ಪದ್ಯ
ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲಜಲ್ಲಾನೆ ಉದುರಮ್ಮ। ನಾ ನಿನಗೆ
ಬೆಲ್ಲಾದಾರತಿಯಾ ಬೆಳಗೇನು ।।
ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆ೦ಬ ಹಿಡಿಗೂಟ ।ಹಿಡುಕೊಂಡು
ತಂದೆ ತಾಯಿಗಳ ನೆನೆದೇನ ।।
ರಾಗಿಯು ಮುಗಿದಾವು ರಾಜಾನ್ನ ಹೆಚ್ಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು । ರಾಗೀಕಲ್ಲೆ
ನಾ ತೂಗಿ ಬಿಡುತೀನಿ ಬಲದೋಳು ।।
ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ
ಕುಕ್ಕೇಲಿ ರಾಗಿ ಬೆಲೆಯಾಲಿ ।ತಕ್ಕೊಂಡು
ಮತ್ತೆ ರಾತ್ರೀಗೆ ಬರುತೀನಿ ।।
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ । ಆ ಮನೆಗೆ
ಮಲ್ಲಿಗೆ ಮುಡಿಯೋ ಸೊಸಿ ಬರಲಿ ।।
Padya
Kallamma tayi mellamma ragiya
Jallajallane uduramma, na ninage
Belladaratiya belagenu ||
Andulla adigallu chandulla megallu
Chandramatiyemba hidaguta, hidukondu
Tande tayigala nenedena ||
Ragiyu mugidavu rajanna hecchyavu
Nanhidida kelasa vadagyavu, ragikalle
Na tugi biduteeni baladolu ||
Kallu bettenendu sittyake sarasatiye
Kukkeli ragi beleyali, takkondu
Matte ratrige baruteeni ||
Kallu kottammage ella bhagyavu barali
Pallakki mele maga barali, aa manege
Mallige mudiyo sosi barali ||
No comments:
Post a Comment