Monday, December 12, 2022

Nari Ninna Marimyaga (ನಾರೀ ನಿನ್ನ ಮಾರೀಮ್ಯಾಗ )

Bhavageete

Sahitya: Da Ra Bendre

Song link: Click Here


Nari ninna marimyaga

Nagi navilu adatitta

Adatitta odatitta

Mugila kadege nodatitta ||


Mina mina mina minchatitta

Moodatitta mulugatitta

Mulugatitta tolagatitta

Nela jala belagatitta ||


Kanninyaga bannada nota

Takataka kunidadatitta

Kunititta manititta

Onapile onadadatitta ||


Manada mamarada konige

Kokilondu kodatitta

Kodatitta hada bittu

Bare ninna nodatitta ||


Ondu jeeva nondukondu

Hagalirulu midukadutitta

Midukutitta todakatitta

Eno onda hudukatitta ||


Kannirina maleya kooda

Tanna dukha todatitta

Todatitta bedatitta

Dorakadakke badatitta ||


ಭಾವಗೀತೆ 


ನಾರೀ  ನಿನ್ನ ಮಾರೀ ಮ್ಯಾಗ 

ನಗೀ ನವಿಲು ಆಡತಿತ್ತ 

ಆಡತಿತ್ತ ಒಡತಿತ್ತ 

ಮುಗಿಲ ಕಡೆಗೆ ನೋಡತಿತ್ತ ।।ಪ ।।


ಮಿನ ಮಿನ ಮಿನ ಮಿಂಚತಿತ್ತ 

ಮೂಡತಿತ್ತ ಮುಳುಗತಿತ್ತ 

ಮುಳುಗತಿತ್ತ ತೊಳಗತಿತ್ತ 

ನೆಲಾ  ಜಲಾ  ಬೆಳಗತಿತ್ತ ।।೧।।


ಕಣ್ಣಿನ್ಯಾಗ ಬಣ್ಣದ ನೋಟ 

ತಕತಕ ಕುಣಿದಾಡತಿತ್ತ 

ಕುಣೀತಿತ್ತ ಮಣೀತಿತ್ತ 

ಒನಪಿಲೆ ಒನದಾಡತಿತ್ತ ।।೨।।


ಮನದ ಮಾಮರದ ಕೊನಿಗೆ 

ಕೋಕಿಲೊಂದು ಕೊಡತಿತ್ತ 

ಕೊಡತಿತ್ತ ಹಾಡ ಬಿಟ್ಟು 

ಬರೇ ನಿನ್ನ ನೋಡತಿತ್ತ ।।೩।।


ಒಂದು ಜೀವಾ ನೊಂದುಕೊಂಡು 

ಹಗಲಿರುಳು ಮಿಡುಕಾಡುತಿತ್ತ 

ಮಿಡುಕುತ್ತಿತ್ತ ತೊಡಕತ್ತಿತ್ತ 

ಏನೋ ಒಂದ ಹುಡುಕತಿತ್ತ ।।೪।।


ಕಣ್ಣೀರಿನ ಮಳೆಯ ಕೂಡ 

ತನ್ನ ದುಃಖ ತೋಡತಿತ್ತ 

ತೋಡತಿತ್ತ ಬೇಡತಿತ್ತ 

ದೊರಕದ್ದಕ್ಕೆ ಬಾಡತಿತ್ತ ।।೫।।





Sunday, December 11, 2022

Hosabalina Hosilali Nintiruva (ಹೊಸ ಬಾಳಿನ ಹೊಸಿಲಲಿ ನಿಂತಿರುವ )

Movie: Shravana Bantu (1984)

