Monday, September 22, 2025

Kannada Naadu (ಕನ್ನಡ ನಾಡು)

ಪದ್ಯ 

ಸಾಹಿತ್ಯ: ಬೇಡರೆಡ್ಡಿಹಳ್ಳಿ ಪಂಪಣ್ಣ   


ಕನ್ನಡ ಕನ್ನಡ ಕನ್ನಡವೆಂದುಲಿ 

ಕನ್ನಡ ನಾಡಿನ ಓ ಕಂದ 

ಕನ್ನಡ ಭಾಷೆಯ ಕೀರುತಿ ಹಬ್ಬಿಸು 

ಕನ್ನಡ ತಾಯಿಗೆ ಆನಂದ ।।


ಕಾರ್ಕಳ, ಬೆಳಗೊಳ, ಐಹೊಳೆ, ಹರಿಹರ 

ಹಂಪೆ, ಹಳೇಬೀಡು, ಬೇಲೂರು 

ಶಿಲೆಯಲಿ ಜೀವನ ಕಲೆಯನು ಬೆಳಗುವ 

ಶಿಲ್ಪ ಕಲೆಗಳಿಗೆ ತವರೂರು ।।


ತುಂಗೆ, ಭದ್ರೆ, ಕಾವೇರಿ, ಶರಾವತಿ 

ಕೃಷ್ಣ, ಕಾಳಿ ವರ ವೇದೆಯರು

ಜಲವನು ಹರಿಯಿಸಿ, ಬೆಳೆಯನು ಬೆಳೆಯಿಸಿ 

ಸಲಹುವ ನದಿಗಳ ನೆಲೆವೀಡು ।।


ರನ್ನ, ಜನ್ನ, ವರಪಂಪ, ಲಕುಮೀಶ 

ರಾಘವ, ಹರಿಹರ, ಮುದ್ದಣರು 

ಕನ್ನಡ ಸಾಹಿತ್ಯ ಕಲೆಯನು ಬೆಳೆಸಿದ 

ಕನ್ನಡ ಕವಿಗಳ ತವರೂರು ।।


ರಾಣಿ ಚೆನ್ನಮ್ಮ, ಸಂಚಿ ಹೊನ್ನಮ್ಮ 

ಉಡುತಡಿ ಊರಿನ ಅಕ್ಕಮ್ಮ 

ಕನ್ನಡ ನಾಡಿಗೆ ಕೀರುತಿ ತಂದಿಹ 

ಅಮರ ರಾಮಣಿಯರ ಕರುನಾಡು ।।


ಕನ್ನಡ ಕನ್ನಡ ಕನ್ನಡವೆಂದುಲಿ 

ಕನ್ನಡ ನಾಡಿನ ಓ ಕಂದ 

ಕನ್ನಡ ಕೀರುತಿ ನಾಲ್ವೆಡೆ ಹಬ್ಬಿಸು 

ಕನ್ನಡ ತಾಯಿಗೆ ಆನಂದ ।। 


Padya


Kannada kannada kannadavenduli

Kannada naadina o kanda

Kannada bhasheya keeruti habbisu

Kannada taayige aananda ||


Karkala, belagola, ihole, harihara

Hampe, halebeedu, beluru

Shileyali jeevana kaleyanu belaguva

Shilpa kalegalige tavaruru ||


Tunge, bhadre, kaveri, sharavati

Krishna, kaali vara vedeyaru

Jalavanu hariyisi, beleyanu beleyisi

Salahuva nadigala neleveedu ||


Ranna, janna, varapampa, lakumeesha

Raghava, harihara, muddanaru

Kannada sahitya kaleyanu belesida

Kannada kavigala tavaruru ||


Rani chennamma, sanchi honnamma

Udutadi urina akkamma

Kannada naadige keeruti tandiha

Amara ramaniyara karunaadu ||


Kannada kannada kannadavenduli

Kannada naadina o kanda

Kannada keeruti nalvede habbisu

Kannada taayige aananda ||

              

No comments:

Post a Comment