Monday, June 13, 2022

Manava Janma Doddadu (ಮಾನವ ಜನ್ಮ ದೊಡ್ಡದು)

Bhaktigeete

Purandara Dasara Keerthanegalu

Movie: Navakoti Narayana (1964)

Singer: M Balamuralikrishna

Song link:Click Here


Raga: Regupti

Tala: Atatala


Manava Janma Doddadu

Ida hani madalubedi

Hucchappagalira..


Kannu kai kalkivi nalige iralikke

Mannu mukki marulaguvare

Hennu mannigagi hariya nanamruta

Unnade upavasa iruvare khodi  ||


Kalana dootaru kalpididelevaga

Talu talendare taluvare

Dhalibarada munna dharmava galisiro

Halu samsaragalige sikkalu bedi  ||


Enu karana yadupatiyanu maretiri

Dhana dhanya putraru kayuvare

Innadaru eako bhavadi bhajisiro

Chenna sri purandara vittala rayana  ||               sri



ಭಕ್ತಿಗೀತೆ 


ಮಾನವ ಜನ್ಮ ದೊಡ್ಡದು 

ಇದ ಹಾನಿ ಮಾಡಲುಬೇಡಿ 

ಹುಚ್ಚಪಗಳಿರಾ ।।ಪ ।।


ಕಣ್ಣು ಕೈ ಕಲ್ಕಿವಿ ನಾಲಿಗೆ ಇರಲಿಕ್ಕೆ 

ಮಣ್ಣು ಮುಕ್ಕಿ ಮರುಳಾಗುವರೇ  

ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ 

ಉಣ್ಣದೆ ಉಪವಾಸ ಇರುವರೆ ಖೋಡಿ ।।೧।।


ಕಾಲನ ದೂತರು ಕಾಲ್ಪಿಡಿದೆಳೆವಾಗ 

ತಾಳು ತಾಳೆಂದರೆ ತಾಳುವರೆ 

ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ 

ಹಾಳು ಸಂಸಾರಗಳಿಗೆ ಸಿಕ್ಕಲು ಬೇಡಿ ।।೨।।


ಏನು ಕಾರಣ ಯದುಪತಿಯನು ಮರೆತಿರಿ 

ಧನ ಧಾನ್ಯ ಪುತ್ರರು ಕಾಯುವರೆ 

ಇನ್ನಾದರು ಏಕೋ ಭಾವದಿ ಭಜಿಸಿರೊ 

ಚೆನ್ನ ಶ್ರೀ ಪುರಂದರ ವಿಠ್ಠಲರಾಯನ ।।೩।।                        ಶ್ರೀ 



Saturday, June 11, 2022

Hindustanavu Endu Mareyada (ಹಿಂದೂಸ್ತಾನವು ಎಂದು ಮರೆಯದ)

Movie: Amrutha Ghalige (1984)
                             Singer: Jayachandran
                             Song link: Click Here


