Thursday, April 27, 2023

Ba Tayi Bharatiye (ಬಾ ತಾಯಿ ಭಾರತಿಯೆ)

Movie: Tayi Karulu (1962)

Singer: P B Srinivas

Song linkClick Here


Ba tayi bharatiye bhava bhageerathiye

Hrudaya veeneya meeti

Madhura geeteya neede

Ba tayi bharatiye bhava bhageerathiye ||


Kannadada kasturi tilakavittu

Kannadada kavyagala male tottu

Kannadada kalgejje nada kottu

Honnodeya bhumiyali hejje ittu ||


Kaveri kaltoleye kadiruvalu

Godavari devi hoo mudivalu

Odalella singarise tunge ihalu

Odanadi bhadre ta jategiruvalu ||


ಚಿತ್ರಗೀತೆ 


ಬಾ ತಾಯಿ ಭಾರತಿಯೆ ಭಾವ ಭಾಗೀರಥಿಯೆ 

ಹೃದಯ ವೀಣೆಯ ಮೀಟಿ ಮಧುರ ಗೀತೆಯ ನೀಡೆ 

ಬಾ ತಾಯಿ ಭಾರತಿಯೆ ಭಾವ ಭಾಗೀರಥಿಯೆ ।।ಪ।।


ಕನ್ನಡದ ಕಸ್ತೂರಿ ತಿಲಕವಿಟ್ಟು 

ಕನ್ನಡದ ಕಾವ್ಯಗಳ ಮಾಲೆ ತೊಟ್ಟು 

ಕನ್ನಡದ ಕಾಲ್ಗೆಜ್ಜೆ ನಾದ ಕೊಟ್ಟು 

ಹೊನ್ನೊಡೆಯ ಭೂಮಿಯಲಿ ಹೆಜ್ಜೆ ಇಟ್ಟು ।।೧।।


ಕಾವೇರಿ ಕಾಲ್ತೊಳೆಯೆ ಕಾದಿರುವಳು 

ಗೋದಾವರಿ ದೇವಿ ಹೂ ಮುಡಿವಳು 

ಒಡಲೆಲ್ಲ ಸಿಂಗರಿಸೆ ತುಂಗೆ ಇಹಳು 

ಒಡನಾಡಿ ಭದ್ರೆ ತಾ ಜತೆಗಿರುವಳು  ।।೨।।



Wednesday, April 26, 2023

A Aa E Ee Kannadada Akshara Male (ಅ ಆ ಇ ಈ ಕನ್ನಡದ ಅಕ್ಷರ ಮಾಲೆ)

 Movie: Karulina kare (1970)

Singer: S Janaki, B K Sumitra

Song linkClick Here


A....   Aa....     A....   Aa....    E....  Ee....    E....  Ee....


A aa e ee kannadada akshara male

A..  amma embude kandana karulina kareyole (2) ||Pallavi||


Aa- aata uuta ota kannada ondane pata

Kannada bhasheya kalitavage jeevanave rasaduta ||Repeat Pallavi||


E....            E.....

Iddavarella illadavarige needalebeku

Ee.. eshwaranalli endu nambike idabeku ||Repeat Pallavi||


U....   uppu tinda manege eradu bageyabeda

Uu....  Uurige droha madi badukalenisabeda ||


Ru....   Ruu....   Eae....   Eaae....   I....

Bharata matege jai 

O....

Onde tayi makkalu navu ondugudabeku (2)

Oo....

Odanu kalitu deshada sevege nilabeku ||Repeat Pallavi||


Ou.... Am.... Aha....    Ou.... Am.... Aha....  Aha.... Aha ha ha...


ಚಿತ್ರಗೀತೆ 


ಅ ..  ಆ ..     ಅ ..  ಆ ..    ಇ .. ಈ ..    ಇ .. ಈ ..


ಅ  ಆ  ಇ ಈ  ಕನ್ನಡದ ಅಕ್ಷರ ಮಾಲೆ 

..  ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ (೨) ।।ಪ।।


  ಆಟ ಊಟ ಓಟ ಕನ್ನಡ ಒಂದನೆ ಪಾಠ 

ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ 

ಅ  ಆ  ಇ ಈ  ಕನ್ನಡದ ಅಕ್ಷರ ಮಾಲೆ 

ಅ..  ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।


 ಇ ..    ಇ.. 

ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು 

ಈ .. ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು 

ಅ  ಆ  ಇ ಈ  ಕನ್ನಡದ ಅಕ್ಷರ ಮಾಲೆ 

ಅ..  ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।


..  ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ 

..  ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ 

ಅ  ಆ  ಇ ಈ  ಕನ್ನಡದ ಅಕ್ಷರ ಮಾಲೆ 

ಅ..  ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।


ಋ ೠ ಎ ಏ ಐ ಭಾರತ ಮಾತೆಗೆ ಜೈ 


ಓ.. 

ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು (೨)

ಓ..  ಓದನು ಕಲಿತು ದೇಶದ ಸೇವೆಗೆ ನಿಲಬೇಕು 

ಅ  ಆ  ಇ ಈ  ಕನ್ನಡದ ಅಕ್ಷರ ಮಾಲೆ 

ಅ..  ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।

ಔ ಅಂ ಅಃ        ಔ ಅಂ ಅಃ       ಔ ಅಂ ಅಃ     ಅಃ ಹಾ ಹಾ.

                                       




Tuesday, April 25, 2023

Marali Mareyagi (ಮರಳಿ ಮರೆಯಾಗಿ)

Movie: Savari (2009)

Singer: Sadhana Sargam

Song link: Click Here


Marali mareyagi terali tereyagi

Manada dadakeega badidu olavu 

Sihi kahi kavana

Marali mareyagi tarali tangali

Hommi hosadada harusha

Haravu hasi khushi kavana

Nee iniya nee preetige sarathi ||


Ringana hosatana tanuva ee nartana

Tingala belaka na kande ee sanje na

Dharegilida kinnara nee, vismayada kiranave nee

Nanna kanasugalu teladi kuniyutive

Nee iniya nee preetige sarathi ||


Bellada pakave nalla ninnolumeye

Nillada tavakave bhavya sammilanake

Aagasake rangerachi, bannadali bhava jinugi

Nalla chandirana me;;a keli mudigirisu

Nee iniya nee preetige sarathi ||


ಚಿತ್ರಗೀತೆ 


ಮರಳಿ ಮರೆಯಾಗಿ ತೆರಳಿ ತೆರೆಯಾಗಿ 

ಮನದ ದಡಕೀಗ ಬಡಿದೂ ಒಲವು 

ಸಿಹಿ ಕಹಿ ಕವನ 

ಮರಳಿ ಮರೆಯಾಗಿ ತರಲಿ ತಂಗಾಳಿ 

ಹೊಮ್ಮಿ ಹೊಸದಾದ ಹರುಷ 

ಹರವೂ ಹಸಿ ಖುಷಿ ಕವನ 

ಕನಸ ನೀ ನನಸಾಗಿಸಿ ಕಲರವ ನೀ ಪಸರಿಸಿ 

ನೀ ಇನಿಯ ನೀ ಪ್ರೀತಿಗೆ ಸಾರಥಿ ।।ಪ।।


ರಿಂಗಣ ಹೊಸತನ ತನುವ ಈ ನರ್ತನ 

ತಿಂಗಳ ಬೆಳಕ ನಾ ಕಂಡೆ ಈ ಸಂಜೆ ನಾ 

ಧರೆಗಿಳಿದ ಕಿನ್ನರ ನೀ, ವಿಸ್ಮಯದ ಕಿರಣವೆ ನೀ 

ನನ್ನ ಕನಸುಗಳು ತೇಲಾಡಿ ಕುಣಿಯುತಿವೆ 

ನೀ ಇನಿಯ ನೀ ಪ್ರೀತಿಗೆ ಸಾರಥಿ ।।೧।।


ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೆ 

ನಿಲ್ಲದ ತವಕವೆ ಭವ್ಯ ಸಮ್ಮಿಲನಕೆ 

ಆಗಸಕೆ ರಂಗೆರಚಿ, ಬಣ್ಣದಲಿ ಭಾವ ಜಿನುಗಿ 

ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು 

 ನೀ ಇನಿಯ ನೀ ಪ್ರೀತಿಗೆ ಸಾರಥಿ ।।೨।।




Sunday, April 23, 2023

Huttari Haadu (ಹುತ್ತರಿ ಹಾಡು)

Nadageete

Sahitya: Panje Mangeshrao 

Song link: Click Here


Elli bhurame deva sannidhi bayasi bimmane bandalo?

