Saturday, June 25, 2022

Namamma Sharade (ನಮ್ಮಮ್ಮ ಶಾರದೆ)

Bhaktigeete

Kanakadasara Padagalu

Song link: https:Click Here


Namamma sharade

Uma maheshwari

Nimmolagihanyaramma

Kammagolana vairi sutanada sondila

Hemmeya gananathane  ammayya


Mo re kappina bhava moradagalada kivi

Kore dadiganyaramma

Muru kannana suta muridditta chandrana

Deera ta gananathane  ammayya


Utta dattiyu bigidutta challanada

Ditta tanivanyaramma

Pattada rani parvathiya kumarane

Hotteya gananathane   ammayya


Rashi vidyeya balla ramani hambalanolla

Bashiga nivanyaramma

Lesagi janara salahuva kagi neleyadi

Keshava dasa kane   ammayya


ಭಕ್ತಿಗೀತೆ 


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ 

ನಿಮ್ಮೊಳಗಿಹನ್ಯಾರಮ್ಮ 

ಕಮ್ಮಗೋಲನ ವೈರಿ ಸುತನಾದ ಸೊಂಡಿಲ 

ಹೆಮ್ಮೆಯ ಗಣನಾಥನೆೇ, ಅಮ್ಮಯ್ಯ ।।ಪ ।।


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ 

ಕೋರೆ ಡಾಡಿಗನ್ಯಾರಮ್ಮ 

ಮೂರು ಕಣ್ಣನ  ಸುತ ಮುರಿದಿಟ್ಟ ಚಂದ್ರನ 

ಧೀರ ತಾ ಗಣನಾಥನೇ, ಅಮ್ಮಯ್ಯ ।।೧।।


ಉಟ್ಟ ದಟ್ಟಿಯು  ಬಿಗಿದುಟ್ಟ ಚಲ್ಲಣದ 

ದಿಟ್ಟ ತಾನಿವನ್ಯಾರಮ್ಮ 

ಪಟ್ಟದ ರಾಣಿ ಪಾರ್ವತಿಯಾ ಕುಮಾರನೆ 

ಹೊಟ್ಟೆಯ ಗಣನಾಥನೇ, ಅಮ್ಮಯ್ಯ।।೨।। 


ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ 

ಭಾಷಿಗ ನಿವನ್ಯಾರಮ್ಮ 

ಲೇಸಾಗಿ ಜನರ ಸಲುಹುವ ಕಾಗಿ ನೆಲೆಯಾದಿ 

ಕೇಶವ ದಾಸ ಕಣೀ,  ಅಮ್ಮಯ್ಯ ।।೪।।



Friday, June 24, 2022

Amma Ninna Tolinalli Kanda Nanu (ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು)

Movie: Kappu Bilupu (1966)
Singer: P Susheela
Song link: Click Here


Amma ninna tolinalli, kanda nanu

Ninna sanga aadalendu, bande nanu 

Oho.. sanna sanna hoovinallu kande neenu

Bannada bannada chitteyallu neene ninu

O.. o.. Amma!


Neenu itta hannugale anna nanage

Ninna madilinale nanna haasige

Beesi banda galiyallu ninna maye

Hariyuva nadiyallu ninna chaye.. amma!


Ooru beda keri beda yaru beda

Amma omme kannu bittu nanna noda

Tayi tande bandhu balaga neene ella

Ninaginta bere devarilla.. amma!


ಚಿತ್ರಗೀತೆ 


ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು 

ನಿನ್ನ ಸಂಗ ಆಡಲೆಂದು ಬಂದೆ ನಾನು 

ಒಹೋ .. ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು 

ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು 

  ಓ..  ಓ..   ಅಮ್ಮ !       


ನೀನು ಇಟ್ಟ  ಹಣ್ಣುಗಳೇ  ಅನ್ನ ನನಗೆ 

ನಿನ್ನ ಮಡಿಲಿನಲೇ  ನನ್ನ ಹಾಸಿಗೆ 

ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ 

ಹರಿಯುವ ನದಿಯಲ್ಲೂ ನಿನ್ನ ಛಾಯೆ .. ಅಮ್ಮ !       


ಊರುಬೇಡ ಕೇರಿಬೇಡ ಯಾರೂ ಬೇಡ 

ಅಮ್ಮ ಒಮ್ಮೆ ಕಣ್ಣು  ಬಿಟ್ಟು ನನ್ನ ನೋಡ 

ತಾಯಿ ತಂದೆ ಬಂಧು ಬಳಗ ನೀನೆ ಎಲ್ಲಾ  

ನಿನಗಿಂತ ಬೇರೆ ದೇವರಿಲ್ಲ.. ಅಮ್ಮ!           