Hindustanavu endu mareyada, bharata ratnavu janmisali

Ee kannada maateya madilalli, ee kannada nudiya gudiyalli ||


Deshabhaktiya bisi bisi nettaru, dhamani dhamaniyali tumbirali

Vishwa premada shanti mantrada, ghoshava ellede molagisali

Sakala dharmada satva smanvaya, tatva jyothiya belagisali ||


Kannada tayiya komala hrudayada, bhavya shasana bareyisali

Kannada nadina ede edeyallu, kannada vaniya stapisali

Ee mannina punyada divya charitreya, kallu kallinalu kettisali ||


ದೇಶಭಕ್ತಿಗೀತೆ 


ಹಿಂದೂಸ್ತಾನವು ಎಂದು ಮರೆಯದ, ಭಾರತ ರತ್ನವು ಜನ್ಮಿಸಲಿ 

ಈ ಕನ್ನಡ ಮಾತೆಯ ಮಡಿಲಲ್ಲಿ, ಈ ಕನ್ನಡ ನುಡಿಯ ಗುಡಿಯಲ್ಲಿ ।।ಪ ।।


ದೇಶಭಕ್ತಿಯ ಬಿಸಿ ಬಿಸಿ ನೆತ್ತರು, ಧಮನಿ ಧಮನಿಯಲಿ ತುಂಬಿರಲಿ 

ವಿಶ್ವಪ್ರೇಮದ ಶಾಂತಿ ಮಂತ್ರದ,ಘೋಷವ ಎಲ್ಲೆಡೆ ಮೊಳಗಿಸಲಿ 

ಸಕಲ ಧರ್ಮದ ಸತ್ವ ಸಮನ್ವಯ,ತತ್ವ ಜ್ಯೋತಿಯ ಬೆಳಗಿಸಲಿ ।।೧।।


ಕನ್ನಡ ತಾಯಿಯ ಕೋಮಲ ಹೃದಯದ, ಭವ್ಯ ಶಾಸನ ಬರೆಯಿಸಲಿ 

ಕನ್ನಡ ನಾಡಿನ ಎದೆ ಎದೆಯಲ್ಲೂ, ಕನ್ನಡ ವಾಣಿಯ ಸ್ಥಾಪಿಸಲಿ 

ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ, ಕಲ್ಲು ಕಲ್ಲಿನಲು ಕೆತ್ತಿಸಲಿ ।।೨।।

                                    



Thursday, June 9, 2022

Yadava Nee Ba Yadukula Nandana (ಯಾದವ ನೀ ಬಾ ಯದುಕುಲ ನಂದನ)


Bhaktigeete

Purandara Dasara Keerthanegalu

Song link: Click Here



Raga: Kamboja

Tala: Ekatala


Yadava nee ba yadukula nandana

Madhava madhusudhana baaro

Sodhara mavana madhureli maduhida

Yashode nandana nee baaro ||


Kanakalanduge ghalu ghalurenutali

Jhana jhana venunadadali

Chinikol chendu bhuguriyanaduta

Sanna sanna govalarolagudi ||


Shanka chakravu kaiyali holeyuta

Binkada govala nee baaro

Akalanka mahimane adinarayana

Bekemba bhaktarigoli baaro ||


Khaga vahanane bage bage roopa

Nagu mogadarasane nee baaro

Jgagadolu ninnaya mahimaeya pogaluve

Purandara vittala nee baaro ||



ಭಕ್ತಿಗೀತೆ 


ಯಾದವ ನೀ ಬಾ ಯದುಕುಲ ನಂದನ 

ಮಾಧವ ಮಧುಸೂದನ ಬಾರೊ 

ಸೋದರಮಾವನ ಮಧುರೆಲಿ ಮಡುಹಿದ 

ಯಶೋದೆ ನಂದನ ನೀ ಬಾರೊ 


ಕಣಕಾಲಂದುಗೆ ಘಲು ಘಲುರೆನುತಲಿ 

ಝಣ ಝಣ ವೇಣುನಾದದಲಿ 

ಚಿಣಿಕೋಲ್ ಚೆಂಡು ಬುಗುರಿಯನಾಡುತ 

ಸಣ್ಣ ಸಣ್ಣ ಗೋವಳರೊಡಗೂಡಿ ||೧।।


ಶಂಖಚಕ್ರವು ಕೈಯಲಿ ಹೊಳೆಯುತ 

ಬಿಂಕದ ಗೋವಳ ನೀ ಬಾರೊ 

ಅಕಳಂಕ ಮಹಿಮನೆ ಆದಿನಾರಾಯಣ 

ಬೇಕೆಂಬ ಭಕ್ತರಿಗೊಲಿ ಬಾರೊ ।।೨।।


ಖಗವಾಹನನೆ ಬಗೆಬಗೆ ರೂಪ 

ನಗುಮೊಗದರಸನೆ ನೀ ಬಾರೊ 

ಜಗದೊಳು ನಿನ್ನಯ ಮಹಿಮೆಯೆ ಪೊಗಳುವೆ 

ಪುರಂದರ ವಿಠ್ಠಲ ನೀ ಬಾರೊ ।।೩।।                                 ಶ್ರೀ  


            

