Sunday, January 15, 2023

Chaitrada Baruvige Vasumati Vaibhava (ಚೈತ್ರದ ಬರುವಿಗೆ ವಸುಮತಿ ವೈಭವ)

Bhavageete

Sahitya: Doddarangegowda

Song linkClick Here


Chaitrada baruvige

Vasumati vaibhava

Bannada melava nadesutide |

Kanuva kannige 

Cheluvina sambrama

Mohaka kavyava bareyutide ||


Yavede nodali

Hoovina bedagu

Rangina chitrava bareyutide |

Anupama kogile

Taliranu savidu

Impina ganava hadutide ||


Neeliya gaganadi

Belliya mugilu

Haalina hariveya chellutide |

Hunnime chandira

Kampanu suridu 

Kavitege prerane tumbutide ||


ಭಾವಗೀತೆ 


ಚೈತ್ರದ ಬರುವಿಗೆ 

ವಸುಮತಿ ವೈಭವ 

ಬಣ್ಣದ ಮೇಳವ ನಡೆಸುತ್ತಿದೆ ।

ಕಾಣುವ ಕಣ್ಣಿಗೆ 

ಚೆಲುವಿನ ಸಂಭ್ರಮ 

ಮೋಹಕ ಕಾವ್ಯವ ಬರೆಯುತಿದೆ ।।


ಯಾವೆಡೆ ನೋಡಲಿ 

ಹೂವಿನ ಬೆಡಗು 

ರಂಗಿನ ಚಿತ್ರವ ಬರೆಯುತಿದೆ ।

ಅನುಪಮ ಕೋಗಿಲೆ 

ತಳಿರನು ಸವಿದು 

ಇಂಪಿನ ಗಾನವ ಹಾಡುತಿದೆ ।।


ನೀಲಿಯ ಗಗನದಿ 

ಬೆಳ್ಳಿಯ ಮುಗಿಲು 

ಹಾಲಿನ ಹರಿವೆಯ ಚೆಲ್ಲುತಿದೆ ।

ಹುಣ್ಣಿಮೆ ಚಂದಿರ 

ಕಂಪನು ಸುರಿದು 

ಕವಿತೆಗೆ ಪ್ರೇರಣೆ ತುಂಬುತಿದೆ ।।



Saturday, January 14, 2023

Badukige Enartha Nana Gelati (ಬದುಕಿಗೆ ಏನರ್ಥ ನನಗೆಳತಿ)

