Bhaktigeete
Kanakadasara Padagalu
Namamma sharade
Uma maheshwari
Nimmolagihanyaramma
Kammagolana vairi sutanada sondila
Hemmeya gananathane ammayya
Mo re kappina bhava moradagalada kivi
Kore dadiganyaramma
Muru kannana suta muridditta chandrana
Deera ta gananathane ammayya
Utta dattiyu bigidutta challanada
Ditta tanivanyaramma
Pattada rani parvathiya kumarane
Hotteya gananathane ammayya
Rashi vidyeya balla ramani hambalanolla
Bashiga nivanyaramma
Lesagi janara salahuva kagi neleyadi
Keshava dasa kane ammayya
ಭಕ್ತಿಗೀತೆ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆೇ, ಅಮ್ಮಯ್ಯ ।।ಪ ।।
ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆ ಡಾಡಿಗನ್ಯಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ, ಅಮ್ಮಯ್ಯ ।।೧।।
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯಾ ಕುಮಾರನೆ
ಹೊಟ್ಟೆಯ ಗಣನಾಥನೇ, ಅಮ್ಮಯ್ಯ।।೨।।
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗ ನಿವನ್ಯಾರಮ್ಮ
ಲೇಸಾಗಿ ಜನರ ಸಲುಹುವ ಕಾಗಿ ನೆಲೆಯಾದಿ
ಕೇಶವ ದಾಸ ಕಣೀ, ಅಮ್ಮಯ್ಯ ।।೪।।