Wednesday, June 8, 2022

Kodagana Koli Nungitta (ಕೋಡಗನ ಕೋಳಿ ನುಂಗಿತ್ತ)

Shishunala Shariefa Sahebara Geetegalu

Song link: Click Here


Kodagana koli nungitta

Nodavva tangi

Kodagana koli nungitta ||


Aadu aneya nungi

Gode sunnava nungi

Aadalu banda pataradavala

Maddale nungitta ||


Ollu onakeya nungi

Kallu gutava nungi

Mellalu banda mudukiyanne 

Nellu nungitta ||


Hagga maggava nungi

Maggava lali nungi

Maggadaliruva annananne 

Maniyu nungitta ||


Ettu jattagi nungi

Batta banava nungi

Mukkuta tiruvo anannanna 

Meli nungitta ||


Gudda gaviyannu nungi

Gaviya iruveyu nungi

Govinda guruvina pada

Nannane nungitta ||


ತತ್ವಪದ 


ಕೋಡಗನ ಕೋಳಿ ನುಂಗಿತ್ತ 

ನೋಡವ್ವ ತಂಗಿ 

ಕೋಡಗನ ಕೋಳಿ ನುಂಗಿತ್ತ ।।ಪ ।।


ಆಡು ಆನೆಯ ನುಂಗಿ 

ಗೋಡೆ ಸುಣ್ಣವ ನುಂಗಿ 

ಆಡಲು ಬಂದ ಪಾತರದವಳ 

ಮದ್ದಲಿ  ನುಂಗಿತ್ತ  ।।೧।।


ಒಳ್ಳು ಒನಕೆಯ ನುಂಗಿ 

ಕಲ್ಲು ಗೂಟವ ನುಂಗಿ 

ಮೆಲ್ಲಲು ಬಂದ ಮುದುಕಿಯನ್ನೆ 

ನೆಲ್ಲು ನುಂಗಿತ್ತ ।।೨।।


ಹಗ್ಗ ಮಗ್ಗವ ನುಂಗಿ 

ಮಗ್ಗವ ಲಾಳಿ ನುಂಗಿ 

ಮಗ್ಗದಲಿರುವ ಅಣ್ಣನನ್ನೆ  

ಮಣಿಯು ನುಂಗಿತ್ತ ।।೩।।


ಎತ್ತು ಜತ್ತಗಿ ನುಂಗಿ 

ಬತ್ತ ಬಾನವ ನುಂಗಿ 

ಮುಕ್ಕುಟ ತಿರುವೋ ಅಣ್ಣನನ್ನ 

ಮೇಳಿ ನುಂಗಿತ್ತ ।।೪।।


ಗುಡ್ಡ ಗವಿಯನ್ನು ನುಂಗಿ 

ಗವಿಯ ಇರುವೆಯು  ನುಂಗಿ 

ಗೋವಿಂದ ಗುರುವಿನ ಪಾದ 

ನನ್ನನೆ ನುಂಗಿತ್ತ  ।।೫।।





Tuesday, June 7, 2022

Kelide Ninnaya Suddi (ಕೇಳಿದೆ ನಿನ್ನಯ ಸುದ್ಧಿ)