Elli mohana giriya beragina roopinindali nindalo?

Elli mugilali minchinol kaveri hole hole holevalo?

Elli nelavanu tanisi janamana holada kale kale kalevalo?


Alle aa kade nodala!

Alle kodagara nadala

Alle kodavara beedala!


Ommatavu oggattu onde manavu ellide heliri?

Summaittaro dattikuppasa? haaduhuttarigeliri!

Chimmi paturekola hoilige kuniva pada hora hommali!

Amme harasida seeme namagidu irali nammade nammali!


Nemmadiyanidu talali

Ammeya balatolali

Namma kodagidu balali. 


ನಾಡಗೀತೆ 


ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ?

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ?

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ

 ಹೊಳೆವಳೋ ?

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ 

ಕಳೆವಳೋ ?


ಅಲ್ಲೆ ಆ ಕಡೆ ನೋಡಲಾ !

ಅಲ್ಲೆ ಕೊಡಗರ ನಾಡಲಾ 

ಅಲ್ಲೆ ಕೊಡವರ ಬೀಡಲಾ !


ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ ?

ಸುಮ್ಮನಿತ್ತರೊ ದಟ್ಟಿಕುಪ್ಪಸ  ? ಹಾಡುಹುತ್ತರಿಗೇಳಿರಿ !

ಚಿಮ್ಮಿ ಪಾತುರೆಕೋಲ ಹೊಯ್ಲಿಗೆ  ಕುಣಿವ ಪದ ಹೊರ ಹೊಮ್ಮಲಿ !

ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ !


ನೆಮ್ಮದಿಯನಿದು ತಾಳಲಿ 

ಅಮ್ಮೆಯಾ ಬಲತೋಳಲಿ 

ನಮ್ಮ ಕೊಡಗಿದು ಬಾಳಲಿ . 

                                     




Thursday, April 20, 2023

Dasanagu Visheshanagu (ದಾಸನಾಗು ವಿಶೇಷನಾಗು)

Bhaktigeete

Kanaka Dasara Padagalu

Song link: Click Here


 Esu kayangala kaledu embatnalku laksha

Jeeva rashiyannu dati banda ee shareera (2)

Taanalla tannadalla (2) aase taravalla munde bahodalla

Dasanagu visheshanagu (4) ||


Ashaklesha doshavemba abdiyolu mulugi

Yamana pashakkolagagade nirdoshiyago santoshiyago (2)

Kashi varanasi kanchi kalahasti rameshwara

Esu desha tirugidare bahodeno alli hodeno

Dosh nasha krishnaveni gange godavari

Bhava nashi tungabhadre yamune vasadalli upavasadalli

Meesalagi nindu japatapa homa nemagala

Esu bari madidaru phalavenu ee chalavenu

Dasanagu visheshanagu (4) ||


Andigo indigo omme seri kamaleshanannu

Ondu bari yaro hinda neneyalilla mana daniyalilla (2)

Bandu bandu bhramegondu mayamohakke sikki

Nondu bendu ondarinda uliyalilla bandha kaleyalilla

Sandehava madadiru arivu emba deepavittu

Indu kandya dehadalli pindanda hage brahamaanda

Indu hariya dhyanavannu madi ee vivekadi

Mukundaninda mukti bedu kandya nee nodu kandya

Dasanagu visheshanagu (4) ||


Nooru bari sharanu madi neera mulugalyake

Paranariyara notake guriya madidi mana sereya madidi (2)

Sureyolu sure tumbi mele  hoovina haara

Geeru gandha akshateya dharisidante nee maresidante

Garudiya mata bittu nadabrahmmana pididu

Sarisoori muktiyannu shamanadinda matte sumanadinda

Narayana acchuta anantadi keshavana ...aa...aa

Narayana acchuta anantadi keshavana

Saramrutavanundu sukhiso landa jeevave

Elo bhanda jeevave

Dasanagu visheshanagu (2)

