane vainika 

Naane veene, neene tanti

Avane vainika, avane vainika ||


Midida nenalu, rasada honalu (2)

Bindu bindu seri sindu

Nada rupaka.... nada rupaka.... ||

Naane veene, neene tanti

Avane vainika, avane vainika ||


Bhuvanavella saviyasolla, kaviya gaana (2)

Nanna ninna hrudaya veena

Kalli jena sogada snana

Amruta paana.... amruta paana ||

Naane veene, neene tanti

Avane vainika, avane vainika ||


ಚಿತ್ರಗೀತೆ 


ನಾನೇ ವೀಣೆ, ನೀನೆ ತಂತಿ 

ಅವನೇ ವೈಣಿಕ, ಅವನೇ ವೈಣಿಕ 

ನಾನೇ ವೀಣೆ, ನೀನೆ ತಂತಿ 

ಅವನೇ ವೈಣಿಕ, ಅವನೇ ವೈಣಿಕ ।।


ಮಿಡಿದ ನೆನಲು, ರಸದ ಹೊನಲು (೨)

ಬಿಂದು ಬಿಂದು ಸೇರಿ ಸಿಂದು 

ನಾದ ರೂಪಕ ....  ನಾದ ರೂಪಕ .... ।।

ನಾನೇ ವೀಣೆ, ನೀನೆ ತಂತಿ 

ಅವನೇ ವೈಣಿಕ, ಅವನೇ ವೈಣಿಕ ।।


ಭುವನವೆಲ್ಲ ಸವಿಯ ಸೊಲ್ಲ, ಕವಿಯ ಗಾನಾ  (೨)

ನನ್ನ ನಿನ್ನ ಹೃದಯ ವೀಣಾ 

ಕಲ್ಲಿ ಜೇನಾ ಸೊಗದ ಸ್ನಾನ 

ಅಮೃತ ಪಾನ .... ಅಮೃತ ಪಾನ ....  ।।

ನಾನೇ ವೀಣೆ, ನೀನೆ ತಂತಿ 

ಅವನೇ ವೈಣಿಕ, ಅವನೇ ವೈಣಿಕ ।।







Snehada Kadalalli (ಸ್ನೇಹದ ಕಡಲಲ್ಲಿ)

Movie: Shubhamangala (1975)

Singer: SPB

Song link: Click Here


Snehada kadalalli.... nenapina doniyali.....(2)

Payaniga nanamma, payaniga nanamma

Preetiya teerava seruvudonde (2)

Baalina guriyamma, baalina guriyamma ||


Balyada aata, aa hudugata, innu maasilla, ha.. ha (2)

Aatade sotu, roshade kacchida (2)

Gayava maretilla, hahaha.. gayava maretilla ||


Shalege chakkar, utake haajar, lekkade bari sonne (2)

Ennuta nanu, kenakalu ninna (2)

Oodiside kenne, ho.. naanada mareyuvene ||


Sangava bittu jagala aadida dinava maretilla ha.. ha.. (2)

Maleyali nanna morige tallida (2)

Tuntiya maretilla, ha..ha.., tuntiya maretilla ||


ಚಿತ್ರಗೀತೆ 


ಸ್ನೇಹದ ಕಡಲಲ್ಲಿ .... ನೆನಪಿನ ದೋಣಿಯಲೀ ... (೨)

ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ 

ಪ್ರೀತಿಯ ತೀರವ, ಸೇರುವುದೊಂದೆ (೨)

ಬಾಳಿನ ಗುರಿಯಮ್ಮಾ, ಬಾಳಿನ ಗುರಿಯಮ್ಮಾ।।ಪ।।


ಬಾಲ್ಯದ ಆಟ, ಆ ಹುಡುಗಾಟ, ಇನ್ನೂ ಮಾಸಿಲ್ಲ, ಹಾ .. ಹಾ (೨)

ಆಟದೆ ಸೋತು, ರೋಷದೆ ಕಚ್ಚಿದ (೨)

ಗಾಯವ ಮರೆತಿಲ್ಲ, ಹ್ಹಹ್ಹಹ್ಹ, ಗಾಯವ ಮರೆತಿಲ್ಲ।।೧।।


ಶಾಲೆಗೆ ಚಕ್ಕರ್, ಊಟಕೆ ಹಾಜರ್, ಲೆಕ್ಕದೆ ಬರಿ ಸೊನ್ನೆ (೨)

ಎನ್ನುತ ನಾನು, ಕೆಣಕಲು ನಿನ್ನ (೨)

ಉದಿಸಿದೆ ಕೆನ್ನೆ, ಹೋ, ನಾನದ ಮರೆಯುವೆನೇ ।।೨।।


ಸಂಗವ ಬಿಟ್ಟು ಜಗಳ ಆಡಿದ ದಿನವ ಮರೆತಿಲ್ಲ ಹಾ .. ಹಾ (೨)

ಮಳೆಯಲಿ ನನ್ನಾ ಮೋರಿಗೆ ತಳ್ಳಿದ (೨)