Singer: Dr. Rajkumar

Song link: https:Click Here


Hosa balina hosilali nintiruva

Hosa jodige shubhavagali

hosa aaseya kadalali telutiha

Nava jodige sukhavagali ||


Ee swargada bagilu teredide indu 

Ee shubha veleyali

Aa devategalu ullasadi bandaru 

Nimmanu harasutali

Idu brahmanu beseda anubandha

Anugalavu needali aananda || 


Ee hacchane hasurina toranavu

Suswagatavendu helutide

Ee mangala vadhyavu molagiralu

Shubhakaryada sambhrama kanutide

Januma janumada snehavidu

Samsarada balige nandi idu ||


Ee shravana masavu tanda udugore

Ullasava tarali

Aa manjunathana krupa katakshavu

Endendu nimagirali

Onde varushada avadhiyali

Hasukandanu madilali nagutirali ||


ಚಿತ್ರಗೀತೆ 


ಹೊಸ ಬಾಳಿನ ಹೊಸಿಲಲಿ ನಿಂತಿರುವ 

ಹೊಸ ಜೋಡಿಗೆ ಶುಭವಾಗಲಿ 

ಹೊಸ ಆಸೆಯ ಕಡಲಲಿ ತೇಲುತಿಹ 

ನವ ಜೋಡಿಗೆ ಸುಖವಾಗಲಿ ।।ಪ ।।


ಈ ಸ್ವರ್ಗದ ಬಾಗಿಲು ತೆರೆದಿದೆ ಇಂದು 

ಈ ಶುಭವೇಳೆಯಲಿ 

ಆ ದೇವತೆಗಳು ಉಲ್ಲಾಸದಿ ಬಂದರು 

ನಿಮ್ಮನು ಹರಸುತಲಿ 

ಇದು ಬ್ರಹ್ಮನು ಬೆಸೆದಾ ಅನುಬಂಧ 

ಅನುಗಾಲವು ನೀಡಲಿ ಆನಂದ ।।೧।।


ಈ ಹಚ್ಚನೆ ಹಸುರಿನ ತೋರಣವು 

ಸುಸ್ವಾಗತವೆಂದು ಹೇಳುತಿದೆ 

ಈ ಮಂಗಳ ವಾದ್ಯವು ಮೊಳಗಿರಲು 

ಶುಭಕಾರ್ಯದ ಸಂಭ್ರಮ ಕಾಣುತಿದೆ 

ಜನುಮ ಜನುಮದ ಸ್ನೇಹವಿದು 

ಸಂಸಾರದ ಬಾಳಿಗೆ ನಾಂದಿ ಇದು ।।೨।।


ಈ ಶ್ರಾವಣ ಮಾಸವು ತಂದಾ ಉಡುಗೊರೆ 

ಉಲ್ಲಾಸವ ತರಲಿ 

ಆ ಮಂಜುನಾಥನಾ ಕೃಪಾ ಕಟಾಕ್ಷವು 

ಎಂದೆಂದೂ ನಿಮಗಿರಲಿ 

ಒಂದೇ ವರುಷದ ಅವಧಿಯಲಿ 

ಹಸುಕಂದನು ಮಡಿಲಲಿ ನಗುತಿರಲಿ ।।೩।। 



Thursday, December 8, 2022

Sampige Marada Hasirele Naduve (ಸಂಪಿಗೆ ಮರದ ಹಸಿರೆಲೆ ನಡುವೆ )

Movie: Upasane(1974)

Singer: B K Sumitra

Song Link: Click Here


Sampige marada hasirele naduve

Kogile hadittu

Chikkavva.. chikkavva..

Ennuta tannaya geleyara karedittu

Adakeli na mai marete

Swaravondu aagale kalite

Hadide ee kavite na hadide ee kavite ||


Doorada gudiyali poojeya velege

Ghanteyu molagittu

Tandann.. tandann..

Ennuta sevege ellara karedittu

Adakeli na mai marete

Swaravondu aagale kalite

Hadide ee kavite na hadide ee kavite ||


Hariyuva nadiya noduta ninte

Alegalu kunidittu

Kala.. kala.. kala..kala

Manjula nadavu kivigala tumbittu

Adakeli na mai marete

Swaravondu aagale kalite

Hadide ee kavite na hadide ee kavite ||


Bettada budadali hasutanondu

Karuvanu arasittu

Amba.. amba..

Mamateya kareyu manasanu seledittu

Adakeli na mai marete

Swaravondu aagale kalite

Hadide ee kavite na hadide ee kavite ||


ಚಿತ್ರಗೀತೆ 


ಸಂಪಿಗೆ ಮರದ ಹಸಿರೆಲೆ ನಡುವೆ 

ಕೋಗಿಲೆ ಹಾಡಿತ್ತು 

ಚಿಕ್ಕವ್ವಾ .. ಚಿಕ್ಕವ್ವಾ .. 

