Friday, April 22, 2022

Taravalla Tagi Ninna Tamburi (ತರವಲ್ಲ ತಗಿ ನಿನ್ನ ತಂಬೂರಿ)


Shishunala shariefa Sahebara Geetegalu

Song link: Click Here


Taravalla tagi ninna tamburi -  swara

Barade barisadiru tamburi

Sarasa sangeetada kuruhugalariyade

Baride barisadiru tamburi ||


Maddali daniyolu tamburi -  ada

Tiddi nudisabeko tamburi

Sidda sadhakara suvidhyege odaguva

Bhudivantakke takka tamburi ||


Balaballavarige tamburi - deva

Balaksha rachisida tamburi

Helali enidara hanchike tiliyada

Talagedige salla tamburi ||


Satya sharadhiyolu tamburi - nitya

Uttamaraduva tamburi

Battisaragada bageyanariyadantha

Kattiginyatake tamburi ||taravalla||


Hasanada myalake tamburi - idu

Kushalarigoppuva tamburi

Sishunaladeeshana odupuranadi

Hasanagi bariso tamburi ||



ತತ್ವಪದ 


ತರವಲ್ಲ ತಗಿ ನಿನ್ನ ತಂಬೂರಿ - ಸ್ವರ 

ಬರದೆ  ಬಾರಿಸದಿರು ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೆ 

ಬರದೆ  ಬಾರಿಸದಿರು ತಂಬೂರಿ ।।ಪ ।।


ಮದ್ದಲಿ ದನಿಯೊಳು ತಂಬೂರಿ - ಅದ 

ತಿದ್ದಿ ನುಡಿಸಬೇಕೊ  ತಂಬೂರಿ 

ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ 

ಬುದ್ಧಿವಂತಕೆ ತಕ್ಕ ತಂಬೂರಿ ।।೧।।


ಬಾಳ  ಬಲ್ಲವರಿಗೆ ತಂಬೂರಿ - ದೇವಾ 

ಭಾಳಾಕ್ಷ ರಚಿಸಿದ ತಂಬೂರಿ 

ಹೇಳಲಿ ಏನಿದರ ಹಂಚಿಕೆ ತಿಳಿಯದ 

ತಾಳಗೇಡಿಗೆ ಸಲ್ಲ ತಂಬೂರಿ ।।೨।।


ಸತ್ಯ ಶರಧಿಯೊಳು ತಂಬೂರಿ  - ನಿತ್ಯ 

ಉತ್ತಮರಡುವ ತಂಬೂರಿ 

ಬತ್ತೀಸರಾಗದ ಬಗೆಯನರಿಯದಂಥ 

ಕತ್ತಿಗಿನ್ಯಾತಕೆ ತಂಬೂರಿ ।।೩।।


ಹಸನಾದ ಮ್ಯಾಳಕೆ  ತಂಬೂರಿ - ಇದು 

ಕುಶಲರಿಗೊಪ್ಪುವ ತಂಬೂರಿ 

ಶಿಶುನಾಳಾಧೀಶನ ಓದುಪುರಾಣದಿ 

ಹಸನಾಗಿ ಬಾರಿಸೊ  ತಂಬೂರಿ ।।೪।।

                                                     





Sunday, April 17, 2022

Shane Top Agavle (ಶಾನೆ ಟಾಪ್ ಆಗ್ವಳೆ )


  • Movie: Singa (2019)
  • Singer: Vijay Prakash
  • Song link: Click Here



Parpanchane ondu round hako bandru

Inta cheluve sigakilla

Ivala anda varnisoke

Ondu janma salakilla

Shane top agavle 

Nam hudugi

Shane top agavle..


Muttu ratna havalanu mankene

Ivalu omme nakre

Doute illa shiva, doute illa shiva

Ivalu mandya sakkre 

Shane top agavle 

Nam hudugi

Shane top agavle..