Bhavageete

Sahitya: Basavaraja Sabaraha

Song linkClick Here


Badukige enartha nana gelati

Preetige enartha nana gelati

Mounavagi eke kulite nana gelati

Nee meleddu baravva nana gelati ||


Jagada tumba huttagalu beledavalla

Hutta huttadolaga haavu tumbyavalla

Gidagidaka midi nagara sutyavalla

Vishava kakki balannu mutyavalla ||


Hasirutta bhutayi battihoyitu

Hoo totta nelavella kattalayitu

Naguvanta chandrama nalugi hoyitu

Jagada tumba karineralu suttikonditu ||


Kaviyolage kama koletu narutaitalla

Khadiyolaga jagave suttu hogataitalla

Khakiyinda raktada maduvu hariyutaitalla

Kappu dehadolage jeeva karagataitalla ||


Nova nungi nagalynga nana gelati

Hakki rekki kittaralla nana gelati

Belaka batti ittaralla nana gelati

Katla ratri kaleyo voldu nana gelati ||


Preeti hoovu aralabeku nana gelati

Naguvu jagava tumbabeku nana gelati

Horataka nillabeku nana gelati

Daniyetti haadena nana gelati ||


ಭಾವಗೀತೆ 


ಬದುಕಿಗೆ ಏನರ್ಥ ನನಗೆಳತಿ 

ಪ್ರೀತಿಗೆ ಏನರ್ಥ ನನಗೆಳತಿ 

ಮೌನವಾಗಿ ಏಕೆ ಕುಳಿತೆ ನನಗೆಳತಿ   

ನೀ ಮೇಲೆದ್ದು ಬಾರವ್ವ ನನಗೆಳತಿ ।।ಪ ।।


ಜಗದ ತುಂಬಾ ಹುತ್ತಗಳು ಬೆಳೆದಾವಲ್ಲ 

ಹುತ್ತ ಹುತ್ತದೊಳಗ ಹಾವು ತುಂಬ್ಯಾವಲ್ಲ 

ಗಿಡಗಿಡಕ ಮಿಡಿನಾಗರ ಸುತ್ಯಾವಲ್ಲ

ವಿಷವ ಕಕ್ಕಿ ಬಾಳನ್ನು ಮುತ್ಯಾವಲ್ಲ ।।೧।।


ಹಸಿರುಟ್ಟ ಭೂತಾಯಿ ಬತ್ತಿಹೋಯಿತು 

ಹೂತೊಟ್ಟ ನೆಲವೆಲ್ಲ ಕತ್ತಲಾಯಿತು 

ನಗುವಂತ ಚಂದ್ರಮ ನಲುಗಿ ಹೋಯಿತು 

ಜಗದಾ ತುಂಬ ಕರಿನೆರಳು ಸುತ್ತಿಕೊಂಡಿತು ।।೨।।


ಕಾವಿಯೊಳಗೆ ಕಾಮಕೊಳೆತು ನಾರತೈತಲ್ಲಾ 

ಖಾದಿಯೊಳಗ ಜಗವೆ ಸುಟ್ಟು ಹೋಗತೈತಲ್ಲ 

ಖಾಕಿಯಿಂದ ರಕ್ತದ ಮಡುವು ಹರಿಯುತೈತಲ್ಲ 

ಕಪ್ಪು ದೇಹದೊಳಗ  ಜೀವ ಕರಗತೈತಲ್ಲ ।।೩।।


ನೋವನುಂಗಿ ನಗಲ್ಯಾ೦ಗ ನನಗೆಳತಿ 

ಹಕ್ಕಿ ರೆಕ್ಕಿ ಕಿತ್ತಾರಲ್ಲ ನನಗೆಳತಿ 

ಬೆಳಕ ಬತ್ತಿ ಇಟ್ಟಾರಲ್ಲ  ನನಗೆಳತಿ   

ಕತ್ಲರಾತ್ರಿ ಕಳೆಯೊ ವೊಲ್ದು ನನಗೆಳತಿ ।।೪।।


ಪ್ರೀತಿ ಹೂವು ಅರಳಬೇಕು ನನಗೆಳತಿ 

ನಗುವು ಜಗವ ತುಂಬಬೇಕು ನನಗೆಳತಿ 

ಹೋರಾಟಕ ನಿಲ್ಲಬೇಕು ನನಗೆಳತಿ 

ದನಿಯೆತ್ತಿ ಹಾಡೇನಾ ನನಗೆಳತಿ ।।೫।। 

                                         


  

Friday, January 13, 2023

Olle Nari Kande (ಒಳ್ಳೆ ನಾರಿ ಕಂಡೆ)

Sishunala Shariefa Sahebara Geetegalu

Song link: Click Here


Olle nari kande - egale nari kande

Olle nari kande ,

Ileya taladi tapadolu nintu

Kaleya rushigala marulu maduva ||


Kaiyu, kalu - illa usuru

Maiyyi modale illa;

Chelluta paramananda ediyolu

Ellava bidisi karunadi kayuva ||


Muttalu kolluvalo - kamana

Katti aalutihalo;

Batta kunchaka, bareditta kuppasaka

Nattu manasu nadegettu nintito ||


Meesalu nageyavalu - sishunala

Deeshage sotavalu;

