Bhavageete
Sahitya: K S Narasimma swamy
Song link: Click Here
K S Narasimma swamy is popularly known as 'Olavina Kavi'
His famous work includes Mysuru Mallige. This kavithe
describes in a humorous way how an innocent village girl named
sita is seen by a dark guy for marriage and how she intelligently
rejects him.
Shanubhogara magalu
Tayiyillada hudugi
Ratnadantaha hudugi origella
Balujane gambire
Hesaru seetadevi
Hanneradu tumbihudu maduveyilla
Tayiyillada hennu
Mincha beeruva kannu
Omomme kannira sarasiyahudu
Tayiyandadi bandu tampanereyuvudendu
Inta balige olave ninna kanasu
Hattirada kereyinda toleda bindigeyolage
Neera taruvagavala nodabeku
Karuvanadisuvaga malligeya banadolage
Avala gandana hesara kelabeku..
Monne tavaregereya joyisara mommaganu
Henna nodalu banda avaramanege
Vaidikara manegalali oota hottaguvudu
Ollenendalu seete koneyolage
Magala matanu keli
Nakkubittaru tande
Olage nandadeepa nandi hogi
Phalava nudidudu halli
Helalenide munde
Teralidanu joyisanu tannagagi..
Belagaga kereya bali nanna tangiya kandu
Kanne toridalante karanavanu
Honnura keriyali bandidda hosa gandu
Tanna kodaliginta kappu endu
Namorina akkareya sakkareya bombeyanu
Nodabeke intha kappu gandu
Shanubhogara maneya toranave heluvudu
Banda darige sunkavillavendu
Shanubhogara magalu
Ratnadantaha hudugi
Gandu sikkuvudondu kastavalla
Sariyada gandodagi
Hennu sukhavagirali
Tadavadarenante nastavilla..
ಭಾವಗೀತೆ
ಶಾನುಭೋಗರ ಮಗಳು, ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ
ಬಲುಜಾಣೆ ಗಂಭೀರೆ, ಹೆಸರು ಸೀತಾದೇವಿ
ಹನ್ನೆರಡು ತುಂಬಿಹುದು ಮದುವೆಯಿಲ್ಲ
ತಾಯಿಯಿಲ್ಲದ ಹೆಣ್ಣು
ಮಿಂಚ ಬೀರುವ ಕಣ್ಣು
ಒಮ್ಮೊಮ್ಮೆ ಕಣ್ಣೀರ ಸರಸಿಯಹುದು
ತಾಯಿಯಂದದಿ ಬಂದು,ತಂಪನೆರೆಯುವುದೆಂದು
ಇಂತ ಬಾಳಿಗೆ ಒಲವೆ, ನಿನ್ನ ಕನಸು ..
ಹತ್ತಿರದ ಕೆರೆಯಿಂದ ತೊಳೆದ ಬಿಂದಿಗೆಯೊಳಗೆ
ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಮಲ್ಲಿಗೆಯ ಬನದೊಳಗೆ
ಅವಳ ಗಂಡನ ಹೆಸರು ಕೇಳಬೇಕು ..
ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು
ಹೆಣ್ಣ ನೋಡಲು ಬಂದ ಅವರ ಮನೆಗೆ
ವೈದಿಕರ ಮನೆಗಳಲಿ ಊಟ ಹೊತ್ತಾಗುವುದು
ಒಲ್ಲೆನೆಂದಳು ಸೀತೆ ಕೋಣೆಯೊಳಗೆ
ಮಗಳ ಮಾತನು ಕೇಳಿ
ನಕ್ಕು ಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿ ಹೋಗಿ
ಫಲವ ನುಡಿದುದು ಹಲ್ಲಿ
ಹೇಳಲೇನಿದೆ ಮುಂದೆ
ತೆರಳಿದನು ಜೋಯಿಸನು ತಣ್ಣಗಾಗಿ ..
ಬೆಳಗಾಗ ಕೆರೆಯ ಬಳಿ ನನ್ನ ತಂಗಿಯ ಕಂಡು
ಕನ್ನೆ ತೋರಿದಳಂತೆ ಕಾರಣವನು
ಹೊನ್ನೂರ ಕೇರಿಯಲಿ ಬಂದಿದ್ದ ಹೊಸ ಗಂಡು
ತನ್ನ ಕೂದಲಿಗಿಂತ ಕಪ್ಪು ಎಂದು
ನಮ್ಮೂರಿನ ಅಕ್ಕರೆಯ ಸಕ್ಕರೆಯ ಬೊಂಬೆಯನು
ನೋಡಬೇಕೆ ಇಂಥ ಕಪ್ಪು ಗಂಡು
ಶಾನುಭೋಗರ ಮನೆಯ ತೋರಣವೆ ಹೇಳುವುದು
ಬಂದ ದಾರಿಗೆ ಸುಂಕವಿಲ್ಲವೆಂದು ..
ಶಾನುಭೋಗರ ಮಗಳು
ರತ್ನದಂತಹ ಹುಡುಗಿ
ಗಂಡು ಸಿಕ್ಕುವುದೊಂದು ಕಷ್ಟವಲ್ಲ
ಸರಿಯಾದ ಗಂಡೊದಗಿ
ಹೆಣ್ಣು ಸುಖವಾಗಿರಲಿ
ತಡವಾದರೇನಂತೆ ನಷ್ಟವಿಲ್ಲ ..