Movie: Arishina Kunkuma (1970)
Singer: P B Srinivas
Song link: Click Here
Gopura kandu hogalu gudiyolu, devare, illave
Kaanuvanendu kannanu teredare belake illave
Gopura kandu hogalu gudiyolu devare illave ||
Mamateya maate premada tande, preetiya toruva bandhugalu
Ellaru iddu iradantaayite, ontiye indee baalinolu
Gopura kandu hogalu gudiyolu devare illave ||
Harushada naguvu iniyana olavu, chimmida cheluvina maneyandu
Hagetanadusiru, bisi kanniru, nelesida novina maneyindu
Gopura kandu hogalu gudiyolu devare illave ||
Hoovanu esedaru eleyane esedaru, kallina devaru oliyuvanu
Kambaniyalle paadava toledaru, nallanu kallantagihanu
Gopura kandu hogalu gudiyolu devare illave ||
ಚಿತ್ರಗೀತೆ
ಗೋಪುರ ಕಂಡು ಹೋಗಲು ಗುಡಿಯೊಳು, ದೇವರೇ, ಇಲ್ಲವೇ
ಕಾಣುವೆನೆಂದು ಕಣ್ಣನು ತೆರೆದರೆ ಬೆಳಕೇ ಇಲ್ಲವೇ
ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।ಪ।।
ಮಮತೆಯ ಮಾತೆ ಪ್ರೇಮದ ತಂದೆ, ಪ್ರೀತಿಯ ತೋರುವ ಬಂಧುಗಳು
ಎಲ್ಲರೂ ಇದ್ದು ಇರದಂತಾಯಿತೆ ಒಂಟಿಯೇ ಇಂದೀ ಬಾಳಿನೊಳು
ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।೧।।
ಹರುಷದ ನಗುವೂ ಇನಿಯನ ಒಲವೂ, ಚಿಮ್ಮಿದ ಚೆಲುವಿನ ಮನೆಯಂದು
ಹಗೆತನದುಸಿರು ಬಿಸಿ ಕಣ್ಣೀರು, ನೆಲೆಸಿದ ನೋವಿನಾ ಮನೆಯಿಂದು
ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।೨।।
ಹೂವನು ಎಸೆದರೂ ಎಲೆಯನೆ ಎಸೆದರೂ, ಕಲ್ಲಿನ ದೇವರು ಒಲಿಯುವನು
ಕಂಬನಿಯಲ್ಲೇ ಪಾದವ ತೊಳೆದರೂ, ನಲ್ಲನು ಕಲ್ಲಂತಾಗಿಹನು
ಗೋಪುರ ಕಂಡು ಹೋಗಲು ಗುಡಿಯೊಳು ದೇವರೇ ಇಲ್ಲವೇ ।।೩।।
No comments:
Post a Comment