ಎನ್ನುತ ತನ್ನಯ ಗೆಳೆಯರ ಕರೆದಿತ್ತು 

ಅದಕೇಳಿ ನಾ ಮೈ ಮರೆತೇ 

ಸ್ವರವೊಂದು ಆಗಲೇ ಕಲಿತೇ 

ಹಾಡಿದೆ ಈ ಕವಿತೇ ನಾ ಹಾಡಿದೆ ಈ ಕವಿತೇ ।।ಪ ।।


ದೂರದ ಗುಡಿಯಲಿ ಪೂಜೆಯ ವೇಳೆಗೆ 

ಘಂಟೆಯು ಮೊಳಗಿತ್ತು 

ಟಂಡಣ್..  ಟಂಡಣ್.. 

ಎನ್ನುತ ಸೇವೆಗೆ ಎಲ್ಲರ ಕರೆದಿತ್ತು 

ಅದಕೇಳಿ ನಾ ಮೈ ಮರೆತೇ 

ಸ್ವರವೊಂದು ಆಗಲೇ ಕಲಿತೇ 

ಹಾಡಿದೆ ಈ ಕವಿತೇ ನಾ ಹಾಡಿದೆ ಈ ಕವಿತೇ ।।೧।।


ಹರಿಯುವ ನದಿಯ ನೋಡುತ ನಿಂತೆ 

ಅಲೆಗಳು ಕುಣಿದಿತ್ತು 

ಕಲ .. ಕಲ .. ಕಲ .. ಕಲ 

ಮಂಜುಳ ನಾದವು ಕಿವಿಗಳ ತುಂಬಿತ್ತು 

ಅದಕೇಳಿ ನಾ ಮೈ ಮರೆತೇ 

ಸ್ವರವೊಂದು ಆಗಲೇ ಕಲಿತೇ 

ಹಾಡಿದೆ ಈ ಕವಿತೇ ನಾ ಹಾಡಿದೆ ಈ ಕವಿತೇ ।।೨।।


ಬೆಟ್ಟದ ಬುಡದಲಿ ಹಸುತಾನೊಂದು 

ಕರುವನು ಅರಸಿತ್ತು 

ಅಂಬಾ..  ಅಂಬಾ .. 

ಮಮತೆಯ ಕರೆಯು ಮನಸನು ಸೆಳೆದಿತ್ತು 

ಅದಕೇಳಿ ನಾ ಮೈ ಮರೆತೇ 

ಸ್ವರವೊಂದು ಆಗಲೇ ಕಲಿತೇ 

ಹಾಡಿದೆ ಈ ಕವಿತೇ ನಾ ಹಾಡಿದೆ ಈ ಕವಿತೇ।।೩।।



                                     

Wednesday, December 7, 2022

Rottiyangadiya Kittappa (ರೊಟ್ಟಿಯಂಗಡಿಯ ಕಿಟ್ಟಪ್ಪ)

Padya

Sahitya: G P Rajaratnam


Rottiyangadiya kittappa !

Nanagondu rotti tattappa !

Putani rotti

Kempage suttu

Ombattu kasige kattappa !

Biddu hodeetu kittappa !


Rottiyangadiya kittappa !

Rottiya nodida ! muttappa !

Rottiyu sottu !

Hasi hasi hittu !

Rottiya bere tattappa !

Nanagidu beda kittappa !


Rottiyangadiya kittappa !

Bereya rottiya tattappa !

Gundage rotti

Sudade kotte-

Tu ! tu ! sanga bitteppa !

Bittare punaha kattepa !


ಪದ್ಯ 


ರೊಟ್ಟಿಯಂಗಡಿಯ ಕಿಟ್ಟಪ್ಪ !

ನನಗೊಂದು ರೊಟ್ಟಿ ತಟ್ಟಪ್ಪ !

ಪುಟಾಣಿ ರೊಟ್ಟಿ 

ಕೆಂಪಗೆ ಸುಟ್ಟು 

ಒಂಬತ್ತು ಕಾಸಿಗೆ ಕಟ್ಟಪ್ಪ !

ಬಿದ್ದು ಹೋದೀತು ಕಿಟ್ಟಪ್ಪ !


ರೊಟ್ಟಿಯಂಗಡಿಯ ಕಿಟ್ಟಪ್ಪ !

ರೊಟ್ಟಿಯ ನೋಡಿದ ! ಮುಟ್ಟಪ್ಪ !

ರೊಟ್ಟಿಯು ಸೊಟ್ಟು !

ಹಸಿಹಸಿ ಹಿಟ್ಟು !

ರೊಟ್ಟಿಯ ಬೇರೆ ತಟ್ಟಪ್ಪ !