Vasisi gudipuradi - govindana

Dasarannu ta seleyutalihalu ||


ತತ್ವಪದ 


ಒಳ್ಳೆ ನಾರಿ ಕಂಡೆ  - ಈಗಲೆ ನಾರಿ ಕಂಡೆ

ಒಳ್ಳೆ ನಾರಿ ಕಂಡೆ ,

ಇಳೆಯ ತಳದಿ ತಪದೊಳು ನಿಂತು 

ಕಳೆಯ ಋಷಿಗಳ ಮರುಳು  ಮಾಡುವ ।।ಪ ।।


ಕೈಯು, ಕಾಲು  - ಇಲ್ಲ ಉಸುರು 

ಮೈಯ್ಯಿ ಮೊದಲೆ ಇಲ್ಲ;

ಚೆಲ್ಲುತ ಪರಮಾನಂದ ಎದಿಯೊಳು 

ಎಲ್ಲವ ಬಿಡಿಸಿ ಕರುಣದಿ ಕಾಯುವ ।।೧।।


ಮುಟ್ಟಲು ಕೊಲ್ಲುವಳೋ  - ಕಾಮನ 

ಕಟ್ಟಿ ಆಳುತಿಹಳೊ;

ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ 

ನಟ್ಟು ಮನಸು ನಡೆಗೆಟ್ಟು ನಿಂತಿತೋ ।।೨।।


ಮೀಸಲು ನಗೆಯವಳು - ಶಿಶುನಾಳಾ 

ಧೀಶಗೆ ಸೋತವಳು;

ವಾಸಿಸಿ ಗುಡಿಪುರದಿ - ಗೋವಿಂದನ 

ದಾಸರನ್ನು ತಾ ಸೆಳೆಯುತಲಿಹಳು ।।೩।।

                                            



Thursday, January 12, 2023

Omkaradalli Nodi Iruvudondu Sonne (ಓಂಕಾರದಲ್ಲಿ ನೋಡಿ ಇರುವುದೊಂದು ಸೊನ್ನೆ )

Bhaktigeete

Singer: Dr. Rajkumar

Song link: Click Here


Om Om Om

Omkaradalli nodi iruvudondu sonne

Adaralu kooda kanuva namma ganapane

Vishwadalli ellellu iruva eetane

Vishwanatha poojisuva adi pojitane

Adi pojitane.. ||


Modaka ivanige priya naivedya, priya naivedya

Bhaktige koduvanu tanna sanidhya, tanna sanidhya

Ivanu taruva phalagalu vaividhya aa..

Ivaninda sakalavu sulabha sadhya ||

Jaya jaya jaya jaya gajavadana

Karunisu karunisu kari vadana


Masadalli bhadrapada ivanige ista, ivanige ista

Adarali shukla choutiyu shresta, choutiyu shresta

Intha yogadali poojise olidu aa..

Ganapa neeguvanu parama sankasta ||


Bhaktara bhaktanu bhaktavatsala, bhaktavatsala 

Shaktara shaktanu mahabala, mahabala

Ivanu needuvanu siddhi buddhi ella aa..

Ganapana mahimege holike illa ||


ಭಕ್ತಿಗೀತೆ 


ಓಂ  ಓಂ  ಓಂ   

ಓಂಕಾರದಲ್ಲಿ ನೋಡಿ ಇರುವುದೊಂದು ಸೊನ್ನೆ 

ಅದರಲೂ ಕೂಡ ಕಾಣುವ ನಮ್ಮಾ ಗಣಪನೆ 

ವಿಶ್ವದಲ್ಲಿ ಎಲ್ಲೆಲ್ಲುಇರುವ ಈತನೆ 

ವಿಶ್ವನಾಥ ಪೂಜಿಸುವ ಆದಿ ಪೂಜಿತನೆ 

ಆದಿ ಪೂಜಿತನೆ .. ।।ಪ ।।


ಮೋದಕ ಇವನಿಗೆ ಪ್ರಿಯ ನೈವೇದ್ಯ, ಪ್ರಿಯ ನೈವೇದ್ಯ 

ಭಕ್ತಿಗೆ ಕೊಡುವನು ತನ್ನ ಸಾನಿಧ್ಯ, ತನ್ನ ಸಾನಿಧ್ಯ

ಇವನು ತರುವ ಫಲಗಳು ವೈವಿಧ್ಯ  ಆಆ .. 