ತುಂಟಿಯ ಮರೆತಿಲ್ಲ, ಹ್ಹಹ್ಹ, ತುಂಟಿಯ ಮರೆತಿಲ್ಲ।।೩।।

                               



Monday, July 17, 2023

Tirupati Girivasa (ತಿರುಪತಿ ಗಿರಿವಾಸ)

 Movie : Sri Krishnadevaraya (1970)

Singer: P B Srinivas, S Janaki, P Susheela

Song link: Click Here


Kalyanadbuta gatraya kamitartha pradayine |

Sri madhvenkata nathaya srinivasayate namah :||


Tirupati girivaasa sri venkatesha (2)

Neenolida mane maneyu lakshmi nivaasa

Neenolida mane maneyu lakshmi nivaasa

Tirupati girivaasa, sri venkatesha (3)


Akhilanda koti brahmandapala

Aa..aa..|    Aa..aa..|    Aa..aa..|    

Akhilanda koti brahmandapala

Alamelu mangamanollasalola

Alamelu mangamanollasalola

Tirupati girivaasa, sri venkatesha (3)


Pankajalochana patitoddara, sankataharana, sudharasadhara

Shankhachakradhara, srikara sundara, nityavinutana sakshatkara

Vedashastrasaara..       sakalasutradhara..

Shirasa namaami..       manasa smaraami ||


ಚಿತ್ರಗೀತೆ 


ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ।

ಶ್ರೀ ಮದ್ವೇ೦ಕಟ ನಾಥಾಯ ಶ್ರೀನಿವಾಸಾಯತೇ ನಮಃ ।।


ತಿರುಪತಿ ಗಿರಿವಾಸ ಶ್ರೀ ವೆಂಕಟೇಶ (೨)

ನೀನೊಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ 

ನೀನೊಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ 

ತಿರುಪತಿ ಗಿರಿವಾಸ, ಶ್ರೀ ವೆಂಕಟೇಶ (೩)


ಅಖಿಲಾಂಡ ಕೋಟಿ ಬ್ರಹ್ಮಾಂಡಪಾಲ 

ಆ .. ಆ .. ।    ಆ .. ಆ .. ।   ಆ .. ಆ .. ।  

ಅಖಿಲಾಂಡ ಕೋಟಿ ಬ್ರಹ್ಮಾಂಡಪಾಲ 

ಅಲಮೇಲು ಮಂಗಮನೋಲ್ಲಾಸಲೋಲ 

ಅಲಮೇಲು ಮಂಗಮನೋಲ್ಲಾಸಲೋಲ

ತಿರುಪತಿ ಗಿರಿವಾಸ, ಶ್ರೀ ವೆಂಕಟೇಶ (೩)


ಪಂಕಜಲೋಚನ ಪತಿತೋದ್ಧಾರ, ಸಂಕಟಹರಣ, ಸುಧಾರಸದಾರ 

ಶಂಖಚಕ್ರಧರ, ಶ್ರೀಕರ ಸುಂದರ, ನಿತ್ಯವಿನೂತನ ಸಾಕ್ಷತ್ಕಾರ 

ವೇದಶಾಸ್ತ್ರಸಾರ..       ಸಕಲಸೂತ್ರಧಾರ ..

ಶಿರಸಾನಮಾಮಿ..       ಮನಸಾಸ್ಮರಾಮಿ ||




Sunday, July 16, 2023

Tribhuvana Janani (ತ್ರಿಭುವನ ಜನನಿ)

 Movie : Premada Putri (1957)

Singer: P Leela

Song link: Click Here


Aa....Aa....|

Tribhuvana janani jaganmohini (2)

Abhaya pradayini pavani pahimam (2)

Tribhuvana janani jaganmohini ||


Karunakari shankari, aa..aa..(2) devi

Parvati parameshwari, dayaavari

Tribhuvana janani jaganmohini ||


Varasati kalyani parashive phaniveni (2)

Varahara nijarani paramapunamani (2)

Vaarija sanjate, vanchita phaladaate (2)

Varashubhagatre neerajanetre (2)

Suranara sevite, girija paramjyothi.. (2)

Gouri jaganmaate sujana sampreete (2) ||


ಚಿತ್ರಗೀತೆ 


ಆ ....ಆ .... 

ತ್ರಿಭುವನ ಜನನಿ ಜಗನ್ಮೋಹಿನಿ (೨)

ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ (೨)

ತ್ರಿಭುವನ ಜನನಿ ಜಗನ್ಮೋಹಿನಿ ।


ಕರುಣಾಕರಿ ಶಂಕರೀ, ಆ .. ಆ .. (೨) ದೇವಿ 

ಪಾರ್ವತಿ ಪರಮೇಶ್ವರಿ, ದಯಾವರಿ 

ತ್ರಿಭುವನ ಜನನಿ ಜಗನ್ಮೋಹಿನಿ ।।


ವರಸತಿ ಕಲ್ಯಾಣಿ ಪರಶಿವೆ ಫಣಿವೇಣಿ (೨)

ವರಹರ ನಿಜರಾಣಿ ಪರಮಪುನಮಣಿ (೨)