Dsanagu visheshanagu dasanagu bhava pasha neegu (4) ||


ಭಕ್ತಿಗೀತೆ 


ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ 

ಜೀವ ರಾಶಿಯನ್ನು ದಾಟಿ ಬಂದ ಈ ಶರೀರ (೨)

ತಾನಲ್ಲ ತನ್ನದಲ್ಲ (೨) ಆಸೆ ತರವಲ್ಲ ಮುಂದೆ ಬಹೊದಲ್ಲ 

ದಾಸನಾಗು ವಿಶೇಷನಾಗು (೪) ।।ಪ।।


ಆಶಾಕ್ಲೇಷ ದೋಷವೆಂಬ ಅಬ್ದಿಯೊಳು ಮುಳುಗಿ 

ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ ಸಂತೋಷಿಯಾಗೊ (೨)

ಕಾಶಿ ವಾರಣಾಸಿ  ಕಂಚಿ ಕಾಳಹಸ್ತಿ ರಾಮೇಶ್ವರ 

ಏಸು ದೇಶ ತಿರುಗಿದರೆ ಬಹೊದೇನೊ ಅಲ್ಲಿ ಹೋದೇನೊ 

ದೋಷನಾಶ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ 

ಮೀಸಲಾಗಿ ನಿಂದು ಜಪತಪ ಹೋಮ ನೇಮಗಳ 

ಏಸು ಬಾರಿ ಮಾಡಿದರು ಫಲವೇನು ಈ ಛಲವೇನು 

ದಾಸನಾಗು ವಿಶೇಷನಾಗು (೪) ।।೧।।


ಅಂದಿಗೋ ಇಂದಿಗೋ ಒಮ್ಮೆ ಸೇರಿ ಕಮಲೇಶನನ್ನು 

ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ (೨)

ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ 

ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ 

ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು 

ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ 

ಇಂದು ಹರಿಯ ಧ್ಯಾನವನ್ನು ಮಾಡಿ ಈ ವಿವೇಕದಿ 

ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ 

ದಾಸನಾಗು ವಿಶೇಷನಾಗು (೪) ।।೨।।


ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಲ್ಯಾಕೆ 

ಪರನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ (೨)

ಸೂರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ 

ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ 

ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು 

ಸಾರಿಸೂರಿ  ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ

ನಾರಾಯಣ ಅಚ್ಚುತ ಅನಂತಾದಿ ಕೇಶವನಾ .. ಆ .. ಆ 

 ನಾರಾಯಣ ಅಚ್ಚುತ ಅನಂತಾದಿ ಕೇಶವನ

ಸಾರಾಮೃತವನುಂಡು  ಸುಖಿಸೊ ಲಂಡ ಜೀವವೆ 

ಎಲೋ ಭಂಡ ಜೀವವೇ 

ದಾಸನಾಗು ವಿಶೇಷನಾಗು (೨)

ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶ ನೀಗು (೪) 

।।೩।।





Monday, April 17, 2023

Mahalakshmi Manege Baaramma (ಮಹಾಲಕ್ಷ್ಮಿ ಮನೆಗೆ ಬಾರಮ್ಮಾ)

Bhaktigeete

Singer: S Janaki

Song link: Click Here


Mahalakshmi manege baaramma

Mahalakshmi manege baa..ramma

Namma premadindomme nodamma

Shukravaravu pooja samayavu

Nee barade sukha shanti kanevu

Mahalakshmi manege baaramma (2) ||


Ninna kangala chandrikeyalli

Naliyuva bhagyava nee kodalareya

Ninna kalgala gejjeya nadake

Kuniyuva yogavu nee taralareya

Ee maneyalli shaswatavagi

Nelasi nammanu harasamma ||


Ninna smaraneye manakanandavu 

Ninna karuneye balina deepavu

Neeniruva mane bhuvaikuntavu

Amma nanna nadesamma ||


ಭಕ್ತಿಗೀತೆ 


ಮಹಾಲಕ್ಷ್ಮಿ ಮನೆಗೆ ಬಾರಮ್ಮಾ 

ಮಹಾಲಕ್ಷ್ಮಿ ಮನೆಗೆ ಬಾ.. ರಮ್ಮಾ 

ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ 

ಶುಕ್ರವಾರವು ಪೂಜಾ ಸಮಯವು (೨)

