Monday, December 19, 2022

Bagi Bagi Bangara Tugi (ಬಾಗಿ ಬಾಗಿ ಬಂಗಾರ ತೂಗಿ )

Janapada Geete

Song Link: Click Here


Bagi bagi bangara tugi

Belli moodi belagadavamma

Gokuladolage sambramavennire

Nandana kanda govinda ||


Nandana kanda govinda krishnana

Chandadi tottilolagittu

Chandadi tottilolagittu gopyamma

Aanandadi tugi padidale ||


Putaniya kondane shakatana muridane

Kalinga maduva kalakidane

Kalingana maduva kalakida srikrishna

Rakkasarellara kedavidane ||


Govgala kaidane benneya meddane

Bettalli bettavanettidane

Bettalli bettavanettida srikrishna

Gopyara seereya kaddoidane || 


ಜನಪದ ಗೀತೆ 


ಬಾಗಿ ಬಾಗಿ ಬಂಗಾರ ತೂಗಿ 

ಬೆಳ್ಳಿ ಮೂಡಿ ಬೆಳಗಾದವಮ್ಮ 

ಗೋಕುಲದೊಳಗೆ ಸಂಭ್ರಮವೆನ್ನಿರೆ 

ನಂದನ ಕಂದ ಗೋವಿಂದ ।।ಪ ।।


ನಂದನ ಕಂದಾ ಗೋವಿಂದ ಕೃಷ್ಣನ 

ಚಂದದಿ ತೊಟ್ಟಿಲೊಳಗಿಟ್ಟು 

ಚಂದದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ 

ಆನಂದದಿ ತೂಗಿ ಪಾಡಿದಳೆ  ।।೧।।


ಪೂತನಿಯ ಕೊಂದನೆ ಶಕಟನ ಮುರಿದನೆ 

ಕಾಳಿಂಗ ಮಡುವ ಕಲಕಿದನೆ  

ಕಾಳಿಂಗನ ಮಡುವ ಕಲಕಿದ ಶ್ರೀಕೃಷ್ಣ 

ರಕ್ಕಸರೆಲ್ಲರ ಕೆಡವಿದನೆ ।।೨।।


ಗೋವ್ಗಳ ಕಾಯ್ದನೆ ಬೆಣ್ಣೆಯ ಮೆದ್ದನೆ 

ಬೆಟ್ಟಲ್ಲಿ ಬೆಟ್ಟಾವನೆತ್ತಿದನೆ 

ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ 

ಗೋಪ್ಯರ ಸೀರೆಯ  ಕದ್ದೊಯ್ದನೆ ।।೩।।



Saturday, December 17, 2022

Jalala Jalala Jaladhare (ಜಲಲ ಜಲಲ ಜಲಧಾರೆ )

Movie: Valmiki (1963)

Singers: P Susheela, Vrunda

Song link: Click Here


Jalala jalala jaladhare

Jalala jalala jaladhare..


Suvvi suvvale sole

Doni dumbale mele

Jane jannera jole ||


Nanna jotheyagi hadu hayagi kogile

Magi kogile

Tala himmela, mela mummela 

Neerale, navile aadale

Binka binnana bedagu bigumana

Balle ambale bale ||


Hammu kannota, tumbu maimata

Manchale, cheluve chanchale

Brunga saranga, singa matanga nagale

Lalane neenele

Hamsa nadedante, honalu haridante

Haayi harigola leele ||


ಚಿತ್ರಗೀತೆ 


ಜಲಲ ಜಲಲ ಜಲಧಾರೆ 

ಜಲಲ ಜಲಲ ಜಲಧಾರೆ .. 