                        

Thursday, June 23, 2022

Bide Ninna Padava Binkavinneko (ಬಿಡೆ ನಿನ್ನ ಪಾದವ ಬಿಂಕವಿನ್ನೇಕೊ)

Bhaktigeete

                                     Purandara Dasara Keerthanegalu

                                       Song link: Click Here


Raga: Mohaka

Tala: Atatala


Bide ninna padava binkavinneko

Kodu manadishtava kopavideko ||


Neera pokkaru bide, benninolage bahu 

Bhara pottenendu biddaru bidenu

Koreya maseyuta kosarikondaru bide

Ghora rupava tali ghurighurisalu nanu ||


Tirukanendaru bide, tilidu taya korala

Tarikanendaru ninna na bideno

Poreye pitana vakya kaadaseralu bide

Durula maduvinalli dumukidareyu nanu ||


Kadubattalagi enna kaili kasillendaru

Odane haya veri odidaru bidenu

Podaviyolage namma purandara vittalane

Kade hayisuva bhara ninnadadudake nanu  ||          sri


ಭಕ್ತಿಗೀತೆ 


ಬಿಡೆ ನಿನ್ನ ಪಾದವ ಬಿಂಕವಿನ್ನೇಕೊ 

ಕೊಡು ಮನದಿಷ್ಟವ ಕೋಪ ವಿದೇಕೊ ।।ಪ ।।


ನೀರ ಪೊಕ್ಕರು ಬಿಡೆ, ಬೆನ್ನಿನೊಳಗೆ ಬಹು

ಭಾರ ಪೊತ್ತೆನೆಂದು ಬಿದ್ದರು ಬಿಡೆನು 

ಕೋರೆಯ ಮಸೆಯುತ ಕೊಸರಿಕೊಂಡರು ಬಿಡೆ 

ಘೋರರೂಪವ ತಾಳಿ ಘುರಿಘುರಿಸಲು ನಾನು ।।೧।।


ತಿರುಕನೆಂದರು ಬಿಡೆ, ತಿಳಿದು ತಾಯ ಕೊರಳ

ತರಿಕನೆಂದರು ನಿನ್ನ ನಾ ಬಿಡೆನೋ 

ಪೊರೆಯೆ ಪಿತನವಾಕ್ಯ ಕಾಡಸೇರಲು ಬಿಡೆ 

ದುರುಳ ಮಡುವಿನಲ್ಲಿ ದುಮುಕಿದರೆಯು ನಾನು ।।೨।।


ಕಡುಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು 

ಒಡನೆ ಹಯ ವೇರಿ ಓಡಿದರು ಬಿಡೆನು 

ಪೊಡವಿಯೊಳಗೆ ನಮ್ಮ ಪುರಂದರ ವಿಠ್ಠಲನೆ 

ಕಡೆ ಹಾಯಿಸುವ ಭಾರ ನಿನ್ನದಾದುದಕೆ ನಾನು ।।೩।।        ಶ್ರೀ 



Wednesday, June 22, 2022

Bombe Helutaite (ಬೊಂಬೆ ಹೇಳುತೈತೆ)



  • Movie: Rajakumara(2017)
  • Singer: Vijay Prakash
  • Song link: Click Here


Bombe helutaite matte helutaite

Neene Rajakumara (2)


Hosa belakondu hosilige bandu

Belagide maneya, managala indu

Aaradhiso rarajiso rajaratnana

Aadisiye nodu belisiye nodu

Endu soladu 

Sotu taleya bagadu  ||


Gudisale aagali, aramane aagali

Aatave nilladu, endu aata nilladu

Hiriyare irali, kiriyare barali

Bedhave toradu, endu bedha toradu

Ella iddu eanu illada hage badukiruva

Aakasha nodada kaiye ninnadu, preeti hanchiruva

Jothegiru neenu appana haage

Hannele kayo vinayadi heege

Ninnanu padeda navu puneeta

Balu nagu naguta ||


Tane uridu manege belakukoduva deepavidu

Nanda deepave idu

Aadisuvatana karuneya mele namma patravu

Samayada sutra avanadu

Ondu muttina katheya helitu ee bombe

Aa katheyallidda rajanange neenu bande

Yogavu omme baruvudu namage

Yogyate onde ulivudu konege

Suryanobba chandranobba rajanu obba 

ee rajanu obba

Aadisiye nodu, belisiye nodu

Endu soladu

Sotu taleya bagadu ||


ಚಿತ್ರಗೀತೆ 


ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ 

ನೀನೇ ರಾಜಕುಮಾರ (೨)