Aa kadala mutthange ivalu

Maharani gatthange ivalu

Ivalanda noodoke kamanabillu bartaite

Kaveri birsene ivalu

Aa dasara sogasene ivalu

Matadalu neerinda meenu mele bartave

Ivala anda kandu, tale kedisikondu

Hudugur aagtare loose uu

Acche huisikondu ella jayisikondu

Nanu koduve ondu rose uu ||shane||


Dwani kelalu ugadi habba

Nakbutre sankranti ellu

Sumnidru pataki edeyali sididhang aaitaite

Beladingala holapene ivalu

Nore haalina bilupene ivalu

Bangara nachiso magalu

Kinnari kuladavalu

Mansu looti madi

Preeti nati maadi

Hagalu ratri kadtavle

Elladakku ready

Doute illa budi

Nanna hendru ivle ||shane||



ಚಿತ್ರಗೀತೆ 


ಪರಪಂಚಾನೇ ಒಂದು ರೌಂಡು 

ಹಾಕೊಂಡ್ ಬಂದ್ರು 

ಇಂತ ಚೆಲುವೆ ಸಿಗಕಿಲ್ಲ 

ಇವಳ ಅಂದ ವರ್ಣಿಸೋಕೆ 

ಒಂದು ಜನುಮ ಸಾಲಕಿಲ್ಲ 

ಶಾನೆ ಟಾಪ್ ಆಗ್ವಳೆ 

ನಮ್ ಹುಡುಗಿ 

ಶಾನೆ ಟಾಪ್ ಆಗ್ವಳೆ 


ಮುತ್ತು ರತ್ನ ಹವಳಾನು ಮಂಕೇನೇ 

ಇವಳು ಒಮ್ಮೆ ನಕ್ರೆ 

ದೌಟೆ ಇಲ್ಲ ಶಿವ, ದೌಟೆ ಇಲ್ಲ ಶಿವ

ಇವಳು ಮಂಡ್ಯ ಸಕ್ರೆ 

ಶಾನೆ ಟಾಪ್ ಆಗ್ವಳೆ 

ನಮ್ ಹುಡುಗಿ 

ಶಾನೆ ಟಾಪ್ ಆಗ್ವಳೆ 


ಆ ಕಡಲ ಮುತ್ತಂಗೆ ಇವಳು 

ಮಹಾರಾಣಿ ಗತ್ತಂಗೆ ಇವಳು

 ಇವಳಂದ ನೋಡೋಕೆ 

ಕಾಮನಬಿಲ್ಲು ಬರತೈತೆ 

ಕಾವೇರಿ ಬಿರ್ಸೆನೆ ಇವಳು 

ಆ ದಸರಾ ಸೊಗಸೇನೆ ಇವಳು 

ಮಾತಾಡಲು ನೀರಿಂದ ಮೀನು 

ಮೇಲೆ ಬರ್ತಾವೆ 

ಇವಳ ಅಂದ ಕಂಡು , ತಲೆ ಕೆಡಿಸಿಕೊಂಡು 

ಹುಡುಗೂರು ಆಗ್ತಾರೆ ಲೂಸು 

ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು 

ನಾನು ಕೊಡುವೆ ಒಂದು ರೋಸು ।।ಶಾನೆ ।।


ಧ್ವನಿ ಕೇಳಲು ಉಗಾದಿ ಹಬ್ಬ 

ನಕ್ಬುಟ್ರೆ  ಸಂಕಾಂತ್ರಿ ಎಳ್ಳು 

ಸುಮ್ನಿದ್ರು ಪಟಾಕಿ ಎದೆಯಲಿ 

ಸಿಡಿದಂಗ್ ಆಗತೈತೆ 

ಬೆಳದಿಂಗಳ ಹೊಳಪೇನೆ ಇವಳು 

ನೊರೆ ಹಾಲಿನ ಬಿಳುಪೇನೆ ಇವಳು 

ಬಂಗಾರ ನಾಚಿಸೊ ಮಗಳು 

ಕಿನ್ನರಿ ಕುಲದವಳು 

ಮನ್ಸು ಲೂಟಿ ಮಾಡಿ 

ಪ್ರೀತಿ ನಾಟಿ ಮಾಡಿ 

ಹಗಲು ರಾತ್ರಿ ಕಾಡ್ತವಳೆ 

ಎಲ್ಲದಕ್ಕೂ ರೆಡಿ , ದೌಟೆ ಇಲ್ಲ ಬುಡಿ 

ನನ್ನ ಹೆಂಡ್ರು ಇವ್ ಳೆ ।।ಶಾನೆ ।।









Lokada Kannige Radheyu Kooda (ಲೋಕದ ಕಣ್ಣಿಗೆ ರಾಧೆಯು ಕೂಡ)

Bhavageete

                         Sahitya : Dr H S Venktesh Murthy

                          Song link: Click Here



Lokada kannige radheyu kooda

Ellarante ondu hennu

Nanagu ake krishna toruva

Preetiyu needida kannu

Preetiyu needida kannu


Tingala ratri toreya sameepa

Uridare yavudo deepa

Yaro mohana yava radhego

Padutiruvanu paritapa

Padutiruvanu paritapa ||


Nanu nannadu nannavarennuva

Halavu todakugala meeri

Dhavisi seeralu brindavanava

Radhe tooruvalu daari

Radhe tooruvalu daari ||



Maha pravaha, maha pravaha

Maha pravaha, maha pravaha

Tadeyuvarilla..