Bhaktigeete

Puranadara Dasara Keerthanegalu

Song link: Click Here


Raga: Shankarabharana

Tala: Atatala


Kelide ninnaya suddi

Kelide


Neerolu mulugideyante, dodda

Bhara giriya potteyante

Gedde, beru genasa meddeyante

Aha, mooreradariyada taralana matige

Ghora danavana samhara madideyendu ||


Nariyobbala petteyente, hetta

Nariyalanu koideyante

Ninna, narichorana kondeyante

Aha, ooranariyara sooregolluta 

Para nariyarabhimana garumadideyendu ||


Turaga ravutanadeyente, ninna

Karadi kadagolu nenu ante

Ninage sari dhareyolagillavante

Aha, varada sri purandara vittalana ninna ee

Pari pari mahimeya harishisutali nanu ||


ಭಕ್ತಿಗೀತೆ 


ಕೇಳಿದೆ 

ನಿನ್ನಯ ಸುದ್ಧಿ 

ಕೇಳಿದೆ 


ನೀರೊಳು ಮುಳುಗಿದೆಯಂತೆ ,ದೊಡ್ಡ 

ಭಾರ ಗಿರಿಯ ಪೊತ್ತೆಯೆಂತೆ 

ಗೆಡ್ಡೆ ,ಬೇರು ಗೆಣಸ ಮೆದ್ದೆಯೆಂತೆ 

ಅಹ, ಮೂರೆರಡರಿಯದ ತರಳನ ಮಾತಿಗೆ 

ಘೋರ ದಾನವನ ಸಂಹಾರ ಮಾಡಿದೆಯೆಂದು ।।ಕೇಳಿದೆ ।।


ನಾರಿಯೊಬ್ಬಳ ಪೆತ್ತೆಯೆಂತೆ ,ಹೆತ್ತ 

ನಾರಿಯಳನು ಕೋಯ್ದೆಯೆಂತೆ 

ನಿನ್ನ ,ನಾರೀಚೋರನ ಕೊಂದೆಯೆಂತೆ 

ಅಹ, ಊರನಾರಿಯರ ಸೂರೆಗೊಳ್ಳುತ 

ಪರ ನಾರಿಯರಭಿಮಾನ ಗಾರುಮಾಡಿದೆಯೆಂದು ।।ಕೇಳಿದೆ ।।


ತುರಗ ರಾವುತನಾದೆಯೆಂತೆ, ನಿನ್ನ 

ಕರದಿ ಕಡಗೋಲು ನೇಣ೦ತೆ 

ನಿನಗೆ  ಸರಿ ಧರೆಯೊಳಗಿಲ್ಲವಂತೆ 

ಅಹ, ವರದ ಶ್ರೀ ಪುರಂದರ ವಿಠ್ಠಲನ  ನಿನ್ನ ಈ 

ಪರಿಪರಿ ಮಹಿಮೆಯ ಹರುಷಿಸುತಲಿ ನಾನು ।।ಕೇಳಿದೆ।।



Monday, June 6, 2022

Dasana Madiko Enna (ದಾಸನ ಮಾಡಿಕೋ ಎನ್ನ)


