Friday, January 6, 2023

Aha Ammaga Aha Jammaga (ಆಹಾ ಅಮ್ಮಗ ಆಹಾ ಜಮ್ಮಗ)

 Janapada Geete

Song link: Click Here


Aha ammaga aha jammaga

Aha ammaga, jammaga, jummagadinda

Bandaale.. ratuna

Bandaale ratuna tirugistale sontana ||


Sontakke pattiya

Haktale ratuna

Hakyale ratuna

Tirugistale sontana ||


Kaiyige kaibale

Haktale ratuna

Hakyale ratuna

Tirugistale kaiyyana ||


Kalige kalgejje

Haktale ratuna

Hakyale ratuna

Tirugistale kalanna ||


Kattige addige

Haktale ratuna

Hakyale ratuna

Tirugistale kattana ||


ಜನಪದ ಗೀತೆ 


ಆಹಾ ಅಮ್ಮಗ ಆಹಾ ಜಮ್ಮಗ 

ಆಹಾ ಅಮ್ಮಗ ,ಜಮ್ಮಗ ,ಜುಮ್ಮಗದಿಂದ 

ಬಂದಾಳೇ.. ರತುನ

ಬಂದಾಳೇ ರತುನ ತಿರುಗಿಸ್ತಾಳೆ ಸೊಂಟನ ।।ಪ ।।


ಸೊಂಟಕ್ಕೆ ಪಟ್ಟಿಯ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಸೊಂಟನ ।।೧।।


ಕೈಯಿಗೆ  ಕೈಬಳೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕೈಯನ್ನ ।।೨।।


ಕಾಲಿಗೆ ಕಾಲ್ಗೆಜ್ಜೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕಾಲನ್ನ ।।೩।।


ಕತ್ತಿಗೆ ಅಡ್ಡಿಗೆ 

ಹಾಕ್ತಾಳೆ ರತುನ 

ಹಾಕ್ಯಾಳೇ ರತುನ 

ತಿರುಗಿಸ್ತಾಳೆ ಕತ್ತನ್ನ ।।೪।।



Thursday, January 5, 2023

Yake Badadadti Tamma (ಯಾಕೆ ಬಡದಾಡ್ತಿ ತಮ್ಮ )

Janapada Geete

Song link: Click Here


Yake badadadti tamma

Maya mecchi samsara necchi

Nenogodariye tamma

Kanna mucchi manna mucchi ||


Hendru makliruvaru tamma elli tanaka

Idre timotanaka (2)

Sattaga baruvaru tamma kunitanaka

Mannu muccho tanaka ||


Anna tamma akka tangi elli tanaka

Baduki beleya tanaka (2)

Sattaga baruvaru tamma kunitanaka

Mannu muccho tanaka ||


Hennu honnu mannu ninnadu elli tanaka

Ninna koralige kunike beelo tanaka

Ninnaase prana pakshi haro tanaka

Kalachayya mayada poreya, mukti hondaka ||


ಜನಪದ ಗೀತೆ 


ಯಾಕೆ ಬಡದಾಡ್ತಿ ತಮ್ಮ 

ಮಾಯಾ ಮೆಚ್ಚಿ ಸಂಸಾರ ನೆಚ್ಚಿ 

ನೀನೋಗದರಿಯೆ ತಮ್ಮ 

ಕಣ್ಣ ಮುಚ್ಚಿ ಮಣ್ಣ ಮುಚ್ಚಿ ।।ಪ ।।


ಹೆಂಡ್ರು ಮಕ್ಳ್ಇರುವರು  ತಮ್ಮ ಎಲ್ಲೀತನಕ 

ಇದ್ರೆ ತಿನ್ನೋತನಕ (೨)

ಸತ್ತಾಗ ಬರುವರು ತಮ್ಮ ಕುಣಿತನಕ 

ಮಣ್ಣು ಮುಚ್ಚೋ ತನಕ ।।೧।।


ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀತನಕ 

ಬದುಕಿ ಬೆಳೆಯೋ ತನಕ (೨)

ಸತ್ತಾಗ ಬರುವರು ತಮ್ಮ ಕುಣಿತನಕ 

ಮಣ್ಣು ಮುಚ್ಚೋ ತನಕ ।।೨।।


ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀತನಕ 

ನಿನ್ನ ಕೋರಳಿಗೆ ಕುಣಿಕೆ ಬೀಳೋ ತನಕ 

ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ 

ಕಳಚಯ್ಯ ಮಾಯದ ಪೊರೆಯ, ಮುಕ್ತಿ ಹೊಂದಾಕ ।।೩।।





Wednesday, January 4, 2023

Aa Moda Banalli Teladuta (ಆ ಮೋಡ ಬಾನಲ್ಲಿ ತೇಲಾಡುತ)

 Movie: Dhruvatare (1985)

