Movie: Hoovu Mullu (1968)
Singer: S Janaki
Song link: jiosaavn.com
O nanna geneya..!
O nanna geneya, baalina daryage joke,
O nanna geneya..aa..aa,
Preetiyonde neetiante, ee lokdage baaloke ||
Kateeya chenna nan kutgeg chinna,
Aytadi yennu nin baalin kannu,
Maduvege munche chakkandave,
Sihi daariyondu kaanuvandu, santoshavu nachoke ||
Gudisali naavu seruva guriya,
Badatanadaagu kaanuva siriya,
Sukha dukhavella samsaaradi sama,
Premadaage ganji saaku, sihi jenante saviyoke ||
Manava dwesha lokake dosha,
Avarade paapa avarige shapa,
Sedina daari anyayavu tili,
Snehadinda sadhyavante, ee lokava gelloke,
O nanna geneya..!
O nanna geneya, baalina daryage joke, O nanna geneya.. ||
ಚಿತ್ರಗೀತೆ
ಓ ನನ್ನ ಗೆಣೆಯಾ .. !
ಓ ನನ್ನ ಗೆಣೆಯಾ ಬಾಳಿನ ದಾರ್ಯಾಗೆ ಜೋಕೆ,
ಓ ನನ್ನ ಗೆಣೆಯಾ ಆ ಆ,
ಪ್ರೀತಿಯೊಂದೇ ನೀತಿಯಂತೆ,
ಈ ಲೋಕ ಗೆಲ್ಲೋಕೆ, ಈ ಲೋಕ್ದಾಗೆ ಬಾಳೋಕೆ ।।ಪ।।
ಕಟ್ತೀಯ ಚೆನ್ನ ನನ್ ಕುತ್ಗೆಗ್ ಚಿನ್ನ,
ಆಯ್ತದೀ ಯೆಣ್ಣು ನಿನ್ ಬಾಳಿನ್ ಕಣ್ಣು,
ಮದುವೆಗೆ ಮುಂಚೆ ಚಕ್ಕಂದವೇ,
ಸಿಹಿದಾರಿಯೊಂದು ಕಾಣುವಂದು, ಸಂತೋಷವು ನಚೋಕೆ ।।೧।।
ಗುಡಿಸಲಿ ನಾವು ಸೇರುವ ಗುರಿಯಾ,
ಬಡತನದಾಗೂ ಕಾಣುವ ಸಿರಿಯಾ,
ಸುಖ ದುಃಖವೆಲ್ಲಾ ಸಂಸಾರದಿ ಸಮ,
ಪ್ರೇಮದಾಗೆ ಗಂಜಿ ಸಾಕು, ಸಿಹಿ ಜೇನಂತೆ ಸವಿಯೋಕೆ ।।೨।।
ಮಾನವ ದ್ವೇಷ ಲೋಕಕೆ ದೋಷ,
ಅವರದೆ ಪಾಪ ಅವರಿಗೆ ಶಾಪ,
ಸೇಡಿನ ದಾರಿ ಅನ್ಯಾಯವು ತಿಳಿ,
ಸ್ನೇಹದಿಂದಾ ಸಾಧ್ಯವಂತೇ, ಈ ಲೋಕ ಗೆಲ್ಲೋಕೆ,
ಓ ನನ್ನ ಗೆಣೆಯಾ .. !
ಓ ನನ್ನ ಗೆಣೆಯಾ ಬಾಳಿನ ದಾರ್ಯಾಗೆ ಜೋಕೆ, ಓ ನನ್ನ ಗೆಣೆಯಾ
।।೩।।

No comments:
Post a Comment