Bhaktigeete

Purandara Dasara Keertanegalu

Song link: Click Here


Raga: Nadhanamakriye

Tala: Atatala


Dasana madiko enna, swami

Sasiranamada venkata ramana ||


Durbuddhigalanella bidiso

Ninna karuna kavachavenna haranakke todiso

Charanaseeve enage kodiso, abhaya

Karapushpava enna shiradalli mudiso  ||


Drudda bhakti ninnali bedi, na

Adigeraguvenayya anudina padi

Kadegannalekenna nodi, biduve

Kodu ninna dhyanava mana shuchimadi  ||


Mo re hokkavara kava birudu, enna

Mareyade rakshane madayya poredu

Duritagalellava taridu, siri

Purandara vittala ennanu  poredu ||


ಭಕ್ತಿಗೀತೆ 


ದಾಸನ ಮಾಡಿಕೋ ಎನ್ನ ,ಸ್ವಾಮಿ 

ಸಾಸಿರನಾಮದ ವೆಂಕಟ ರಮಣ 


ದುರ್ಬುದ್ಧಿಗಳನೆಲ್ಲ ಬಿಡಿಸೊ 

ನಿನ್ನ ಕರುಣಕವಚವೆನ್ನ  ಹರಣಕ್ಕೆ ತೊಡಿಸೊ 

ಚರಣಸೇವೆ ಎನಗೆ ಕೊಡಿಸೊ , ಅಭಯ 

ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ।।೧।।


ದೃಢಭಕ್ತಿ ನಿನ್ನಲಿ ಬೇಡಿ , ನಾ 

ಅಡಿಗೆರಗುವೆನಯ್ಯ ಅನುದಿನ ಪಾಡಿ 

ಕಡೆಗಣ್ಣಲೇಕೆನ್ನೆ ನೋಡಿ,  ಬಿಡುವೆ 

ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।


ಮೊರೆಹೊಕ್ಕವರ ಕಾವ ಬಿರುದು,  ಎನ್ನ 

ಮರೆಯದೆ ರಕ್ಷಣೆಮಾಡಯ್ಯಾ ಪೊರೆದು 

ದುರಿತಗಳೆಲ್ಲವ ತರಿದು,  ಸಿರಿ 

ಪುರಂದರ ವಿಠ್ಠಲ ಎನ್ನನು ಪೊರೆದು ।।೩।।                               ಶ್ರೀ 



Saturday, June 4, 2022

Ninna Premada Pariya Nanariye Kanakangi (ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ)

Bhavageete

Sahitya: K S Narasimha Swamy

Song link: Click Here



Ninna premada pariya nanariye kanakangi

Ninnolide nanna manasu ||


Hunnimeya ratriyali

 Ukkuvudu kadalagi

Ninnolume nanna kandu

Ninolide nanna manasu ||


Sagarana hrudayadali

Ratna parvata male

Minchinali meevudante

Teeradali balakuvale

Kanna chumbisi matte

Saguvudu kanasinante

Ninolide nanna manasu ||


Ale bandu kareyuvudu

Ninn olume aramanege

Olagadala ratnapurige

Aleyiduva muttinale

Kanuvudu ninnolume

Olagudiya moorthy mahime

Ninolide nanna manasu ||


Ninna premada pariya nanariye kanakangi

Tareyagade kanuve minchu

Nale ardhangi

Tareyagade kanuve minchu

Nale ardhangi.....


ಭಾವಗೀತೆ 


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ 

ನಿನ್ನೊಳಿದೆ ನನ್ನ ಮನಸು ।।ಪ ।।


ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ 

ನಿನ್ನೊಲುಮೆ ನನ್ನ ಕಂಡು 

ನಿನ್ನೊಳಿದೆ ನನ್ನ ಮನಸು ।।ಅನು ।।


ಸಾಗರನ ಹೃದಯದಲಿ ರತ್ನಪರ್ವತ ಮಾಲೆ 

ಮಿಂಚಿನಲಿ ಮೀವುದಂತೆ 

ತೀರದಲಿ ಬಳಕುವಲೆ 

ಕಣ್ಣ ಚುಂಬಿಸಿ ಮತ್ತೆ 

ಸಾಗುವುದು ಕನಸಿನಂತೆ 

ನಿನ್ನೊಳಿದೆ ನನ್ನ ಮನಸು ।।೧।।


ಅಲೆಬಂದು ಕರೆಯುವುದು 

ನಿನ್ನೊಲುಮೆ ಅರಮನೆಗೆ 

ಒಳಗಡಲ ರತ್ನಪುರಿಗೆ 

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ 

ಒಳಗುಡಿಯ ಮೂರ್ತಿಮಹಿಮೆ 

ನಿನ್ನೊಳಿದೆ ನನ್ನ ಮನಸು ।।೨।।

 
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ

ತಾರೆಯಾಗದೆ ಕಾಣುವಿ ಮಿಂಚು 

ನಾಳೆ   ಅರ್ಧಾಂಗಿ

 ತಾರೆಯಾಗದೆ ಕಾಣುವಿ ಮಿಂಚು 

ನಾಳೆ   ಅರ್ಧಾಂಗಿ......