Movie: Hosabelaku (1982)
Singers: Dr. Rajkumar, S Janaki
Song link: Click Here
Neenade baalige jyothi, naa kande kaanada preeti,
Manasu hoovagi kanasu nooragi, ee jeeva banalli telaadide,
Baa enna baalina jyothi, baa nanna premada kanti,
Manasu hoovagi kanasu nooragi, ee jeeva banalli telaadide ||
Ravi moodi aagasadalli, belakannu chellida haage,
Irulaada baalali bande, santosha sambhrama tande,
Ee jeevavu, nalidaadide,
Innu endendu novu ninagilla, Bisilalli neralaagi hita needuve,
Neenade baalige jyothi, baa nanna premada kanti ||
Hosa raaga haadalu neenu, hosa lokha kandenu naanu,
Hosa daari nodide enu, jotheyaagi baruveya innu,
Nannaaseya, puraiseya,
Ninna usiraagi, baala hasiraagi, endendu ondaagi naa baaluve,
Baa enna baalina jyothi, naa kande kaanada preeti ||
Manasu hoovagi, kanasu nooragi, ee jeeva banalli telaadide ||
ಚಿತ್ರಗೀತೆ
ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ,
ಮನಸು ಹೂವಾಗಿ ಕನಸು ನೂರಾಗಿ, ಈ ಜೀವ ಬಾನಲ್ಲಿ ತೇಲಾಡಿದೆ,
ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ,
ಮನಸು ಹೂವಾಗಿ ಕನಸು ನೂರಾಗಿ, ಈ ಜೀವ ಬಾನಲ್ಲಿ ತೇಲಾಡಿದೆ
।।ಪ।।
ರವಿ ಮೂಡಿ ಆಗಸದಲ್ಲಿ, ಬೆಳಕನ್ನು ಚೆಲ್ಲಿದ ಹಾಗೆ,
ಇರುಳಾದ ಬಾಳಲಿ ಬಂದೆ, ಸಂತೋಷ ಸಂಭ್ರಮ ತಂದೆ,
ಈ ಜೀವವೂ, ನಲಿದಾಡಿದೆ,
ಇನ್ನೂ ಎಂದೆಂದು ನೋವು ನಿನಗಿಲ್ಲ, ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ,
ನೀನಾದೆ ಬಾಳಿಗೆ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ ।।೧।।
ಹೊಸ ರಾಗ ಹಾಡಲು ನೀನು, ಹೊಸ ಲೋಕ ಕಂಡೆನು ನಾನು,
ಹೊಸ ದಾರಿ ನೋಡಿದೆ ಏನು, ಜೊತೆಯಾಗಿ ಬರುವೆಯ ಇನ್ನೂ,
ನನ್ನಾಸೆಯಾ, ಪೂರೈಸೆಯಾ,
ನಿನ್ನ ಉಸಿರಾಗಿ, ಬಾಳ ಹಸಿರಾಗಿ, ಎಂದೆಂದು ಒಂದಾಗಿ ನಾ ಬಾಳುವೆ,
ಬಾ ಎನ್ನ ಬಾಳಿನ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ ।।೨।।

No comments:
Post a Comment