ನನಗಿದು ಬೇಡ ಕಿಟ್ಟಪ್ಪ !


ರೊಟ್ಟಿಯಂಗಡಿಯ ಕಿಟ್ಟಪ್ಪ !

ಬೇರೆಯ ರೊಟ್ಟಿಯ ತಟ್ಟಪ್ಪ !

ಗುಂಡಗೆ ರೊಟ್ಟಿ 

ಸುಡದೇ ಕೊಟ್ಟೆ -

ಠು ! ಠು ! ಸಂಗ ಬಿಟ್ಟೇಪ್ಪ !

ಬಿಟ್ಟರೆ ಪುನಃ ಕಟ್ಟೇಪ್ಪ !

                                   




Tuesday, December 6, 2022

Chelvi Chelvi Endu (ಚೆಲ್ವಿ ಚೆಲ್ವಿ ಎಂದು)

Janapada Geete

Song link: https:Click Here


Chelvi chelvi endu atiyase padabyada

Cheluviddarenu gunavilla | koleneeru

Tiliyiddarenu ruchiyilla ||


Kappu hendati endu kalavala padabyada

Nerale hannu balu kappu | aadaru

Tindu nodidare ruchi bahala ||


Kempu hendati endu santosha padabyada

Attiya hannu balu kempu | iddaru

Odedu nodidare hulu bahala ||


Bangarada bale tottu badavara baibyada

Bangara ninage stiravalla | madhyana

Sanjeyaguvudu tadavalla ||


ಜನಪದ ಗೀತೆ 


ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬ್ಯಾಡ 

ಚೆಲುವಿದ್ದರೇನೂ ಗುಣವಿಲ್ಲ । ಕೊಳೆನೀರು 

ತಿಳಿಯಿದ್ದರೇನೂ ರುಚಿಯಿಲ್ಲ ।।ಪ ।।


ಕಪ್ಪು ಹೆಂಡತಿ ಎಂದು ಕಳವಾಳ ಪಡಬ್ಯಾಡ 

ನೇರಳೆ ಹಣ್ಣು ಬಲುಕಪ್ಪು । ಆದರೂ 

ತಿಂದು ನೋಡಿದರೆ ರುಚಿ ಬಹಳ ।।


ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ 

ಅತ್ತಿಯ ಹಣ್ಣು ಬಲು ಕೆಂಪು । ಇದ್ದರೂ 

ಒಡೆದು ನೋಡಿದರೆ ಹುಳು ಬಹಳ ।।


ಬಂಗಾರದ ಬಳೆತೊಟ್ಟು ಬಡವಾರ ಬೈಬ್ಯಾಡ 

ಬಂಗಾರ ನಿನಗೇ ಸ್ಥಿರವಲ್ಲ । ಮಧ್ಯಾಹ್ನ 

ಸಂಜೆಯಾಗುವುದೂ ತಡವಲ್ಲ ।।



Monday, December 5, 2022

Suriyali Tampereyali (ಸುರಿಯಲಿ ತಂಪೆರೆಯಲಿ )