ಹೊಸ ಬೆಳಕೊಂದು ಹೊಸಿಲಿಗೆ ಬಂದು 

ಬೆಳಗಿದೆ ಮನೆಯ ಮನಗಳ ಇಂದು 

ಆರಾಧಿಸೋ ರಾರಾಜಿಸೋ ರಾಜರತ್ನನ 

ಆಡಿಸಿಯೇ ನೋಡು ಬೀಳಿಸಿಯೇ ನೋಡು 

ಎಂದು ಸೋಲದು 

ಸೋತು ತಲೆಯ ಬಾಗದು ।।ಬೊಂಬೆ ಹೇಳುತೈತೆ।।


ಗುಡಿಸಲೆ ಆಗಲಿ ಅರಮನೆ ಆಗಲಿ 

ಆಟವೆ ನಿಲ್ಲದು, ಎಂದು ಆಟ ನಿಲ್ಲದು 

ಹಿರಿಯರೆ ಇರಲಿ ಕಿರಿಯರೆ ಬರಲಿ 

ಭೇದವೇ ತೋರದು, ಎಂದು ಬೇಧ ತೋರದು 

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ 

ಆಕಾಶ ನೋಡದ ಕೈಯೆ ನಿನ್ನದು, ಪ್ರೀತಿ ಹಂಚಿರುವ 

ಜೊತೆಗಿರು ನೀನು ಅಪ್ಪನ ಹಾಗೆ 

ಹಣ್ಣೆಲೆ ಕಾಯೋ ವಿನಯದಿ ಹೀಗೆ 

ನಿನ್ನನು ಪಡೆದ ನಾವು ಪುನೀತ 

ಬಾಳು ನಗು ನಗುತ ।।ಬೊಂಬೆ ಹೇಳುತೈತೆ।।


ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು 

ನಂದಾ ದೀಪವೇ ಇದು 

ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು 

ಸಮಯದ ಸೂತ್ರ ಅವನದು 

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ 

ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ 

ಯೋಗವು ಒಮ್ಮೆ ಬರುವುದು ನಮಗೆ 

ಯೋಗ್ಯತೆ ಒಂದೇ ಉಳಿವುದು ಕೊನೆಗೆ 

ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ

ಈ ರಾಜನು ಒಬ್ಬ 

ಆಡಿಸಿಯೇ ನೋಡು ಬೀಳಿಸಿಯೇ ನೋಡು 

ಎಂದು ಸೋಲದು ಸೋತು ತಲೆಯ ಬಾಗದು 

।।ಬೊಂಬೆ ಹೇಳುತೈತೆ।।




Maretu Hoyite Nannaya Hajari (ಮರೆತು ಹೋಯಿತೆ ನನ್ನಯ ಹಾಜರಿ)



  • Movie: Amar (2019)
  • Singer: Sanjith Hegde
  • Song link: Click Here

Maretu hoyite nannaya hajari..

Baredu edeyali novina shayari..

Karagide nalige

Baravide matige

Meravanige horatante na savige..


Maretu hoyite nannaya hajari ....

Baredu edeyali novina shayari....


Ondu nishabda ratrili navu

Aadida matu hasiyagide

Navu nadedanta hadili innuu

Hejje gurutella hage ide

Onchuru hintirugi nee nodeya

Innomme kai chacheya

Karagide nalige

Baravide matige

Meravanige horatante na savige..


Maretu hoyite nannaya hajari

Baredu edeyali novina shayari


Joru maleyella nangeega yako

Nonda akasha aluvantide

Koti kanasella kai jari hogi

Khali kaiyalli kulitantide

Eastondu ekangi nodeedera?

Dooragi ninninda na....

Karagide nalige

Baravide matige

Meravanige horatante na savige..


Maretu hoyite nannaya hajari

Baredu edeyali novina shayari.....


ಚಿತ್ರಗೀತೆ 


ಮರೆತು ಹೋಯಿತೆ ನನ್ನಯ ಹಾಜರಿ 

ಬರೆದು ಎದೆಯಲಿ ನೋವಿನ ಶಾಯರಿ 

ಕರಗಿದೆ ನಾಲಿಗೆ 

ಬರವಿದೆ ಮಾತಿಗೆ 

ಮೆರವಣಿಗೆ ಹೊರಟಂತೆ ನಾ ಸಾವಿಗೆ 


ಮರೆತು ಹೋಯಿತೆ ನನ್ನಯ ಹಾಜರಿ .... 