Patravirada tore preeti (2)

Toredaru tanna toreyadu priyana

Radheya preetiya reeti

Idu radheya preetiya reeti ||



ಭಾವಗೀತೆ 


ಲೋಕದ ಕಣ್ಣಿಗೆ ರಾಧೆಯು ಕೂಡ 

ಎಲ್ಲರಂತೆ ಒಂದು ಹೆಣ್ಣು 

ನನಗೋ ಆಕೆ ಕೃಷ್ಣನ ತೋರುವ 

ಪ್ರೀತಿಯು ನೀಡಿದ ಕಣ್ಣು 

ಪ್ರೀತಿಯು ನೀಡಿದ ಕಣ್ಣು ।।ಪ ।।


ತಿಂಗಳ ರಾತ್ರಿ ತೊರೆಯ ಸಮೀಪ 

ಉರಿದರೆ ಯಾವುದೊ ದೀಪ 

ಯಾರೋ ಮೋಹನ ಯಾವ ರಾಧೆಗೋ 

ಪಡುತಿರುವನು ಪರಿತಾಪ  ।।ಲೋಕದ ।।


ನಾನು ನನ್ನದು ನನ್ನವರೆನ್ನುವ 

ಹಲವು ತೊಡಕುಗಳ ಮೀರಿ 

ಧಾವಿಸಿ ಸೇರಲು ಬೃಂದಾವನವ 

ರಾಧೆ ತೋರುವಳು ದಾರಿ ।।ಲೋಕದ ।।


ಮಹಾ ಪ್ರವಾಹ , ಮಹಾ ಪ್ರವಾಹ

ಮಹಾ ಪ್ರವಾಹ , ಮಹಾ ಪ್ರವಾಹ

ತಡೆಯುವರಿಲ್ಲ  

ಪಾತ್ರವಿರದ ತೊರೆ ಪ್ರೀತಿ (೨)

ತೊರೆದರು ತನ್ನ , ತೊರೆಯದು ಪ್ರಿಯನ 

ರಾಧೆಯ ಪ್ರೀತಿಯ ರೀತಿ 

ಇದು, ರಾಧೆಯ ಪ್ರೀತಿಯ ರೀತಿ ।।ಲೋಕದ ।।







Friday, April 15, 2022

Mooruthiyane Nilliso Madhava Ninna (ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ)


Bhaktigeete

Purandara Dasara Keerthanegalu

Song link:Click Here




Raga: Kamach

Tala: Roopakatala


Moorutiyane nilliso

Madhava ninna

Moorutiyane nilliso....


Ele tulasiya vanamaleyu koralolu

Holeva pitambaradinda oppuva ninna


Moorutiyane nilliso

Madhava ninna

Moorutiyane nilliso


Muttina sara navaratnada unguravittu

Matte sri lakumiya uradol oppuva ninna ||muruthiyane||


Bhaka kalpataru bhagyada suradhenu

Muktidayaka  purandara vittala ninna  ||muruthiyane||



ಭಕ್ತಿಗೀತೆ 


ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ 

ಮೂರುತಿಯನೆ ನಿಲ್ಲಿಸೋ


ಎಳೆತುಳಸಿಯ ವನಮಾಲೆಯು ಕೊರಳೊಳು 

ಹೊಳೆವ ಪೀತಾಂಬರದಿಂದ ಒಪ್ಪುವ ನಿನ್ನ।।೧।। 


ಮುತ್ತಿನ ಸರ ನವರತ್ನ ದುಂಗುರವಿಟ್ಟು 

ಮತ್ತೆ ಶ್ರೀ ಲಕುಮಿಯ ಉರದೊಳೂಒಪ್ಪುವ ನಿನ್ನ।।೨।। 


ಭಕ್ತ ಕಲ್ಪತರು ಭ್ಯಾಗ್ಯದ ಸುರಧೇನು 

ಮುಕ್ತಿದಾಯಕ ಪುರಂದರ ವಿಠ್ಠಲ ನಿನ್ನ ।।೩।।



Kogileye Kshemave (ಕೋಗಿಲೆಯೆ ಕ್ಷೇಮವೆ)



  • Movie : Mannina doni (1992)
  • Singer: S Janaki
  • Song link: Click Here


Kogileye kshemave

Kasturiye soukyave


Kogileye kshemave

Kasturiye soukyave

Naidileye nidireye

Malligeye mampare

Eliri eliri mele

Nesara bandanu mele nodi

Mangina neeralli muddu moreya

Toledu bandu haadi..||


Kannanadalli beesuva galige endu

Aalasya bandide heli ?