Singer: Dr Rajkumar, Vani Jairam, 

              Bengaluru latha

Song link: Click Here


Aa moda banalli teladuta

Ninagagi na bande nodennuta

Nalla ninna sandeshava, nanage helide (2) |


Nanna noduva chinte ninna kadideyante

Nanna preetige sote endu helideyante

Neene nanna pranavendu

Neenu anda matanindu, nalla helide ||


Nooru janmavu tanda namma ee anubandha

Sneha preetiyu tanda intha mahadananda

Entha chenna.. entha chenna

Enda ninna, mata chinna, endo helide ||


Ninna notave chenna ninna premave chenna

Ninna nenapali chinna,

 nondu bendaru chenna

kalaha chenna, viraha chenna, saniha chenna

Enda ninna, matannu helide ||


ಚಿತ್ರಗೀತೆ 


ಆ ಮೋಡ ಬಾನಲ್ಲಿ ತೇಲಾಡುತಾ  

ನಿನಗಾಗಿ ನಾ ಬಂದೆ ನೋಡೆನ್ನುತಾ  

ನಲ್ಲಾ ನಿನ್ನ ಸಂದೇಶವ, ನನಗೆ ಹೇಳಿದೆ (೨) ।


ನನ್ನಾ ನೋಡುವ ಚಿಂತೆ ನಿನ್ನಾ ಕಾಡಿದೆಯಂತೆ 

ನನ್ನಾ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ 

ನೀನೆ ನನ್ನ ಪ್ರಾಣವೆಂದು 

ನೀನು ಅಂದ ಮಾತನಿಂದು, ನಲ್ಲ ಹೇಳಿದೆ ।।


ನೂರು ಜನ್ಮವು ತಂದ ನಮ್ಮ ಈ ಅನುಬಂಧ 

ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ 

ಎಂಥ ಚೆನ್ನ .. ಎಂಥ ಚೆನ್ನ 

ಎಂದ ನಿನ್ನಾ, ಮಾತ ಚಿನ್ನ, ಎಂದೊ  ಹೇಳಿದೆ ।।


ನಿನ್ನ ನೋಟವೆ ಚೆನ್ನ, ನಿನ್ನ ಪ್ರೇಮವೆ  ಚೆನ್ನ  

ನಿನ್ನ ನೆನಪಲಿ ಚಿನ್ನಾ, ನೊಂದು ಬೆಂದರು ಚೆನ್ನ 

ಕಲಹ ಚೆನ್ನ, ವಿರಹ ಚೆನ್ನ , ಸನಿಹ ಚೆನ್ನ 

ಎಂದ ನಿನ್ನಾ, ಮಾತನ್ನು ಹೇಳಿದೆ ।।





Tuesday, January 3, 2023

Vishwanathanu Tandeyadare (ವಿಶ್ವನಾಥನು ತಂದೆಯಾದರೆ)

Movie:Tayige Takka Maga (1978)

Singer: Dr Rajkumar

Song link: Click Here


He! vishwanatha| Neenu tandeyadare.... 

Vishalakshi tayiyallave?

Vishwanathanu tandeyadare

Vishalakshi tayiyallave?

Yashodhe krishnana belesidarenu

Devakige avanu kandanallave? ||


Shambo mahadeva

Hara hara mahadeva


Kanda kanuva modala devare

Januma needida ammanallave

Tayi devare sullu nudidare

Satyavemba matu ellide? ||


Ganga nadiyali mindu bandaru

Papavinnu kaleyalillave?

Kashinathana balige bandaru

Nyayavinnu eko kanade? ||


ಚಿತ್ರಗೀತೆ 


ಹೇ! ವಿಶ್ವನಾಥ । ನೀನು ತಂದೆಯಾದರೆ.. 

ವಿಶಾಲಾಕ್ಷಿ   ತಾಯಿಯಲ್ಲವೇ ?

ವಿಶ್ವನಾಥನು ತಂದೆಯಾದರೆ .... 

ವಿಶಾಲಾಕ್ಷಿ ತಾಯಿಯಲ್ಲವೇ ?

ಯಶೋಧೆ ಕೃಷ್ಣನ ಬೆಳೆಸಿದರೇನು 

ದೇವಕಿಗೆ ಅವನು ಕಂದನಲ್ಲವೇ ? ।।ಪ ।।


ಶಂಭೋ ಮಹದೇವ 

ಹರ ಹರ ಮಹದೇವ 


ಕಂದ ಕಾಣುವ ಮೊದಲ ದೇವರೆ 

ಜನುಮ ನೀಡಿದ ಅಮ್ಮನಲ್ಲವೇ 

ತಾಯಿ ದೇವರೇ ಸುಳ್ಳು ನುಡಿದರೆ 

ಸತ್ಯವೆಂಬ ಮಾತು ಎಲ್ಲಿದೆ ? ।।೧।।


ಗಂಗಾ ನದಿಯಲಿ ಮಿಂದು ಬಂದರೂ 

ಪಾಪವಿನ್ನೂ ಕಳೆಯಲಿಲ್ಲವೇ ?