ಸುವ್ವಿ ಸುವ್ವಾಲೆ ಸೋಲೆ 

ದೋಣಿ ದುಂಬಾಲೆ ಮೇಲೆ 

ಜಾಣೆ ಜನ್ನೇರ ಜೋಲೆ ।।ಪ ।।


ನನ್ನ ಜೊತೆಯಾಗಿ ಹಾಡು ಹಾಯಾಗಿ ಕೋಗಿಲೆ 

ಮಾಗಿ ಕೋಗಿಲೆ 

ತಾಳ ಹಿಮ್ಮೇಳ, ಮೇಳ ಮುಮ್ಮೇಳ 

ನೀರಲೇ, ನವಿಲೆ   ಆಡಲೇ 

ಬಿಂಕ ಬಿನ್ನಾಣ ಬೆಡಗು ಬಿಗುಮಾನ 

ಬಲ್ಲೆ ಅಂಬಾಲೆ ಬಾಲೆ ।।೧।।


ಹಮ್ಮು ಕಣ್ಣೋಟ, ತುಂಬು ಮೈಮಾಟ 

ಮಂಚಲೇ, ಚೆಲುವೆ   ಚಂಚಲೇ 

ಭೃಂಗ ಸಾರಂಗ, ಸಿಂಗ ಮಾತಂಗ ನಾಗಲೇ 

ಲಲನೆ ನೀನೆಲೇ  

ಹಂಸ ನಡೆದಂತೆ ಹೊನಲು ಹರಿದಂತೆ 

ಹಾಯಿ ಹರಿಗೋಲ ಲೀಲೆ ।।೨।।





Friday, December 16, 2022

Beda Krishna Ranginata (ಬೇಡ ಕೃಷ್ಣ ರಂಗಿನಾಟ)

Movie: Santa Tukaram (1963)

Singer: S Janaki

Song link: https:Click Here


Beda krishna.. beda krishna.. beda krishna..

Beda krishna ranginata seere nenevudu

Madhyaratri chandra chaliya tumbutiruvudu ||


Beda krishna ranginata seere nenevudu

Beda krishna, unn.. beda krishna ranginata, beda krishna, haha

Beda krishna, beda krishna ranginata, seere nenevudu

Madhyaratri chandra chaliya tumbutiruvudu ||


Radhe kotta ravike jari reshme aagide

Krishnana bali rangu tumbida gadige tanide

Helidalu.... krishna ninna, aatavenidu

Deva ninna buddiyu ta, manake baradu

Manake baradu, manake baradu

Madhyaratri chandra chaliya tumbutiruvudu ||


ಚಿತ್ರಗೀತೆ 


ಬೇಡ ಕೃಷ್ಣ ..  ಬೇಡ ಕೃಷ್ಣ .. ಬೇಡ ಕೃಷ್ಣ .. 

ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು   

ಮಧ್ಯರಾತ್ರಿ ಚಂದ್ರ ಚಳಿಯ ತುಂಬುತಿರುವುದು  ।।ಪ ।।


ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು 

ಬೇಡ ಕೃಷ್ಣ  ಉಂ .. ಬೇಡ ಕೃಷ್ಣ ರಂಗಿನಾಟ,ಬೇಡ ಕೃಷ್ಣ ಹಹ 

ಬೇಡ ಕೃಷ್ಣ, ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು  

ಮಧ್ಯರಾತ್ರಿ ಚಂದ್ರ ಚಳಿಯ ತುಂಬುತಿರುವುದು ।।


ರಾಧೆ ಕೊಟ್ಟ ರವಿಕೆ ಜರಿ ರೇಷ್ಮೆ ಆಗಿದೆ 

ಕೃಷ್ಣನ ಬಳಿ ರಂಗು ತುಂಬಿದ ಗಡಿಗೆ ತಾನಿದೆ 

ಹೇಳಿದಳೂ .. ಕೃಷ್ಣ ನಿನ, ಆಟವೆನಿದು  

ದೇವ ನಿನ್ನ ಬುದ್ದಿಯು ತಾ, ಮನಕೆ ಬಾರದು 

ಮನಕೆ ಬಾರದು, ಮನಕೆ ಬಾರದು 

ಮಧ್ಯರಾತ್ರಿ ಚಂದ್ರ ಚಳಿಯ ತುಂಬುತಿರುವುದು  ।।

                               