ವಾರಿಜ ಸಂಜಾತೆ, ವಾಂಚಿತ ಫಲದಾತೆ (೨)

ವರಶುಭಗಾತ್ರೆ, ನೀರಜನೇತ್ರೆ (೨)

ಸುರನರ ಸೇವಿತೆ, ಗಿರಿಜ ಪರಂಜ್ಯೋತೀ .. (೨)

ಗೌರಿ ಜಗನ್ಮಾತೆ ಸುಜನ ಸಂಪ್ರೀತೆ (೨) ।।



Vedanti Helidanu (ವೇದಾಂತಿ ಹೇಳಿದನು)

Movie: Manasa Sarovara (1982)

Sahitya: G S Shivarudrapppa

Singer: P B Srinivas

Song link: Click Here


Vedanti helidanu

Honnella mannu mannu

Kaviyobba haadidanu

Mannella honnu honnu (2) ||


Vedanti helidanu, ee hennu maaye maaye

Kaviyobba kanavarisidan, o.. ivale cheluve

Ivala jotheyalli naanu, swargavane gelluve 

Swaravane gelluve ||


Vedanti helidanu, ee baduku shunya shunya

Kavi nintu saaridanu, o.. idu alla shunya

Janma janmadi saviye, nanestu dhanya

Nanestu dhanya ||


ಚಿತ್ರಗೀತೆ 


ವೇದಾಂತಿ ಹೇಳಿದನು 

ಹೊನ್ನೆಲ್ಲ ಮಣ್ಣು ಮಣ್ಣು 

ಕವಿಯೊಬ್ಬ ಹಾಡಿದನು 

ಮಣ್ಣೆಲ್ಲ ಹೊನ್ನು ಹೊನ್ನು (೨) ।।ಪ।।


ವೇದಾಂತಿ ಹೇಳಿದನು, ಈ ಹೆಣ್ಣು ಮಾಯೆ ಮಾಯೆ 

ಕವಿಯೊಬ್ಬ ಕನವರಿಸಿದನು, ಓ .. ಇವಳೇ ಚೆಲುವೆ 

ಇವಳ ಜೊತೆಯಲ್ಲಿ ನಾನು, ಸ್ವರ್ಗವನೇ ಗೆಲ್ಲುವೆ 

ಸ್ವರ್ಗವನೇ ಗೆಲ್ಲುವೆ ।।೧।।


ವೇದಾಂತಿ ಹೇಳಿದನು, ಈ ಬದುಕು ಶೂನ್ಯ ಶೂನ್ಯ 

ಕವಿ ನಿಂತು ಸಾರಿದನು, ಓ .. ಇದು ಅಲ್ಲ ಶೂನ್ಯ 

ಜನ್ಮ ಜನ್ಮದಿ ಸವಿಯೇ, ನಾನೆಷ್ಟು ಧನ್ಯ 

ನಾನೆಷ್ಟು ಧನ್ಯ।।೨।।





Aanandamaya Ee Jaga Hrudaya (ಆನಂದಮಯ ಈ ಜಗ ಹೃದಯ)

Bhavageete

Sahitya: Kuvempu

Singer: Shivamogga Subbanna

Song link: Click Here


Aanandamaya ee jaga hrudaya

Etake bhaya maano

Suryodaya chandrodaya

Devara daya kaano

Aanandamaya ee jaga hrudaya ||


Bisilidu bari bisilallavo, suryana krupe kaano

Suryanu bari raviyallavo, aa bhrantiya maano

Aanandamaya ee jaga hrudaya ||


Ravi vadanave shiva sadanavo, bari kannadu manno

Shivanillade soundaryave, shava mukhada kanno

Aanandamaya ee jaga hrudaya ||


Udayadolen, hrudayava kaan

Ade amrutada hanno

Shiva kanade kavi kurudano, shiva kavyada kanno

Aanandamaya ee jaga hrudaya ||


ಭಾವಗೀತೆ 


ಆನಂದಮಯ ಈ ಜಗ ಹೃದಯ 

ಏತಕೆ ಭಯ ಮಾಣೋ 

ಸೂರ್ಯೋದಯ ಚಂದ್ರೋದಯ 

ದೇವರ ದಯ ಕಾಣೋ 

ಆನಂದಮಯ ಈ ಜಗ ಹೃದಯ ।।ಪ।।


ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ 

ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ 

ಆನಂದಮಯ ಈ ಜಗ ಹೃದಯ ।।೧।।


ರವಿ ವದನವೆ  ಶಿವ ಸದನವೋ, ಬರಿ ಕಣ್ಣದು ಮಣ್ಣೋ 

ಶಿವನಿಲ್ಲದೆ ಸೌಂದರ್ಯವೆ, ಶವ ಮುಖದಾ ಕಣ್ಣೋ 

ಆನಂದಮಯ ಈ ಜಗ ಹೃದಯ ।।೨।।


ಉದಯದೊಳೇನ್ ಹೃದಯವ ಕಾಣ್ 

ಅದೆ ಅಮೃತದ ಹಣ್ಣೋ 

ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ 

ಆನಂದಮಯ ಈ ಜಗ ಹೃದಯ ।।೩।।