ಕಾಶೀನಾಥನ ಬಳಿಗೆ ಬಂದರೂ 

ನ್ಯಾಯವಿನ್ನೂ ಏಕೋ ಕಾಣದೆ ?।।೨।।





Monday, January 2, 2023

Gaayiye Ganapati Jag Vandan (गाइये गणपति जगवन्दन )

Bhaktigeet

Tulsidas Bhajan

Song link: Click Here


Gaayiye ganapati jag vandan

Shankar-suvan bhavaani- nandan ||


Siddhi-sadan, gajavadan vinayak

Krupasindhu sundar sab layak ||


Modak-priya, mud-mangal-data

vidhya vaaridhi budhdhi vidaata ||


Mangat tulsidas kar jore

Basahun ramsiya manas more ||


स्तुति 


गाइये गणपति  जगवन्दन 

शंकर-सुवन भवानी-नन्दन || 


सिद्धि-सदन, गजवदन विनायक 

कृपासिंधु सुन्दर सब लायक || १ || 


मोदक-प्रिय, मुद -मंगल -दाता 

विद्या-वारिधि बुद्धि विधाता || २ || 


माँगत तुलसिदास कर जोरे 

बसहुं रामसिया मानस मोरे || ३ || 



Saturday, December 31, 2022

Ivale Veenapani (ಇವಳೇ ವೀಣಾಪಾಣಿ)

Bhaktigeete

Song link: Click Here


Ivale veenapani, tunga teera viharini

Sringeripura vaasini ||


Sharada mate mangaladate 

Surasamsevite parama puneete

Vari jasana hrudaya virajite

Narada janani sujana sampreete ||


Aadi shankara archite madhure

Nadapriye navamanimaya haare

Veda akhilashastra aagama saare

Vidhyadayini yoga vichare ||


ಭಕ್ತಿಗೀತೆ 


ಇವಳೇ ವೀಣಾಪಾಣಿ , ತುಂಗಾ ತೀರ ವಿಹಾರಿಣೀ 

ಶೃಂಗೇರಿಪುರ ವಾಸಿನೀ ।।ಪ ।।


ಶಾರದ ಮಾತೆ ಮಂಗಳಾದಾತೆ

ಸುರಸಂಸೇವಿತೆ, ಪರಮ ಪುನೀತೆ 

ವಾರಿ ಜಾಸನ ಹೃದಯ ವಿರಾಜಿತೆ 

ನಾರದ ಜನನೀ ಸುಜನ ಸಂಪ್ರೀತೆ ।।೧।।


ಆದಿ ಶಂಕರ ಅರ್ಚಿತೆ ಮಧುರೇ 

ನಾದಪ್ರಿಯೇ ನವಮಣಿಮಯ ಹಾರೇ 

ವೇದ  ಅಖಿಲಶಾಸ್ತ್ರ ಆಗಮ ಸಾರೆ 

ವಿದ್ಯಾದಾಯಿನಿ ಯೋಗ ವಿಚಾರೇ ।।೨।।





 

Tuesday, December 27, 2022

Ninna Anuragave (ನಿನ್ನ ಅನುರಾಗವೇ)

 Bhavageete

Sahitya: K S Nissar Ahmed

Song link: Click Here


Ninna anragave belagiruvudennedeya

Irulu banina tumbu bimbavagi

Ninna sahavasave satatavu kadihudu

Bala dariya torugambavagi ||


Nittusira benkiyali anudinavu bendaru

Savi nudiya narugampu teliruvudu

Kambaniya uppinali kai toledu nondaru

Nasu nageya saviyanne susiruvudu ||


Yava punyavo kane, ninna olavina torege

Nanna manasina nereya harisiruvudu

Yava runavo eno ninna nemmadi karege

Nanna balina horeya sarisiruvudu ||


ಭಾವಗೀತೆ 


ನಿನ್ನ ಅನುರಾಗವೇ ಬೆಳಗಿರುವುದೆನ್ನೆದೆಯ 

ಇರುಳು ಬಾನಿನ ತುಂಬು ಬಿಂಬವಾಗಿ 

ನಿನ್ನ ಸಹವಾಸವೇ ಸತತವೂ ಕಾದಿಹುದು 

ಬಾಳ ದಾರಿಯ ತೋರುಗಂಬವಾಗಿ ।।ಪ ।।


ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೂ 

ಸವಿ ನುಡಿಯ ನರುಗಂಪು ತೇಲಿರುವುದು 

ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ 

ನಸು ನಗೆಯ ಸವಿಯನ್ನೆ ಸೂಸಿರುವುದು ।।೧।।


ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ 

ನನ್ನ ಮನಸಿನ ನೆರೆಯ ಹರಿಸಿರುವುದು 

ಯಾವ ಋಣವೋ ಏನೋ ನಿನ್ನ ನೆಮ್ಮದಿ ಕರೆಗೆ 

ನನ್ನ ಬಾಳಿನ ಹೊರೆಯ ಸರಿಸಿರುವುದು ।।೨।।