Wednesday, December 14, 2022

Entha Anda Entha Chanda Sharadamma (ಎಂಥ ಅಂದ ಎಂಥ ಚೆಂದ ಶಾರದಮ್ಮ )

Bhaktigeete

Song link: https:Click Here


Entha anda entha chanda sharadamma

Ninna nodaleradu kannu nanage saladamma ||


Innu innu noduvase tumbitamma

Innu koti januma barali nanage saladamma 

Abhaya hasta nodi jeeva kuniyitamma

Ninna pada kamaladalli shiravu bagitamma ||


Entha shakti ninnalideyo sharadamma

Ninna nodi hado aase banditamma

Ratnadantha matugalane adisamma

Olle raga bhavashakti tumbi hadisamma ||


Alli illi odo manasu nannadamma

Bega bandu nelesu alli sharadamma

Bere enu beku endu kelenamma

Ninna veene tanti madi nudisu sharadamma ||


ಭಕ್ತಿಗೀತೆ 


ಎಂಥ ಅಂದ ಎಂಥ ಚೆಂದ ಶಾರದಮ್ಮ 

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ।।ಪ ।।


ಇನ್ನು ಇನ್ನು ನೋಡುವಾಸೆ ತುಂಬಿತಮ್ಮ 

ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ 

ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ 

ನಿನ್ನ ಪಾದ ಕಮಲದಲ್ಲಿ ಶಿರವು ಬಾಗಿತಮ್ಮ ।।೧।।


ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ 

ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ 

ರತ್ನದಂಥ ಮಾತುಗಳನೇ ಆಡಿಸಮ್ಮ 

ಒಳ್ಳೆ ರಾಗ ಭಾವಶಕ್ತಿ ತುಂಬಿ ಹಾಡಿಸಮ್ಮ ।।೨।।


ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ 

ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ 

ಬೇರೆ ಏನು ಬೇಕು ಎಂದು ಕೇಳೆನಮ್ಮ 

ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ।।೩।।



Tuesday, December 13, 2022

Biddiyabe Muduki (ಬಿದ್ದಿಯಬೇ ಮುದುಕಿ )

Sishunala Shariefa Sahebara Geetegalu

Song link: https:Click Here


Biddiyabe muduki

Biddiyabe..

Ni dina hodaki

Iru bhala joki

Biddiyabe muduki

Biddiyabe ||


Sadhyakidu huluguru santi

Gaddaladolagyaka ninti ?

Biddu illi oddadidara

Eddu hyanga hindaka barati ?

Buddhigedi muduki neenu biddiyabe ||


Buttiyalli pattala itti

Adanu utta hottolu joki

Kettaganti chouderu bandu

Uttadanne kaddara joki

Buddhigedi muduki neenu biddiyabe || 


Sishunaladheeshana munde

Kosari kosari hogabyada

Hasanavilla hareya sanda

Pisuru picchugannina muduki

Buddhigedi muduki neenu biddiyabe || 


ತತ್ವ ಪದ 


ಬಿದ್ದಿಯಬೇ ಮುದುಕಿ 

ಬಿದ್ದಿಯಬೇ .. 

ನೀ ದಿನ ಹೋದಾಕಿ 

ಇರು ಭಾಳ ಜೋಕಿ 

ಬಿದ್ದಿಯಬೇ ಮುದುಕಿ 

ಬಿದ್ದಿಯಬೇ ।।ಪ।।


ಸದ್ಯಕಿದು ಹುಲುಗೂರು ಸಂತಿ 

ಗದ್ದಲದೊಳಗ್ಯಾಕ ನಿಂತಿ ?

ಬಿದ್ದು ಇಲ್ಲಿ ಒದ್ದಾಡಿದರ 

ಎದ್ದು ಹ್ಯಾಂಗ ಹಿಂದಕ ಬರತಿ ?