ಇವನಿಂದ ಸಕಲವು ಸುಲಭ ಸಾಧ್ಯ ।।೧।। 


ಜಯ ಜಯ ಜಯ ಜಯ ಗಜವದನ 

ಕರುಣಿಸು ಕರುಣಿಸು ಕರಿ ವದನ 


ಮಾಸದಲ್ಲಿ ಭಾದ್ರಪದ ಇವನಿಗೆ ಇಷ್ಟ, ಇವನಿಗೆ ಇಷ್ಟ

ಅದರಲಿ ಶುಕ್ಲ ಚೌತಿಯು ಶ್ರೇಷ್ಠ, ಚೌತಿಯು ಶ್ರೇಷ್ಠ

ಇಂಥಾ ಯೋಗದಲಿ ಪೂಜಿಸೆ ಒಲಿದು ಆಆ .. 

ಗಣಪ ನೀಗುವನು ಪರಮ ಸಂಕಷ್ಟ ।।೨।।


ಭಕ್ತರ ಭಕ್ತನು ಭಕ್ತವತ್ಸಲ, ಭಕ್ತವತ್ಸಲ  

ಶಕ್ತರ ಶಕ್ತನು ಮಹಾಬಲ, ಮಹಾಬಲ 

ಇವನು ನೀಡುವನು ಸಿದ್ಧಿ ಬುದ್ಧಿ ಎಲ್ಲಾ ಆಆ .. 

ಗಣಪನ ಮಹಿಮೆಗೆ ಹೋಲಿಕೆ ಇಲ್ಲ ।।೩।।




                                                                                                                                                                                                                                                                                            

Wednesday, January 11, 2023

Chinte Etako Bayala Branti Etako (ಚಿಂತೆ ಏತಕೋ ಬಯಲ ಭ್ರಾಂತಿ ಏತಕೋ)