Bhavageete

Sahitya: B R Lakshman Rao

Song link: https:Click Here


Suriyali tampereyali

Jeevana preetiya male

Hariyali bhorgareyali

Battidedegalali hole

Kocchi hogali swartha, durase

Swacchavagali ile ||


Chimmali hacchane hasiru

Nirmalavagali usiru

Matte agali vasundhare

Sakala jeevigaligasare ||


Dummikki dumuki jalapata

Needi jadategaghata

Hommisali hosa chetana

Kriyasheelatege indhana ||


Toneyali tene honderu

Adagali hasivina cheeru

Aralali ellede hoonage

Hayenisali bhutayige ||


ಭಾವಗೀತೆ 


ಸುರಿಯಲಿ ತಂಪೆರೆಯಲಿ 

ಜೀವನ ಪ್ರೀತಿಯ ಮಳೆ 

ಹರಿಯಲಿ ಭೋರ್ಗರೆಯಲಿ 

ಬತ್ತಿದೆದೆಗಳಲಿ ಹೊಳೆ 

ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ 

ಸ್ವಚ್ಛವಾಗಲೀ ಇಳೆ  ।।ಪ ।।


ಚಿಮ್ಮಲಿ ಹಚ್ಚನೆ ಹಸಿರು 

ನಿರ್ಮಲವಾಗಲಿ ಉಸಿರು 

ಮತ್ತೆ ಆಗಲೀ ವಸುಂಧರೆ 

ಸಕಲ ಜೀವಿಗಳಿಗಾಸರೆ ।।೧।।


ಧುಮ್ಮಿಕ್ಕಿ ದುಮುಕಿ ಜಲಪಾತ 

ನೀಡಿ ಜಡತೆಗಾಘಾತ 

ಹೊಮ್ಮಿಸಲಿ ಹೊಸ ಚೇತನ 

ಕ್ರಿಯಾಶೀಲತೆಗೆ ಇಂಧನ ।।೨।।


ತೊನೆಯಲಿ ತೆನೆ ಹೊಂದೇರು 

ಅಡಗಲಿ ಹಸಿವಿನ ಚೀರು 

ಅರಳಲಿ ಎಲ್ಲೆಡೆ ಹೂನಗೆ 

ಹಾಯೆನಿಸಲಿ ಭೂತಾಯಿಗೆ ।।೩।।



Saturday, December 3, 2022

Kusumari (ಕೂಸುಮರಿ)

Padya

Sahitya: G P Rajaratnam


Kusumari ! kusumari !

Kusumari beke kusumari !


Annana bennige maiyanu besedu

Kattina suttalu kaigalanesedu

Sontada suttalu kalanu bigidu

Annanu negedare tanu negedu

Muddagiruvudu kusumari !

Kannadanadina kusumari !


Kusumari ! kusumari !

Kusumari beke kusumari !


Kedarida kudala mareyindiniki

I ! I ! ennuta kaduta kenaki

Belagina javada kattaleyalli

Ele bisilerechuva suryana holi

Muddagiruvudu kusumari !

Kannadanadina kusumari !


Kusumari ! kusumari !

Kusumari beke kusumari !


Bhumiya baleyindakashakke

Sarrenderuta bannada rekke

Haraduta haduva hakkiya hage

Haradutaliruvudu bennina mege


Kannadanadina kusumari !            

Kusumari beke kusumari !


ಪದ್ಯ 


ಕೂಸುಮರಿ ! ಕೂಸುಮರಿ !            

ಕೂಸುಮರಿ ಬೇಕೇ ಕೂಸುಮರಿ !


ಅಣ್ಣನ ಬೆನ್ನಿಗೆ ಮೈಯನು ಬೆಸೆದು 

ಕತ್ತಿನ ಸುತ್ತಲು ಕೈಗಳನೆಸೆದು 

ಸೊಂಟದ ಸುತ್ತಲು ಕಾಲನು ಬಿಗಿದು 

ಅಣ್ಣನು ನೆಗೆದರೆ ತಾನೂ ನೆಗೆದು 

ಮುದ್ದಾಗಿರುವುದು ಕೂಸುಮರಿ 

ಕನ್ನಡನಾಡಿನ ಕೂಸುಮರಿ !


ಕೂಸುಮರಿ ! ಕೂಸುಮರಿ !

ಕೂಸುಮರಿ ಬೇಕೇ ಕೂಸುಮರಿ !


ಕೆದರಿದ ಕೂದಲ ಮರೆಯಿಂದಿಣಿಕಿ 

ಐ ! ಐ ! ಎನ್ನುತ ಕಾಡುತ ಕೆಣಕಿ 

ಬೆಳಗಿನ ಜಾವದ ಕತ್ತಲೆಯಲ್ಲಿ 

ಎಳೆ ಬಿಸಿಲೆರೆಚುವ ಸೂರ್ಯನ ಹೋಲಿ 

ಮುದ್ದಾಗಿರುವುದು ಕೂಸುಮರಿ !


ಕೂಸುಮರಿ ! ಕೂಸುಮರಿ !

ಕೂಸುಮರಿ ಬೇಕೇ ಕೂಸುಮರಿ !


ಭೂಮಿಯ ಬಲೆಯಿಂದಾಕಾಶಕ್ಕೆ 

 ಸರೆ)೦ದೇರುತ  ಬಣ್ಣದ ರೆಕ್ಕೆ 

ಹರಡುತ ಹಾಡುವ ಹಕ್ಕಿಯ ಹಾಗೆ 

ಹರಡುತಲಿರುವುದು ಬೆನ್ನಿನ ಮೇಗೆ 


ಕನ್ನಡನಾಡಿನ ಕೂಸುಮರಿ !

ಕೂಸುಮರಿ ಬೇಕೇ ಕೂಸುಮರಿ !





¸