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೧।।


ಬುಟ್ಟಿಯಲ್ಲಿ ಪತ್ತಲ ಇಟ್ಟಿ 

ಅದನು ಉಟ್ಟ ಹೊತ್ತೊಳು ಜೋಕಿ 

ಕೆಟ್ಟಗಂಟಿ ಚೌಡೇರು ಬಂದು 

ಉಟ್ಟದನ್ನೆ ಕದ್ದಾರ ಜೋಕಿ 

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೨।।


ಶಿಶುನಾಳಾಧೀಶನ ಮುಂದೆ 

ಕೊಸರಿ ಕೊಸರಿ ಹೋಗಬ್ಯಾಡ 

ಹಸನವಿಲ್ಲ ಹರಯ ಸಂದ 

ಪಿಸುರು ಪಿಚ್ಚುಗಣ್ಣಿನ ಮುದುಕಿ 

ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ।।೩।।





Monday, December 12, 2022

Nari Ninna Marimyaga (ನಾರೀ ನಿನ್ನ ಮಾರೀಮ್ಯಾಗ )

Bhavageete

Sahitya: Da Ra Bendre

Song link: Click Here


Nari ninna marimyaga

Nagi navilu adatitta

Adatitta odatitta

Mugila kadege nodatitta ||


Mina mina mina minchatitta

Moodatitta mulugatitta

Mulugatitta tolagatitta

Nela jala belagatitta ||


Kanninyaga bannada nota

Takataka kunidadatitta

Kunititta manititta

Onapile onadadatitta ||


Manada mamarada konige

Kokilondu kodatitta

Kodatitta hada bittu

Bare ninna nodatitta ||


Ondu jeeva nondukondu

Hagalirulu midukadutitta

Midukutitta todakatitta

Eno onda hudukatitta ||


Kannirina maleya kooda

Tanna dukha todatitta

Todatitta bedatitta

Dorakadakke badatitta ||


ಭಾವಗೀತೆ 


ನಾರೀ  ನಿನ್ನ ಮಾರೀ ಮ್ಯಾಗ 

ನಗೀ ನವಿಲು ಆಡತಿತ್ತ 

ಆಡತಿತ್ತ ಒಡತಿತ್ತ 

ಮುಗಿಲ ಕಡೆಗೆ ನೋಡತಿತ್ತ ।।ಪ ।।


ಮಿನ ಮಿನ ಮಿನ ಮಿಂಚತಿತ್ತ 

ಮೂಡತಿತ್ತ ಮುಳುಗತಿತ್ತ 

ಮುಳುಗತಿತ್ತ ತೊಳಗತಿತ್ತ 

ನೆಲಾ  ಜಲಾ  ಬೆಳಗತಿತ್ತ ।।೧।।


ಕಣ್ಣಿನ್ಯಾಗ ಬಣ್ಣದ ನೋಟ 

ತಕತಕ ಕುಣಿದಾಡತಿತ್ತ 

ಕುಣೀತಿತ್ತ ಮಣೀತಿತ್ತ 

ಒನಪಿಲೆ ಒನದಾಡತಿತ್ತ ।।೨।।


ಮನದ ಮಾಮರದ ಕೊನಿಗೆ 

ಕೋಕಿಲೊಂದು ಕೊಡತಿತ್ತ 

ಕೊಡತಿತ್ತ ಹಾಡ ಬಿಟ್ಟು 

ಬರೇ ನಿನ್ನ ನೋಡತಿತ್ತ ।।೩।।


ಒಂದು ಜೀವಾ ನೊಂದುಕೊಂಡು 

ಹಗಲಿರುಳು ಮಿಡುಕಾಡುತಿತ್ತ 