Bettagalalli oduva nadiyu endu

Danidu nintide keli ?

Ragagalante mooduva meghagalige

Besara banditte keli ?

Veerara kaili baggada malebillu

Barenu embude heli ?

Bhuvana tirugide oo....o

Gagana chaliside

Kavana kadedide oo....o

Baduku bareside 


Eliri eliri mele

Nesara bandanu mele nodi

Mangina neeralli muddu moreya

Toledu bandu haadi...||


Janara gumpu kampina totakke haari

Sompina jenannu tandavu

Pundara gumpu huliya topige nuggi

Hotteya biriye tindavu

Tappalinalli rangina acheya hoida

Patanga padeya payana

Kecchalinalli govina kusina dodda

Kannina mecchina mouna

Kamala kuliteya

O..oo alile aviteya

Navile ninteya

O..oo manase mareteya


Eliri eliri mele

Nesara bandanu mele nodi

Mangina neeralli muddu moreya

Toledu bandu haadi...||


ಚಿತ್ರಗೀತೆ

 

ಕೋಗಿಲೆಯೆ ಕ್ಷೇಮವೆ 

ಕಸ್ತೂರಿಯೆ ಸೌಖ್ಯವೆ 


ಕೋಗಿಲೆಯೆ ಕ್ಷೇಮವೆ  

ಕಸ್ತೂರಿಯೆ ಸೌಖ್ಯವೆ  

ನೈದಿಲೆಯೆ ನಿದಿರೆಯೆ  

ಮಲ್ಲಿಗೆಯೆ ಮಂಪರೆ 

ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।


ಕಾನನದಲ್ಲಿ ಬೀಸುವ ಗಾಳಿಗೆ ಎಂದು 

ಆಲಸ್ಯ ಬಂದಿದೆ ಹೇಳಿ 

ಬೆಟ್ಟಗಳಲ್ಲಿ ಓಡುವ ನದಿಯು ಎಂದು 

ದಣಿದು ನಿಂತಿದೆ ಕೇಳಿ ?

ರಾಗಗಳಂತೆ ಮೂಡುವ ಮೇಘಗಳಿಗೆ 

ಬೇಸರ ಬಂದೀತೆ  ಕೇಳಿ ?

ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು 

ಬರೆನು ಎಂಬುದೆ  ಹೇಳಿ 

ಭುವನ ತಿರುಗಿದೆ  ಓ ಓ..  ಓ 

ಗಗನ ಚಲಿಸಿದೆ 

ಕವನ ಕಡೆದಿದೆ  ಓ ಓ .. ಓ 

ಬದುಕು ಬರೆಸಿದೆ 


ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।


ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ 

ಸೊಂಪಿನ ಜೆನ್ನನ್ನು ತಂದವು 

ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ 

ಹೊಟ್ಟೆಯ ಬಿರಿಯೆ ತಿಂದವು 

ತಪ್ಪಲಿನಲ್ಲಿ ರಂಗಿನ ಅಚ್ಚೆಯ ಹೊಯ್ದ 

ಪತಂಗ ಪಡೆಯ ಪಯಣ 

ಕೆಚ್ಚಲಿನಲ್ಲಿ ಗೋವಿನ ಕೂಸಿನ ದೊಡ್ಡ 

ಕಣ್ಣಿನ ಮೆಚ್ಚಿನ ಮೌನ 

ಕಮಲ ಕುಳಿತೆಯಾ 

 ಓಓ  ಓ  ಅಳಿಲೇ ಅವಿತೆಯಾ 

ನವಿಲೇ ನಿಂತೆಯಾ 

ಓ ಓ  ಓ ಮನಸೇ ಮರೆತೆಯಾ 


ಏಳಿರಿ ಏಳಿರಿ ಮೇಲೆ 

ನೇಸರ ಬಂದನು ಮೇಲೆ ನೋಡಿ 

ಮಂಜಿನ ನೀರಲ್ಲಿ ಮುದ್ದು ಮೋರೆಯ 

ತೊಳೆದು ಬಂದು ಹಾಡಿ .. ।।ಕೋಗಿಲೆಯೆ ।।




Thursday, April 14, 2022

Jana Gana Mana (Rastrageet)



Rastrageet
Written by- Rabindranath Tagore
Song link: Click Here

Janaganamana adhinayaka jaya he

Bharata bhagya vidhata ||

Panjaba sindhu gujarata maratha |

Dravida utkala banga ||

Vindhya himachala yamuna ganga |

Uchchala Jaladhi taranga ||

Tava shubha naame jaage |

Tava shubha asisha maange ||

Gaahe tava jaya gatha |

Janagana mangaladayaka jaya he ||

Bharata bhagya vidhata |

Jaya hae jaya he jaya he ||

Jaya jaya jaya jaya he ||

                               