ನೀ ಬರದೆ ಸುಖ ಶಾಂತಿ ಕಾಣೆವು 

ಮಹಾಲಕ್ಷ್ಮಿ ಮನೆಗೆ ಬಾರಮ್ಮಾ ।।ಪ।।


ನಿನ್ನ ಕಂಗಳ ಚಂದ್ರಿಕೆಯಲ್ಲಿ 

ನಲಿಯುವ ಭಾಗ್ಯವ ನೀ ಕೊಡಲಾರೆಯ 

ನಿನ್ನ ಕಾಲ್ಗಳ ಗೆಜ್ಜೆಯ ನಾದಕೆ 

ಕುಣಿಯುವ ಯೋಗವು ನೀ ತರಲಾರೆಯಾ 

ಈ ಮನೆಯಲ್ಲಿ ಶಾಶ್ವತವಾಗಿ 

ನೆಲೆಸಿ ನಮ್ಮನೂ ಹರಸಮ್ಮಾ ।।೧।।


ನಿನ್ನ ಸ್ಮರಣೆಯೆ ಮನಕಾನಂದವು 

ನಿನ್ನ ಕರುಣೆಯೇ ಬಾಳಿನ ದೀಪವು 

ನೀನಿರುವೆ ಮನೆ ಭೂವೈಕುಂಠವು 

ನೀ ನಲಿದಾಗಲೆ ಸಿರಿ ಸೌಭ್ಯಾಗ್ಯವು 

ನಂಬಿಹೆ ನಿನ್ನೇ ಕರವನು ಹಿಡಿದು 

ಅಮ್ಮ ನನ್ನ ನಡೆಸಮ್ಮಾ .. ।।೨।।



Sunday, April 16, 2023

Kolu Matadutave Belliya Gejje Matadutave (ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ)

Janapada Geete

Song link: Click Here


Kolu matadutave belliya gejje matadutave 

Kolu matadutave belliya gejje matadutave ||


Mungoli kugyavo moodu kemperyavo

Swami nannayya rathaveri (2) baruvaga

Naveddu kaiyya mugidevu ||


Adikeli hannu bandu gadigeli tuppa bandu

Hittige bandavu idigaya (2) poojege

Elu timmappa belagaitu ||


Tirupati timmappa belura chenniga

Nagamangalada narasimha (2) moovaru

Mooru lokada odeyaru ||


ಜನಪದ ಗೀತೆ 


ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ 

ಕೋಲು ಮಾತಾಡುತಾವೆ ಬೆಳ್ಳಿಯ ಗೆಜ್ಜೆ ಮಾತಾಡುತಾವೆ ।।ಪ।।


ಮುಂಗೋಳಿ ಕೂಗ್ಯಾವೋ ಮೂಡು ಕೆಂಪೇರ್ಯಾವೋ 

ಸ್ವಾಮಿ ನನ್ನಯ್ಯ ರಥವೇರಿ (೨) ಬರುವಾಗ 

ನಾವೆದ್ದು ಕೈಯ ಮುಗಿದೇವು ।।೧।।


ಅಡಿಕೇಲಿ   ಹಣ್ಣು ಬಂದು ಗಡಿಗೇಲಿ ತುಪ್ಪ ಬಂದು 

ಹಿಟ್ಟಿಗೆ ಬಂದಾವು ಇಡಿಗಾಯ (೨) ಪೂಜೆಗೆ 

ಏಳು ತಿಮ್ಮಪ್ಪ ಬೆಳಗಾಯ್ತು ।।೨।।

   

ತಿರುಪತಿ ತಿಮ್ಮಪ್ಪ ಬೇಲೂರ ಚೆನ್ನಿಗ 

ನಾಗಮಂಗಲದ ನರಸಿಂಹ (೨) ಮೂವರೂ 

ಮೂರು ಲೋಕದ ಒಡೆಯರು ।।೩।।