ಪದ್ಯ
ಸಾಹಿತ್ಯ : ಸಾ. ಶಿ. ಮರುಳಯ್ಯ
ವೇಷ ಬೇರೆ ಭಾಷೆ ಬೇರೆ, ದೇಶವೊಂದೆ ಭಾರತ
ಒಂದೆ ತಾಯ ಮಕ್ಕಳೆಂದು ಘೋಷಿಸೋಣ ಸಂತತ ।।
ತೀರ್ಥನಗೆಯ ಕ್ಷೇತ್ರವಿದೋ ಭವ್ಯನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು
ಘಟ್ಟದೋಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು
ಸೇತುವಿಂದ ಸಿಂಧುವರೆಗು ಬೆಳೆದು ನಿಂತ ಭಾರತ
ಭಂಗಗೊಳದ ವಂಗನಾಡ ಕೂಡಿ ಮೆರೆದ ಭಾರತ
ಇದೇ ನಮ್ಮ ಭಾರತ
ಪುಣ್ಯಭೂಮಿ ಭಾರತ
ಭರತಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿನುಡಿದೆಯೆಂದರಹುದು ನಿನಗೆ ತಕ್ಕ ಶಾಸ್ತಿ ।।
ಯಾವ ದೇಶದಲ್ಲೆ ದುಡಿ
ಯಾವ ಮಣ್ಣಿನಲ್ಲೆ ಮಡಿ
ನಿಂತ ನೆಲವು ಹಿಡಿದ ಹುಡಿ
ಭರತ ಭೂಮಿಯೆಂದು ತಿಳಿ
ಮಣ್ಣ ಮೋಹ ಬಿಟ್ಟರಿಲ್ಲೊ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೆ ಮುಗಿವುದಲ್ಲೊ ನಿನ್ನ ಸಂಸ್ಕೃತಿ
ಮಾನವತೆಯ ಶುಚಿಮತಿ
ಸನಾತನದ ಸತ್ಕೃತಿ
ವೇಷ ಬೇರೆ ಭಾಷೆ ಬೇರೆ, ದೇಶವೊಂದೆ ಭಾರತ
ಒಂದೆ ತಾಯ ಮಕ್ಕಳೆಂದು ಘೋಷಿಸೋಣ ಸಂತತ ।
Padya
Vesha bere bhashe bere, deshavonde bharata
Onde taaya makkalendu ghoshisona santata ||
Thirthanageya kshetravido bhavyanaadu bharata
Rushigalusira harake hotta divyanaadu bharata
Kadalugalane udugeyuttu
Ghattadolu baleya tottu
Nadi nadagala haaravittu
Setuvinda sindhuvaregu beledu ninta bharata
Bhangagolada vanganaada kudi mereda bharata
Ide namma bharata
Punyabhumi bharata
Bharatakhandadindalene ninage mokshaprapti
Tappinudideyendarahudu ninage takka shasti ||
Yaava deshadalle dudi
Yaava maninalle madi
Ninta nelavu hidida hudi
Bharata bhumiyendu tili
Manna moha bittarillo ninage bere sadgati
Bariya maatinalle mugivudallo ninna samskruti
Maanavateya shuchimati
Sanaatanada satkruti
Vesha bere bhashe bere, deshavonde bharata
Onde taaya makkalendu ghoshisona santata |

No comments:
Post a Comment