Bhavageete
Sahitya: K S Nissar Ahmed
Song link: Click Here
Sunset is beautiful and created a hue of golden color everywhere. This song describes the loneliness of a person in the evening waiting for his partner to arrive.
Mattade besara, ade sanje, ade ekanta-
Ninna jotheyillade, maatillade mana vibhranta ||
Kannane danisuva ee paduvana ban bannagalu,
Mannane honnina hannagisuvee kiranagalu,
Hacchane hasurige haseyidutiruvee khaga gaana-
Chinna, neenillade bimmennutide ramyodyana ||
Aasegala hindina tulitakke hola nanni deha;
Baruveyo, baareyo neenenutide ha! sandeha.
Muttidalasyava, bigi mounava hodedodisu ba!
Matte aa samateya hiri beliya sari nillisu ba ||
ಭಾವಗೀತೆ
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ -
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ ।।ಪ।।
ಕಣ್ಣನೇ ದಣಿಸುವ ಈ ಪಡುವಣ ಬಾನ್ ಬಣ್ಣಗಳು,
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ -
ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ ।।೧।।
ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ ;
ಬರುವೆಯೊ, ಬಾರೆಯೊ ನೀನೆನುತಿದೆ ಹಾ ! ಸಂದೇಹ.
ಮುತ್ತಿದಾಲಸ್ಯವ, ಬಿಗಿ ಮೌನವ ಹೊಡೆದೋಡಿಸು ಬಾ !
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ ।।೨।।






