Bhaktigeete
Purandara Dasara Keerthanegalu
Song link: Click Here
Raga: Kamboja
Tala: Jampetala
Idu bhagya idu bhagya idu bhagyavayya
Padumanabhana pada, bhajane sukhavayya
Kallagi iralubeku katina bhavatoreyolage
Billagi iralubeku ballavarolage
Mellane madhavana manava mecchisabeku
Bellavagirabeku bhandu janarolage ||idu bhagya||
Buddhiyindali manava tiddi kollalubeku
Muddagiralu beku muni yogigalige
Madwa matabdiyolu meenagiralubeku
Shuddhanagiralubeku karana trayagalali ||idu bhagya||
Vishayabhogada trunake uriyagiralubeku
Nishi hagalu srihariya neneyabeku
Vasudheesha purandara vittalarayana
Hasanada dasara sevisalubeku ||idu bhagya|| sri
ಭಕ್ತಿಗೀತೆ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ।।ಪ ।।
ಪದುಮನಾಭನ ಪಾದ ಭಜನೆ ಸುಖವಯ್ಯ ।।ಅನು ।।
ಕಲ್ಲಾಗಿ ಇರಲುಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಲುಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧು ಜನರೊಳಗೆ ।।೧।।
ಬುದ್ದಿಯಿಂದಲಿ ಮನವ ತಿದ್ದಿ ಕೊಳ್ಳಲು ಬೇಕು
ಮುದ್ದಾಗಿರಲು ಬೇಕು ಮುನಿಯೋಗಿಗಳಿಗೆ
ಮಧ್ವ ಮಾತಾಬ್ದಿಯೊಳು ಮೀನಾಗಿರಲುಬೇಕು
ಶುದ್ಧನಾಗಿರಲುಬೇಕು ಕರಣ ತ್ರಯಗಳಲಿ ।।೨।।
ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು
ನಿಶಿ ಹಗಲು ಶ್ರೀಹರಿಯ ನೆನೆಯಬೇಕು
ವಸುಧೀಶ ಪುರಂದರ ವಿಠ್ಠಲರಾಯನ
ಹಸನಾದ ದಾಸರ ಸೇವಿಸಲುಬೇಕು ।।೩।। ಶ್ರೀ

No comments:
Post a Comment