ಬರೆದು ಎದೆಯಲಿ ನೋವಿನ ಶಾಯರಿ .... 


ಒಂದು ನಿಶಬ್ದ ರಾತ್ರೀಲಿ ನಾವು 

ಆಡಿದ ಮಾತು ಹಸಿಯಾಗಿದೆ 

ನಾವು ನಡೆದಂತ ಹಾದಿಲಿ ಇನ್ನೂ 

ಹೆಜ್ಜೆ ಗುರುತೆಲ್ಲ ಹಾಗೆ ಇದೆ 

ಒಂಚೂರು ಹಿಂತಿರುಗಿ ನೀ ನೋಡೆಯಾ 

ಇನ್ನೊಮ್ಮೆ ಕೈ ಚಾಚೆಯ 

ಕರಗಿದೆ ನಾಲಿಗೆ 

ಬರವಿದೆ ಮಾತಿಗೆ 

ಮೆರವಣಿಗೆ ಹೊರಟಂತೆ ನಾ ಸಾವಿಗೆ


ಮರೆತು ಹೋಯಿತೆ ನನ್ನಯ ಹಾಜರಿ 

ಬರೆದು ಎದೆಯಲಿ ನೋವಿನ ಶಾಯರಿ 


ಜೋರು ಮಳೆಯೆಲ್ಲ ನಂಗೀಗ ಯಾಕೋ 

ನೊಂದ ಆಕಾಶ ಅಳುವಂತಿದೆ 

ಕೋಟಿ ಕನಸೆಲ್ಲ ಕೈ ಜಾರಿ ಹೋಗಿ 

ಖಾಲಿ ಕೈಯಲ್ಲಿ ಕುಳಿತಂತಿದೆ 

ಎಷ್ಟೊಂದು ಏಕಾಂಗಿ ನೋಡಿದಿರಾ ?

ದೂರಾಗಿ ನಿನ್ನಿಂದ ನಾ ..... 

ಕರಗಿದೆ ನಾಲಿಗೆ 

ಬರವಿದೆ ಮಾತಿಗೆ 

ಮೆರವಣಿಗೆ ಹೊರಟಂತೆ ನಾ ಸಾವಿಗೆ


ಮರೆತು ಹೋಯಿತೆ ನನ್ನಯ ಹಾಜರಿ 

ಬರೆದು ಎದೆಯಲಿ ನೋವಿನ ಶಾಯರಿ .... 








Monday, June 20, 2022

Himagiriya Shringa Devanadi Ganga (ಹಿಮಗಿರಿಯಾ ಶೃಂಗ ದೇವನದೀ ಗಂಗಾ)

Deshabhakti geete

                                 Song link: Click Here


Himagiriya shringa

Devanadi ganga

Manadali mudipa bhava vinutana

Anupama uttunga....

Anupama uttunga....


Divya sanatana samskrutige 

Veda puranave  sakshigalu

Hinduvinnunati avanatige

Sakshi himadriya shikaragalu

Anjuva edeyali dhairyada panjanu

Urisuva manjina mahalugalu


Aa suralokava meerisuva 

Nadige dhumukida bhageerathi

Bharata mateya sangadali

Dhanyate yaantiha bhagyavati

Hindu deshada kana kana jana mana

Pavanagolisiha punyavati


Sole geluvina sopana

Dudukade nade nee jopana

Novali nondiha bandhuvige

Needuta dhairya samadhana

Mateya gourava rakshanegagi

Mudipagiralemmeya prana


ದೇಶಭಕ್ತಿಗೀತೆ 


ಹಿಮಗಿರಿಯಾ ಶೃಂಗ 

ದೇವನದೀ ಗಂಗಾ 

ಮನದಲಿ ಮೂಡಿಪ 

ಭಾವ ವಿನೂತನ 

ಅನುಪಮ ಉತ್ತುಂಗಾ .. 

