Monday, August 8, 2022

Nagara Haave Haavolu Hoove (ನಾಗರ ಹಾವೆ !ಹಾವೊಳು ಹೂವೆ !)

Padya

Sahitya: Panje Mangesharayaru

Song link: Click Here


Nagara haave! haavolu hoove!

Bagila biladali ninnaya ttave?

Kaigala mugive, halanneeve!

Ba ba ba ba

Ba ba ba ba


Haladiya hedeyanu biccho bega!

Holahina hondale tugo naga!

Kolannuduve lalisu raga,

Ne ne ne ne

Ne ne ne ne


Ele naganna!helelo ninna

Taleyali rannaviha nijavanna,

Balu badavage kopparigeya chinna

Tha tha tha tha

Tha tha tha tha


bari mai tannage, manadali bisi hage

Eradele nalage iddaru summage

Eraguve ninage, eegale horage

Po po po po

Po po po po


ಪದ್ಯ 


ನಾಗರ ಹಾವೆ !ಹಾವೊಳು ಹೂವೆ !

ಬಾಗಿಲ ಬಿಲದಲಿ ನಿನ್ನಯ ಠಾವೆ ?

ಕೈಗಳ ಮುಗಿವೆ ,ಹಲನ್ನೀವೆ !

ಬಾ ಬಾ ಬಾ ಬಾ 

ಬಾ ಬಾ ಬಾ ಬಾ 


ಹಳದಿಯ ಹೆಡೆಯನು ಬಿಚ್ಚೋ ಬೇಗಾ !

ಹೊಳಹಿನ ಹೊಂದಲೆ ತೂಗೋ ನಾಗಾ !

ಕೊಳಲನ್ನೂದುವೆ ಲಾಲಿಸು ರಾಗಾ ,

ನೀ ನೀ ನೀ ನೀ 

ನೀ ನೀ ನೀ ನೀ 


ಎಲೆ ನಾಗಣ್ಣಾ !ಹೇಳೆಲೊ ನಿನ್ನಾ 

ತಲೆಯಲಿ ರನ್ನವಿಹ ನಿಜವನ್ನಾ ,

ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ 

ತಾ ತಾ ತಾ ತಾ 

ತಾ ತಾ ತಾ ತಾ


ಬರಿ ಮೈ ತಣ್ಣಗೆ ,ಮನದಲಿ ಬಿಸಿ ಹಗೆ 

ಎರಡೆಳೆ ನಾಲಗೆ ಇದ್ದರು ಸುಮ್ಮಗೆ 

ಎರಗುವೆ ನಿನಗೆ ,ಈಗಲೆ ಹೊರಗೆ 

ಪೋ ಪೋ ಪೋ ಪೋ 

ಪೋ ಪೋ ಪೋ ಪೋ 

     



No comments:

Post a Comment