ಮಿಡುಕುತ್ತಿತ್ತ ತೊಡಕತ್ತಿತ್ತ 

ಏನೋ ಒಂದ ಹುಡುಕತಿತ್ತ ।।೪।।


ಕಣ್ಣೀರಿನ ಮಳೆಯ ಕೂಡ 

ತನ್ನ ದುಃಖ ತೋಡತಿತ್ತ 

ತೋಡತಿತ್ತ ಬೇಡತಿತ್ತ 

ದೊರಕದ್ದಕ್ಕೆ ಬಾಡತಿತ್ತ ।।೫।।





Sunday, December 11, 2022

Hosabalina Hosilali Nintiruva (ಹೊಸ ಬಾಳಿನ ಹೊಸಿಲಲಿ ನಿಂತಿರುವ )

Movie: Shravana Bantu (1984)

Singer: Dr. Rajkumar

Song link: https:Click Here


Hosa balina hosilali nintiruva

Hosa jodige shubhavagali

hosa aaseya kadalali telutiha

Nava jodige sukhavagali ||


Ee swargada bagilu teredide indu 

Ee shubha veleyali

Aa devategalu ullasadi bandaru 

Nimmanu harasutali

Idu brahmanu beseda anubandha

Anugalavu needali aananda || 


Ee hacchane hasurina toranavu

Suswagatavendu helutide

Ee mangala vadhyavu molagiralu

Shubhakaryada sambhrama kanutide

Januma janumada snehavidu

Samsarada balige nandi idu ||


Ee shravana masavu tanda udugore

Ullasava tarali

Aa manjunathana krupa katakshavu

Endendu nimagirali

Onde varushada avadhiyali

Hasukandanu madilali nagutirali ||


ಚಿತ್ರಗೀತೆ 


ಹೊಸ ಬಾಳಿನ ಹೊಸಿಲಲಿ ನಿಂತಿರುವ 

ಹೊಸ ಜೋಡಿಗೆ ಶುಭವಾಗಲಿ 

ಹೊಸ ಆಸೆಯ ಕಡಲಲಿ ತೇಲುತಿಹ 

ನವ ಜೋಡಿಗೆ ಸುಖವಾಗಲಿ ।।ಪ ।।


ಈ ಸ್ವರ್ಗದ ಬಾಗಿಲು ತೆರೆದಿದೆ ಇಂದು 

ಈ ಶುಭವೇಳೆಯಲಿ 

ಆ ದೇವತೆಗಳು ಉಲ್ಲಾಸದಿ ಬಂದರು 

ನಿಮ್ಮನು ಹರಸುತಲಿ 

ಇದು ಬ್ರಹ್ಮನು ಬೆಸೆದಾ ಅನುಬಂಧ 

ಅನುಗಾಲವು ನೀಡಲಿ ಆನಂದ ।।೧।।


ಈ ಹಚ್ಚನೆ ಹಸುರಿನ ತೋರಣವು 

ಸುಸ್ವಾಗತವೆಂದು ಹೇಳುತಿದೆ 

ಈ ಮಂಗಳ ವಾದ್ಯವು ಮೊಳಗಿರಲು 

ಶುಭಕಾರ್ಯದ ಸಂಭ್ರಮ ಕಾಣುತಿದೆ 

ಜನುಮ ಜನುಮದ ಸ್ನೇಹವಿದು 

ಸಂಸಾರದ ಬಾಳಿಗೆ ನಾಂದಿ ಇದು ।।೨।।


ಈ ಶ್ರಾವಣ ಮಾಸವು ತಂದಾ ಉಡುಗೊರೆ 

ಉಲ್ಲಾಸವ ತರಲಿ 

ಆ ಮಂಜುನಾಥನಾ ಕೃಪಾ ಕಟಾಕ್ಷವು 

ಎಂದೆಂದೂ ನಿಮಗಿರಲಿ 

ಒಂದೇ ವರುಷದ ಅವಧಿಯಲಿ 

ಹಸುಕಂದನು ಮಡಿಲಲಿ ನಗುತಿರಲಿ ।।೩।।