Bhaktigeete

Sri Purandara Dasara Keerthanegalu

Song link: Click Here


Raga: Pantuvarali

Tala: Rupakatala


Chinte etako bayala bhranti yetako |

Kantupitana divya nama

Mantravannu japisuvavage ||


Kalakaladalli bidade, veleyaritu kuguvantha

Koli tanna marige moleya

Hala kottu salahite ||


Sadagarada nariyaru

Hadeyuvaga sulagitti

Adaviyolage heruva mrugava

Hididu rakshisuvaryaru ||


Gatti manna shishuva madi 

Hotteyolage irisalilla

Kotta deva kondu hodare

Kuttikondu aluveyeke ||


Paradalli padaviyuntu

Ihadalli saukyavuntu

Guru purandara vittalanna

Smaraneyannu mareyadavage ||


ಭಕ್ತಿಗೀತೆ 


ಚಿಂತೆ ಏತಕೋ ಬಯಲ ಭ್ರಾಂತಿ ಏತಕೋ ।।ಪ ।।

ಕಂತುಪಿತನ ದಿವ್ಯನಾಮ 

ಮಂತ್ರವನ್ನು ಜಪಿಸುವವಗೆ ।।ಅನು ।।


ಕಾಲಕಾಲದಲ್ಲಿ ಬಿಡದೆ

ವೇಳೆಯರಿತು ಕೂಗುವಂಥ 

ಕೋಳಿ ತನ್ನ ಮರಿಗೆ ಮೊಲೆಯ 

ಹಾಲಕೊಟ್ಟು ಸಲಹಿತೆ ।।೧।।


ಸಡಗರದ ನಾರಿಯರು 

ಹಡೆಯುವಾಗ ಸೂಲಗಿತ್ತಿ 

ಅಡವಿಯೊಳಗೆ ಹೆರುವ ಮೃಗವ 

ಹಿಡಿದು ರಕ್ಷಿಸುವರ್ಯಾರು ।।೨।।


ಗಟ್ಟಿ ಮಣ್ಣ ಶಿಶುವ ಮಾಡಿ 

ಹೊಟ್ಟೆಯೊಳಗೆ ಇರಿಸಲಿಲ್ಲ 

ಕೊಟ್ಟ ದೇವ ಕೊಂಡುಹೋದರೆ 

ಕುಟ್ಟಿಕೊಂಡು ಅಳುವೆಯೇಕೆ ।।೩।।


ಪರದಲ್ಲಿ ಪದವಿಯುಂಟು 

ಇಹದಲ್ಲಿ ಸೌಖ್ಯವುಂಟು 

ಗುರು ಪುರಂದರ ವಿಠ್ಠಲನ್ನ 

ಸ್ಮರಣೆಯನ್ನು ಮರೆಯದವಗೆ ।।೪।।            ಶ್ರೀ 



Tuesday, January 10, 2023

Hrudayadali Idenidu (ಹೃದಯದಲಿ ಇದೇನಿದು)

Movie: Devata Manushya

Singers: Dr. Rajkumar, Manjula Gururaj

Song link: Click Here


Hrudayadali idenidu nadiyondu odide

Kalakalane kalarava keli 

Hosa bayake hoovu arali

Jotheyalli premageete haduvase eega ||Hrudayadali||


Sui ennuta beesuva tannane galige

Gui ennuva dumiya hadina modige

Ee manasu solutide

Hosa kanasu kenakutide

Maduvudeneega..... ||


Gham ennuva tavare hovina kampige

Jhum ennisi tanuvali oduva minchige

Mai bisiyu erutide

Ee besuge helutide

Tumbitu aananda.....||Hrudayadali||


ಚಿತ್ರಗೀತೆ 


ಹೃದಯದಲಿ ಇದೇನಿದು ನದಿಯೊಂದು ಓಡಿದೆ 

ಕಲಕಲನೆ ಕಲರವ ಕೇಳಿ 

ಹೊಸ ಬಯಕೆ ಹೂವು ಅರಳಿ 

ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ ।।ಪ ।।


ಸುಯ್ ಎನ್ನುತ ಬೀಸುವಾ ತಣ್ಣನೆ ಗಾಳಿಗೆ 

ಗುಯ್ ಎನ್ನುವಾ ದುಂಬಿಯಾ ಹಾಡಿನಾ  ಮೋಡಿಗೆ 

ಈ ಮನಸು ಸೋಲುತಿದೆ 

ಹೊಸ ಕನಸು ಕೆಣಕುತಿದೆ 

ಮಾಡುವುದೇನೀಗ .....  ।।ಹೃದಯದಲಿ ।।


ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ 

ಝಂ  ಎನ್ನಿಸಿ ತನುವಲಿ ಓಡುವಾ ಮಿಂಚಿಗೆ 

ಮೈ ಬಿಸಿಯು ಏರುತಿದೆ 

ಈ ಬೆಸುಗೆ ಹೇಳುತಿದೆ 

ತುಂಬಿತು ಆನಂದಾ .....  ।।ಹೃದಯದಲಿ ।।



Monday, January 9, 2023

Huttidare Kannada Nadal Huttabeku (ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು )

Movie: Aakasmika (1993)