ಅನುಪಮ ಉತ್ತುಂಗಾ ..।।ಪ ।।


ದಿವ್ಯ ಸನಾತನ ಸಂಸ್ಕೃತಿಗೆ 

ವೇದ ಪುರಾಣವೇ ಸಾಕ್ಷಿಗಳು 

ಹಿಂದುವಿನ್ನುನತಿ ಅವನತಿಗೆ 

ಸಾಕ್ಷಿ ಹಿಮಾದ್ರಿಯ ಶಿಖರಗಳು 

ಅಂಜುವ ಎದೆಯಲಿ ಧೈರ್ಯದ ಪಂಜನು 

ಉರಿಸುವ ಮಂಜಿನ ಮಹಲುಗಳು ।।೧।।


ಆ ಸುರಲೋಕವ ಮೀರಿಸುವಾ 

ನಾಡಿಗೆ ಧುಮುಕಿದ ಭಾಗೀರಥಿ 

ಭಾರತ ಮಾತೆಯ ಸಂಗದಲಿ 

ಧನ್ಯತೆಯಾಂತಿಹ ಭಾಗ್ಯವತಿ 

ಹಿಂದೂ ದೇಶದ ಕಣ ಕಣ ಜನ ಮನ 

ಪಾವನಗೊಳಿಸಿಹ ಪುಣ್ಯವತೀ ।।೨।।


ಸೋಲೇ ಗೆಲುವಿನ ಸೋಪಾನ 

ದುಡುಕದೆ ನಡೆ ನೀ ಜೋಪಾನ 

ನೋವಲಿ ನೊಂದಿಹ ಬಂಧುವಿಗೆ 

ನೀಡುತ ಧೈರ್ಯ ಸಮಾಧಾನ 

ಮಾತೆಯ ಗೌರವ ರಕ್ಷಣೆಗಾಗಿ 

ಮುಡಿಪಾಗಿರಲೆಮ್ಮೆಯ ಪ್ರಾಣ ।।೩।।



Sunday, June 19, 2022

Elli Hoguviri Nilli Modagale (ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ)

 

Bhavageete

Sahitya: G S Shivarudrappa

Song link: Click Here


Elli hoguviri nilli modagale

Nalku haniya chelli

Dina dinavu kadu bayari bende

Bengadira taapadalli


Nannedeya hasiru usiru kugiidaru

Baralilla ninage karuna

Nanna hrudayadali novu midiyutide

Nanu nimage sharana 


Badavada nanna odaluriya bege

Nimagarivu aagalahude?

Neelagaganadali teli hogutiha

Nimmaneleyabahude?


Bayuntu nanage, kugaballena

Nimmedeya premavannu

Neevu karunisalu nanna hasiredeyu

Usiruvudu harshavannu


O banni banni 

O tanni tanni

Nanedege tampa tanni

Nonda jeevarige tampaneeyuvude

Parama poojeyenni!


ಭಾವಗೀತೆ 


ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ 

ನಾಲ್ಕು ಹನಿಯ ಚೆಲ್ಲಿ 

ದಿನದಿನವು ಕಾದು ಬಾಯಾರಿ ಬೆಂದೆ 

ಬೆಂಗದಿರ ತಾಪದಲ್ಲಿ ।।ಪ ।।


ನನ್ನೆದೆಯ ಹಸಿರು ಉಸಿರು ಕುಗ್ಗಿದರು 

ಬರಲಿಲ್ಲ ನಿನಗೆ ಕರುಣ 

ನನ್ನ ಹೃದಯದಲಿ ನೋವು ಮಿಡಿಯುತಿದೆ 

ನಾನು ನಿಮಗೆ ಶರಣ ।।೧।।


ಬಡವಾದ ನನ್ನ ಒಡಲುರಿಯ ಬೇಗೆ 

ನಿಮಗರಿವು ಆಗಲಹುದೆ ?

ನೀಲಗಗನದಲಿ ತೇಲಿ ಹೋಗುತಿಹ 

ನಿಮ್ಮನೆಳೆಯಬಹುದೆ ? ।।೨।।


ಬಾಯುಂಟು ನನಗೆ, ಕೊಗಬಲ್ಲೆನಾ 

ನಿಮ್ಮೆದೆಯ ಪ್ರೇಮವನ್ನು 

ನೀವು ಕರುಣಿಸಲು ನನ್ನ ಹಸಿರೆದೆಯು 

ಉಸಿರುವುದು ಹರ್ಷವನ್ನು ।।೩।।


ಓ ಬನ್ನಿ ಬನ್ನಿ 

ಓ ತನ್ನಿ ತನ್ನಿ 

ನನ್ನೆದೆಗೆ ತಂಪತನ್ನಿ 

ನೊಂದ ಜೀವರಿಗೆ ತಂಪನೀಯುವುದೆ 

ಪರಮ ಪೂಜೆಯೆನ್ನಿ ! ।।೪।।