राष्ट्रगीत 


जन गण मन अधिनायक जय हे 

भारत भाग्य विधाता

पंजाब सिंध गुजरात मराठा 

द्रविड़ उत्कल बंगा 

विंध्य हिमाचल यमुना गंगा 

उच्छल जलधि तरंगा 

तव शुभ नामे जागे 

तव शुभ आशिष माँगे 

गाहे तव जय गाथा 

जन गण मन अधिनायक जय हे 

भारत भाग्य विधाता 

जय हे, जय हे, जय हे

जय जय जय जय, हे


ರಾಷ್ಟ್ರಗೀತೆ 


ಜನಗಣಮನ ಅಧಿನಾಯಕ ಜಯ ಹೇ ।

ಭಾರತ ಭಾಗ್ಯ ವಿಧಾತಾ ।।

ಪಂಜಾಬ ಸಿಂಧು ಗುಜರಾತ ಮರಾಠಾ ।

ದ್ರಾವಿಡ ಉತ್ಕಲ ಬಂಗಾ ।।

ವಿಂಧ್ಯ ಹಿಮಾಚಲ ಯಮುನಾ ಗಂಗಾ ।

ಉಚ್ಛಲ ಜಲಧಿ ತರಂಗಾ ।।

ತವ ಶುಭ ನಾಮೇ ಜಾಗೇ ।

ತವ ಶುಭ ಆಶಿಷ ಮಾಗೇ ।।

ಗಾಹೇ ತವ ಜಯ ಗಾಥಾ ।

ಜನ ಗಣ ಮನ ಅಧಿನಾಯಕ ಜಯ ಹೇ ।।

ಭಾರತ ಭಾಗ್ಯ ವಿಧಾತಾ ।

ಜಯ ಹೇ ..ಜಯ ಹೇ .. ಜಯ ಹೇ ।।

ಜಯ ಜಯ ಜಯ ಜಯ ಹೇ ।।

         

Sada Enna Hrudayadalli (ಸದಾ ಎನ್ನ ಹೃದಯದಲ್ಲಿ)


Bhaktigeete

Song link: Click Here


Sada enna hrudayadalli

Vasa mado sri hari

Nadamurthy ninna paada

Moodadinda bhajisuve


Jnanavembo navaratnada

Mantapada madhyadalli

Venulolana kullirisi

Modadinda bhajisuve


Sada enna hrudayadalli

Vasa mado sri hari


Bhaktirasavembo muttu

Manikyada harivanadi

Mukthanagabeku endu

Muttinarati ettuvenu


Sada enna hrudayadalli

Vasa mado sri hari


Ninna nanu biduvanalla

Enna neenu bidalu salla

Ghanna mooruti vijaya vittala

Kelo ninna bhakutara solla


Sada enna hrudayadalli

Vasa mado sri hari

Nadamurthy ninna paada

Moodadinda bhajisuve


Sada enna hrudayadalli

Vasa mado sri hari


ಭಕ್ತಿಗೀತೆ 


ಸದಾ ಎನ್ನ ಹೃದಯದಲ್ಲಿ 

ವಸ ಮಾಡೋ ಶ್ರೀಹರಿ 

ನಾದಮೂರ್ತಿ ನಿನ್ನ ಪಾದ 

ಮೋದದಿಂದ ಭಜಿಸುವೆ 


ಜ್ಞಾನವೆಂಬೋ ನವರತ್ನದ 

ಮಂಟಪದ ಮಧ್ಯದಲ್ಲಿ 

ವೇಣುಲೋಲನ ಕುಳ್ಳಿರಿಸಿ 

ಮೋದದಿಂದ ಭಜಿಸುವೆ ।।೧।।


ಭಕ್ತಿರಸವೆಂಬೋ  ಮುತ್ತು 

ಮಾಣಿಕ್ಯದಾ ಹರಿವಾಣದೀ 

ಮುಕ್ತನಾಗಬೇಕು ಎಂದು 

ಮುತ್ತಿನಾರತಿ ಎತ್ತುವೆ ।।೨।।


ನಿನ್ನ ನಾನು ಬಿಡುವನಲ್ಲ 

ಎನ್ನ ನೀನು ಬಿಡಲು ಸಲ್ಲ 

ಘನ್ನ ಮೂರುತಿ  ವಿಜಯ ವಿಠ್ಠಲ 

ಕೇಳೋ ನಿನ್ನ ಭಕುತರ ಸೊಲ್ಲ ।।೩।।