Singer: Dr. Rajkumar

Song link: Click Here


Huttidare kannada nadal huttabeku

Mettidare kannada mannan mettabeku

Badukidu jataka bandi

Idu vidhi odisuva bandi

Badukidu jataka bandi

Vidhi aledadisuva bandi ||Huttidare||


Kasheeli snana madu, kashmira sutti nodu

Jogada gundi odeya nanendu koogi hadu

Ajanta ellorara balalli omme nodu

Badami iholeya chandaana tuka madu

Kaliyoke koti bashe, aadoke onde bashe

Kannada..kannada kasturi kannada ||Huttidare||

Badukidu jataka bandi, vidhi guri torisuva bandi ||


Dhyanakke bhumi idu, premakke swarga idu

Snehakke shale idu, jnanakke peeta idu

Karyakke kalpa idu, shilpakke kalpavidu

Natyakke nadi idu, nadanta rangavidu

Kuvempu bendreyinda karanta mastiyinda

Dhyanavee kannada o..dhatina kannada ||Huttidare||


Balina bennu hatti nooraru ooru sutti

Eneno kanda melu, nammoore namage melu

Kailasam kanda namage kailasa yake beku

Dasara kanda namage vaikunta yake beku

Mundina nanna janma baredittanante bhrama

Illiye iliye, endigu na illiye ||Huttidare||


Badukidu jataka bandi idu vidhi odisuva bandi |

Badikidu jataka bandi idu vidhi dada serisuva bandi ||


ಚಿತ್ರಗೀತೆ 


ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು 

ಮೆಟ್ಟಿದರೇ ಕನ್ನಡ ಮಣ್ಣನ್ ಮೆಟ್ಟಬೇಕು 

ಬದುಕಿದು ಜಟಕಾ ಬಂಡೀ, ಇದು ವಿಧಿ ಓಡಿಸುವಾ ಬಂಡಿ

 ಬದುಕಿದು ಜಟಕಾ ಬಂಡೀ, ವಿಧಿ ಅಲೆದಾಡಿಸುವಾ ಬಂಡಿ ।।ಪ ।।


ಕಾಶೀಲಿ ಸ್ನಾನ ಮಾಡು, ಕಶ್ಮೀರ ಸುತ್ತಿ ನೋಡು 

ಜೋಗಾದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು 

ಅಜಂತ ಎಲ್ಲೋರರಾ ಬಾಳಲ್ಲಿ ಒಮ್ಮೆ ನೋಡು 

ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು 

ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ 

ಕನ್ನಡ .. ಕನ್ನಡ ..  ಕಸ್ತೂರಿ  ಕನ್ನಡ  ।।ಹುಟ್ಟಿದರೇ ।।

ಬದುಕಿದು ಜಟಕಾ ಬಂಡಿ, ವಿಧಿ ಗುರಿ ತೋರಿಸುವ ಬಂಡೀ ।।


ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು 

ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು 

ಕಾರ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ಕಲ್ಪವಿದು 

ನಾಟ್ಯಕ್ಕೆ ನಾಡಿ ಇದು, ನಾದಂತ ರಂಗವಿದು 

ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ 

ಧ್ಯನವೀ  ಕನ್ನಡ  ಓ .. ಧಾಟಿನಾ ಕನ್ನಡ ।।ಹುಟ್ಟಿದರೇ ।।


ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ 

ಏನೇನೋ ಕಂಡ ಮೇಲು ನಮ್ಮೊರೆ ನಮಗೆ ಮೇಲು 

ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು 

ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು 

ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ 

ಇಲ್ಲಿಯೇ .. ಇಲ್ಲಿಯೇ  ಎಂದಿಗೂ ನಾ ಇಲ್ಲಿಯೇ ।।ಹುಟ್ಟಿದರೇ ।।


ಬದುಕಿದು ಜಟಕಾ ಬಂಡೀ ಇದು ವಿಧಿ ಓಡಿಸುವಾ ಬಂಡೀ ।

ಬದುಕಿದು ಜಟಕಾ ಬಂಡೀ ವಿಧಿ ದಡ ಸೇರಿಸುವಾ ಬಂಡೀ ।।